ಯುವ ಸ್ನೇಹಿತರೇ,
ನಿಮ್ಮಂತಹ ಎಲ್ಲಾ ಅನ್ವೇಷಕರನ್ನು ಭೇಟಿಯಾಗುವುದು ಮತ್ತು ಅವರೊಂದಿಗೆ ಸಂವಹನ ನಡೆಸುವುದನ್ನು ನಾನು ನಿಜವಾಗಿಯೂ ಬಹಳವಾಗಿ ಆನಂದಿಸಿದೆ. ನೀವು ಮುಟ್ಟುವ ಹೊಸ ವಿಷಯಗಳು, ನಿಮ್ಮ ಆವಿಷ್ಕಾರ ಮತ್ತು ನೀವು ಮಾಡುವ ಕೆಲಸದಲ್ಲಿ ನೀವು ತೋರುವ ಆತ್ಮವಿಶ್ವಾಸವು ನನ್ನಂತಹ ಅನೇಕ ಜನರಿಗೆ ಹೊಸದನ್ನು ಮಾಡಲು ಸ್ಫೂರ್ತಿಯಾಗುತ್ತದೆ. ಒಂದು ರೀತಿಯಲ್ಲಿ, ನೀವು ಸ್ಫೂರ್ತಿಯ ಮೂಲವಾಗುತ್ತೀರಿ, ಪ್ರೇರಣೆಯೊದಗಿಸುತ್ತೀರಿ. ಆದ್ದರಿಂದ, ನಾನು ನಿಮ್ಮನ್ನು ನನ್ನ ಹೃದಯಾಂತರಾಳದಿಂದ ಅಭಿನಂದಿಸಲು ಬಯಸುತ್ತೇನೆ!
ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಉತ್ತಮ, ಬಹಳ ದೊಡ್ಡ ಉದಾಹರಣೆಯಾಗಿದೆ. ಸ್ನೇಹಿತರೇ, ಈ ವರ್ಷದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಅನೇಕ ವಿಧಗಳಲ್ಲಿ ಬಹಳ ಮುಖ್ಯವಾಗಿದೆ. ಕೆಲವು ದಿನಗಳ ಹಿಂದೆ, ನಾವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದ್ದೇವೆ. ದೇಶವು ಸ್ವಾತಂತ್ರ್ಯದ 100 ವರ್ಷಗಳ ನಂತರ ನಮ್ಮ ದೇಶವು ಹೇಗಿರುತ್ತದೆ ಎಂಬುದರ ಬಗ್ಗೆ ಪ್ರಮುಖ ನಿರ್ಣಯಗಳನ್ವಯ ಕೆಲಸ ಮಾಡುತ್ತಿದೆ. ಈ ನಿರ್ಣಯಗಳ ಸಾಧನೆಗಾಗಿ, ನೀವು ಅನ್ವೇಷಕರು ‘ಜೈ ಅನುಸಂಧಾನ್’ ಘೋಷಣೆಯ ಧ್ವಜಧಾರಿಗಳಾಗಿ ಮುನ್ನಡೆಯಲಿದ್ದೀರಿ.
‘ಅಮೃತಕಾಲ’ದ ಈ 25 ವರ್ಷಗಳ ಕಾಲಾವಧಿಯು ನಿಮಗೆ ಅಭೂತಪೂರ್ವ ಸಾಧ್ಯತೆಗಳನ್ನು ತಂದಿದೆ. ಈ ಸಾಧ್ಯತೆಗಳು ಮತ್ತು ನಿರ್ಣಯಗಳು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ನೇರವಾಗಿ ಸಂಬಂಧಿಸಿವೆ. ಮುಂದಿನ 25 ವರ್ಷಗಳಲ್ಲಿ ನಿಮ್ಮಂತಹ ಯುವಜನರ ಯಶಸ್ಸು ಭಾರತದ ಯಶಸ್ಸನ್ನು ನಿರ್ಧರಿಸುತ್ತದೆ. ಅದಕ್ಕಾಗಿಯೇ ನಾನು ನಿಮ್ಮೆಲ್ಲರ ಬಗ್ಗೆ ತುಂಬಾ ವಿಶ್ವಾಸವನ್ನು ಹೊಂದಿದ್ದೇನೆ. ನಿಮ್ಮ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ. ನಿಮ್ಮ ನವೀನ ಮನೋಭೂಮಿಕೆಯು ಮುಂಬರುವ 25 ವರ್ಷಗಳಲ್ಲಿ ಭಾರತವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯುಲಿದೆ. ನಿಮ್ಮೆಲ್ಲರ ಬಗ್ಗೆ ನನ್ನ ನಂಬಿಕೆಗೆ ಬಲವಾದ ಕಾರಣಗಳಿವೆ.
