ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಡಿ. 25ರಂದು ಬೆಳಗ್ಗೆ 11ಕ್ಕೆ ನಡೆಸಿಕೊಡಲಿರುವ ಮನ್ ಕಿ ಬಾತ್ ಕಾರ್ಯಕ್ರಮ ಅವತರಿಣಿಕೆಗೆ ಜನರು ವಿಷಯಾಂಶಗಳನ್ನು ಹಂಚಿಕೊಳ್ಳುವಂತೆ ಆಹ್ವಾನಿಸಿದ್ದಾರೆ. ಪ್ರಧಾನ ಮಂತ್ರಿ ಶ್ರೀ ಮೋದಿಯವರು ನಮೋ ಆ್ಯಪ್ , ಮೈಗೌನಲ್ಲಿ(MyGov) ಅಭಿಪ್ರಾಯ ಹಂಚಿಕೊಳ್ಳಲು ಅಥವಾ ಟೋಲ್ ಫ್ರೀ ಸಂಖ್ಯೆ 1800-11-7800 ಗೆ ಧ್ವನಿ ಸಂದೇಶ ರವಾನಿಸುವಂತೆ ಕೋರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,
“2022ನೇ ವರ್ಷದ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮ ಡಿ.25 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಿಮ್ಮಿಂದಲೇ ವಿಷಯಗಳನ್ನು ಪಡೆಯಲು ಕಾತುರದಿಂದಿದ್ದೇನೆ. ನಮೋ ಆ್ಯಪ್ , ಮೈಗೌನಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಅಥವಾ 1800-11-7800 ಟೋಲ್ ಫ್ರೀ ಸಂಖ್ಯೆಗೆ ಧ್ವನಿ ಸಂದೇಶ ಕಳುಹಿಸಿವಂತೆ ಕೋರುತ್ತೇನೆ” ಎಂದು ಮನವಿ ಮಾಡಿದ್ದಾರೆ.
***
2022's last #MannKiBaat will take place on the 25th of this month. I am eager to receive your inputs for the programme. I urge you to write on the NaMo App, MyGov or record your message on 1800-11-7800.https://t.co/W9ef5kQZXj
— Narendra Modi (@narendramodi) December 13, 2022