Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಿಂಗಾಪೂರದ ಪ್ರಧಾನಮಂತ್ರಿಯವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಪ್ರಧಾನಿಯವರ ಪತ್ರಿಕಾ ಹೇಳಿಕೆ

ಸಿಂಗಾಪೂರದ ಪ್ರಧಾನಮಂತ್ರಿಯವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಪ್ರಧಾನಿಯವರ ಪತ್ರಿಕಾ ಹೇಳಿಕೆ

ಸಿಂಗಾಪೂರದ ಪ್ರಧಾನಮಂತ್ರಿಯವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಪ್ರಧಾನಿಯವರ ಪತ್ರಿಕಾ ಹೇಳಿಕೆ


ಘನತೆವೆತ್ತ ಪ್ರಧಾನಮಂತ್ರಿ ಲೀ ಸೀನ್ ಲೂಂಗ್ ಅವರೇ,

ಮಾಧ್ಯಮದ ಸದಸ್ಯರೇ,

ಸಿಂಗಾಪೂರವು ಚಾಲಕರೇ ಇಲ್ಲದ ಕಾರುಗಳನ್ನು ರಸ್ತೆಗೆ ಇಳಿಸುವ ಮೂಲಕ ಮುಂಚೂಣಿಯಲ್ಲಿದೆ ಎಂದು ನಾನು ಕೇಳಲ್ಪಟ್ಟಿದ್ದೇನೆ. ಆದರೆ, ಭಾರತದ ಒಬ್ಬ ಬಲವಾದ ಹಿತೈಷಿ ಪ್ರಧಾನಮಂತ್ರಿ ಲೀ ಅವರು ಸಿಂಗಾಪೂರದ ಮತ್ತು ನಮ್ಮ ದ್ವಿಪಕ್ಷೀಯ ಸಂಬಂಧದ ಚಾಲನಾ ಸ್ಥಾನದಲ್ಲಿ ಕುಳಿದಿದ್ದಾರೆ ಎಂಬುದು ನಮ್ಮ ನಿಮ್ಮೆಲ್ಲರ ಭರವಸೆಯಾಗಿದೆ. ಘನತೆವೆತ್ತ ಲೀ ಅವರೇ ನೀವು ಭಾರತದ ಮಿತ್ರರು. ನಮ್ಮ ಬಾಂಧವ್ಯ ಬಲಪಡಿಸಲು ನಿಮ್ಮ ಕೊಡುಗೆ ಮತ್ತು ನಿಮ್ಮ ಬದ್ಧತೆಯನ್ನು ನಾವು ಗೌರವಿಸುತ್ತೇವೆ. ಇಂದು ನಿಮ್ಮನ್ನು ಇಲ್ಲಿ ಸ್ವಾಗತಿಸುವುದು ನನಗೆ ಅತಿ ದೊಡ್ಡ ಗೌರವ ಆಗಿದೆ.

ಸ್ನೇಹಿತರೆ,

ಪ್ರಧಾನಮಂತ್ರಿಯಾಗಿ ಸಿಂಗಾಪೂರಕ್ಕೆ ನನ್ನ ಮೊದಲ ಭೇಟಿ, ಸಿಂಗಾಪೂರಕ್ಕೆ ಅಷ್ಟೇ ಅಲ್ಲ, ಇಡೀ ಏಷ್ಯಾಕ್ಕೇ ದಾರಿದೀಪವಾಗಿದ್ದ ಲೀ ಕ್ವಾನ್ ಯೀವ್ ಅವರಿಗೆ ನಮ್ಮ ಗೌರವ ನಮನ ಸಲ್ಲಿಸಲು ಹೋಗಿದ್ದಾಗಿತ್ತು. ನಾವು ಈ ವರ್ಷ ಸಿಂಗಾಪೂರದ ಮತ್ತೊಬ್ಬ ಶ್ರೇಷ್ಠ ಪುತ್ರ ಮಾಜಿ ಅಧ್ಯಕ್ಷ ಎಸ್. ಆರ್. ನಾಥನ್ ಅವರ ಅಗಲಿಕೆಯಿಂದ ದುಃಖಿತರಾಗಿದ್ದೇವೆ. ಅವರು ಕೂಡ ಭಾರತಕ್ಕೆ ಆಪ್ತ ಮಿತ್ರರಾಗಿದ್ದರು ಮತ್ತು ನಾವು ಅವರಿಗೆ ಪ್ರವಾಸಿ ಭಾರತೀಯ ಸನ್ಮಾನ ಪ್ರದಾನ ಮಾಡುವ ಗೌರವ ಪಡೆದಿದ್ದೆವು. ನಾವು ಅವರನ್ನು ಅಗಲಿದ್ದೇವೆ.

