Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಶ್ರೀ ವಿಜಯ್ ವಲ್ಲಭ ಸುರೀಶ್ವರ್ ಜಿ ಅವರ 150ನೇ ಜಯಂತಿ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ವಿಡಿಯೋ ಸಂದೇಶದ ಅನುವಾದ

​​​​​​​ಶ್ರೀ ವಿಜಯ್ ವಲ್ಲಭ ಸುರೀಶ್ವರ್ ಜಿ ಅವರ 150ನೇ ಜಯಂತಿ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ವಿಡಿಯೋ ಸಂದೇಶದ ಅನುವಾದ


ಎಲ್ಲರಿಗೂ ವಂದನೆಗಳು !

ಈ ಸಂದರ್ಭದಲ್ಲಿ ನಾನು ಜಗತ್ತಿನಾದ್ಯಂತ ಇರುವ ಎಲ್ಲ ಜೈನ ಧರ್ಮದ ಭಕ್ತರಿಗೆ ಮತ್ತು ಭಾರತದ ಸಂತ ಪರಂಪರೆಯ ಧೂತರಿಗೆ ಶುಭಾಶಯ ಕೋರುತ್ತೇನೆ. ಈ ಕಾರ್ಯಕ್ರಮದಲ್ಲಿ ಅನೇಕ ಪೂಜ್ಯ ಸಂತರು ಉಪಸ್ಥಿತರಿದ್ದೀರಿ. ಹಲವು ಬಾರಿ ನಿಮ್ಮನ್ನು ಭೇಟಿಯಾಗುವುದು ಮತ್ತು ನಿಮ್ಮ ಆಶೀರ್ವಾದವನ್ನು ಪಡೆಯುವ ಸೌಭಾಗ್ಯ ನನ್ನದಾಗಿದೆ. ನಾನು ಗುಜರಾತಿನಲ್ಲಿದ್ದಾಗ ವಡೋದರಾ ಮತ್ತು ಛೋಟಾ ಉದಯಪುರದ ಕನ್ವತ್ ಹಳ್ಳಿಯಲ್ಲೂ ‘ಸಾಂತ್ವಾನಿ’ ಕೇಳುವ ಅವಕಾಶ ಸಿಕ್ಕಿತು. ಪೂಜ್ಯ ಶ್ರೀ ವಿಜಯ್ ವಲ್ಲಭ ಸುರೀಶ್ವರ್ ಜೀ ಅವರ ೧೫೦ನೇ ಜಯಂತಿ ಸಂದರ್ಭದಲ್ಲಿ ಅವರ ಪ್ರತಿಮೆ ಅನಾವರಣಗೊಳಿಸುವ ಸುಯೋಗ ನನಗೆ ದೊರಕಿತ್ತು. ಇಂದು ಮತ್ತೊಮ್ಮೆ ನಾನು ತಂತ್ರಜ್ಞಾನದ ಮೂಲಕ ಸಂತರ ನಡುವೆ ಇದ್ದೇನೆ. ಇಂದು ಆಚಾರ್ಯ ಶ್ರೀ ವಿಜಯ್ ವಲ್ಲಭ ಸುರೀಶ್ವರ್ ಜಿ ಅವರ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ. ಆದ್ದರಿಂದ, ಈ ಅವಕಾಶವು ನನಗೆ ದುಪ್ಪಟ್ಟು ಆನಂದ ತಂದಿದೆ. ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯ ಬಿಡುಗಡೆಯು ಪೂಜ್ಯ ಆಚಾರ್ಯ ಜೀ ಅವರು ತಮ್ಮ ಭಾಷಣಗಳ ಮೂಲಕ ಮತ್ತು ಅವರ ತತ್ವಗಳಲ್ಲಿ ಸದಾ ತಮ್ಮ ಜೀವನದಲ್ಲಿ ಪ್ರತಿಬಿಂಬಿಸುವ ಆಧ್ಯಾತ್ಮಿಕ ಪ್ರಜ್ಞೆಯೊಂದಿಗೆ ಜನಸಾಮಾನ್ಯರನ್ನು ಸಂಧಿಸುವ ಅತ್ಯಂತ ಪ್ರಮುಖ ಪ್ರಯತ್ನವಾಗಿದೆ.

