Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂದು ತಮ್ಮ ನಿವಾಸದಲ್ಲಿ ಸಿಖ್‌ ನಿಯೋಗವನ್ನು ಭೇಟಿಯಾದ ಪ್ರಧಾನಮಂತ್ರಿ

ಇಂದು ತಮ್ಮ ನಿವಾಸದಲ್ಲಿ ಸಿಖ್‌ ನಿಯೋಗವನ್ನು ಭೇಟಿಯಾದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 7ನೇ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಸಿಖ್‌ ನಿಯೋಗವನ್ನು ಭೇಟಿಯಾದರು.

ದೆಹಲಿಯ ಗುರುದ್ವಾರ ಶ್ರೀ ಬಾಲಾ ಸಾಹಿಬ್‌ ಜೀ ಅವರು ಪ್ರಧಾನಮಂತ್ರಿ ಅವರ ಜನ್ಮದಿನದ ಅಂಗವಾಗಿ ‘ಅಖಂಡ್‌ ಪಾಠ್’ ಅನ್ನು ಆಯೋಜಿಸಿದ್ದರು. ಸೆಪ್ಟೆಂಬರ್‌ 15 ರಂದು ಪ್ರಾರಂಭವಾದ ‘ಅಖಂಡ್‌ ಪಾಠ್’ ಪ್ರಧಾನ ಮಂತ್ರಿ ಅವರ ಜನ್ಮದಿನ ಸೆಪ್ಟೆಂಬರ್‌ 17ರಂದು ಕೊನೆಗೊಂಡಿತು. ಸಿಖ್‌ ನಿಯೋಗವು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಗುರುದ್ವಾರದಿಂದ ಪ್ರಸಾದ ಮತ್ತು ಆಶೀರ್ವಾದವನ್ನು ನೀಡಿತು.

ಸಭೆಯಲ್ಲಿ, ಸಿಖ್‌ ನಿಯೋಗವು ಪಗ್ಡಿಯನ್ನು ಕಟ್ಟುವ ಮತ್ತು ಸಿರೋಪಾವನ್ನು ಅರ್ಪಿಸುವ ಮೂಲಕ ಪ್ರಧಾನಮಂತ್ರಿ ಅವರನ್ನು ಗೌರವಿಸಿತು. ಪ್ರಧಾನ ಮಂತ್ರಿ ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆಯನ್ನು  ಸಹ ಮಾಡಲಾಯಿತು. ಸಿಖ್‌ ಸಮುದಾಯದ ಗೌರವ ಮತ್ತು ಕಲ್ಯಾಣಕ್ಕಾಗಿ ಅವರು ಕೈಗೊಂಡ  ಮಾರ್ಗೋಪಾಯಗಳಿಗಾಗಿ  ನಿಯೋಗವು ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿತು. ಡಿಸೆಂಬರ್‌ 26ನ್ನು ವೀರ್‌ ಬಾಲ್‌ ದಿವಸ್‌ ಎಂದು ಘೋಷಿಸುವುದು, ಕರ್ತಾಪುರ್‌ ಸಾಹಿಬ್‌ ಕಾರಿಡಾರ್‌ ಅನ್ನು ಮತ್ತೆ ತೆರೆಯುವುದು, ಗುರುದ್ವಾರಗಳು ನಡೆಸುವ ಲಂಗರ್‌ಗಳ ಮೇಲಿನ ಜಿಎಸ್‌ಟಿಯನ್ನು ತೆಗೆದುಹಾಕುವುದು, ಗುರು ಗ್ರಂಥ ಸಾಹಿಬ್‌ನ ಪ್ರತಿಗಳು ಅಫ್ಘಾನಿಸ್ತಾನದಿಂದ ಭಾರತಕ್ಕೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಪ್ರಧಾನಮಂತ್ರಿ ಅವರು ಮಾಡಿದ ಹಲವಾರು ಪ್ರಯತ್ನಗಳನ್ನು ಅವರು ವಿವರಿಸಿದರು.

ಸಿಖ್‌ ನಿಯೋಗದಲ್ಲಿ ಅಖಿಲ ಭಾರತ ಕೇಂದ್ರೀಯ ಗುರು ಸಿಂಗ್‌ ಸಭಾದ ಅಧ್ಯಕ್ಷ ರಾದ ಶ್ರೀ ತರ್ವಿಂದರ್‌ ಸಿಂಗ್‌ ಮಾರ್ವಾ ಅವರನ್ನು ಒಳಗೊಂಡಿತ್ತು. ಅಖಿಲ ಭಾರತ ಕೇಂದ್ರೀಯ ಗುರು ಸಿಂಗ್‌ ಸಭಾದ ಕಾರ್ಯಾಧ್ಯಕ್ಷ  ಶ್ರೀ ವೀರ್‌ ಸಿಂಗ್‌;  ದೆಹಲಿ ಕೇಂದ್ರೀಯ ಗುರು ಸಿಂಗ್‌ ಸಭಾದ  ಮುಖ್ಯಸ್ಥ ಶ್ರೀ ನವೀನ್‌ ಸಿಂಗ್‌ ಭಂಡಾರಿ; ತಿಲಕ್‌ ನಗರ ಗುರುದ್ವಾರ ಸಿಂಗ್‌ ಸಭಾದ ಅಧ್ಯಕ್ಷ  ಶ್ರೀ ಹರ್ಬನ್ಸ್‌ ಸಿಂಗ್‌ ಮತ್ತು ಗುರುದ್ವಾರ ಸಿಂಗ್‌ ಸಭಾದ ಮುಖ್ಯಸ್ಥ ಗ್ರಂಥಿ ಶ್ರೀ ರಾಜಿಂದರ್‌ ಸಿಂಗ್‌ ನಿಯೋಗದಲ್ಲಿದ್ದರು.

*****