ಸ್ನೇಹಿತರೇ,
ಈ ಬಾರಿ ಆಗಸ್ಟ್ 15 ರಂದು ನಾನು ಕೆಂಪು ಕೋಟೆಯ ಮೇಲಿನಿಂದ ಹೇಳಿದ್ದೇನೆ, ಇಂದು ಭಾರತದಲ್ಲಿ ಬೃಹತ್ ಮಹತ್ವಾಕಾಂಕ್ಷೆಯ ಸಮಾಜವು ಅಭಿವೃದ್ಧಿ ಹೊಂದುತ್ತಿದೆ ಮತ್ತು ವಿಸ್ತರಿಸುತ್ತಿದೆ. ಈ ಮಹತ್ವಾಕಾಂಕ್ಷೆಯ ಸಮಾಜವು ಈ ‘ಅಮೃತಕಾಲ’ದಲ್ಲಿ ಪ್ರೇರಕ ಶಕ್ತಿಯಂತೆ ಕೆಲಸ ಮಾಡುತ್ತದೆ. ಅದರ ನಿರೀಕ್ಷೆಗಳು ಮತ್ತು ಸಂಬಂಧಿತ ಸವಾಲುಗಳು ನಿಮಗೆ ಅನೇಕ ಹೊಸ ಅವಕಾಶಗಳನ್ನು ತರುತ್ತವೆ.
ಸ್ನೇಹಿತರೇ,
60-70ರ ದಶಕದಲ್ಲಿ ನಡೆದ ಹಸಿರು ಕ್ರಾಂತಿಯನ್ನು ನೀವೆಲ್ಲರೂ ನಿಮ್ಮ ಶಿಕ್ಷಣದ ಆರಂಭಿಕ ಹಂತಗಳಲ್ಲಿ ಓದಿರಬಹುದು. ಭಾರತದ ರೈತರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು ಮತ್ತು ಆಹಾರದ ವಿಷಯದಲ್ಲಿ ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡಿದರು. ಆದರೆ ಕಳೆದ 7-8 ವರ್ಷಗಳಲ್ಲಿ, ಒಂದರ ನಂತರ ಒಂದರಂತೆ ಕ್ರಾಂತಿಗಳನ್ನು ತರುವ ಮೂಲಕವಾಗಿ ದೇಶವು ವೇಗವಾಗಿ ಪ್ರಗತಿ ಹೊಂದುತ್ತಿರುವುದನ್ನು ನೀವು ನೋಡಬಹುದು.
