Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಬುಡಕಟ್ಟು ಹೆಮ್ಮೆಯ ದಿನದಂದು ಪ್ರಧಾನ ಮಂತ್ರಿಗಳ ಸಂದೇಶ

​​​​​​​ಬುಡಕಟ್ಟು ಹೆಮ್ಮೆಯ ದಿನದಂದು ಪ್ರಧಾನ ಮಂತ್ರಿಗಳ ಸಂದೇಶ


ನನ್ನ ಪ್ರೀತಿಯ ದೇಶವಾಸಿಗಳೇ,

ನಿಮ್ಮೆಲ್ಲರಿಗೂ ಬುಡಕಟ್ಟು ಹೆಮ್ಮೆಯ ದಿನದ  ಹೃತ್ಪೂರ್ವಕ ಶುಭಾಶಯಗಳು.

ಇಂದು, ಇಡೀ ದೇಶವು ಲಾರ್ಡ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ನಂಬಿಕೆ ಮತ್ತು ಗೌರವದಿಂದ ಆಚರಿಸುತ್ತಿದೆ.  ನವೆಂಬರ್ 15 ರಂದು ಬುಡಕಟ್ಟು ಜನಾಂಗದ ಹೆಮ್ಮೆಯ ದಿನವೆಂದು ಘೋಷಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ “ಸರ್ಕಾರದ ಸೌಭಾಗ್ಯ” ಎಂದು ಪರಿಗಣಿಸುತ್ತೇನೆ.

ಒಡನಾಡಿಗಳೇ…

 ಭಗವಾನ್ ಬಿರ್ಸಾ ಮುಂಡಾ ಅವರು ನಮ್ಮ ರಾಜಕೀಯ ಸ್ವಾತಂತ್ರ್ಯದ ನಾಯಕ ಮಾತ್ರವಲ್ಲ,  ನಮ್ಮ ಆಧ್ಯಾತ್ಮಿಕ, ಸಾಂಸ್ಕೃತಿಕ ಶಕ್ತಿಯ ವಾಹಕವೂ ಆಗಿದ್ದರು.  ಇಂದು ಸ್ವಾತಂತ್ರ್ಯದ ‘ಪಂಚ ಪ್ರಾಣ’ದ ಶಕ್ತಿಯಿಂದ ಭಗವಾನ್ ಬಿರ್ಸಾ ಮುಂಡಾ ಸೇರಿದಂತೆ ಕೋಟ್ಯಂತರ ಬುಡಕಟ್ಟು ವೀರರ ಕನಸುಗಳನ್ನು ನನಸಾಗಿಸುವತ್ತ ದೇಶ ಸಾಗುತ್ತಿದೆ. ಬುಡಕಟ್ಟು ಹೆಮ್ಮೆಯ ದಿನಾಚರಣೆಯ ಮೂಲಕ ದೇಶದ ಬುಡಕಟ್ಟು ಪರಂಪರೆಯ ಬಗ್ಗೆ ಅಭಿಮಾನ, ಬುಡಕಟ್ಟು ಸಮಾಜದ ಅಭಿವೃದ್ಧಿ ಸಂಕಲ್ಪ ಈ ಪಂಚ ಪ್ರಾಣ ಶಕ್ತಿಯ ಒಂದು ಭಾಗವಾಗಿದೆ.

ಒಡನಾಡಿಗಳೇ...

