ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತ ಸರ್ಕಾರದ ಎಲ್ಲ ಕಾರ್ಯದರ್ಶಿಗಳನ್ನು ಭೇಟಿ ಮಾಡಿದರು. ಸಂಪುಟ ಸಚಿವರು ಮತ್ತು ಸ್ವತಂತ್ರ ನಿರ್ವಹಣೆಯ ಸಹಾಯಕ ಸಚಿವರು ಸಹ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯದರ್ಶಿಗಳ 8 ಗುಂಪು ಕಳೆದ ಜನವರಿಯಲ್ಲಿ ಪ್ರಧಾನಮಂತ್ರಿಯವರಿಗೆ ಅರ್ಪಿಸಿದ್ದ ವರದಿಯ ಮುಂದುವರಿಕೆಯಾಗಿ ಸಂಪುಟ ಕಾರ್ಯದರ್ಶಿ ಈವರೆಗೆ ಆಗಿರುವ ಕಾರ್ಯದ ಬಗ್ಗೆ ಸಂಕ್ಷಿಪ್ತ ವಿವರ ಮಂಡಿಸಿದರು. ಎಂಟು ಗುಂಪುಗಳ ಪೈಕಿ ಎರಡು ಗುಂಪಿನ ಕಲಾಪ ವರದಿಗಾರರು ಸಹ ತಮ್ಮ ಗುಂಪುಗಳ ಶಿಫಾರಸುಗಳ ಜಾರಿಯ ಸ್ಥಿತಿಯ ಕುರಿತಂತೆ ಪ್ರಾತ್ಯಕ್ಷಿಕೆ ಮಂಡಿಸಿದರು. ಕಾರ್ಯದರ್ಶಿಗಳ ಹತ್ತು ಹೊಸ ಗುಂಪುಗಳನ್ನು ರಚಿಸಲಾಯಿತು ಮತ್ತು ಈ ಗುಂಪುಗಳು ವಿವಿಧ ಆಡಳಿತ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವರದಿಯನ್ನು ನವೆಂಬರ್ ಅಂತ್ಯದೊಳಗೆ ಸಲ್ಲಿಸಲಿವೆ. ನಿರ್ದಿಷ್ಟ ವಿಷಯದ ಬಗ್ಗೆ ಕಾರ್ಯನಿರ್ವಹಿಸಿದ ಹಿಂದಿನ ಗುಂಪುಗಳಿಗೆ ಹೋಲಿಸಿದರೆ, ಈ ಬಾರಿಯ ಗುಂಪುಗಳ ಗಮನ ವಲಯಗಳ ಅಂದರೆ ಕೃಷಿ, ಇಂಧನ, ಸಾರಿಗೆ ಇತ್ಯಾದಿಗಳ ಮೇಲಿದೆ.
ಕಾರ್ಯದರ್ಶಿಗಳನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿಯವರು ಜನವರಿ ತಿಂಗಳಿನಲ್ಲಿ ಎಂಟು ವಿಷಯಾಧಾರಿತ ಗುಂಪುಗಳ ಭಾಗವಾಗಿ ಅವರು ಮಾಡಿದ ಕಾರ್ಯವನ್ನು ಶ್ಲಾಘಿಸಿದರು. ಅವರು ಅಧ್ಯಯನ ನಡೆಸುತ್ತಿರುವ ಆಯಾ ವಲಯಗಳಲ್ಲಿ ಕೇಂದ್ರ ಸರ್ಕಾರ ಮಾಡಿರುವ ಕಾರ್ಯದ ಮಹತ್ವದ ಪರಾಮರ್ಶೆ ಕೈಗೊಳ್ಳುವಂತೆ ಆಗ್ರಹಿಸಿದರು. ಸಂಬಂಧಿತ ವಿಚಾರಗಳ ಸಂಶೋಧನೆಗೆ ಯುವ ಅಧಿಕಾರಿಗಳನ್ನು ತೊಡಗಿಸುವಂತೆ ಅವರು ತಿಳಿಸಿದರು.
ಜನಸಂಖ್ಯೆಯ ಲಾಭದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಎಲ್ಲ ಗುಂಪುಗಳೂ ತಮ್ಮ ಶಿಫಾರಸಿನಂತೆ ಭಾರತದಲ್ಲಿನ 80 ಕೋಟಿ ಯುವ ಜನರ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಆದ್ಯತೆ ನೀಡಬೇಕೆಂದರು. ಭಾರತ ಸರ್ಕಾರದ ಕಾರ್ಯದರ್ಶಿಗಳ ತಂಡವು ಸಾಮೂಹಿಕ ಬುದ್ಧಿವಂತಿಕೆ ಮತ್ತು ಭಾರತದ ಜನತೆಯ ವಿಶ್ವಾಸ ಹಾಗೂ ಆಶೋತ್ತರಗಳನ್ನು ಪೂರೈಸುವಂಥ ಅನುಭವ ಹೊಂದಿದೆ ಎಂದ ಪ್ರಧಾನಮಂತ್ರಿಯವರು, ಅವರು ಮುಂದಿನ ಕಾರ್ಯಗಳಲ್ಲಿ ತಮ್ಮ ಅತ್ಯುತ್ತಮ ಮುಂದಡಿ ಇಡುವಂತೆ ಪ್ರೇರೇಪಿಸಿದರು.
AKT/SH
Held productive & enriching interactions on policy issues with Secretaries to the GoI. https://t.co/nclDhHrKTH
— Narendra Modi (@narendramodi) October 27, 2016