ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗೌರವ ನಮನ ಸಲ್ಲಿಸಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಜ್ಞಾನಿಯಾಗಿ ಹಾಗೂ ರಾಷ್ಟ್ರಪತಿಯಾಗಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸಮಾಜದ ಎಲ್ಲ ವರ್ಗದವರನ್ನು ಸೆಳೆದಿರುವ ಬಗ್ಗೆ ಸ್ಮರಿಸಿದ್ದಾರೆ.
ಈ ಸಂಬಂಧ ಶನಿವಾರ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು,
“ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಹುಟ್ಟುಹಬ್ಬದ ಗೌರವಪೂರ್ವಕ ನಮನಗಳು. ಅವರು ವಿಜ್ಞಾನಿಯಾಗಿ ಹಾಗೂ ರಾಷ್ಟ್ರಪತಿಯಾಗಿ ಎಲ್ಲ ವರ್ಗದ ಜನರನ್ನು ಸೆಳೆದು ಅವರೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದು ಶ್ಲಾಘನೀಯ,ʼʼ ಎಂದು ಗುಣಗಾನ ಮಾಡಿದ್ದಾರೆ.
******
Tributes to our former President Dr. APJ Abdul Kalam. He is greatly admired for his contribution to our nation as a scientist and as a President who struck a chord with every section of society. pic.twitter.com/vPwICWxA3u
— Narendra Modi (@narendramodi) October 15, 2022