ಭಾರತದಲ್ಲಿಂದು ಮೂಲಸೌಕರ್ಯ ಕ್ರಾಂತಿಯಾಗಿದೆ; ಆರೋಗ್ಯ ಕ್ಷೇತ್ರದ ಕ್ರಾಂತಿ ಇಂದು ಭಾರತದಲ್ಲಿ ಜಾರಿಯಲ್ಲಿದೆ; ಇಂದು ಡಿಜಿಟಲ್ ಕ್ರಾಂತಿ ನಡೆಯುತ್ತಿದೆ; ಇಂದು ಭಾರತದಲ್ಲಿ ತಂತ್ರಜ್ಞಾನ ಕ್ರಾಂತಿ ನಡೆಯುತ್ತಿದೆ. ಅಂತೆಯೇ, ಇಂದು ಭಾರತದಲ್ಲಿ ಪ್ರತಿಭಾ ಕ್ರಾಂತಿಯೂ ನಡೆಯುತ್ತಿದೆ. ಅದು ಕೃಷಿ ಕ್ಷೇತ್ರವಾಗಿರಲಿ, ಶಿಕ್ಷಣ ಕ್ಷೇತ್ರವಾಗಲಿ ಅಥವಾ ರಕ್ಷಣಾ ಕ್ಷೇತ್ರವಾಗಲಿ, ಇಂದು ದೇಶವು ಪ್ರತಿಯೊಂದು ವಲಯವನ್ನು ಆಧುನೀಕರಿಸಲು ಮತ್ತು ಪ್ರತಿಯೊಂದು ವಲಯವನ್ನು ಸ್ವಾವಲಂಬಿಯಾಗಿಸಲು ಒತ್ತು ನೀಡುತ್ತಿದೆ. ಅದಕ್ಕಾಗಿಯೇ ನಿಮ್ಮಂತಹ ಯುವಜನರಿಗೆ ಭಾರತದಲ್ಲಿ ಪ್ರತಿದಿನ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.
ಡ್ರೋನ್ ತಂತ್ರಜ್ಞಾನ, ಟೆಲಿ-ಕನ್ಸಲ್ಟೇಷನ್, ಡಿಜಿಟಲ್ ಸಂಸ್ಥೆಗಳು ಮತ್ತು ವರ್ಚುವಲ್ ಪರಿಹಾರಗಳು ನಿಮಗೆ ಸೇವೆಯಿಂದ ಹಿಡಿದು ಉತ್ಪಾದನೆಯವರೆಗೆ ಸಾಮರ್ಥ್ಯ ತೋರಿಸುವ ಉತ್ತಮ ಅವಕಾಶಗಳನ್ನು ಒದಗಿಸುತ್ತವೆ. ಕೃಷಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲು ನಿಮ್ಮಂತಹ ಯುವಜನರು ನವೀನ ಪರಿಹಾರಗಳನ್ನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬಹುದು. ನಮ್ಮ ನೀರಾವರಿ ಸಲಕರಣೆಗಳನ್ನು ಮತ್ತು ನೀರಾವರಿ ಜಾಲವನ್ನು ಸ್ಮಾರ್ಟ್ ಮಾಡುವ ವಿಧಾನದಲ್ಲಿ ನಮಗೆ ನಮ್ಮ ಸಾಮರ್ಥ್ಯ ತೋರಿಸಲು ಸಾಕಷ್ಟು ಅವಕಾಶಗಳಿವೆ.
ಸ್ನೇಹಿತರೇ,
ಇಂದು, ದೇಶದ ಪ್ರತಿಯೊಂದು ಹಳ್ಳಿಯಲ್ಲಿಯೂ ಆಪ್ಟಿಕಲ್ ಫೈಬರ್ ಹಾಕುವ ಕೆಲಸವು ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಈಗ ಭಾರತದಲ್ಲಿ 5 ಜಿ ಕಾರ್ಯಾರಂಭಕ್ಕೆ ಸಿದ್ದವಾಗಿರುವುದನ್ನು ನೀವು ನೋಡಿದ್ದೀರಿ. ಈ ದಶಕದ ಅಂತ್ಯದ ವೇಳೆಗೆ, ನಾವು 6 ಜಿ ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದೇವೆ. ಗೇಮಿಂಗ್ ಮತ್ತು ಮನರಂಜನೆಯಲ್ಲಿ ಭಾರತೀಯ ಪರಿಹಾರಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಸರ್ಕಾರವು ಈ ಎಲ್ಲಾ ಹೊಸ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಿರುವ ರೀತಿ ಮತ್ತು ಅವರನ್ನು ಪ್ರೋತ್ಸಾಹಿಸುತ್ತಿರುವ ರೀತಿಯಿಂದಾಗಿ ಅದರ ಪ್ರಯೋಜನವನ್ನು ಯುವಜನತೆ ಪಡೆದುಕೊಳ್ಳಬೇಕು.