ಸ್ನೇಹಿತರೆ,

ಸಿಂಗಾಪೂರದ ರಾಷ್ಟ್ರಗೀತೆ ‘ಮಜುಲ್ಹಾ ಸಿಂಗಾಪೂರ’- “ಮುನ್ನಡೆಯುತ್ತಿರುವ,ಸಿಂಗಾಪೂರ” ಇದರಲ್ಲಿ ಅಚ್ಚರಿ ಏನಿಲ್ಲ, ಹಾಗಾಗಿಯೇ ಪ್ರಸ್ತುತನಡೆಸುತ್ತಿರುವ ಆದರೆ, ಭವಿಷ್ಯದ ಅಗತ್ಯಗಳನ್ನು ಜೀವಂತವಾಗಿ ಇಟ್ಟಿರುವ ಒಂದು ದೇಶ ಇದ್ದರೆ ಅದು ಸಿಂಗಾಪೂರ. ಅದು ಉತ್ಪಾದನೆ, ಪರಿಸರ, ನಾವಿನ್ಯ, ತಂತ್ರಜ್ಞಾನ ಇರಲಿ, ಅಥವಾ ಸಾರ್ವಜನಿಕ ಸೇವೆಯೇ ಇರಲಿ, ಸಿಂಗಾಪೂರ ಇಂದು ಮಾಡುವುದನ್ನು ಉಳಿದ ರಾಷ್ಟ್ರಗಳು ನಾಳೆ ಮಾಡುತ್ತವೆ.

