Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಗುಜರಾತ್ ನ ಲೋಥಾಲ್ ನಲ್ಲಿನ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ ತಾಣದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನಮಂತ್ರಿ  

​​​​​​​ಗುಜರಾತ್ ನ ಲೋಥಾಲ್ ನಲ್ಲಿನ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ ತಾಣದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನಮಂತ್ರಿ  


ಗುಜರಾತ್ ನ ಲೋಥಾಲ್ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ ತಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡ್ರೋನ್ ನೆರವಿನಿಂದ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಪ್ರಗತಿ ಪರಿಶೀಲನೆ ನಡೆಸಿದರು.

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಈ ಯೋಜನೆಯಡಿ ತ್ವರಿತವಾಗಿ ಕೆಲಸ ನಡೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕೆಂಪುಕೋಟೆ ಮೇಲಿನಿಂದ ‘ಪಂಚ ಪ್ರಾಣ್’ ಬಗ್ಗೆ ಮಾತನಾಡಿದ್ದನ್ನು ಪ್ರಧಾನಮಂತ್ರಿ ಅವರು ಸ್ಮರಿಸಿಕೊಂಡು “ನಮ್ಮ ಪರಂಪರೆ ಬಗ್ಗೆ ಹೆಮ್ಮೆ” ಇದೆ ಎಂದು ಒತ್ತಿ ಹೇಳಿದರು ಮತ್ತು ನಮ್ಮ ಸಮುದ್ರ ಪರಂಪರೆಯು ನಮ್ಮ ಪೂರ್ವಜರು ನೀಡಿದ ಕೊಡುಗೆಯಾಗಿದೆ ಎಂದರು. “ನಮ್ಮ ಇತಿಹಾಸದಲ್ಲಿ ಇಂತಹ ಅನೇಕ ಕಥೆಗಳಿದ್ದು, ಆದರೆ ಅವು ಮರೆತು ಹೋಗಿವೆ ಮತ್ತು ಇಂತಹದ್ದನ್ನು ಮುಂದಿನ ಪೀಳಿಗೆಗೆ ರವಾನಿಸುವ ಸಂರಕ್ಷಿಸುವ ಮಾರ್ಗಗಳು ನಮಗೆ ಕಂಡು ಬಂದಿಲ್ಲ. ಇತಿಹಾಸದ ಇಂತಹ ಘಟನೆಗಳಿಂದ ನಾವು ಎಷ್ಟು ಕಲಿಯಬಹುದು?, ಭಾರತದ ಕಡಲ ಪರಂಪರೆಯು ಅಸಮರ್ಪಕವಾಗಿ ಮಾತನಾಡುವ ವಿಷಯವಾಗಿದೆ” ಎಂದು ಹೇಳಿದರು.  ಪುರಾತನ ಕಾಲದಲ್ಲಿ ಭಾರತದಲ್ಲಿ ವ್ಯಾಪಾರ ಮತ್ತು ವಹಿವಾಟು  ವಿಶಾಲವಾಗಿ ಹರಡಿತ್ತು ಮತ್ತು ಇದು ಜಗತ್ತಿನ ಪ್ರತಿಯೊಂದು ನಾಗರಿಕತೆಯೊಂದಿಗೆ ಬೆಸೆದುಕೊಂಡಿತ್ತು. ಆದಾಗ್ಯೂ ಸಹಸ್ರಾರು ವರ್ಷಗಳ ಸಂಪ್ರದಾಯವನ್ನು ಗುಲಾಮಗಿರಿಯು ಮುರಿಯಿತಷ್ಟೇ ಅಲ್ಲದೇ ನಂತರ ನಾವು ನಮ್ಮ ಪರಂಪರೆ ಮತ್ತು ಸಾಮರ್ಥ್ಯಗಳ ಬಗ್ಗೆ ನಿರ್ಲಕ್ಷ್ಯ ಬೆಳೆಸಿಕೊಂಡಿದ್ದೇವೆ ಎಂದು ಪ್ರಧಾನಮಂತ್ರಿ ಅವರು ವಿಷಾದ ವ್ಯಕ್ತಪಡಿಸಿದರು.  

