Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಷ್ಯಾದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಮಾಧ್ಯಮ ಹೇಳಿಕೆ


ಘನತೆವೆತ್ತ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೇ,

ರಷ್ಯಾ ಮತ್ತು ಭಾರತ ನಿಯೋಗದ ಗೌರವಾನ್ವಿತ ಸದಸ್ಯರೇ,

ಮಾಧ್ಯಮದ ಸದಸ್ಯರೇ,

ಭಾರತದ ಹಳೆಯ ಮಿತ್ರ ಅಧ್ಯಕ್ಷ ಪುಟಿನ್ ಅವರನ್ನು ಗೋವಾದಲ್ಲಿ ಇಂದು ಸ್ವಾಗತಿಸಲು ನನಗೆ ಅತೀವ ಸಂತೋಷವಾಗುತ್ತದೆ. ಅವರು ರಷ್ಯನ್ ಭಾಷೆಯಲ್ಲಿ ಹೇಳುವಂತೆ:

ಸ್ತಾರಿಯ ದುಗ ಸುಛೆ ನೋವಿಖ ದವುಖ

[ಅರ್ಥ: ಒಬ್ಬ ಹಳೆಯ ಮಿತ್ರ ಇಬ್ಬರು ಹೊಸ ಮಿತ್ರರಿಗಿಂತಲೂ ಉತ್ತಮ.]

ಘನತೆವೆತ್ತ ಪುಟಿನ್, ಭಾರತದ ಬಗ್ಗೆ ತಮಗಿರುವ ಆಳವಾದ ಮಮಕಾರದ ಬಗ್ಗೆ ನನಗೆ ಅರಿವಿದೆ. ನಿಮ್ಮ ವೈಯಕ್ತಿಕ ಗಮನ ನಮ್ಮ ಬಾಂಧವ್ಯದ ಶಕ್ತಿಯ ಮೂಲವಾಗಿದೆ. ಮತ್ತು ಸಂಕೀರ್ಣ ಮತ್ತು ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ನಿಮ್ಮ ನಾಯಕತ್ವ ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಗೆ ಸ್ಥಿರತೆ ಮತ್ತು ಹೂರಣವನ್ನು ಒದಗಿಸಿದೆ. ನಮ್ಮದು ನೈಜ ಗೌರವದ ಮತ್ತು ಅನನ್ಯವಾದ ಬಾಂಧವ್ಯವಾಗಿದೆ.