ಸ್ನೇಹಿತರೆ,

ಹನ್ನೆರಡು ತಿಂಗಳುಗಳ ಹಿಂದೆ, ಸಿಂಗಾಪೂರಕ್ಕೆ ನಾನು ಭೇಟಿ ನೀಡಿದ್ದಾಗ, ನಾವು ನಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ‘ನವೀಕೃತ ಸ್ಫೂರ್ತಿ ಮತ್ತು ಹೊಸ ಚೈತನ್ಯದೊಂದಿಗೆ’ಕಾರ್ಯತಂತ್ರಾತ್ಮಕ ಪಾಲುದಾರಿಕೆಯ ಹಂತಕ್ಕೆ ಮೇಲ್ದರ್ಜೆಗೇರಿಸಿದ್ದೆವು. ನಮ್ಮ ಎರಡೂ ಕಡೆಯ ಜನರಿಗೆ ಲಾಭ ದೊರಕಿಸುವ ಸಲುವಾಗಿ ನಮ್ಮ ಪಾಲುದಾರಿಕೆಯನ್ನು ಸಿಂಗಾಪೂರದ ಶಕ್ತಿ ಮತ್ತು ಭಾರತದ ಔನ್ನತ್ಯದೊಂದಿಗೆ; ಮತ್ತು ಸಿಂಗಾಪೂರದ ಚೈತನ್ಯವನ್ನು ನಮ್ಮ ರಾಜ್ಯಗಳ ಸ್ಪಂದನೆಯೊಂದಿಗೆ ಸೇರಿಸುವ ಗುರಿ ಹೊಂದಿದ್ದೇವೆ. ಕಳೆದ ವರ್ಷ ನನ್ನ ಭೇಟಿಯ ಕಾಲದಲ್ಲಿ ನಮ್ಮ ಮಹತ್ವಾಕಾಂಕ್ಷೆಯ ಸಹಕಾರ ಕಾರ್ಯಕ್ರಮವನ್ನು ಸಾಕಾರಗೊಳಿಸಲು ಮಾರ್ಗನಕ್ಷೆಯನ್ನು ಸಿದ್ಧಪಡಿಸಿದ್ದೆವು. ಒಪ್ಪಿಗೆಯಾಗಿರುವ ನಿರ್ಧಾರಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದು ಕೂಡ ನಮ್ಮ ಕಾರ್ಯಕ್ರಮದ ಮಹತ್ವದ ಅಂಶವಾಗಿದೆ. ಇಂದು, ಘನತೆವೆತ್ತ ಲೀ ಮತ್ತು ನಾನು, ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಯ ಸ್ವರೂಪ ಮತ್ತು ಅಂಶಗಳ ಬಗ್ಗೆ ಸಮಗ್ರವಾದ ಪರಾಮರ್ಶೆ ನಡೆಸಿದ್ದೇವೆ. ಸಿಂಗಾಪೂರಕ್ಕೆ ನನ್ನ ಭೇಟಿಯ ಕಾಲದಲ್ಲಿ ಪ್ರಧಾನಮಂತ್ರಿ ಲೀ ಅವರು ನನ್ನನ್ನು ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಕರೆದುಕೊಂಡು ಹೋಗಿದ್ದರು. ಇಂದು, ನಾವು ಕೌಶಲ ಅಭಿವೃದ್ಧಿಯ ಬಗ್ಗೆ ಗಮನಹರಿಸಿ ಎರಡು ತಿಳಿವಳಿಕೆ ಒಪ್ಪಂದಗಳಿಗೆ ಅಂಕಿತ ಹಾಕಿದ್ದೇವೆ: ಒಂದು, ನಮ್ಮ ಈಶಾನ್ಯ ರಾಜ್ಯಗಳಿಗಾಗಿ ಗುವಾಹಟಿಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ; ಮತ್ತು ಮತ್ತೊಂದನ್ನು ರಾಷ್ಟ್ರೀಯ ಕೌಶಲ ಅಭಿವೃದ್ಧಿ ಮಂಡಳಿಯಲ್ಲಿ ಸ್ಥಾಪಿಸುವುದು. ಅಲ್ಲದೆ ನಾನು ರಾಜಾಸ್ಥಾನ ರಾಜ್ಯ ಸರ್ಕಾರದ ಸಹಕಾರದಲ್ಲಿ ಉದಯ್ ಪುರದಲ್ಲಿ ಪ್ರವಾಸೋದ್ಯಮ ತರಬೇತಿಯ ಪ್ರಾವಿಣ್ಯತೆಯ ಕೇಂದ್ರ ಉದ್ಘಾಟನೆಯನ್ನೂ ಸ್ವಾಗತಿಸುತ್ತೇನೆ. ರಾಜಾಸ್ಥಾನ ಕೂಡ ನಗರಾಭಿವೃದ್ಧಿ ಮತ್ತು ತ್ಯಾಜ್ಯ ನಿರ್ವಹಣೆಯ ಕ್ಷೇತ್ರದಲ್ಲಿ ಸಿಂಗಾಪೂರದೊಂದಿಗೆ ಪಾಲುದಾರಿಕೆ ಹೊಂದಿದೆ. ಅಲ್ಲದೆ ಸಿಂಗಾಪೂರವು ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಯನ್ನು ಅಭಿವೃದ್ಧಿಪಡಿಸಲು ನಮ್ಮೊಂದಿಗೆ ಆಗಲೇ ಪಾಲುದಾರನಾಗಿದೆ.

