Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಿಎಸ್ ಎಲ್ ವಿ ಸಿ54 ರಾಕೆಟ್ ಯಶಸ್ವಿ ಉಡಾವಣೆ, ಇಸ್ರೊ ಮತ್ತು ಎನ್ ಎಸ್ ಐಎಲ್ ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ


ಇಂದು ಬೆಳಗ್ಗೆ ಪಿಎಸ್ ಎಲ್ ವಿ ಸಿ54(PSLV C54) ರಾಕೆಟ್ ನ್ನು ಯಶಸ್ವಿಯಾಗಿ ಉಡಾಯಿಸಿದ ಇಸ್ರೋ ಹಾಗೂ ಎನ್ ಎಸ್ ಐಎಲ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಉಡಾವಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಕಂಪನಿಗಳನ್ನು ಸಹ ಪ್ರಧಾನಿ ನರೇಂದ್ರ ಮೋದಿಯವರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಮೋದಿ, “ಪಿಎಸ್ ಎಲ್ ವಿ ಸಿ54 ರಾಕೆಟ್ ನ ಯಶಸ್ವಿ ಉಡಾವಣೆಗಾಗಿ ಇಸ್ರೋ ಮತ್ತು ಎನ್ ಎಸ್ ಐಎಲ್ (NSIL) ಗೆ ಅಭಿನಂದನೆಗಳು. ಇಒಎಸ್ 06(EOS-06) ಉಪಗ್ರಹವು ನಮ್ಮ ಕಡಲ ಸಂಪನ್ಮೂಲಗಳ ಬಳಕೆಯನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ.”

“ಭಾರತೀಯ ಕಂಪನಿಗಳಾದ ಪಿಕ್ಸೆಲ್ ಸ್ಪೇಸ್ ಮತ್ತು ಧ್ರುವಸ್ಪೇಸ್ ನಿಂದ 3 ಉಪಗ್ರಹಗಳ ಉಡಾವಣೆಯು ಹೊಸ ಯುಗದ ಆರಂಭವನ್ನು ಸೂಚಿಸುತ್ತಿದ್ದು, ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಭಾರತದ ಪ್ರತಿಭೆಯನ್ನು ಸಂಪೂರ್ಣವಾಗಿ ಅರಿತುಕೊಳ್ಳಬಹುದು. ಈ ಉಡಾವಣೆಯಲ್ಲಿ ತೊಡಗಿರುವ ಎಲ್ಲಾ ಕಂಪನಿಗಳು ಮತ್ತು ಪ್ರತಿಯೊಬ್ಬರಿಗೂ ಅಭಿನಂದನೆಗಳು.” ಎಂದು ಬರೆದುಕೊಂಡಿದ್ದಾರೆ.

***