Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೋನ್ಯಿ ಪೋಲೋ ವಿಮಾನ ನಿಲ್ದಾಣದ ಆರಂಭದಿಂದಾಗಿ ಅರುಣಾಚಲ ಪ್ರದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ಪ್ರಧಾನ ಮಂತ್ರಿಯವರು ಹೇಳಿದ್ದಾರೆ


ಇಟಾನಗರದಲ್ಲಿನ ದೋನ್ಯಿ ಪೊಲೊ ವಿಮಾನ ನಿಲ್ದಾಣದ ಪ್ರಾರಂಭದಿಂದಾಗಿ ಅರುಣಾಚಲ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ದೊರೆಯಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೇಮಾ ಖಂಡು ಅವರು ಹಂಚಿಕೊಂಡ ವೀಡಿಯೋದಲ್ಲಿನ ಆಕರ್ಷಕವಾದ ನೋಟಗಳನ್ನು ಪ್ರಧಾನಿ ಶ್ಲಾಘಿಸಿದ್ದಾರೆ. 

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೇಮಾ ಖಂಡು ಅವರ ಟ್ವೀಟ್ ಅನ್ನು ಉಲ್ಲೇಖಿಸಿ ಪ್ರಧಾನಿ ಮರು ಟ್ವೀಟ್ ಮಾಡಿದ್ದಾರೆ. 

“ಅದ್ಭುತವಾಗಿ ಕಾಣುತ್ತಿದೆ! ಹೊಸ ವಿಮಾನ ನಿಲ್ದಾಣ ಮತ್ತು ವಿಮಾನಗಳನ್ನು ಆರಂಭಿಸಿರುವುದರಿಂದ, ಹೆಚ್ಚಿನ ಜನರು ಅರುಣಾಚಲ ಪ್ರದೇಶಕ್ಕೆ ಸುಲಭವಾಗಿ ಭೇಟಿ ನೀಡಲು ಮತ್ತು ಅಲ್ಲಿನ ಆತ್ಮೀಯ ಆತಿಥ್ಯವನ್ನು ಅನುಭವಿಸಲು ಸಾಧ್ಯವಾಗುತ್ತದೆ” ಎಂದು ಪ್ರಧಾನಿ ಹೇಳಿದ್ದಾರೆ.

*****