ಸ್ನೇಹಿತರೆ,

ನಮ್ಮ ದ್ವಿಪಕ್ಷೀಯ ಬಾಂಧವ್ಯದ ಮೂಲಾಧಾರದಲ್ಲಿ ವಾಣಿಜ್ಯ ಮತ್ತು ಹೂಡಿಕೆಯ ಬಾಂಧವ್ಯವಿದೆ. ನಾವು ವಾಣಿಜ್ಯದೊಂದಿಗಿನ ಬಲವಾದ ಜಾಲವನ್ನು ಅನುಭವಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಲೀ ಮತ್ತು ನಾನು, ನಮ್ಮ ಸಮಗ್ರ ಆರ್ಥಿಕ ಸಹಕಾರದ ಒಪ್ಪಂದದ ಎರಡನೇ ಪರಾಮರ್ಶೆಯನ್ನು ತ್ವರಿತಗೊಳಿಸಲು ಸಮ್ಮತಿಸಿದ್ದೇವೆ. ಇಂದು ಸಹಿ ಹಾಕಲಾದ ಬೌದ್ಧಿಕ ಆಸ್ತಿ ಕುರಿತ ತಿಳಿವಳಿಕೆ ಒಪ್ಪಂದವು, ವಾಣಿಜ್ಯದಿಂದ ವಾಣಿಜ್ಯದೊಂದಿಗಿನ ವಿನಿಮಯ ಮತ್ತು ಸಹಯೋಗಕ್ಕೆ ದೊಡ್ಡ ಅವಕಾಶ ನೀಡುತ್ತದೆ. ಪ್ರಧಾನಮಂತ್ರಿ ಲೀ ಮತ್ತು ನಾನು, ಸಿಂಗಾಪೂರದಲ್ಲಿ ಸಾಂಸ್ಥಿಕ ರೂಪಿ ಬಾಂಡ್ ವಿತರಣೆಯನ್ನು ಸ್ವಾಗತಿಸಿದ್ದೇವೆ. ಭಾರತದ ಮೂಲ ಸೌಕರ್ಯ ಅಭಿವೃದ್ಧಿಯ ಅಗತ್ಯಗಳಿಗೆ ಬಂಡವಾಳ ಕ್ರೋಡೀಕರಿಸುವ ನಮ್ಮ ಪ್ರಯತ್ನ ಮುಂದುವರಿಸುವ ಹೆಜ್ಜೆ ಇದಾಗಿದೆ.