ಭಾರತದ ಸಹಸ್ರಾರು ವರ್ಷಗಳ ಕಡಲ ಪರಂಪರೆಯ ಶ್ರೀಮಂತಿಕೆ ಮತ್ತು ವೈವಿಧ್ಯದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ದಕ್ಷಿಣ ಭಾರತದ ಚೋಳ ಸಾಮ್ರಾಜ್ಯ, ಚೀರಾ ರಾಜ ಮತ್ತು ಪಾಂಡ್ಯ ಸಾಮ್ರಾಜ್ಯ ಸಾಗರ ಸಂಪನ್ಮೂಲಗಳ ಶಕ್ತಿಯನ್ನು ಅರ್ಥಮಾಡಿಕೊಂಡಿತ್ತು ಮತ್ತು ಇದನ್ನು ಹಿಂದೆಂದೂ ಇಲ್ಲದಷ್ಟು ಔನ್ಯತ್ಯಕ್ಕೆ ಕೊಂಡೊಯ್ದಿತ್ತು. ಇದೀಗ ನಮ್ಮ ದೇಶದ ನೌಕಾ ವಲಯದ ಶಕ್ತಿ ಬಲಗೊಳ್ಳುತ್ತಿದ್ದು, ಭಾರತದಿಂದ ಜಗತ್ತಿನ ಎಲ್ಲ ಭಾಗಗಳಿಗೂ ವ್ಯಾಪಾರ ವಿಸ್ತರಣೆಯಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರು ಬಲಿಷ್ಠ ನೌಕೆಯನ್ನು ರಚಿಸಿದ್ದರು ಮತ್ತು ವಿದೇಶಿ ಆಕ್ರಣಕಾರರ ವಿರುದ್ಧ ಸವಾಲೆಸೆದಿದ್ದ ಬಗ್ಗೆ ಪ್ರಧಾನಮಂತ್ರಿ ಅವರು ಮಾತನಾಡಿದರು. “ಭಾರತದಲ್ಲಿ ಇಂತಹ ಎಲ್ಲ ಹೆಮ್ಮೆಯ ಅಧ್ಯಾಯಗಳಿದ್ದು, ಇವುಗಳನ್ನು ಆಲಕ್ಷ್ಯ ಮಾಡಲಾಗಿದೆ. ಕಚ್ ದೊಡ್ಡ ಹಡಗುಗಳನ್ನು ನಿರ್ಮಿಸುವ ಉತ್ಪಾದನಾ ಕೇಂದ್ರವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಂದರ್ಭವನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಐತಿಹಾಸಿಕ ಮಹತ್ವದ ಸ್ಥಳಗಳನ್ನು ಪುನಶ್ಚೇತನಗೊಳಿಸುವ ಸರ್ಕಾರದ ಬದ್ಧತೆಯ ಬಗ್ಗೆ ಒತ್ತಿ ಹೇಳಿದರು. “ಭಾರತದಲ್ಲಿ ದೊಡ್ಡ ಹಡಗುಗಳನ್ನು ನಿರ್ಮಿಸುತ್ತಿದ್ದು, ಜಗತ್ತಿನಾದ್ಯಂತ ಇದನ್ನು ಮಾರಾಟ ಮಾಡಲಾಗುತ್ತಿದೆ. ಪರಂಪರೆಯ ಬಗೆಗಿನ ನಿರ್ಲಕ್ಷ್ಯ ದೇಶಕ್ಕೆ ಸಾಕಷ್ಟು ಹಾನಿಮಾಡಿದ್ದು, ಈ ಪರಿಸ್ಥಿತಿಯನ್ನು ಬದಲಾಯಿಸಬೇಕಾಗಿದೆ” ಎಂದು ಹೇಳಿದರು.      

ಪಾರಂಪರಿಕ ಉತ್ಖನನ ಹಲವಾರು ಐತಿಹಾಸಿಕ ಮಹತ್ವದ ತಾಣಗಳನ್ನು ಹೊರತೆಗೆದಿದೆ. “ಈ ಕೇಂದ್ರಗಳನ್ನು ಭಾರತದ ಹೆಮ್ಮೆಯ ಸ್ವರೂಪದಲ್ಲಿ ಹಿಂತಿರುಗಿಸಲು ನಿರ್ಧರಿಸಿದ್ದು, ಧೋಲವಿರ ಮತ್ತು ಲೋಥಲ್ ಒಂದು ಕಾಲದಲ್ಲಿ ಪ್ರಸಿದ್ಧವಾಗಿತ್ತು. ಇಂದು ನಾವು ಅಭಿಯಾನ ರೂಪದಲ್ಲಿ ತ್ವರಿತವಾಗಿ ಕೆಲಸ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ” ಎಂದು ಹೇಳಿದರು. ಲೋಥಾಲ್ ಭಾರತದ ಕಡಲ ಸಾಮರ್ಥ್ಯದ ಅಭಿವೃದ್ದಿಹೊಂದುತ್ತಿರುವ ಕೇಂದ್ರವಾಗಿತ್ತು. ಇತ್ತೀಚೆಗೆ ವದ್ನಾಗರ್ ಉತ್ಖನನ ಸಂದರ್ಭದಲ್ಲಿ ಸಿಂಕೋತರ್ ಮಾತೆ ದೇವಾಲಯವನ್ನು ಬೆಳಕಿಗೆ ತರಲಾಗಿತ್ತು. ಇಂತಹ ಕೆಲವು ಪುರಾವೆಗಳು ಪುರಾತನ ಕಾಲದಲ್ಲಿ ಸಮುದ್ರ ವಲಯದ ವ್ಯಾಪಾರದ ಬಗ್ಗೆ ಮಾಹಿತಿ ನೀಡುತ್ತವೆ. ಇದೇ ಸಂದರ್ಭದಲ್ಲಿ ಸುರೇಂದ್ರ ನಗರದ ಜಿಂಜುವಾಡ ಗ್ರಾಮದಲ್ಲಿ ಲೈಟ್ ಹೌಸ್ ಇರುವ ಬಗ್ಗೆ ಪುರಾವೆಗಳು ಸಹ ಕಂಡು ಬಂದಿವೆ ಎಂದು ಹೇಳಿದರು.     

