2022 ರ ಆಗಸ್ಟ್ 28 ರ ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮುಂದಿನ ಸಂಚಿಕೆಯ ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗಲಿದ್ದು, ಈ ಕಾರ್ಯಕ್ರಮಕ್ಕೆ ಸಲಹೆಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವಂತೆ ಜನತೆಗೆ ಆಹ್ವಾನ ನೀಡಿದ್ದಾರೆ. ತಮ್ಮ ಚಿಂತನೆಗಳನ್ನು ಮೈಗೌ, ನಮೋ ಆ್ಯಪ್ ಅಥವಾ 1800-11-7800 ಈ ದೂರವಾಣಿ ಸಂಖ್ಯೆಗೆ ಡಯಲ್ ಮಾಡಿ ತಮ್ಮ ಸಂದೇಶ ದಾಖಲಿಸುವಂತೆ ಕೋರಿದ್ದಾರೆ.
ಮೈಗೌ ಮೂಲಕ ಈ ಆಹ್ವಾನ ನೀಡಿ, ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.
“ಆಗಸ್ಟ್ 28 ರ #ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ಎದುರುನೋಡುತ್ತಿದ್ದೇನೆ. ಮೈಗೌ ಅಥವಾ ನಮೋ ಆ್ಯಪ್, ಇಲ್ಲವೆ ಪರ್ಯಾಯವಾಗಿ 1800-11-7800 ಸಂಖ್ಯೆಗೆ ಡಯಲ್ ಮಾಡಿ ಸಂದೇಶವನ್ನು ದಾಖಲಿಸುವಂತೆ ಕೋರಿದ್ದಾರೆ.”
********
Looking forward to ideas and inputs for the upcoming #MannKiBaat programme on 28th August. Write on MyGov or the NaMo App. Alternatively, record a message by dialling 1800-11-7800. https://t.co/7Dbx87p1up
— Narendra Modi (@narendramodi) August 17, 2022