ಸ್ನೇಹಿತರೇ,

ಕಳೆದ ಎರಡು ವಾರ್ಷಿಕ ಶೃಂಗಸಭೆಗಳಿಂದ, ನಮ್ಮ ಪಾಲುದಾರಿಕೆಯ ಪಯಣ ನವೀಕೃತ ಗಮನ ಹಾಗೂ ಚಾಲನೆಯನ್ನು ಕಂಡಿದೆ. ಅಧ್ಯಕ್ಷ ಪುಟಿನ್ ಹಾಗೂ ನಾನು ನಮ್ಮ ಕಾರ್ಯಕ್ರಮದ ಸಂಪೂರ್ಣ ಆಯಾಮದ ಬಗ್ಗೆ ಉಪಯುಕ್ತ ಮತ್ತು ವಿಸ್ತೃತ ಮಾತುಕತೆಯನ್ನು ಈಗಷ್ಟೇ ಪೂರ್ಣಗೊಳಿಸಿದ್ದೇವೆ. ನಮ್ಮ ಸಭೆಯ ಅತ್ಯಂತ ಫಲಪ್ರದವಾದ ಫಲಿತಾಂಶದ ವಿಶೇಷ ಮತ್ತು ವಿಶಿಷ್ಟ ಸ್ವರೂಪದ ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಯನ್ನು ಸ್ಪಷ್ಟವಾಗಿ ಸ್ಥಾಪಿಸಿದೆ. ಮುಂಬರುವ ವರ್ಷಗಳಲ್ಲಿ ಆರ್ಥಿಕ ಮತ್ತು ರಕ್ಷಣಾ ಬಾಂಧವ್ಯಕ್ಕೆ ನಾವು ಅಡಿಪಾಯವನ್ನೂ ಹಾಕಿದ್ದೇವೆ. ಕಮೋವ್ 226 ಟಿ ಹೆಲಿಕಾಪ್ಟರ್ ತಯಾರಿಕೆಯ ಒಪ್ಪಂದ;ಯುದ್ಧನೌಕೆಯ ನಿರ್ಮಾಣ;ಮತ್ತು ಇತರ ರಕ್ಷಣಾ ವೇದಿಕೆಯ ನಿರ್ಮಾಣ ಮತ್ತು ಸ್ವಾಧೀನ ಭಾರತದ ತಂತ್ರಜ್ಞಾನ ಮತ್ತು ಭದ್ರತಾ ಆದ್ಯತೆಯ ನಮ್ಮ ಸಹಕಾರದಲ್ಲಿ ಸೇರಿದೆ. ಅವರು ನಮಗೆ ಮೇಕ್ ಇನ್ ಇಂಡಿಯಾ ಉದ್ದೇಶದ ಸಾಧನೆಗೂ ನೆರವು ನೀಡಿದ್ದಾರೆ. ನಾವು ಎರಡೂ ಕಡೆಯ ಬಾಧ್ಯಸ್ಥರಿಗೆ ಸಂಸ್ಥೆ ಮತ್ತು ಸಹಯೋಗ ಉತ್ತೇಜಿಸಲು ಅವಕಾಶ ನೀಡುವ ವಾರ್ಷಿಕ ಸೇನಾ ಕೈಗಾರಿಕಾ ಸಮಾವೇಶ ನಡೆಸಲು ಶ್ರಮಿಸಲೂ ಒಪ್ಪಿಗೆ ಸೂಚಿಸಿದ್ದೇವೆ. ಈ ಯೋಜನೆಗಳು ನಮ್ಮ ದೀರ್ಘ ಕಾಲದ ಇತಿಹಾಸ ಮತ್ತು ಎರಡೂ ಕಡೆಯವರು ಹೆಮ್ಮೆಪಡುಬಹುದಾದ ವೈವಿಧ್ಯಮಯ ರಕ್ಷಣಾ ಪಾಲುದಾರಿಕೆಗೆ ಹೊಸ ಅಧ್ಯಾಯಗಳಾಗಿವೆ. ಕೆಲವೇ ನಿಮಿಷಗಳ ಮುನ್ನ ಕೂಡನ್ ಕುಲಂ 2ರ ಸಮರ್ಪಣೆ ಮತ್ತು ಕೂಡಂಕುಲಂ 3 ಮತ್ತು 4ಕ್ಕೆ ಶಿಲಾನ್ಯಾಸದ ಮೂಲಕ ನಾವು ನಾಗರಿಕ ಪರಮಾಣು ಇಂಧನ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ಸಹಕಾರದ ಸ್ಪಷ್ಟ ಫಲಿತಾಂಶ ಕಂಡಿದ್ದೇವೆ. ಮತ್ತು, ಉದ್ದೇಶಿತ ಎಂಟು ರಿಯಾಕ್ಟರ್ ಗಳ ನಿರ್ಮಾಣದೊಂದಿಗೆ ಪರಮಾಣು ಇಂಧನದಲ್ಲಿ ನಮ್ಮ ವಿಸ್ತೃತ ಶ್ರೇಣಿಯ ಸಹಕಾರ ಇಬ್ಬರಿಗೂ ಹೆಚ್ಚಿನ ಲಾಭ ತರಲಿವೆ. ಇದು ನಮ್ಮ ಇಂಧನ ಭದ್ರತೆಯ ಅಗತ್ಯಗಳಿಗೂ ಹೊಂದಿಕೊಳ್ಳುತ್ತದೆ, ಭಾರತದಲ್ಲಿ ಉತ್ಪಾದನೆ ಮಾಡುವ ಮತ್ತು ಸ್ಥಳೀಯತೆ ಮತ್ತು ಉನ್ನತ ತಂತ್ರಜ್ಞಾನಕ್ಕೆ ಪ್ರವೇಶ ಒದಗಿಸಲಿದೆ. ನಾವು ರಷ್ಯಾದ ಹೈಡ್ರೋಕಾರ್ಬನ್ ವಲಯದಲ್ಲಿ ನಮ್ಮ ಅಸ್ತಿತ್ವವನ್ನು ವಿಸ್ತರಿಸುತ್ತಿದ್ದೇವೆ ಎಂದು ಕಳೆದ ವರ್ಷ ಮಾಸ್ಕೋದಲ್ಲಿ ನಾನು ಹೇಳಿದ್ದೆ. ಕಳೆದ ನಾಲ್ಕು ತಿಂಗಳಲ್ಲೇ ಹೈಡ್ರೋಕಾರ್ಬನ್ ಕ್ಷೇತ್ರದಲ್ಲಿ ನಮ್ಮ ಆಳವಾದ ಮತ್ತು ಬಲವಾದ ಕಾರ್ಯಕ್ರಮದ ಸ್ಪಷ್ಟ ವಿಸ್ತರಣೆಯಲ್ಲಿ, ಭಾರತೀಯ ಕಂಪನಿಗಳು ರಷ್ಯಾದ ತೈಲ ಮತ್ತು ಅನಿಲ ವಲಯದಲ್ಲಿ ಸುಮಾರು 5.5 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿವೆ. ಮತ್ತು ಅಧ್ಯಕ್ಷ ಪುಟಿನ್ ವರ ಬೆಂಬಲದೊಂದಿಗೆ, ನಾವು ನಮ್ಮ ಕಾರ್ಯಕ್ರಮಗಳನ್ನು ಇನ್ನೂ ವಿಸ್ತರಿಸಲು ಇಚ್ಛಿಸಿದ್ದೇವೆ ಮತ್ತು ಸಿದ್ಧರಾಗಿದ್ದೇವೆ. ನಾವು ನಮ್ಮ ಎರಡೂ ರಾಷ್ಟ್ರಗಳ ನಡುವೆ ಅನಿಲ ಕೊಳವೆ ಮಾರ್ಗದ ಜಂಟಿ ಅಧ್ಯಯನ ಕೈಗೊಂಡಿದ್ದೇವೆ. ನಾಗರಿಕ ಪರಮಾಣು ಸಹಕಾರ, ಎಲ್.ಎನ್.ಜಿ ಮೂಲ ಹುಡುಕಾಟ, ತೈಲ ಮತ್ತು ಅನಿಲ ವಲಯದ ಪಾಲುದಾರಿಕೆ ಮತ್ತು ನವೀಕರಿಸಬಹುದಾದ ಕಾರ್ಯಕ್ರಮ ಎರಡೂ ರಾಷ್ಟ್ರಗಳ ನಡುವೆ ಇಂಧನ ಸೇತುವೆ ನಿರ್ಮಾಣದ ಭರವಸೆ ನೀಡಿದೆ.

