Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೆಡಿಪಾರ್ಕ್ ನಿರ್ಮಾಣಕ್ಕಾಗಿ 2009ರಲ್ಲಿ ತನಗೆ ಕಾಂಚಿಪುರಂ ಜಿಲ್ಲೆ (ತಮಿಳುನಾಡು), ಚೆಂಗಲಪಟ್ಟುವಿನಲ್ಲಿ ಗುತ್ತಿಗೆ ನೀಡಲಾಗಿದ್ದ 330.10 ಎಕರೆ ಸರ್ಕಾರಿ ಜಮೀನನ್ನು ಉಪ ಗುತ್ತಿಗೆ ನೀಡಲು ಮೆ. ಎಚ್.ಎಲ್.ಎಲ್. ಲೈಫ್ ಕೇರ್ ಲಿಮಿಟೆಡ್ ಗೆ ಸಂಪುಟದ ಅನುಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಚೆನ್ನೈ ಹೊರವಲಯದಲ್ಲಿರುವ ಕಾಂಚಿಪುರಂ ಜಿಲ್ಲೆ (ತಮಿಳುನಾಡು), ಚೆಂಗಲಪಟ್ಟುವಿನಲ್ಲಿ ವೈದ್ಯಕೀಯ ಉಪಕರಣಗಳ ಉತ್ಪಾದನೆಯ ಪಾರ್ಕ್ (ಮೆಡಿಪಾರ್ಕ್) ನಿರ್ಮಾಣಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವ್ಯಾಪ್ತಿಯಲ್ಲಿರುವ ಮಿನಿ ರತ್ನ ಪಿ.ಎಸ್.ಯು. ಮೆ. ಎಚ್.ಎಲ್.ಎಲ್. ಲೈಫ್ ಕೇರ್ ಲಿಮಿಟೆಡ್ ಗೆ ತನ್ನ 330.10 ಎಕರೆ ಜಮೀನನ್ನು ವಿಶೇಷ, ಉದ್ದೇಶದ ಸಲುವಾಗಿ ಉಪ ಗುತ್ತಿಗೆ ನೀಡಲು ಸಂಪುಟ ತನ್ನ ಅನುಮತಿ ನೀಡಿದೆ. ಎಚ್.ಎಲ್.ಎಲ್. ಶೇರು ಬಂಡವಾಳ ಈ ಯೋಜನೆಯಲ್ಲಿ ಶೇ.50ಕ್ಕಿಂತ ಹೆಚ್ಚಾಗಿರುತ್ತದೆ.

ಮೆಡಿಪಾರ್ಕ್ ಯೋಜನೆ ವೈದ್ಯಕೀಯ ತಂತ್ರಜ್ಞಾನ ವಲಯದಲ್ಲಿ ದೇಶದ ಮೊದಲ ಉತ್ಪಾದನಾ ಘಟಕವಾಗಲಿದೆ. ಇದು ಅತ್ಯುನ್ನತವಾದ ಉತ್ಪನ್ನಗಳನ್ನು ಅತ್ಯಂತ ಕಡಿಮೆ ದರದಲ್ಲಿ ಸ್ಥಳೀಯವಾಗಿ ಉತ್ಪಾದಿಸಲು ಅವಕಾಶ ನೀಡುತ್ತದೆ, ಆ ಮೂಲಕ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಅದರಲ್ಲೂ ದೊಡ್ಡ ಸಂಖ್ಯೆಯ ಜನರಿಗೆ ರೋಗ ಪತ್ತೆ ಸೇವೆ ದೊರಕುವಂತೆ ಮಾಡುತ್ತದೆ. ಉದ್ದೇಶಿತ ಮೆಡಿಪಾರ್ಕ್ ಹೊಸ ಹಂತದಲ್ಲಿರುವ ದೇಶದ ವೈದ್ಯಕೀಯ ಸಲಕರಣೆಗಳ ಮತ್ತು ತಂತ್ರಜ್ಞಾನ ವಲಯದ ಮತ್ತು ಪೂರಕ ವಿಭಾಗಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಜೊತೆಗೆ ಉದ್ಯೋಗ ಸೃಷ್ಟಿಸುತ್ತದೆ ಹಾಗೂ ಸರ್ಕಾರದ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಉತ್ತೇಜನ ನೀಡುತ್ತದೆ.

