Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎಸ್.ಸಿ.ಒ ಶೃಂಗಸಭೆ ಅಂಗವಾಗಿ ಇರಾನ್ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ

ಎಸ್.ಸಿ.ಒ ಶೃಂಗಸಭೆ ಅಂಗವಾಗಿ ಇರಾನ್ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ


1. ಉಜ್ಬೇಕಿಸ್ತಾನದ ಸಮರ್ಕಂಡ್ ನಲ್ಲಿ ಕೌನ್ಸಿಲ್ ಆಫ್ ಸ್ಟೇಟ್ ಮುಖ್ಯಸ್ಥರ – ಎಸ್.ಸಿ.ಒ ಸಭೆಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಇಸ್ಲಾಮಿಕ್ ಗಣರಾಜ್ಯ ಇರಾನ್ ನ ಗೌರವಾನ್ವಿತ ಅಧ್ಯಕ್ಷ ಶ್ರೀ ಇಬ್ರಾಹಿಂ ರೈಸಿ ಅವರನ್ನು ಭೇಟಿ ಮಾಡಿದರು. ಅಧ್ಯಕ್ಷರಾದ ರೈಸಿ ಅವರು 2021 ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಮಂತ್ರಿ ಹಾಗೂ ಇರಾನ್ ಅಧ್ಯಕ್ಷ ರೈಸಿ ಅವರ  ನಡುವೆ ನಡೆದ ಮೊದಲ ಭೇಟಿ ಇದಾಗಿದೆ.

2. ಭೇಟಿ ಸಂದರ್ಭದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಬಾಂಧವ್ಯ ಕುರಿತಂತೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು ಹಾಗೂ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಭಾರತ – ಇರಾನ್ ನಡುವೆ ದ್ವಿಪಕ್ಷೀಯ ಬಾಂಧವ್ಯ ಐತಿಹಾಸಿಕ ಮತ್ತು ನಾಗರಿಕ ಸಂಪರ್ಕಗಳಿಂದ ಗುರುತಿಸಲ್ಪಟ್ಟಿದ್ದು, ಜನರಿಂದ ಜನರ ನಡುವೆ ಬಲಿಷ್ಠ ಸಂಪರ್ಕವನ್ನು ಒಳಗೊಂಡಿವೆ.

3. ಉಭಯ ನಾಯಕರು ಶಾಹಿದ್ ಬೆಹೆಸ್ತಿ ಟರ್ಮಿನಲ್ ಚಬಹಾರ್ ಬಂದರಿನ ಅಭಿವೃದ್ದಿಯ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಪ್ರಾದೇಶಿಕ ಸಂಪರ್ಕ ವಲಯದಲ್ಲಿ ದ್ವಿಪಕ್ಷೀಯ ಸಹಕಾರದ ಮಹತ್ವದ ಬಗ್ಗೆ ಒತ್ತಿ ಹೇಳಿದರು.

4. ಆಪ್ಘಾನಿಸ್ತಾನ ಸೇರಿದಂತೆ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಅಭಿವೃದ‍್ದಿ ಕುರಿತು ಉಭಯ ನಾಯಕರು ಚರ್ಚಿಸಿದರು. ಆಪ್ಘಾನಿಸ್ತಾನಕ್ಕೆ ಭಾರತ ಮಾನವೀಯ ನೆರವು ನೀಡುವುದು ತನ್ನ ಆದ್ಯತೆಯಾಗಿದ್ದು, ಇದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದರು. ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ಚರ್ಚಿಸಿದರು. ಶಾಂತಿಯುತ, ಸ್ಥಿರ ಮತ್ತು ಸುರಕ್ಷಿತ ಆಪ್ಘಾನಿಸ್ಥಾನವನ್ನು ಬೆಂಬಲಿಸಲು ರಾಜಕೀಯ ವಲಯ ಮತ್ತು ಸೂಕ್ತ ಪ್ರತಿನಿಧಿಯ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ.  

5.  ಜೆಸಿಪಿಒಎ ಮಾತುಕತೆ ಕುರಿತು ಅಧ್ಯಕ್ಷ ರೈಸಿ ಅವರು ಪ್ರಧಾನಮಂತ್ರಿ ಅವರಿಗೆ ವಿವರ ನೀಡಿದರು.   

6.  ಆದಷ್ಟು ಬೇಗ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಅವರು ಅಧ್ಯಕ್ಷ ರೈಸಿ ಅವರಿಗೆ ಆಹ್ವಾನ ನೀಡಿದರು.

 ಸಮರ್ಕಂಡ್

 ಸೆಪ್ಟೆಂಬರ್ 16, 2022  

*****