ಲೋಥಾಲ್ ನ ಉತ್ಖನನ ಸಂದರ್ಭದಲ್ಲಿ ನಗರಗಳು, ಬಂದರುಗಳು ಮತ್ತು ಮಾರುಕಟ್ಟೆಗಳನ್ನು ವಶಪಡಿಸಿಕೊಂಡಿದ್ದು, ಇಂದು ಇದರಿಂದ ನಗರ ಯೋಜನೆ ಕುರಿತು  ಸಾಕಷ್ಟು ಕಲಿಯುತ್ತೇವೆ. “ಲೋಥಾಲ್ ಸಿಂಧೂ ಕಣಿವೆಯ ನಾಗರಿಕತೆಯ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು, ಅಲ್ಲದೇ ಇದು ಶಕ್ತಿ ಮತ್ತು ಸಮೃದ್ಧಿಯ ಕೇಂದ್ರವಾಗಿದೆ” ಎಂದು ಹೇಳಿದರು. ಈ ಪ್ರದೇಶದಲ್ಲಿ ಲಕ್ಷ್ಮಿ ಮತ್ತು ಸರಸ್ವತಿ ದೇವಿಯ ಕೃಪೆಯನ್ನು ಗಮನಿಸಿದ ಅವರು, ಲೋಥಾಲ್ ಬಂದರು 84 ದೇಶಗಳ ಧ್ವಜಗಳಿಂದ ಗುರುತಿಸಲಾಗಿತ್ತು ಮತ್ತು ವಲಭಿ 80 ದೇಶಗಳ ವಿದ್ಯಾರ್ಥಿಗಳಿಗೆ ಮನೆಯಾಗಿತ್ತು ಎಂದರು.  

ಲೋಥಾಲ್ ನ ರಾಷ್ಟ್ರೀಯ ಕಡಲ ಪರಂಪರೆ ಭಾರತದ ಸಾಗರ ವಲಯದ ಇತಿಹಾಸದಲ್ಲಿನ ವೈವಿಧ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ಕಲಿಕಾ ಕೇಂದ್ರವಾಗಿ ಅಭಿವೃದ‍್ದಿ ಹೊಂದಲಿದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ಇದರ ಜೊತೆ ಇದೇ ಪ್ರದೇಶವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪುನಶ್ಚೇತನಗೊಳಿಸಲಾಗುತ್ತಿದೆ. ಲೋಥಾಲ್ ಪರಂಪರೆಯ ಸಂಕೀರ್ಣಕ್ಕೆ ಮಾತ್ರ ಸೀಮಿತವಾಗಿಲ್ಲ, ಇದರ ವೈಭವವನ್ನು ಮತ್ತೆ ವಾಪಸ್ ತರಲು ಪ್ರಯತ್ನಿಸಲಾಗುತ್ತಿದ್ದು, ಗುಜರಾತ್ ಕರಾವಳಿ ಪ್ರದೇಶದಲ್ಲಿ ಹಲವಾರು ಆಧುನಿಕ ಮೂಲ ಸೌಕರ್ಯ ಯೋಜನೆಗಳು ಬರಲಿವೆ. ಸೆಮಿಕಂಡಕ್ಟರ್ ಘಟಕವೂ ತಲೆ ಎತ್ತಲಿದೆ ಎಂದು ಹೇಳಿದರು. “ಸಹಸ್ರಾರು ವರ್ಷಗಳ ಹಿಂದೆ ಅಭಿವೃದ್ಧಿಯಾಗಿದ್ದ ಈ ಪ್ರದೇಶ ಮತ್ತೆ ಪೂರ್ಣ ಶಕ್ತಿಯೊಂದಿಗೆ ನಮ್ಮ ಸರ್ಕಾರ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ತನ್ನ ಇತಿಹಾಸದ ಕಾರಣದಿಂದ ಲೋಥಾಲ್ ಈಗ ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುತ್ತದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.      