ಎರಡು ವರ್ಷಗಳ ಕಾಲ ನಡೆದ ಸಂಭ್ರಮಾಚರಣೆ ಇದೀಗ ಮುಕ್ತಾಯದ ಹಂತದಲ್ಲಿದೆ. ನಂಬಿಕೆ, ಆಧ್ಯಾತ್ಮಿಕತೆ, ದೇಶಭಕ್ತಿ ಮತ್ತು ರಾಷ್ಟ್ರದ ಶಕ್ತಿಯನ್ನು ಜಾಗೃತಗೊಳಿಸಲು ಈ ಅವಧಿಯಲ್ಲಿ ನೀವು  ಆರಂಭಿಸಿದ ಅಭಿಯಾನ ಶ್ಲಾಘನೀಯ. ಇಂದು ಜಗತ್ತು ಯುದ್ಧ, ಭಯೋತ್ಪಾದನೆ ಮತ್ತು ಹಿಂಸಾಚಾರದ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಈ ವಿಷವರ್ತುಲದಿಂದ ಹೊರಬರಲು ಜಗತ್ತು ಸ್ಫೂರ್ತಿ ಮತ್ತು ಪ್ರೋತ್ಸಾಹವನ್ನು ಹುಡುಕುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಾಚೀನ ಪರಂಪರೆ, ತತ್ವಶಾಸ್ತ್ರ ಮತ್ತು ಇಂದಿನ ಭಾರತದ ಸಾಮರ್ಥ್ಯವು ಜಗತ್ತಿಗೆ ದೊಡ್ಡ ಭರವಸೆಯಾಗಿ ಹೊರಹೊಮ್ಮುತ್ತಿದೆ. ಈ ಜಾಗತಿಕ ಬಿಕ್ಕಟ್ಟುಗಳಿಗೆ ಆಚಾರ್ಯ ಶ್ರೀ ವಿಜಯ್ ವಲ್ಲಭ ಸೂರೀಶ್ವರ ಮಹಾರಾಜ್ ಅವರು ತೋರಿಸಿದ ಮಾರ್ಗ ಮತ್ತು ಜೈನ ಗುರುಗಳ ಬೋಧನೆಗಳು ಪರಿಹಾರವಾಗಿವೆ. ಆಚಾರ್ಯಜಿಯವರು ‘ಅಹಿಂಸೆ’ (ಅಹಿಂಸೆ), ‘ಅನೇಕಾಂತ’ (ಏಕಾಂತತೆ) ಮತ್ತು ‘ಅಪರಿಗ್ರಹ’ (ಪರಿತ್ಯಾಗ) ಪಾಲಿಸಿದ ರೀತಿ ಮತ್ತು ಅದನ್ನು ಜನರಲ್ಲಿ ಹರಡಲು ನಿರಂತರ ಪ್ರಯತ್ನಗಳು ಇಂದಿಗೂ ನಮ್ಮೆಲ್ಲರನ್ನೂ ಉತ್ತೇಜಸುತ್ತವೆ. ದೇಶ ವಿಭಜನೆಯ ಕರಾಳ ಸಮಯದಲ್ಲಿಯೂ ಶಾಂತಿ ಮತ್ತು ಸೌಹಾರ್ದತೆಗಾಗಿ ಅವರು ಒತ್ತಿ ಹೇಳುತ್ತಿದ್ದುದು ಸ್ಪಷ್ಟವಾಗಿ ಗೋಚರಿಸಿತು. ಭಾರತದ ವಿಭಜನೆಯಿಂದಾಗಿ ಆಚಾರ್ಯ ಶ್ರೀಗಳು ‘ಚಾತುರ್ಮಾಸ’ ಉಪವಾಸವನ್ನು ಕೈಬಿಡಬೇಕಾಯಿತು.