ಮತ್ತು ಸ್ನೇಹಿತರೇ, ನೀವು ಇನ್ನೂ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಪ್ರಪಂಚದಲ್ಲಿ ಒಂದು ದೊಡ್ಡ ಜನಸಂಖ್ಯೆಯಿದೆ, ಅವರ ಸಮಸ್ಯೆಗಳು ಭಾರತದ ಸಮಸ್ಯೆಗಳನ್ನು ಹೋಲುತ್ತವೆ. ಆದರೆ ಆ ಸಮಸ್ಯೆಗಳನ್ನು ಎದುರಿಸಲು ನಾವೀನ್ಯತೆ ಮತ್ತು ನವೋದ್ಯಮಗಳಿಗೆ ಅವಕಾಶಗಳಿವೆ. ಭಾರತದ ಆವಿಷ್ಕಾರಗಳು ವಿಶ್ವದ ಅತ್ಯಂತ ಸ್ಪರ್ಧಾತ್ಮಕ, ಕೈಗೆಟುಕುವ, ಸುಸ್ಥಿರ, ಸುರಕ್ಷಿತ ಮತ್ತು ದೊಡ್ಡ ಪ್ರಮಾಣದ ಅನುಷ್ಠಾನ ಪರಿಹಾರಗಳನ್ನು ಒದಗಿಸುತ್ತವೆ. ಅದಕ್ಕಾಗಿಯೇ ಭಾರತದ ಮೇಲೆ ಮತ್ತು ನಿಮ್ಮಂತಹ ಯುವಜನರ ಮೇಲೆ ವಿಶ್ವ ಭರವಸೆಯನ್ನಿಟ್ಟುಕೊಂಡಿದೆ.
ಸ್ನೇಹಿತರೇ,
ಇಂದಿನ ಕಾರ್ಯಕ್ರಮದಲ್ಲಿ, ಶಿಕ್ಷಣ ಕ್ಷೇತ್ರದ ಧೀಮಂತರು ಮತ್ತು ನೀತಿ ನಿರೂಪಕರು ನಮ್ಮೊಂದಿಗೆ ಇದ್ದಾರೆ. ಭಾರತದಲ್ಲಿ ಆವಿಷ್ಕಾರದ ಸಂಸ್ಕೃತಿಯನ್ನು ವಿಸ್ತರಿಸಲು, ನಾವು ಸಾಮಾಜಿಕ ಬೆಂಬಲ ಮತ್ತು ಸಾಂಸ್ಥಿಕ ಬೆಂಬಲ ಎಂಬ ಎರಡು ವಿಷಯಗಳ ಬಗ್ಗೆ ನಿರಂತರವಾಗಿ ಗಮನ ಹರಿಸಬೇಕು. ನಾವೀನ್ಯತೆ ಮತ್ತು ಉದ್ಯಮಶೀಲತೆಯ ದೃಷ್ಟಿಯಿಂದ ಇಂದು ಸಮಾಜದಲ್ಲಿ ಬದಲಾವಣೆ ಗೋಚರಿಸುತ್ತಿದೆ. ವೃತ್ತಿಜೀವನವನ್ನು ರೂಪಿಸುವ ಸಾಂಪ್ರದಾಯಿಕ ಆಯ್ಕೆಗಳ ಹೊರತಾಗಿ, ನಾವು ಹೊಸ ಕ್ಷೇತ್ರಗಳಲ್ಲಿ ನಮ್ಮ ಕೈಯಾಡಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದೇವೆ. ಅಂದರೆ, ಸಮಾಜದಲ್ಲಿ ನಾವೀನ್ಯತೆಯನ್ನು, ಅನ್ವೇಷಣೆಯನ್ನು ಒಂದು ವೃತ್ತಿಯಾಗಿ ಸ್ವೀಕರಿಸುವುದು ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನಾವು ಹೊಸ ಆಲೋಚನೆಗಳು ಮತ್ತು ಮೂಲ ಆಲೋಚನೆಗಳಿಗೆ ಸ್ವೀಕಾರ ಮತ್ತು ಗೌರವವನ್ನು ನೀಡಬೇಕು. ‘ಕೆಲಸದ ವಿಧಾನ’ದಿಂದ ‘ಜೀವನ ವಿಧಾನ’ದವರೆಗೆ ಎಂಬಂತೆ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಮಾಡಬೇಕಾಗಿದೆ.