ಭಾರತದ ಬುಡಕಟ್ಟು ಸಮಾಜವು ಬ್ರಿಟಿಷ್ ಮತ್ತು ವಿದೇಶಿ ಆಡಳಿತಗಾರರಿಗೆ ತಮ್ಮ ಬುಡಕಟ್ಟು ಸಮಾಜದ  ಸಾಮರ್ಥ್ಯ ಏನೆಂಬುದನ್ನು ಈ ಹಿಂದೆಯೇ ತೋರಿಸಿದೆ.  ಸಂತಾಲ್‌ನಲ್ಲಿ ತಿಲ್ಕಾ ಮಾಂಝಿ ಅವರ ನೇತೃತ್ವದಲ್ಲಿ ನಡೆದ ‘ದಾಮಿನ್ ಸಂಗ್ರಾಮ್’ ಬಗ್ಗೆ ನಮಗೆ ಹೆಮ್ಮೆ ಇದೆ.  ಬುಧು ಭಗತ್ ನೇತೃತ್ವದ ‘ಲರ್ಕಾ ಚಳವಳಿ’ಯ ಬಗ್ಗೆ ನಮಗೆ ಹೆಮ್ಮೆ ಇದೆ.  ‘ಸಿದ್ದು ಕಣು ಕ್ರಾಂತಿ’ ಬಗ್ಗೆ ನಮಗೆ ಹೆಮ್ಮೆ ಇದೆ.  ‘ತಾನಾ ಭಗತ್ ಚಳವಳಿ’ ಬಗ್ಗೆ ನಮಗೆ ಹೆಮ್ಮೆ ಇದೆ ಅಲ್ಲದೇ ಬೇಗ ಭಿಲ್ ಚಳವಳಿಯ ಬಗ್ಗೆ ಹೆಮ್ಮೆಯೂ ಇದೆ.ಇದರೊಂದಿಗೆ ನಾಯ್ಕ್ಡಾ ಚಳವಳಿಯು ಸಹ ನಮ್ಮ ಹೆಮ್ಮೆಯೇ ಆಗಿದೆ.  ಸಂತ ಜೋರಿಯಾ ಪರಮೇಶ್ವರ್ ಮತ್ತು ರೂಪ್ ಸಿಂಗ್ ನಾಯಕ್ ಇವರುಗಳ ಮೇಲೆಯೂ ಸಹ ನಮಗೆಲ್ಲಾ ಗೌರವಪೂರ್ಣವಾದ ಹೆಮ್ಮೆಯೂ ಇದೆ.

ಲಿಮ್ಡಿ, ದಹೋಡ್‌ನಲ್ಲಿ ಬ್ರಿಟಿಷರನ್ನು ಸೋಲಿಸಿದ ಬುಡಕಟ್ಟು ವೀರರ ಬಗ್ಗೆ ನಮಗೆ ಹೆಮ್ಮೆಯಿದೆ, ಮಂಗರ್‌ನ ಗೌರವವನ್ನು ಹೆಚ್ಚಿಸಿದ ಗೋವಿಂದ ಗುರೂಜೀ ಬಗ್ಗೆಯೂ ನಮಗೆ ಹೆಮ್ಮೆಯಿದೆ.  ಅಲ್ಲೂರಿ ಸೀತಾ ರಾಮರಾಜು ಅವರ ನೇತೃತ್ವದ ರಾಂಪ ಚಳವಳಿಯ ಬಗ್ಗೆ ನಮಗೆ ಹೆಮ್ಮೆ ಇದೆ.ಇಂತಹ ಅನೇಕ ಚಳುವಳಿಗಳು ಈ ಭಾರತವನ್ನು ಹೆಚ್ಚು ಪವಿತ್ರಗೊಳಿಸಿವೆ. ಅಂತಹ ಹಲವಾರು ಬುಡಕಟ್ಟು ವೀರರ ತ್ಯಾಗ ಭಾರತಮಾತೆಯನ್ನು ಉಳಿಸಿದೆ.  ಕಳೆದ ವರ್ಷ ಇದೇ ದಿನ ರಾಂಚಿಯ ಬಿರ್ಸಾ ಮುಂಡಾ ಮ್ಯೂಸಿಯಂ ಅನ್ನು ರಾಷ್ಟ್ರಕ್ಕೆ ಅರ್ಪಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ.  ಇಂದು ಭಾರತವು ದೇಶದ ವಿವಿಧ ಪ್ರದೇಶಗಳಲ್ಲಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಮೀಸಲಾಗಿರುವ ಅನೇಕ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸುತ್ತಿದೆ.

ಒಡನಾಡಿಗಳೇ…..