ಸ್ನೇಹಿತರೆ,

ಭವಿಷ್ಯದ ಬಗ್ಗೆ ಕಣ್ಣಿಟ್ಟು, ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗ ಸ್ಥಾಪಿಸಲೂ ನಿರ್ಧರಿಸಿದ್ದೇವೆ. ಇದರೊಂದಿಗೆ ನಮ್ಮ ಸಮಾಜ ವಿವಿಧ ಕ್ಷೇತ್ರಗಳಲ್ಲಿ ಜಂಟಿ ಅಬಿವೃದ್ಧಿ, ವರ್ಗಾವಣೆ ಮತ್ತು ಅತ್ಯುನ್ನತ ತಂತ್ರಜ್ಞಾನ ವಿನಿಮಯದ ಲಾಭವನ್ನು ಪಡೆದುಕೊಳ್ಳಲಿದೆ. ಕಳೆದ ಶೃಂಗದೊಂದಿಗೆ, ನಾವು ನಮ್ಮ ಆರ್ಥಿಕ ಕಾರ್ಯಕ್ರಮವನ್ನು ಆಳಗೊಳಿಸಲು ಮತ್ತು ವೈವಿಧ್ಯತೆಯ ವಿಸ್ತರಣೆಯನ್ನು ಮುಂದುವರಿಸಲಿದ್ದೇವೆ. ಇಂದು ನಮ್ಮ ಎರಡೂ ರಾಷ್ಟ್ರಗಳ ವಾಣಿಜ್ಯ ಮತ್ತು ಕೈಗಾರಿಕೆ ಇನ್ನೂ ಹೆಚ್ಚು ಆಪ್ತವಾಗಿ ಬೆಸೆದುಕೊಂಡಿದೆ. ವಾಣಿಜ್ಯ ಮತ್ತು ಹೂಡಿಕೆಯ ಬಾಂಧವ್ಯ ಮೇಲ್ಮುಖವಾಗಿವೆ. ಅಧ್ಯಕ್ಷ ಪುಟಿನ್ ಅವರ ಬೆಂಬಲದೊಂದಿಗೆ, ನಾವು ಯುರೇಷಿಯನ್ ಆರ್ಥಿಕ ಒಕ್ಕೂಟದ ಮುಕ್ತ ವಾಣಿಜ್ಯ ಒಪ್ಪಂದದಲ್ಲಿ ಭಾರತದ ಸಂಪರ್ಕವನ್ನು ತ್ವರಿತಗೊಳಿಸುವ ವಿಶ್ವಾಸ ಹೊಂದಿದ್ದೇವೆ. ಹಸಿರು ಕಾರಿಡಾರ್ ಮತ್ತು ಅಂತಾರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಸಂಪರ್ಕದ ಖಾತ್ರಿ ಮತ್ತು ಸಾಗಣೆ ಸಂಪರ್ಕ, ವಾಣಿಜ್ಯ ಅವಕಾಶಗಳನ್ನು ಬಲಪಡಿಸಲು ನೆರವಾಗಲಿವೆ. ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್.ಐ.ಐ.ಎಫ್) ನಡುವೆ 1 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ನಿಧಿ ಮತ್ತು ರಷ್ಯಾ ನೇರ ಹೂಡಿಕೆ ನಿಧಿ (ರ್.ಡಿ.ಐ.ಎಫ್.)ಅನ್ನು ತ್ವರಿತವಾಗಿ ಸ್ಥಾಪಿಸುವ ನಮ್ಮ ಪ್ರಯತ್ನ ನಮ್ಮ ಮೂಲಸೌಕರ್ಯ ಪಾಲುದಾರಿಕೆಯನ್ನು ಮುಂದುವರಿಸಲು ನೆರವಾಗಲಿದೆ. ಎರಡೂ ರಾಷ್ಟ್ರಗಳ ವಲಯ ಮತ್ತು ರಾಜ್ಯಗಳನ್ನು ಆರ್ಥಿಕ ಕೊಂಡಿಯಲ್ಲಿ ಬೆಸೆಯಲು ನಾವು ಇಚ್ಛಿಸುತ್ತೇವೆ.