ಸ್ನೇಹಿತರೇ,
ಸಂಶೋಧನೆ ಮತ್ತು ಆವಿಷ್ಕಾರದ ದಿಕ್ಕಿನಲ್ಲಿ ಸಾಂಸ್ಥಿಕ ಬೆಂಬಲವನ್ನು ಹೆಚ್ಚಿಸಲು ಸರ್ಕಾರವು ಅವಿರತವಾಗಿ ಕೆಲಸ ಮಾಡುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ನಾವಿನ್ಯತೆಗೆ ಬಲವಾದ ಅಡಿಪಾಯವನ್ನು ನಿರ್ಮಿಸಲು ಮಾರ್ಗಸೂಚಿಯನ್ನು ಹೊಂದಿದೆ. ಅಟಲ್ ಇನ್ಕ್ಯುಬೇಶನ್ ಮಿಷನ್ ಅಡಿಯಲ್ಲಿ ಸ್ಥಾಪಿಸಲಾಗುತ್ತಿರುವ ಅಟಲ್ ಟಿಂಕರಿಂಗ್ ಲ್ಯಾಬ್ ಗಳು ಶಾಲೆಗಳಲ್ಲಿ ಹೊಸ ತಲೆಮಾರಿನ ಅನ್ವೇಷಕರನ್ನು ಸಜ್ಜುಗೊಳಿಸುತ್ತಿದೆ. ಐ-ಕ್ರಿಯೇಟ್ ನಂತಹ ಸಂಸ್ಥೆಗಳು ಕೂಡಾ ದೇಶದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ, ಅವು ಇಲ್ಲಿಯವರೆಗೆ 500 ಕ್ಕೂ ಹೆಚ್ಚು ನವೋದ್ಯಮಗಳಿಗೆ ಬೆಂಬಲ ನೀಡಿವೆ.
ಸ್ನೇಹಿತರೇ,
21 ನೇ ಶತಮಾನದ ಭಾರತವು ತನ್ನ ಯುವಜನತೆಯಲ್ಲಿ ಸಂಪೂರ್ಣ ವಿಶ್ವಾಸವಿಟ್ಟು ಮುಂದುವರಿಯುತ್ತಿದೆ. ಇದರ ಪರಿಣಾಮವಾಗಿ, ಇಂದು ‘ನಾವೀನ್ಯತೆ ಸೂಚ್ಯಂಕ’ದಲ್ಲಿ ಭಾರತದ ಶ್ರೇಯಾಂಕ ಸುಧಾರಣೆಯಾಗಿದೆ. ಕಳೆದ 8 ವರ್ಷಗಳಲ್ಲಿ ಪೇಟೆಂಟ್ ಗಳ ಸಂಖ್ಯೆ 7 ಪಟ್ಟು ಹೆಚ್ಚಾಗಿದೆ. ಯೂನಿಕಾರ್ನ್ ಗಳ ಸಂಖ್ಯೆಯೂ 100 ದಾಟಿದೆ. ಸಮಸ್ಯೆಗಳಿಗೆ ಸರ್ಕಾರ ಮಾತ್ರವೇ ಪರಿಹಾರ ಒದಗಿಸಬಲ್ಲದು ಎಂಬುದನ್ನು ನಾವು ನಂಬುವುದಿಲ್ಲ. ನೋಡಿ, ನಾನು ಸರ್ಕಾರವನ್ನು ನಿಮ್ಮ ಬಳಿಗೆ ತಂದಿದ್ದೇನೆ. ನಿಮ್ಮಂತಹ ಯುವಜನರು ಸರ್ಕಾರದ ಈ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಬೇಕು. ನಿಮ್ಮ ಸಾಮರ್ಥ್ಯವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಇಂದಿನ ಯುವ ಪೀಳಿಗೆಯು ವೇಗದ ಮತ್ತು ಸ್ಮಾರ್ಟ್ ಪರಿಹಾರಗಳೊಂದಿಗೆ ಮುಂಚೂಣಿಗೆ ಬರುತ್ತಿದೆ.