ಒಂದೇ ಸ್ಥಳದಲ್ಲಿ ಉಳಿಯುವ ಮೂಲಕ ಈ ’ಸಾಧನ’ ಉಪವಾಸದ ಮಹತ್ವವನ್ನು ನಿಮಗಿಂತ ಚೆನ್ನಾಗಿ ಯಾರು ತಿಳಿದಿರಲು ಸಾಧ್ಯ? ಆದರೆ ಪೂಜ್ಯ ಆಚಾರ್ಯರು ಭಾರತಕ್ಕೆ ಬರಲು ನಿರ್ಧರಿಸಿದ್ದು ಮಾತ್ರವಲ್ಲದೆ ಎಲ್ಲವನ್ನೂ ತೊರೆದು ಇಲ್ಲಿಗೆ ಬರಬೇಕಾದ ಉಳಿದ ಜನರ ಯೋಗಕ್ಷೇಮ ಮತ್ತು ಸೇವೆಯ ಎಲ್ಲ ಅಗತ್ಯ ಕಾಳಜಿಯನ್ನು ತೆಗೆದುಕೊಂಡರು.

ಮಿತ್ರರೇ,

ಆಚಾರ್ಯರು ತೋರಿದ ‘ಅಪರಿಗ್ರಹ’ ಮಾರ್ಗವನ್ನು ಪೂಜ್ಯ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಅಳವಡಿಸಿಕೊಂಡರು. ‘ಅಪರಿಗ್ರಹ’ ಎಂದರೆ ತ್ಯಾಗವಷ್ಟೇ ಅಲ್ಲ, ಎಲ್ಲ ರೀತಿಯ ಬಾಂಧವ್ಯಗಳನ್ನು ನಿಯಂತ್ರಿಸಿಕೊಳ್ಳುವುದು. ಆಚಾರ್ಯ ಶ್ರೀಗಳು ನಮ್ಮ ಸಂಪ್ರದಾಯ, ಸಂಸ್ಕೃತಿಗಾಗಿ ಪ್ರಾಮಾಣಿಕವಾಗಿ ದುಡಿಯುವ ಮೂಲಕ ಎಲ್ಲರ ಒಳಿತಿಗಾಗಿ ಉತ್ತಮ ಕೆಲಸ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ.

ಮಿತ್ರರೇ,

ಗಚ್ಛಾಧಿಪತಿ ಜೈನಾಚಾರ್ಯ ಶ್ರೀ ವಿಜಯ್ ನಿತ್ಯಾನಂದ ಸೂರೀಶ್ವರ್ ಜಿ, ದೇಶಕ್ಕೆ ಗುಜರಾತ್ 2-2 ವಲ್ಲಭರನ್ನು ನೀಡಿದೆ ಎಂದು ಪದೇ ಪದೇ ಉಲ್ಲೇಖಿಸುತ್ತಾರೆ. ಕಾಕತಾಳೀಯವೆಂದರೆ, ಇಂದು ಆಚಾರ್ಯ ಜೀ ಅವರ 150 ನೇ ಜಯಂತಿ ಸಂಭ್ರಮಾಚರಣೆ ಮುಕ್ತಾಯವಾಗುತ್ತಿದೆ ಮತ್ತು ಕೆಲವು ದಿನಗಳಲ್ಲಿ ನಾವು ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಿದ್ದೇವೆ. ಇಂದು ಶಾಂತಿಯ ಪ್ರತಿಮೆಯು ಸಂತರ ಅತಿದೊಡ್ಡ ಪ್ರತಿಮೆಗಳಲ್ಲಿ ಒಂದಾಗಿದೆ ಮತ್ತು ಏಕತೆಯ ಪ್ರತಿಮೆಯು ಜಗತ್ತಿನ ಅತಿ ಎತ್ತರದ ಪ್ರತಿಮೆಯಾಗಿದೆ. ಇವು ಕೇವಲ ಎತ್ತರದ ಪ್ರತಿಮೆಗಳಲ್ಲ, ಆದರೆ ಅವು ‘ಏಕ್ ಭಾರತ, ಶ್ರೇಷ್ಠ ಭಾರತ’ದ ಪ್ರಮುಖ ಸಂಕೇತಗಳಾಗಿವೆ. ಸರ್ದಾರ್ ಸಾಹೇಬರು ತುಂಡು ತುಂಡುಗಳಾಗಿ ಮತ್ತು ರಾಜ ಮನೆತನಗಳ ಸಂಸ್ಥಾನಗಳಾಗಿ ವಿಭಜನೆಯಾಗಿದ್ದ ಭಾರತವನ್ನು ಒಗ್ಗೂಡಿಸಿದರು. ಆಚಾರ್ಯ ಜಿ ಅವರು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿದರು ಮತ್ತು ಭಾರತದ ಏಕತೆ ಮತ್ತು ಸಮಗ್ರತೆ ಮತ್ತು ಸಂಸ್ಕೃತಿಯನ್ನು ಬಲವರ್ಧನೆಗೊಳಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿಯ ಸಂದರ್ಭದಲ್ಲಿ ಅವರು ಹಲವು ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿದರು.