ವಸ್ತು ಸಂಗ್ರಹಾಲಯ ಕೇವಲ ವಸ್ತುಗಳನ್ನು ಅಥವಾ ದಾಖಲೆಗಳನ್ನು ಸಂಗ್ರಹಿಸುವ ಮತ್ತು ಪ್ರದರ್ಶಿಸುವ ಸಾಧನವಲ್ಲ ಎಂದು ಹೇಳಿದ ಪ್ರಧಾನಮಂತ್ರಿ ಅವರು, ನಾವು ನಮ್ಮ ಪರಂಪರೆಯನ್ನು ಗೌರವಿಸಿದಾಗ ಅದರೊಂದಿಗಿನ ಭಾವನೆಗಳನ್ನು ನಾವು ಉಳಿಸಿಕೊಳ್ಳುತ್ತೇವೆ. ಭಾರತದ ಬುಡಕಟ್ಟು ಪರಂಪರೆಯನ್ನು ಎತ್ತಿ ಹಿಡಿದ ಶ್ರೀ ನರೇಂದ್ರ ಮೋದಿ, ದೇಶಾದ್ಯಂತ ನಿರ್ಮಿಸುತ್ತಿರುವ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳ ಕುರಿತು ಬೆಳಕು ಚೆಲ್ಲಿದರು ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಹೋರಾಟಗಾರರ ಕೊಡುಗೆಯನ್ನು ಪ್ರಸ್ತಾಪಿಸಿದರು. ಭಾರತದ ಯೋಧರ ತ್ಯಾಗ ಬಲಿದಾನಗಳ ಬಗ್ಗೆ ಮಾತನಾಡಿದ  ಪ್ರಧಾನಮಂತ್ರಿ ಅವರು, ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ಉಲ್ಲೇಖಿಸಿದರು. ಇದು ದೇಶವನ್ನು ರಕ್ಷಿಸಲು ತಮ್ಮ ಹುತಾತ್ಮರಾದ ವೀರ ಪುತ್ರರು ಮತ್ತು ಪುತ್ರಿಯರಿಗೆ ಸಾಕ್ಷಿಯಾಗಿದೆ ಎಂದರು. ಭಾರತದ ಪ್ರಜಾತಂತ್ರದ ಶಕ್ತಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ನಮ್ಮ ದೇಶದ 75 ವರ್ಷಗಳ ಪ್ರಯಾಣದ ನೋಟವನ್ನು ಇದು ನಮಗೆ ನೀಡುತ್ತದೆ ಎಂದರು.

ಕೆವಾಡಿಯಾದ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆ ಭಾರತದ ಏಕತೆ ಮತ್ತು ಸಮಗ್ರತೆಗಾಗಿ ನಮ್ಮ ಪ್ರಯತ್ನಗಳು, ದೃಢತೆ ಮತ್ತು ತಪಸ್ಸು ಕುರಿತು ನಮಗೆ ನೆನಪಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ಅಭಿವೃದ‍್ದಿ ಹೊಂದಿದ ಪರಂಪರೆಯ ವಿಶಾಲ ನೋಟವನ್ನು ಇವು ನಮಗೆ ನೀಡುತ್ತವೆ” ಎಂದು ಹೇಳಿದರು.

ರಾಷ್ಟ್ರೀಯ ಕಡಲ ವಸ್ತು ಸಂಗ್ರಹಾಲಯವನ್ನು ಲೋಥಲ್ ನಲ್ಲಿ ನಿರ್ಮಿಸುತ್ತಿದ್ದು, ದೇಶದ ಸಾಗರ ಪರಂಪರೆ ವಲಯದಲ್ಲಿ ಇದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯಾಗಿದೆ. “ಲೋಥಲ್ ತನ್ನ ಹಳೆಯ ಪರಂಪರೆಯೊಂದಿಗೆ ಪ್ರಪಂಚದ ಮುಂದೆ ಬರಲಿದೆ ಎಂಬ ಖಾತರಿಯಿದೆ” ಎಂದು ತಮ್ಮ ಭಾಷಣ ಮುಕ್ತಾಯಗೊಳಿಸಿದರು.   

