Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಎರಡು ಸಮಿತಿಗಳ ರಚನೆ


ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಎರಡು ಸಮಿತಿಗಳ ರಚನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅನುಮೋದನೆ ನೀಡಿದ್ದಾರೆ.
ಪ್ರಧಾನಮಂತ್ರಿಯವರು 149 ಸದಸ್ಯರ ರಾಷ್ಟ್ರೀಯ ಸಮಿತಿಯ ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಗೃಹ ಸಚಿವ ರಾಜನಾಥಸಿಂಗ್ ಅವರು 23 ಸದಸ್ಯರ ಕಾರ್ಯಕಾರಿ ಸಮಿತಿಯ ಅಧ್ಯಕ್ಷತೆ ವಹಿಸುವರು.

ರಾಷ್ಟ್ರೀಯ ಸಮಿತಿಯ ಸದಸ್ಯರಲ್ಲಿ ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಪ್ರಧಾನಮಂತ್ರಿ ಶ್ರೀ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವರುಗಳಾದ ಶ್ರೀ ರಾಜನಾಥಸಿಂಗ್, ಶ್ರೀಮತಿ ಸುಷ್ಮಾ ಸ್ವರಾಜ್, ಶ್ರೀ ಅರುಣ್ ಜೇಟ್ಲಿ, ಶ್ರೀ ಮನೋಹರ ಪರಿಕ್ಕರ್, ಮಾಜಿ ಉಪ ಪ್ರಧಾನಮಂತ್ರಿ ಶ್ರೀ ಎಲ್.ಕೆ. ಅಡ್ವಾಣಿ ಮತ್ತು ಬಿಜೆಪಿ ಅಧ್ಯಕ್ಷ ಶ್ರೀ ಅಮಿತ್ ಶಾ ಸೇರಿದ್ದಾರೆ.
ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಮಾಜಿ ಕೃಷಿ ಸಚಿವ ಶ್ರೀ ಶರದ್ ಪವಾರ್, ರಾಜ್ಯಸಭಾ ಸದಸ್ಯ ಶ್ರೀ ಶರದ್ ಯಾದವ್, ಯೋಗ ಗುರು ಬಾಬಾ ರಾಮದೇವ್, ಗೀತ ರಚನೆಕಾರ ಪ್ರಸೂನ್ ಜೋಶಿ, ಚಲನಚಿತ್ರ ನಿರ್ದೇಶಕ ಶ್ರೀ. ಚಂದ್ರಪ್ರಕಾಶ್ ದ್ವಿವೇದಿ, ಮಾಜಿ ಹಾಕಿ ಪಟು ಶಅರೀ ಧನರಾಜ್ ಪಿಳ್ಳೈ, ಮಾಜಿ ಬ್ಯಾಡ್ಮಿಂಟನ್ ಆಟಗಾರ ಹಾಗೂ ಕೋಚ್ ಶ್ರೀ ಪುಲ್ಲಾಲ ಗೋಪಿಚಂದ್ ಮತ್ತು ಸುಲಭ್ ಇಂಟರ್ ನ್ಯಾಷನಲ್ ನ ಸ್ಥಾಪಕ ಶ್ರೀ ಬಿಂದೇಶ್ವರ್ ಪಾಠಕ್ ಅವರನ್ನೂ ರಾಷ್ಟ್ರೀಯ ಸಮಿತಿಯಲ್ಲಿ ಸೇರಿಸಲಾಗಿದೆ. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಶ್ರೀ ಆರ್.ಸಿ. ಲಹೋಟಿ, ನಿವೃತ್ತ ಏರ್ ಚೀಫ್ ಮಾರ್ಷಲ್ ಶ್ರೀ ಎಸ್. ಕೃಷ್ಣಸ್ವಾಮಿ, ಸಂವಿಧಾನ ತಜ್ಞ ಶ್ರೀ ಸುಭಾಷ್ ಕಶ್ಯಪ್ ಮತ್ತು ಪರಿಸರವಾದಿ ಶ್ರೀ ಸಿ.ಪಿ. ಭಟ್ ಅವರನ್ನು ಸಹ ರಾಷ್ಟ್ರೀಯ ಸಮಿತಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಸಮಿತಿಯಲ್ಲಿ ಹಲವು ರಾಜ್ಯಪಾಲರು, ಮುಖ್ಯಮಂತ್ರಿಗಳು, ವಿಜ್ಞಾನಿಗಳು, ಪತ್ರಕರ್ತರು, ಶಿಕ್ಷಣತಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ಆಧ್ಯಾತ್ಮಿಕ ನಾಯಕರಿದ್ದಾರೆ.
ಕೇಂದ್ರ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ಡಾ. ಮಹೇಶ್ ಶರ್ಮಾ ಸಮಿತಿಯ ಸಂಚಾಲಕರಾಗಿರುತ್ತಾರೆ.