ಮೆಡಿಪಾರ್ಕ್ ಅನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತದೆ, ಏಳು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸಲಾಗುತ್ತದೆ. ಮೊದಲ ಹಂತದಲ್ಲಿ ಭೌತಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತದೆ ಮತ್ತು ಮೂರನೇ ವರ್ಷದಿಂದ ತುಂಡು ಭೂಮಿಯನ್ನು ಗುತ್ತಿಗೆ ನೀಡಲು ಆರಂಭಿಸಲಾಗುತ್ತದೆ. ಎರಡನೇ ಹಂತದಲ್ಲಿ ಇಂತಹುದೇ ಉಪಕ್ರಮಗಳಿಗೆ ಹಣ ನೀಡುವ ಇಲಾಖೆಗಳ ಅನುದಾನ ಮತ್ತು ನೆರವಿನಿಂದ ಜ್ಞಾನ ನಿರ್ವಹಣೆ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತದೆ,

ಎಚ್.ಎಲ್.ಎಲ್. ಪಾರದರ್ಶಕವಾದ ಹರಾಜು ಪ್ರಕ್ರಿಯೆಯ ಮೂಲಕ ಜಮೀನನ್ನು ವೈದ್ಯಕೀಯ ಸಾಧನ ಮತ್ತು ಸಲಕರಣೆಗಳನ್ನು ಉತ್ಪಾದನೆ ಮಾಡಲು ಇಚ್ಛಿಸುವ ಹೂಡಿಕೆದಾರರಿಗೆ ಉಪ ಗುತ್ತಿಗೆ ನೀಡುತ್ತದೆ. ಆರಂಭಿಕ ಹಂತದಲ್ಲಿ ಇತರರನ್ನು ಆಕರ್ಷಿಸಲು ಅರ್ಹ ವೈದ್ಯಕೀಯ ಸಾಧನ ಮತ್ತು ಸಲಕರಣೆಗಳ ಉತ್ಪಾದನಾ ಕೈಗಾರಿಕೆಗಳಿಗೆ ಸಬ್ಸಿಡಿ ದರದಲ್ಲಿ ಜಮೀನಿನ ದರ ಇರುತ್ತದೆ ಮತ್ತು ಬೇಡಿಕೆ ಹೆಚ್ಚಿದಂತೆಲ್ಲಾ ದರವನ್ನು ಹಂತಹಂತವಾಗಿ ಏರಿಕೆ ಮಾಡಲಾಗುತ್ತದೆ. ಹೀಗಾಗಿ ಮೆಡಿಪಾರ್ಕ್ ಯೋಜನೆ ಭಾರತದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಪೂರೈಕೆ ಹೆಚ್ಚಳದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಯೋಜನೆಯು ಅತ್ಯಾಧುನಿಕ ತಂತ್ರಜ್ಞಾನದ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಒದಗಿಸುವ ಮೂಲಕ ದೇಶೀಯ ಕೈಗಾರಿಕೆಗಳು ಮತ್ತು ದೇಶೀಯ ಪ್ರಗತಿಗೆ ಭದ್ರ ಬುನಾದಿ ರೂಪಿಸುತ್ತದೆ ಹಾಗೂ ಆಮದಿನ ಮೇಲಿನ ಅವಲಂಬನೆಯನ್ನೂ ಕಡಿಮೆ ಮಾಡುತ್ತದೆ. ವೈದ್ಯಕೀಯ ಸಾಧನ ಸಲಕರಣೆಗಳ ದೇಶೀಯ ಉತ್ಪಾದನೆ ಕೇವಲ ಕೈಗೆಟಕುವ ದರದ ಆರೋಗ್ಯ ಸೇವೆ ಒದಗಿಸಲಷ್ಟೇ ಅಲ್ಲ ಜೊತೆಗೆ ಗುಣಮಟ್ಟದ ಆರೋಗ್ಯಸೇವೆಯ ಕುಶಾಗ್ರಮತಿಯನ್ನೂ ಬಲಪಡಿಸುತ್ತದೆ.

****

AKT/VBA/SH