ಈ ಹ್ಯಾಕಥಾನ್ ಆಯೋಜಿಸುವ ಹಿಂದಿನ ಉದ್ದೇಶಗಳಲ್ಲಿ ಒಂದು, ದೇಶದ ಎಲ್ಲೆಡೆಯಿಂದ ಇಲ್ಲಿಗೆ ಬಂದಿರುವ ನನ್ನ ಯುವ ಸ್ನೇಹಿತರು ಸಮಸ್ಯೆ, ಸಮಸ್ಯೆಯ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಸರ್ಕಾರವು ಪರಿಹರಿಸಲು ಬಯಸುವ ಸಮಸ್ಯೆಯನ್ನು ತೊಡೆದುಹಾಕಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂಬುದು. ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಸಹಯೋಗದ ಈ ಮನೋಭಾವ ಮತ್ತು ಎಲ್ಲರ ಪ್ರಯತ್ನಗಳ ಈ ಸ್ಪೂರ್ತಿಯು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಅತ್ಯಗತ್ಯವಾಗಿದೆ.
ಸ್ನೇಹಿತರೇ,
ನೀವೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೀರಿ ಮತ್ತು ಈ ರೀತಿಯ ನಾವೀನ್ಯತೆಯ ದೀಪವನ್ನು ಬೆಳಗಿಸುವುದನ್ನು ಮುಂದುವರಿಸುತ್ತೀರಿ ಎಂಬ ಬಗ್ಗೆ ನನಗೆ ಖಾತ್ರಿಯಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳಿಗೆ ಸರ್ಕಾರದ ನಿರಂತರ ಬೆಂಬಲ ಸಿಗುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಪ್ರತಿ ಹಂತದಲ್ಲೂ ಸರ್ಕಾರ ನಿಮ್ಮೊಂದಿಗೆ ನಿಲ್ಲುತ್ತದೆ.
ಒಳ್ಳೆಯದು, ನಿಮಗೆಲ್ಲರಿಗೂ ಹೇಳಲು ತುಂಬಾ ಇದೆ. ನೀವು ಆಲೋಚನೆಗಳನ್ನು ಚಿಂತನ ಮಂಥನ ಮಾಡಲು ಗಂಟೆಗಟ್ಟಲೆ ವ್ಯಯಿಸಿದ್ದೀರಿ. ನಿಮ್ಮ ಮಾತುಗಳನ್ನು ಕೇಳುವುದು ನನಗೆ ಬಹಳಷ್ಟು ಕಲಿಯಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಅನೇಕರು ವಿವಿಧ ಆಲೋಚನೆಗಳನ್ನು ಹೊಂದಿದ್ದಾರೆ, ಆದರೆ ನನಗೆ ಎಲ್ಲರನ್ನೂ ಕೇಳಲು ಸಾಧ್ಯವಾಗಲಿಲ್ಲ. ಪ್ರತಿನಿಧಿಗಳಾಗಿ ಮಾತನಾಡುವ ಕೆಲವು ಯುವಜನರನ್ನು ಮಾತ್ರ ನಾನು ಕೇಳಿದ್ದೇನೆ. ಯಾರು ಮಾತನಾಡಿಲ್ಲವೋ, ಅವರ ಕೆಲಸವೇನು ಕಡಿಮೆಯದಲ್ಲ ಮತ್ತು ಅವರ ಪ್ರಯತ್ನಗಳೂ ಕಡಿಮೆಯವಲ್ಲ. ಮತ್ತು ನಾನು ನಿಮಗೆ ಭರವಸೆ ನೀಡುತ್ತೇನೆ, ನಾನು ಅದರ ವಿವರಣೆಯನ್ನು ಇಲಾಖೆಯ ಮೂಲಕ ಪಡೆದು ಕೊಳ್ಳುತ್ತೇನೆ. ಮತ್ತು ನೀವೆಲ್ಲರೂ ಏನು ಮಾಡಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ನಮಗೆ ಇನ್ನೂ ಸ್ವಲ್ಪ ಸಮಯವಿದ್ದರೆ ಉತ್ತಮವಿತ್ತು, ಆಗ ನನಗೆ ನಿಮ್ಮೊಂದಿಗೆ ಮಾತನಾಡಲು ಸಾಧ್ಯವಾಗುತ್ತಿತ್ತು. . ಆದರೆ ಮಾತನಾಡದವರ ಕೆಲಸವೂ ಅಷ್ಟೇ ಮುಖ್ಯ.