ಕಳೆದ ಎಂಟು ವರ್ಷಗಳಲ್ಲಿ, ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ದೇಶದ ಪ್ರತಿಯೊಂದು ಯೋಜನೆ, ಪ್ರತಿ ಪ್ರಯತ್ನದ ಆರಂಭದಲ್ಲಿದ್ದಾರೆ.  ಜನ್ ಧನ್ ನಿಂದ ಗೋಬರ್ ಧನ್ ವರೆಗೆ, ವನ್ ಧನ್ ವಿಕಾಸ ಕೇಂದ್ರದಿಂದ ವನ್ ಧನ್ ಸ್ವಸಹಾಯ ಸಂಘಕ್ಕೆ, ಸ್ವಚ್ಛ ಭಾರತ್ ಮಿಷನ್ ನಿಂದ ಜಲ ಜೀವನ್ ಮಿಷನ್ ವರೆಗೆ, ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಉಜ್ವಲ ಅನಿಲ ಸಂಪರ್ಕದವರೆಗೆ, ಮಾತೃತ್ವ ವಂದನಾ ಯೋಜನೆಯಿಂದ ಪೌಷ್ಟಿಕಾಂಶಕ್ಕಾಗಿ ರಾಷ್ಟ್ರೀಯ ಅಭಿಯಾನದವರೆಗೆ, ಗ್ರಾಮೀಣ ರಸ್ತೆಯಿಂದ ಮೊಬೈಲ್ ಸಂಪರ್ಕಕ್ಕೆ ಯೋಜನೆಗಳು, ಏಕಲವ್ಯ ಶಾಲೆಗಳಿಂದ ಬುಡಕಟ್ಟು ವಿಶ್ವವಿದ್ಯಾನಿಲಯಗಳವರೆಗೆ, ಬಿದಿರಿನ ದಶಕಗಳ ಹಳೆಯ ಕಾನೂನನ್ನು ಸುಮಾರು 90 ಅರಣ್ಯ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಗೆ ಬದಲಾಯಿಸುವುದರಿಂದ ಹಿಡಿದು,  ಸಿಕಲ್‌ ಸೆಲ್‌ ಅನಿಮಿಯಾ ತಡೆಗಟ್ಟುವಿಕೆಯಿಂದ ಬುಡಕಟ್ಟು ಸಂಶೋಧನಾ ಸಂಸ್ಥೆಗಳವರೆಗೆ, ಉಚಿತ ಕರೋನಾ ಲಸಿಕೆಯಿಂದ ಮಿಷನ್ ಇಂದ್ರಧನುಷ್ ವರೆಗೆ ಅನೇಕ ಮಾರಣಾಂತಿಕ ಕಾಯಿಲೆಗಳಿಂದ ಮುಕ್ತಿ ನೀಡಲು ಸರ್ಕಾರದ ಯೋಜನೆಗಳು ದೇಶದ ಕೋಟಿಗಟ್ಟಲೆ ಬುಡಕಟ್ಟು ಕುಟುಂಬಗಳ ಜೀವನವನ್ನು ಸುಲಭಗೊಳಿಸಿವೆ, ಅವರು ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿಯಿಂದ ಪ್ರಯೋಜನ ಪಡೆದಿದ್ದಾರೆ.

ಒಡನಾಡಿಗಳೇ….

ಬುಡಕಟ್ಟು ಸಮಾಜದಲ್ಲಿ ಶೌರ್ಯವೂ ಇದೆ, ಸಹಜೀವನ ಮತ್ತು ಪ್ರಕೃತಿಯೊಂದಿಗೆ ಒಳಗೊಳ್ಳುವಿಕೆ ಕೂಡ ಇದೆ.  ಈ ಭವ್ಯ ಪರಂಪರೆಯಿಂದ ಕಲಿಯುವ ಮೂಲಕ ಭಾರತ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಈ ದಿನವನ್ನು ‘ಬುಡಕಟ್ಟು ಹೆಮ್ಮೆಯ ದಿನ’ ಎನ್ನುವುದನ್ನು ನಾನು ನಂಬುತ್ತೇನೆ. ಈ ದಿಕ್ಕಿನಲ್ಲಿ ನಮಗೆ, ಮಾಧ್ಯಮಕ್ಕೆ ಅವಕಾಶವಾಗುತ್ತದೆ.  ಈ ಸಂಕಲ್ಪದೊಂದಿಗೆ ಭಗವಾನ್ ಬಿರ್ಸಾ ಮುಂಡಾ ಮತ್ತು ಕೋಟಿ ಕೋಟಿ ಆದಿವಾಸಿ ವೀರ ನಾಯಕರು, ವೀರ ನಾಯಕಿಯರಿಗೆ ಮತ್ತೊಮ್ಮೆ ನನ್ನ ಗೌರವ ನಮನ.

ಅನಂತ ಧನ್ಯವಾದಗಳು!

****