ಸ್ನೇಹಿತರೆ,

ಈ ಶೃಂಗಸಭೆಯ ಯಶಸ್ಸು, ಭಾರತ-ರಷ್ಯಾ ಕಾರ್ಯತಂತ್ರಾತ್ಮಕ ಪಾಲುದಾರಿಕೆಯನ್ನು ಬಲಪಡಿಸಲು ಶಕ್ತಿಯಾಗಿ ಬೆಳಗುವ ದೀಪವಾಗಿದೆ. ಇದು ನಮ್ಮ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳನ್ನು ಬಲವಾಗಿ ಪ್ರತಿಪಾದಿಸು ಒಮ್ಮತದ ಅಭಿಪ್ರಾಯವನ್ನು ಬಿಂಬಿಸುತ್ತದೆ. ಭಯೋತ್ಪಾದನೆಯನ್ನು ಎದುರಿಸುವ ಅಗತ್ಯ ಕುರಿತ ರಷ್ಯಾದ ಸ್ಪಷ್ಟ ನಿಲುವು ನಮ್ಮದೇ ಸ್ವಂತ ಅಭಿಪ್ರಾಯವನ್ನೂ ಪ್ರತಿಬಿಂಬಿಸುತ್ತದೆ. ನಮ್ಮ ಇಡೀ ವಲಯಕ್ಕೆ ಭೀತಿ ಒಡ್ಡಿರುವ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧದ ಹೋರಾಟ ಮತ್ತು ನಮ್ಮ ಕ್ರಮಗಳಿಗೆ ರಷ್ಯಾದ ಬೆಂಬಲ ಮತ್ತು ಅರ್ಥೈಸುವಿಕೆಯನ್ನು ನಾವು ತುಂಬಾ ಮೆಚ್ಚುತ್ತೇವೆ. ನಾವು ಭಯೋತ್ಪಾದನೆ ಮತ್ತು ಅವರ ಬೆಂಬಲಿಗರ ವಿಚಾರದಲ್ಲಿ ಯಾವುದೇ ಶೂನ್ಯ ಸೈರಣೆಯನ್ನು ಇಬ್ಬರೂ ಪ್ರತಿಪಾದಿಸಿದ್ದೇವೆ. ಆಫ್ಘಾನಿಸ್ತಾನ ಮತ್ತು ಪಶ್ಚಿಮ ಏಷ್ಯಾದ ಪ್ರಕ್ಷುಬ್ಧತೆಯ ವಿಚಾರದಲ್ಲಿ ಅಧ್ಯಕ್ಷ ಪುಟಿನ್ ಹಾಗೂ ನನ್ನ ಅಭಿಪ್ರಾಯದಲ್ಲಿ ಸಾಮ್ಯತೆಯನ್ನು ಗುರುತಿಸಿದ್ದೇವೆ. ನಾವು ಜಾಗತಿಕ ಆರ್ಥಿಕ ಮತ್ತು ಹಣಕಾಸು ಮಾರುಕಟ್ಟೆಗಳ ಅಸ್ಥಿರ ಸ್ವರೂಪದಿಂದ ಎದುರಾದ ಸವಾಲುಗಳಿಗೆ ಆಪ್ತವಾಗಿ ಸ್ಪಂದಿಸಲು ನಾವು ನಿರ್ಧರಿಸಿದ್ದೇವೆ. ವಿಶ್ವಸಂಸ್ಥೆ, ಬ್ರಿಕ್ಸ್, ಪೂರ್ವ ಏಷ್ಯಾ ಶೃಂಗ, ಜಿ-20, ಶಾಂಘೈ ಸಹಕಾರ ಸಂಘಟನೆಯಲ್ಲಿನ ನಮ್ಮಆಪ್ತ ಸಹಯೋಗ ನಮ್ಮ ಪಾಲುದಾರಿಕೆಯನ್ನು ಅದರ ಸ್ವರೂಪ ಮತ್ತು ವ್ಯಾಪ್ತಿಯಲ್ಲಿ ಜಾಗತಿಕಗೊಳಿಸಿದೆ.

