Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ನ ಮೊಧೇರಾದಲ್ಲಿರುವ ಸೂರ್ಯ ಮಂದಿರಕ್ಕೆ ಪ್ರಧಾನಮಂತ್ರಿ ಭೇಟಿ

ಗುಜರಾತ್ ನ ಮೊಧೇರಾದಲ್ಲಿರುವ ಸೂರ್ಯ ಮಂದಿರಕ್ಕೆ ಪ್ರಧಾನಮಂತ್ರಿ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಮೊಧೇರಾದಲ್ಲಿರುವ ಸೂರ್ಯ ಮಂದಿರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರನ್ನು ಸನ್ಮಾನಿಸಲಾಯಿತು. ಶ್ರೀ ಮೋದಿ ಅವರು ಸೂರ್ಯ ಮಂದಿರದಲ್ಲಿ ಪಾರಂಪರಿಕ ದೀಪಗಳನ್ನು (ಹೆರಿಟೇಜ್ ಲೈಟಿಂಗ್) ಉದ್ಘಾಟಿಸಿದರು, ಇದು ಸಂಪೂರ್ಣವಾಗಿ ಸೌರಶಕ್ತಿಯಿಂದ ನಿರ್ವಹಿಸಲ್ಪಡುವ ಭಾರತದ ಮೊದಲ ಪಾರಂಪರಿಕ ತಾಣವಾಗಿದೆ. ಅವರು ಮೊಧೇರಾ ಸೂರ್ಯ ದೇವಾಲಯದ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಕೂಡಾ ಉದ್ಘಾಟಿಸಿದರು. ದೇವಾಲಯದ ಇತಿಹಾಸವನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಪ್ರಧಾನಮಂತ್ರಿಯವರು ಸಾಕ್ಷಿಯಾದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಸಂಸದ ಶ್ರೀ ಸಿ.ಆರ್.ಪಾಟೀಲ್, ಗುಜರಾತ್ ಸರ್ಕಾರದ ಸಚಿವರಾದ ಶ್ರೀ ಪೂರ್ಣೇಶ್ ಭಾಯಿ ಮೋದಿ ಮತ್ತು ಶ್ರೀ ಅರವಿಂದಭಾಯಿ ರೈಯಾನಿ ಅವರು ಪ್ರಧಾನಮಂತ್ರಿಯವರ ಜೊತೆಗಿದ್ದರು.

ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ಇಂದು ಗುಜರಾತ್ ನ ಮೆಹ್ಸಾನಾದ ಮೊಧೇರಾದಲ್ಲಿ 3900 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು ಮತ್ತು  ಲೋಕಾರ್ಪಣೆ ಮಾಡಿದ್ದರು. ಮೊಧೇರಾವನ್ನು ಭಾರತದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮವೆಂದು ಪ್ರಧಾನಮಂತ್ರಿಯವರು ಘೋಷಿಸಿದರು. ಗುಜರಾತ್ ನ ಮೊಧೇರಾದ ಮೋಧೇಶ್ವರಿ ಮಾತಾ ದೇವಾಲಯದಲ್ಲಿ ಶ್ರೀ ಮೋದಿ ಅವರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

 

******