ನಾನು ಮತ್ತೊಮ್ಮೆ ಎಲ್ಲ ಯುವಜನತೆಯನ್ನು ನನ್ನ ಹೃದಯಾಂತರಾಳದಿಂದ ಅಭಿನಂದಿಸುತ್ತೇನೆ. ಸರ್ಕಾರದ ಈ ಕೆಲಸದಲ್ಲಿ ಸರ್ಕಾರದೊಂದಿಗೆ ನಿಲ್ಲುವ ಮೂಲಕ ಜನರ ಕಲ್ಯಾಣವನ್ನು ಖಾತ್ರಿಪಡಿಸುವ ಈ ಅಭಿಯಾನದಲ್ಲಿ ನಾವು ಮುಂದುವರಿಯುತ್ತೇವೆ ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ಶುಭವನ್ನು ಹಾರೈಸುತ್ತೇನೆ.
ತುಂಬಾ ಧನ್ಯವಾದಗಳು!
ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
*******
Addressing the Grand Finale of Smart India Hackathon 2022. It offers a glimpse of India's Yuva Shakti. https://t.co/7TcixPgoqD
— Narendra Modi (@narendramodi) August 25, 2022
अब से कुछ दिन पहले ही हमने आजादी के 75 वर्ष पूरे किए हैं।
— PMO India (@PMOIndia) August 25, 2022
आजादी के 100 वर्ष होने पर हमारा देश कैसा होगा, इसे लेकर देश बड़े संकल्पों पर काम कर रहा है।
इन संकल्पों की पूर्ति के लिए ‘जय अनुसंधान’ के उद्घोष के ध्वजा वाहक आप innovators हैं: PM @narendramodi
पिछले 7-8 वर्षों में देश एक के बाद एक Revolution करते हुए तेजी से आगे बढ़ रहा है।
— PMO India (@PMOIndia) August 25, 2022
भारत में आज Infrastructure Revolution हो रहा है।
भारत में आज Health Sector Revolution हो रहा है: PM @narendramodi
भारत में आज Digital Revolution हो रहा है।
— PMO India (@PMOIndia) August 25, 2022
भारत में आज Technology Revolution हो रहा है।
भारत में आज Talent Revolution हो रहा है: PM @narendramodi
भारत में इनोवेशन का कल्चर बढ़ाने के लिए हमें दो बातों पर निरंतर ध्यान देना होगा।
— PMO India (@PMOIndia) August 25, 2022
Social support और institutional support: PM @narendramodi
समाज में innovation as a profession की स्वीकार्यता बढ़ी है।
— PMO India (@PMOIndia) August 25, 2022
ऐसे में हमें नए ideas और original thinking को भी स्वीकार करना होगा।
रिसर्च और इनोवेशन को way of working से way of living बनाना होगा: PM @narendramodi
21वीं सदी का आज का भारत, अपने युवाओं पर भरपूर भरोसा करते हुए आगे बढ़ रहा है।
— PMO India (@PMOIndia) August 25, 2022
इसी का नतीजा है कि आज innovation index में भारत की रैकिंग बढ़ गई है।
पिछले 8 वर्षों में पेटेंट की संख्या 7 गुना बढ़ गई है।
यूनिकॉर्न की गिनती भी 100 के पार चली गई है: PM @narendramodi