Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗಣಿತಶಾಸ್ತ್ರಜ್ಞ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಆರ್. ಎಲ್. ಕಶ್ಯಪ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ 


ಗಣಿತಶಾಸ್ತ್ರಜ್ಞ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಆರ್. ಎಲ್. ಕಶ್ಯಪ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;

“ಶ್ರೀ ಆರ್.ಎಲ್. ಕಶ್ಯಪ್ ಅವರು ಬಹುಮುಖ ವ್ಯಕ್ತಿತ್ವದ ಶ್ರೇಷ್ಠ ವಿದ್ವಾಂಸರಾಗಿದ್ದರು. ಅವರು ಗಣಿತ ಮತ್ತು ವೈಜ್ಞಾನಿಕ ಜ್ಞಾನದ ಗಣಿಯಾಗಿದ್ದರು.  ಅವರು ಭಾರತದ ಸಾಂಸ್ಕೃತಿಕ ಬೇರುಗಳ ಬಗ್ಗೆ ಅಪಾರ ಹೆಮ್ಮೆಹೊಂದಿದ್ದರು ಮತ್ತು ವೇದಾಧ್ಯಯನದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬ ವರ್ಗಕ್ಕೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ.” ಎಂದು ತಿಳಿಸಿದ್ದಾರೆ.

 

 

*****