ಮಿತ್ರರೇ,

“ದೇಶದ ಏಳಿಗೆಯು ಆರ್ಥಿಕ ಸಮೃದ್ಧಿಯ ಮೇಲೆ ಅವಲಂಬಿತವಾಗಿದೆ ಮತ್ತು ಸ್ವದೇಶಿ ಅಳವಡಿಸಿಕೊಳ್ಳುವ ಮೂಲಕ ಮಾತ್ರ ಭಾರತದ ಕಲೆ, ಸಂಸ್ಕೃತಿ ಮತ್ತು ನಾಗರಿಕತೆ ಜೀವಂತವಾಗಿಡಲು ಸಾಧ್ಯ” ಎಂದು ಆಚಾರ್ಯಜಿ ಅವರು ಹೇಳಿದ್ದರು. ಧಾರ್ಮಿಕ ಸಂಪ್ರದಾಯ ಮತ್ತು ಸ್ವದೇಶಿಯನ್ನು ಒಟ್ಟಿಗೆ ಹೇಗೆ ಪ್ರಚಾರ ಮಾಡಬೇಕೆಂದು ಅವರು ನಮಗೆ ಬೋದಿಸಿದ್ದಾರೆ. ಅವರ ಬಟ್ಟೆಗಳು ಬಿಳಿಯಾಗಿರುತ್ತವೆ, ಆದರೆ ಅದೇ ಸಮಯದಲ್ಲಿ, ಅವುಗಳನ್ನು ಖಾದಿಯಿಂದ ಸಿದ್ಧಪಡಿಸಲಾಗಿತ್ತು. ಅವರು ಜೀವನಕ್ಕಾಗಿ ಅದನ್ನು ಅಳವಡಿಸಿಕೊಂಡರು. ಇಂತಹ ಸ್ವದೇಶಿ ಮತ್ತು ಸ್ವಾವಲಂಬನೆಯ ಸಂದೇಶವು ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ಇದು ಸ್ವಾವಲಂಬಿ ಭಾರತಕ್ಕೆ ಪ್ರಗತಿಯ ಮೂಲ ಮಂತ್ರವಾಗಿದೆ. ಆದ್ದರಿಂದ ನಾವು ಆಚಾರ್ಯ ವಿಜಯ್ ವಲ್ಲಭ ಸೂರೀಶ್ವರ್ ಜೀ ಮತ್ತು ಪ್ರಸ್ತುತ ಗಚ್ಛಾಧಿಪತಿ ಆಚಾರ್ಯ ಶ್ರೀ ನಿತ್ಯಾನಂದ ಸುರೀಶ್ವರ್ ಜೀ ಅವರು ತೋರಿದ ಈ ಮಾರ್ಗವನ್ನು ಮತ್ತಷ್ಟು ಬಲವರ್ಧನೆಗೊಳಿಸಬೇಕಾಗಿದೆ.