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಶ್ರೀ ಮನ್ಸುಖ್ ಮಾಂಡವೀಯ ಮತ್ತು ಶ್ರೀ ಸರ್ಬಾನಂದ ಸೋನೆವಾಲ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗವಹಿಸಿದ್ದರು.

ಹಿನ್ನೆಲೆ

ಹರಪ್ಪನ್ ನಾಗರಿಕತೆಯಲ್ಲಿ ಲೋಥಾಲ್ ಒಂದು ಪ್ರಮುಖ ತಾಣವಾಗಿತ್ತು ಮತ್ತು ಅತ್ಯಂತ ಹಳೆಯ ಮಾನವ ನಿರ್ಮಿತ ಹಡಗುಕಟ್ಟೆ ಆವಿಷ್ಕಾರಕ್ಕೆ ಇದು ಸಾಕ್ಷಿಯಾಗಿದೆ. ಲೋಥಾಲ್ ನಲ್ಲಿರುವ ಕಡಲ ವಲಯದ ಐತಿಹಾಸಿಕ ಹಿನ್ನೆಲೆ ಮತ್ತು ಪರಂಪರೆಗೆ ಸೂಕ್ತ ಗೌರವದ ಸ್ಥಳವಾಗಿದೆ.   

ಲೋಥಾಲ್ ನಲ್ಲಿ ನಿರ್ಮಿಸುತ್ತಿರುವ ರಾಷ್ಟ್ರೀಯ ಕಡಲ ಪಾರಂಪರಿಕ ಸಂಕೀರ್ಣ [ಎನ್.ಎಂ.ಎಚ್.ಸಿ]ವನ್ನು ಭಾರತದ ಶ್ರೀಮಂತ ಮತ್ತು ವೈವಿಧ್ಯವಾದ ಕಡಲ ಪರಂಪರೆಯನ್ನು ಬಿಂಬಿಸುವ ಯೋಜನೆಯಷ್ಟೇ ಅಲ್ಲದೇ ಲೋಥಾಲ್ ಅನ್ನು ವಿಶ್ವದರ್ಜೆಯ ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆ ಪ್ರವಾಸೋದ್ಯಮ ಸಾಮರ್ಥ್ಯಕ್ಕೆ ಉತ್ತೇಜನ ನೀಡುವ ಜೊತೆಗೆ ಈ ಭಾಗದ ಆರ್ಥಿಕ ಅಭಿವೃದ್ದಿಯನ್ನು ಸಹ ಹೆಚ್ಚಿಸುತ್ತದೆ.

022 ರ ಮಾರ್ಚ್ ನಲ್ಲಿ ಈ ಸಂಕೀರ್ಣದ ಕೆಲಸ ಆರಂಭವಾಗಿದ್ದು, ಇದನ್ನು ಸುಮಾರು 3,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ಹರಪ್ಪನ್ ವಾಸ್ತುಶಿಲ್ಪ ಮತ್ತು ಜೀವನ ಶೈಲಿಯನ್ನು ಮರು ಸೃಷ್ಟಿಸಲು ಲೋಥಾಲ್ ನಲ್ಲಿ ಸಣ‍್ಣ ಮನೋರಂಜನೆ, ನಾಲ್ಕು ಥೀಮ್ ಪಾರ್ಕ್ ಗಳು, ಸಾಗರ ವಲಯ ಮತ್ತು ನೌಕೆಯ ಥೀಮ್ ಪಾರ್ಕ್, ಹವಾಮಾನ ಥೀಮ್ ಪಾರ್ಕ್, ಸಾಹಸ, ಅಮ್ಯೂಸ್ ಮೆಂಟ್ ಥೀಮ್ ಪಾರ್ಕ್ ನಂತಹ   ಹಲವಾರು ನಾವೀನ್ಯ ಮತ್ತು ವಿಶೇಷ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ವಿಶ್ವದ ಅತಿ ಎತ್ತರದ ಲೈಟ್ ಹೌಸ್ ವಸ್ತು ಸಂಗ್ರಹಾಲಯ ಇಲ್ಲಿ ತಲೆ ಎತ್ತಲಿದೆ. ಹರಪ್ಪನ್ ನಾಗರಿಕತೆಯ ಸಮಯದಿಂದ ಈ ವರೆಗಿನ ಭಾರತದ ಕಡಲ ಪರಂಪರೆಯನ್ನು ಎತ್ತಿ ತೋರಿಸುವ ಹದಿನಾಲ್ಕು ಗ್ಯಾಲರಿಗಳು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ರಾಜ್ಯಗಳ ಪೆವಿಲಿಯನ್ ಅನ್ನು ಸಹ ಇದು ಒಳಗೊಂಡಿದೆ. 

*****