Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತೀಯ ಕೃಷಿ ಸಂಸ್ಥೆಯ ಎರಡು ಎಕರೆ ಜಮೀನನ್ನು ಭಾರತೀಯ ಪಶುವೈದ್ಯಕೀಯ ಮಂಡಳಿಗೆ ಹಸ್ತಾಂತರಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐ.ಎ.ಆರ್.ಐ.)ಯಿಂದ ಎರಡು ಎಕರೆ ಜಮೀನನ್ನು ಭಾರತೀಯ ಪಶುವೈದ್ಯ ಮಂಡಳಿ(ವಿ.ಸಿ.ಐ.)ಗೆ ಪ್ರತಿ ಚದರ ಮೀಟರ್ ಗೆ ಪ್ರತಿ ವರ್ಷಕ್ಕೆ 1 ರೂಪಾಯಿಯಂತೆ 99 ವರ್ಷಗಳ ಅವಧಿಗೆ ಒಟ್ಟು 8,01,278/-ರೂಪಾಯಿಗಳಿಗೆ ಗುತ್ತಿಗೆ ಆಧಾರದ ಮೇಲೆ ಹಸ್ತಾಂತರಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

ಪ್ರಾಣಿ ವಿಜ್ಞಾನಗಳ ಸಂಶೋಧನಾ ಕ್ಷೇತ್ರದಲ್ಲಿನ ಇತ್ತೀಚಿನ ಮಾಹಿತಿಯ ಮೇಲೆ ಅಲ್ಪಾವಧಿಯ ಕೋರ್ಸ್ ನಡೆಸಲು ಕರ್ತವ್ಯದಲ್ಲಿರುವವರ ಕೌಶಲವನ್ನು ಮೇಲ್ದರ್ಜೆಗೇರಿಸುವ ಸಂಬಂಧದ ತನ್ನ ಚಟುವಟಿಕೆಗಳನ್ನು ವಿ.ಸಿ.ಐ. ವಿಸ್ತರಿಸಲಿದೆ. ಈ ಸೌಲಭ್ಯಗಳನ್ನು ನೆಲೆಗೊಳಿಸಿದ ತರುವಾಯ ವಿ.ಸಿ.ಐ., ಹೆಚ್ಚುವರಿ ಚಟುವಟಿಕೆ ಆರಂಭಿಸಲಿದೆ ಮತ್ತು ಅದರ ಫಲವನ್ನು ದೇಶದ ಗ್ರಾಮೀಣ ಜನತೆಗೆ ತಲುಪಿಸಲಿದ್ದು, ಇದು ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಗೆ ಇಂಬು ನೀಡಲಿದೆ.

AKT/VBA/SH