ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅತ್ಯಂತ ಭಾರವಾದ ವಾಹನವಾದ ಎಲ್‌ವಿಎಂ 3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆಗಳು/ ಸಂಸ್ಥೆಗಳಾದ ಎನ್‌ಎಸ್‌ಐಎಲ್, ಐಎನ್-ಸ್ಪೇಸ್ ಮತ್ತು ಇಸ್ರೋವನ್ನು ಅಭಿನಂದಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.
‘‘ ಜಾಗತಿಕ ಸಂಪರ್ಕಕ್ಕಾಗಿ ಉದ್ದೇಶಿಸಲಾದ 36 ಒನ್‌ವೆಬ್ ಉಪಗ್ರಹಗಳೊಂದಿಗೆ ನಮ್ಮ ಭಾರವಾದ ಉಡಾವಣಾ ವಾಹನ ಎಲ್‌ವಿಎಂ 3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ http://@NSIL_India @INSPACeIND @ISRO ಗೆ ಅಭಿನಂದನೆಗಳು. ಎಲ್‌ವಿಎಂ 3 ಆತ್ಮನಿರ್ಭರವನ್ನು ಉದಾಹರಿಸುತ್ತದೆ ಮತ್ತು ಜಾಗತಿಕ ವಾಣಿಜ್ಯ ಉಡಾವಣಾ ಸೇವಾ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ,’’ ಎಂದು ಹೇಳಿದ್ದಾರೆ.
****
Congratulations @NSIL_India @INSPACeIND @ISRO on the successful launch of our heaviest launch vehicle LVM3 with 36 OneWeb satellites meant for global connectivity. LVM3 exemplifies Atmanirbharta & enhances India’s competitive edge in the global commercial launch service market.
— Narendra Modi (@narendramodi) October 23, 2022