ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ರಾಷ್ಟ್ರೀಯ ಗಂಗಾ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದರು.
ನಮಾಮಿ ಗಂಗೆ ಉಪಕ್ರಮವನ್ನು ಮತ್ತಷ್ಟು ಬಲಪಡಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಇದೊಂದು ಉತ್ತಮ ಅವಕಾಶ ಎಂದು ಶ್ರೀ ಮೋದಿ ಹೇಳಿದರು. ಸಣ್ಣ ಪಟ್ಟಣಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳ ಜಾಲವನ್ನು ವಿಸ್ತರಿಸುವುದು ಸೇರಿದಂತೆ ಸ್ವಚ್ಚತಾ ಕ್ರಮಗಳನ್ನು ಹೆಚ್ಚಿಸುವ ವಿಧಾನಗಳ ಬಗ್ಗೆಯೂ ಪ್ರಧಾನ ಮಂತ್ರಿ ಮೋದಿ ಮಾತನಾಡಿದರು.
ಗಂಗಾನದಿಯ ದಡದ ಉದ್ದಕ್ಕೂ ವಿವಿಧ ರೀತಿಯ ಗಿಡಮೂಲಿಕೆ ಕೃಷಿಯನ್ನು ಹೆಚ್ಚಿಸುವ ಮಾರ್ಗೋಪಾಯಗಳ ಬಗ್ಗೆಯೂ ಸಭೆಯಲ್ಲಿ ಪ್ರಧಾನಮಂತ್ರಿಯವರು ಗಮನ ಸೆಳೆದರು.
ಶ್ರೀ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ನಮಾಮಿ ಗಂಗೆ ಹಾಗು ಕುಡಿಯುವ ನೀರು-ನೈರ್ಮಲ್ಯ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಈ ಬಗ್ಗೆ ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ :
“ನಮಾಮಿ ಗಂಗೆ ಉಪಕ್ರಮವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಲು ಇಂದು ಬೆಳಿಗ್ಗೆ ನಡೆದ ರಾಷ್ಟ್ರೀಯ ಗಂಗಾ ಮಂಡಳಿ ಸಭೆ ಉತ್ತಮ ಅವಕಾಶ ಒದಗಿಸಿತು. ಸಣ್ಣ ಪಟ್ಟಣಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳ ಜಾಲವನ್ನು ವಿಸ್ತರಿಸುವುದು ಸೇರಿದಂತೆ ಸ್ವಚ್ಛತೆಯ ಪ್ರಯತ್ನಗಳನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಮಾತನಾಡಿದೆ “.
“ಸಭೆಯಲ್ಲಿ, ಗಂಗಾ ನದಿಯ ಉದ್ದಕ್ಕೂ ವಿವಿಧ ರೀತಿಯ ಗಿಡಮೂಲಿಕೆ ಕೃಷಿಯನ್ನು ಹೆಚ್ಚಿಸುವ ಮಾರ್ಗೋಪಾಯಗಳ ಬಗ್ಗೆ ಒತ್ತು ನೀಡಲಾಯಿತು. ನದಿಯುದ್ದಕ್ಕೂ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಹೆಚ್ಚಿಸುವ ಅಗತ್ಯವನ್ನು ಸಹ ಮನಗಾಣಲಾಯಿತು, ಇದರಿಂದ ಹಲವಾರು ಜನರಿಗೆ ಜೀವನೋಪಾಯದ ಅವಕಾಶಗಳು ಸೃಷ್ಟಿಯಾಗುತ್ತವೆ” ಎಂದು ಹೇಳಿದ್ದಾರೆ.
****
The National Ganga Council meet held earlier today was a great opportunity to discuss ways to further strengthen the Namami Gange initiative. Spoke about ways to enhance cleanliness efforts including expanding the network of sewage treatment plants in the smaller towns. pic.twitter.com/3TyDD8btPn
— Narendra Modi (@narendramodi) December 30, 2022
During the meeting, emphasised on ways to enhance various forms of herbal farming along the Ganga. Also highlighted the need to boost tourism infrastructure along the river, which can provide livelihood opportunities to several people.
— Narendra Modi (@narendramodi) December 30, 2022