ಘನತೆವೆತ್ತ ಪುಟಿನ್ ಅವರೇ,

ನಮ್ಮ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯಾಗಿ ಮುಂದಿನ ವರ್ಷ 70ನೇ ವಾರ್ಷಿಕೋತ್ಸವ ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ರಷ್ಯಾ ನಮ್ಮ ಹಿಂದಿನ ಸಾಧನೆಯನ್ನು ಆಚರಿಸಲಿದೆ. ನಮ್ಮ ಸಾಮಾನ್ಯ ಮಹತ್ವಾಕಾಂಕ್ಷೆಗೆ ಪ್ರಯೋಜನಕಾರಿಯಾಗುವ ಇಪ್ಪತ್ತೊಂದನೇ (21) ಶತಮಾನದ ನಮ್ಮ ವಿನಿಮಯಿತ ಗುರಿಗಳನ್ನು ಉತ್ತಮಗೊಳ್ಳುವುದು ಪಾಲುದಾರಿಕೆ ಮಾದರಿಯಲ್ಲಿ ಕಾರ್ಯೋನ್ಮುಖರಾಗುತ್ತಿದ್ದೇವೆ. ನಮ್ಮ ಆಪ್ತ ಮೈತ್ರಿಯು ನಮ್ಮ ಬಾಂಧವ್ಯಕ್ಕೆ ಸ್ಪಷ್ಟ ದಿಕ್ಕು, ತಾಜಾ ಪ್ರಚೋದನೆ, ಬಲವಾದ ಆವೇಗ ಮತ್ತು ಶ್ರೀಮಂತ ವಿಷಯ ನೀಡಿದೆ. ಹೊರಹೊಮ್ಮುತ್ತಿರುವ ಪ್ರಾದೇಶಿಕ ಮತ್ತು ಜಾಗತಿಕ ಭೂ ಮೇಲ್ಮೈನಲ್ಲಿ ಇದು ಶಕ್ತಿಯ ಮೂಲ ಮತ್ತು ಹುರುಳಾಗಿದೆ, ಶಾಂತಿ ಮತ್ತು ಸ್ಥಿರತೆಯ ಅಂಶವಾಗಿದೆ.

ರಷ್ಯಾದ ಭಾಷೆಯಲ್ಲಿ ಹೇಳುವುದಾದರೆ:

इंडियाई रस्सीया-रुका अब रुकु व स्वेतलोय बदूशीय

[ಅರ್ಥ – ಭಾರತ ಮತ್ತು ರಷ್ಯಾ ಭವ್ಯ ಭವಿಷ್ಯಕ್ಕೆ ಒಗ್ಗೂಡಿವೆ.]

ಧನ್ಯವಾದಗಳು, ಧನ್ಯವಾದಗಳು.

***

AKT/NT