ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, 2001ರ ಭೂಕಂಪದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಜನರು ಭುಜ್‌ನಲ್ಲಿರುವ ಸ್ಮೃತಿ ವನಕ್ಕೆ ಭೇಟಿ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಮಾಹಿತಿಯ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿಯವರು ತಮ್ಮ ಟ್ವೀಟ್‌ನಲ್ಲಿ ಹೀಗೆ ಹೇಳಿದ್ದಾರೆ:
“ಈ ವಿಷಯ ನೋಡಿ ಸಂತೋಷವಾಯಿತು. 2001 ರ ಭೂಕಂಪದಲ್ಲಿ ಮಡಿದವರಿಗೆ ಸ್ಮೃತಿ ವನ್ ಶ್ರದ್ಧಾಂಜಲಿಯಾಗಿದೆ. ಇದು ಗುಜರಾತ್‌ನ ಪುನಶ್ಚೈತನ್ಯಸ್ಥಿತಿಯನ್ನು ಸಹ ತೋರಿಸುತ್ತದೆ. ಮುಂಬರುವ ತಿಂಗಳುಗಳು ಕಚ್‌ಗೆ ಭೇಟಿ ನೀಡಲು ಉತ್ತಮ ಸಮಯವಾಗಿರುತ್ತದೆ. ರನ್ನ್ ಉತ್ಸವವಿದೆ ಮತ್ತು ಈಗ ಸ್ಮೃತಿ ವನವೂ ಇದೆ.
*******
Happy to see this. Smriti Van is a tribute to those we tragically lost in the Earthquake of 2001. It also chronicles Gujarat’s resilience. The coming months will be a great time to visit Kutch. There’s the Rann Utsav and now there’s Smriti Van also. https://t.co/545MCxy8k6
— Narendra Modi (@narendramodi) October 14, 2022