ಪೂಜ್ಯ ಸಂತರೇ, ನೀವು ಈ ಹಿಂದೆ ಬೆಳೆಸಿದ ಸಮಾಜ ಕಲ್ಯಾಣ, ಜನಸೇವೆ, ಶಿಕ್ಷಣ ಮತ್ತು ಸಾರ್ವಜನಿಕ ಪ್ರಜ್ಞೆಯ ಶ್ರೀಮಂತ ಪರಂಪರೆಯ ವಿಸ್ತರಣೆಯನ್ನು ಮುಂದುವರಿಸುತ್ತಲೇ ಇರಬೇಕು. ಇದು ಇಂದಿನ ದೇಶದ ಅಗತ್ಯವಾಗಿದೆ. ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದತ್ತ ನಾವು ಸಾಗುತ್ತಿದ್ದೇವೆ. ಅದಕ್ಕಾಗಿ ದೇಶವು ‘ಪಂಚ ಪ್ರಾಣ’(ಐದು ಸಂಕಲ್ಪ)

ಗಳನ್ನು ಕೈಗೊಂಡಿದೆ. ಈ ಐದು ಸಂಕಲ್ಪಗಳ ಸಾಕಾರದಲ್ಲಿ ಸಂತರ ಪಾತ್ರ ಬಹಳ ಮುಖ್ಯ. ನಾಗರಿಕ ಕರ್ತವ್ಯಗಳ ಸಬಲೀಕರಣಕ್ಕೆ ಸಂಬಂಧಿಸಿದಂತೆ ಸಂತರ ಮಾರ್ಗದರ್ಶನ ಸದಾ ಮುಖ್ಯವಾಗಿದೆ. ಇದರೊಂದಿಗೆ, ದೇಶದಲ್ಲಿ ಸ್ಥಳೀಯ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಧ್ವನಿ ಎತ್ತಲು ಮತ್ತು ಭಾರತದ ಜನರು ತಯಾರಿಸಿದ ಸರಕುಗಳ ಬಗ್ಗೆ ಗೌರವ  ಬೆಳೆಯುವಂತೆ ಮಾಡುವುದು ನಿಮ್ಮ ಕಡೆಯಿಂದ ರಾಷ್ಟ್ರ ಕೈಗೊಂಡಿರುವ ಜಾಗೃತಿ ಅಭಿಯಾನಕ್ಕೆ ಉತ್ತಮ ಕೊಡುಗೆಯಾಗಿದೆ. ನಿಮ್ಮ ಹೆಚ್ಚಿನ ಅನುಯಾಯಿಗಳು ವ್ಯಾಪಾರ ಮತ್ತು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಭಾರತದಲ್ಲಿ ತಯಾರಿಸಿದ ಸರಕುಗಳನ್ನು ಮಾತ್ರ ವ್ಯಾಪಾರ ಮಾಡುತ್ತಾರೆ, ಖರೀದಿಸುತ್ತಾರೆ ಮತ್ತು ಮಾರಾಟ ಮಾಡುತ್ತಾರೆ ಎಂಬ ಅವರ ಪ್ರತಿಜ್ಞೆಯು ಮಹಾರಾಜ್ ಸಾಹಿಬ್ಗೆ ದೊಡ್ಡ ಗೌರವವಾಗಿದೆ. ‘ಸಬ್ ಕಾ  ಪ್ರಾಯಸ್’ (ಸಾಮೂಹಿಕ ಪ್ರಯತ್ನಗಳು) ಎಲ್ಲರಿಗೂ, ಇಡೀ ದೇಶಕ್ಕೆ ಪ್ರಗತಿಯ ಹಾದಿ ಎಂಬುದನ್ನು ಆಚಾರ್ಯ ಶ್ರೀಗಳು ನಮಗೆ ತೋರಿಸಿದ್ದಾರೆ. ನಾವು ಈ ಹಾದಿಯಲ್ಲಿ ಸುಗಮವಾಗಿ ಮುನ್ನಡೆಯೋಣ..! ಈ ಶುಭ ಹಾರೈಕೆಯೊಂದಿಗೆ, ನಾನು ಎಲ್ಲಾ ಸಂತರನ್ನು ಅಭಿನಂದಿಸುತ್ತೇನೆ!

ನಿಮ್ಮೆಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು..!

ಘೋಷಣೆ:  ಇದು ಪ್ರಧಾನಿ ಭಾಷಣದ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

*****