ಸ್ನೇಹಿತರೇ,

ನಮ್ಮ ರಕ್ಷಣೆ ಮತ್ತು ಭದ್ರತೆ ಸಹಕಾರವು ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಯ ಆಧಾರಸ್ತಂಭವಾಗಿದೆ. ಎರಡೂ ಸಾಗರತಟದ ರಾಷ್ಟ್ರಗಳು, ಸಂವಹನ ಮಾರ್ಗದ ಮುಕ್ತವಾಗಿಟ್ಟುಕೊಂಡಿವೆ, ಮತ್ತು ಸಾಗರ ಮತ್ತು ಸಮುದ್ರಗಳು ಹಂಚಿಕೆಯ ಆದ್ಯತೆ ಎಂಬ ಅಂತಾರಾಷ್ಟ್ರೀಯ ಕಾನೂನು ಆದೇಶಗಳಿಗೆ ಗೌರವ ನೀಡಿವೆ. ನಮ್ಮ ಸಹಕಾರವು ಆಸಿಯಾನ್, ಪೂರ್ವ ಏಷ್ಯಾ ಶೃಂಗದ ಚೌಕಟ್ಟಿನೊಳಗಿದೆ ಮತ್ತು ಆಸಿಯಾನ್ ಪ್ರಾದೇಶಿಕ ಚೌಕಟ್ಟು, ನಂಬಿಕೆ ಮತ್ತು ವಿಶ್ವಾಸಗಳ ವಾತಾವರಣದಲ್ಲಿ ಪ್ರಾದೇಶಿಕ ಸಹಕಾರಕ್ಕೆ ಮುಕ್ತ ಮತ್ತು ಸಮಗ್ರ ರೂಪ ನಿರ್ಮಿಸುವ ಗುರಿ ಹೊಂದಿದೆ. ಹೆಚ್ಚುತ್ತಿರುವ ಭಯೋತ್ಪಾದನೆ, ಅದರಲ್ಲೂ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಮೂಲಭೂತವಾದದ ಹೆಚ್ಚಳ ನಮ್ಮ ಭದ್ರತೆಗೆ ಸವಾಲಾಗಿದೆ. ಅದು ನಮ್ಮ ಸಮಾಜದ ವ್ಯವಸ್ಥೆಗೇ ಭೀತಿ ಒಡ್ಡಿವೆ. ಯಾರು ಶಾಂತಿ ಮತ್ತು ಮಾನವತೆಯಲ್ಲಿ ನಂಬಿಕೆ ಇಟ್ಟಿದ್ದಾರೋ ಅವರು ಭಯೋತ್ಪಾದನೆಯ ಪಿಡುಗಿನ ವಿರುದ್ಧ ಒಟ್ಟಾಗಿ ನಿಲ್ಲುತ್ತಾರೆ ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ. ಇಂದು, ನಾವು ಸೈಬರ್ ಭದ್ರತೆಯೂ ಸೇರಿದಂತೆ ಈ ಭೀತಿಯನ್ನು ಎದುರಿಸಲು ನಮ್ಮ ಸಹಕಾರ ಹೆಚ್ಚಿಸಲು ಒಪ್ಪಿಗೆ ನೀಡಿದ್ದೇವೆ.

ಘನತೆವೆತ್ತ ಲೀ ಅವರೇ,

ಭಾರತವು ಬಲಿಷ್ಠ ಆರ್ಥಿಕ ಪ್ರಗತಿ ಮತ್ತು ಪರಿವರ್ತನೆಯ ಹಾದಿಯಲ್ಲಿ ಸಾಗಿದೆ. ಈ ಪಯಣದಲ್ಲಿ, ನಾವು ಸಿಂಗಾಪೂರವನ್ನು ಪ್ರಮುಖ ಪಾಲುದಾರ ಎಂದು ಗೌರವಿಸಿದ್ದೇವೆ. ಇತ್ತೀಚೆಗೆ, ನಾವು ಉಪ ಪ್ರಧಾನಮಂತ್ರಿ ಷಣ್ಮುಖರತ್ನಂ ಅವರ ಭಾರತ ಪರಿವರ್ತನೆಯ ಕಲ್ಪಿನೆಯಿಂದ ಲಾಭ ಪಡೆದಿದ್ದೇವೆ. ನಾವು, ನಿಮ್ಮ ವೈಯಕ್ತಿಕ ಸ್ನೇಹಕ್ಕೂ ಮತ್ತು ನಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ಮುಂದೆ ತೆಗೆದುಕೊಂಡು ಹೋಗುವ ನಿಮ್ಮ ನಾಯಕತ್ವಕ್ಕೆ ಅಪಾರವಾದ ಗೌರವ ನೀಡುತ್ತೇನೆ. ಮತ್ತೊಮ್ಮೆ ನಾನು ನಿಮಗೂ ಮತ್ತು ನಿಮ್ಮ ನಿಯೋಗಕ್ಕೂ ಆತ್ಮೀಯ ಸ್ವಾಗತ ಕೋರುತ್ತೇನೆ. ನಿಮ್ಮ ಭಾರತದ ಭೇಟಿ ಫಲಪ್ರದ ಮತ್ತು ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ನನ್ನದಾಗಿದೆ.

ಧನ್ಯವಾದಗಳು.

***

AKT/SH/SK