Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭೂತಾನ್ ದೊರೆ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ ಚುಕ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

ಭೂತಾನ್ ದೊರೆ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ ಚುಕ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿ ಭೂತಾನ್ ನ ಘನತೆವೆತ್ತ ದೊರೆ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ ಚುಕ್ ಅವರನ್ನು ಭೇಟಿ ಮಾಡಿದರು.

ಇಬ್ಬರೂ ಗಣ್ಯರು ಭಾರತ-ಭೂತಾನ್ ನಡುವಣ ನಿಕಟ ಮತ್ತು ಅನನ್ಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಚಿಂತನೆಗಳ ಬಗ್ಗೆ ಚರ್ಚಿಸಿದರು. ಭಾರತ ಮತ್ತು ಭೂತಾನ್ ನಡುವಿನ ಸಂಬಂಧಗಳನ್ನು ರೂಪಿಸುವಲ್ಲಿ ಸತತವಾಗಿ ಭೂತಾನದ ದೊರೆಗಳು (ಭೂತಾನದ ದೊರೆಗಳನ್ನು ಡ್ರುಕ್ ಗ್ಯಾಲ್ಪೋಸ್ ಎಂದು ಕರೆಯುತ್ತಾರೆ) ನೀಡಿದ ಮಾರ್ಗದರ್ಶಿ ಚಿಂತನೆಗಳ ಬಗ್ಗೆಯೂ ಶ್ರೀ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;

“ಭೂತಾನದ ಘನತೆವೆತ್ತ ದೊರೆ ಅವರನ್ನು  ಆತ್ಮೀಯವಾಗಿ ಭೇಟಿಯಾದೆ. ಭಾರತ-ಭೂತಾನ್ ನಡುವಿನ ನಿಕಟ ಮತ್ತು ಅನನ್ಯ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ವಿವಿಧ ಚಿಂತನೆಗಳ ಬಗ್ಗೆ  ಚರ್ಚಿಸಿದೆ. ನಮ್ಮ ಸಂಬಂಧಗಳನ್ನು ರೂಪಿಸುವಲ್ಲಿ ಸತತವಾಗಿ  ಭೂತಾನದ ದೊರೆಗಳು (ಡ್ರುಕ್ ಗ್ಯಾಲ್ಪೊಸ್ ) ನೀಡಿದ ಮಾರ್ಗದರ್ಶಿ ಚಿಂತನೆಗಳ ಬಗ್ಗೆ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದೇನೆ.”ಎಂದು ಹೇಳಿದ್ದಾರೆ.

 

*****