ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಯುವ ಮತ್ತು ಕ್ರೀಡಾ ಕ್ಷೇತ್ರದ ದ್ವಿಪಕ್ಷೀಯ ಸಹಕಾರಕ್ಕಾಗಿ ಖತಾರ್ ನಡುವೆ 5.6.2016ರಂದು ಪ್ರಥಮ ಕಾರ್ಯಕಾರಿ ಕಾರ್ಯಕ್ರಮಕ್ಕಾಗಿ ಸಹಿ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ ಮತ್ತು 1999ರ ಏಪ್ರಿಲ್ 7ರಂದು ಸಹಿ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಣೆ ನೀಡಲಾಯಿತು.
ಭಾರತ ಮತ್ತು ಖತಾರ್ ನಡುವೆ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ನಮ್ಮ ಕ್ರೀಡಾಪಟುಗಳ ಪ್ರದರ್ಶನದ ಸುಧಾರಣೆಗೆ ಕಾರಣವಾಗುವ ಕ್ರೀಡಾ ವಿಜ್ಞಾನ, ಕ್ರೀಡಾ ಔಷಧ ಮತ್ತು ತರಬೇತಿ ತಂತ್ರಗಾರಿಕೆ ಕ್ಷೇತ್ರಗಳಲ್ಲಿ ತಜ್ಞತೆ ಮತ್ತು ಅರಿವಿನ ವಿಸ್ತರಣೆಗೆ ಈ ತಿಳಿವಳಿಕೆ ಒಪ್ಪಂದ ನೆರವಾಗಲಿದೆ. ಇದು ಜಾತಿ, ಮತ, ಧರ್ಮ, ಪ್ರದೇಶ ಮತ್ತು ಲಿಂಗ ತಾರತಮ್ಯ ಇಲ್ಲದೆ ಎಲ್ಲ ಕ್ರೀಡಾಪಟುಗಳಿಗೂ ಸಮಾನವಾಗಿ ಅನ್ವಯವಾಗಲಿದೆ.
AKT/SH