ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಗಂಗಾ ನದಿ (ಪುನಶ್ಚೇತನ, ಸಂರಕ್ಷಣೆ ಮತ್ತು ನಿರ್ವಹಣೆ) ಪ್ರಾಧಿಕಾರಗಳ ಆದೇಶ 2016ಕ್ಕೆ ತನ್ನ ಅನುಮೋದನೆ ನೀಡಿದೆ. ಈ ಆದೇಶವು ನೀತಿ ಮತ್ತು ಅನುಷ್ಠಾನವನ್ನು ತ್ವರಿತ ಗತಿಯಲ್ಲಿ ಜಾರಿ ಮಾಡಲು ಹೊಸ ಸಾಂಸ್ಥಿಕ ಸ್ವರೂಪ ನೀಡಲಿದೆ ಮತ್ತು ಗಂಗಾ ಶುದ್ಧೀಕರಣ ರಾಷ್ಟ್ರೀಯ ಅಭಿಯಾನದ ತ್ವರಿತ ಅನುಷ್ಠಾನದ ಕಾರ್ಯ ನಿರ್ವಹಣೆಯನ್ನು ಸ್ವತಂತ್ರ್ಯ ಮತ್ತು ಹೊಣೆಗಾರಿಕೆಯ ಸ್ವರೂಪದಲ್ಲಿ ಮಾಡಲು ಅವಕಾಶ ನೀಡುತ್ತದೆ. ಈ ಕಾಯಿದೆಯ ನಿಬಂಧನೆಗಳ ಅನುಸರಣೆಗೆ ಪ್ರಾಧಿಕಾರಕ್ಕೆ ಪರಿಸರ (ಸಂರಕ್ಷಣೆ) ಕಾಯಿದೆ 1986ರ ಅಭಿಯಾನದ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಅದೇರೀತಿ ಹಣಕಾಸು ಮತ್ತು ಆಡಳಿತಾತ್ಮಕ ಅಧಿಕಾರವಿದ್ದು, ಇದು ಸ್ಪಷ್ಟವಾಗಿ ಎನ್.ಎಂ.ಸಿ.ಜಿ. ಯನ್ನು ಜವಾಬ್ದಾರಿಯುತ ಮತ್ತು ಹೊಣೆಗಾರಿಕೆ ಇರುವ ಕೇಂದ್ರವಾಗಿ ಸ್ಥಾಪಿಸಲು ಮತ್ತು ಗಂಗಾ ಪುನಶ್ಚೇತನ ಯೋಜನೆಯ ಜಾರಿ ಪ್ರಕ್ರಿಯೆಗೆ ಸಮರ್ಥ ವೇಗ ನೀಡುವುದಾಗಿರುತ್ತದೆ.
ಪ್ರಮುಖ ಲಕ್ಷಣಗಳು:
ಸಂಕ್ಷಿಪ್ತವಾಗಿ, ಈ ಆದೇಶವು ಕೆಳಗಿನ ಕಲ್ಪನೆ ನೀಡುತ್ತದೆ:
1. ಗಂಗಾ ನದಿ (ಪುನಶ್ಚೇತನ, ಸಂರಕ್ಷಣೆ ಮತ್ತು ನಿರ್ವಹಣೆ)ಗೆ ಈಗಿರುವ ಎನ್.ಜಿ.ಆರ್.ಬಿ.ಎ. ಜಾಗದಲ್ಲಿ ಗಂಗಾನದಿಯ ಕಣಿವೆಯ ಪುನಶ್ಚೇತನ ಮತ್ತು ಮಾಲಿನ್ಯ ತಡೆಗಾಗಿ ಸಮಗ್ರ ಹೊಣೆಗಾರಿಕೆಯಿರುವ ಪ್ರಾಧಿಕಾರವಾಗಿ ರಾಷ್ಟ್ರೀಯ ಮಂಡಳಿಯನ್ನು ಗೌರವಾನ್ವಿತ ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ರಚಿಸುವುದು.
2. ಸಂಬಂಧಿತ ಸಚಿವಾಲಯಗಳು, ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳ ಖಾತ್ರಿಗಾಗಿ ಗೌರವಾನ್ವಿತ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಖಾತೆ ಸಚಿವರ ಅಧ್ಯಕ್ಷತೆಯಲ್ಲಿ ಅಧಿಕಾರಯುತವಾದ ಕಾರ್ಯ ಪಡೆಯ ರಚನೆ
:
ಗಂಗಾ ನದಿಯ ಸಂರಕ್ಷಣೆ ಮತ್ತು ಪುನಶ್ಚೇತನ ಉದ್ದೇಶದ ಈಡೇರಿಕೆಗಾಗಿ ನಿರ್ದಿಷ್ಟ ಚಟುವಟಿಕೆಯ, ಮೈಲಿಗಲ್ಲಾಗುವ ಮತ್ತು ಕಾಲಮಿತಿಯ ಕ್ರಿಯಾಯೋಜನೆ ರೂಪಿಸುವುದು.
ಅದರ ಕ್ರಿಯಾ ಯೋಜನೆಗಳ ಜಾರಿಗೆ ನಿಗಾ ವ್ಯವಸ್ಥೆ.
ಇದು ಕಾಲಮಿತಿಯ ಮಾದರಿಯಲ್ಲಿ ಕ್ರಿಯಾ ಯೋಜನೆಯ ಅನುಷ್ಠಾನಕ್ಕೆ ಸಚಿವಾಲಯ ಮತ್ತು ಇಲಾಖೆಗಳು ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳನಡುವೆ ಸಹಯೋಗದ ಖಾತ್ರಿ ಒದಗಿಸುತ್ತದೆ.
3. ತನ್ನ ಆದೇಶದ ಸಮರ್ಥ ಪಾಲನೆಗಾಗಿಗಂಗಾ ಶುದ್ಧೀಕರಣ ರಾಷ್ಟ್ರೀಯ ಅಭಿಯಾನ (ಎನ್.ಎಂ.ಸಿ.ಜಿ.)ವನ್ನು ನಿರ್ದೇಶನ ನೀಡುವ ಅಧಿಕಾರ ಹೊಂದಿದ ಮತ್ತು ಪರಿಸರ (ಸಂರಕ್ಷಣೆ) ಕಾಯಿದೆ 1986ರ ಅಡಿ ಅಧಿಕಾರ ಚಲಾಯಿಸುವ ಪ್ರಾಧಿಕಾರವಾಗಿ ಘೋಷಣೆ. ಎರಡು ಹಂತದ ವ್ಯವಸ್ಥಾಪನಾ ಸ್ವರೂಪವನ್ನು ಹೊಂದಿದೆ. ಎನ್.ಎಂ.ಸಿ.ಜಿ.ಯ ಡಿಜಿ ನೇತೃತ್ವದ ಆಡಳಿತ ಮಂಡಳಿ (ಜಿಸಿ). ಈ ಜಿ.ಸಿ. ಕೆಳಗೆ ಜಿ.ಸಿ.ಯಿಂದಲೇ ರಚಿಸಲಾದ ಹಾಗೂ ಎನ್.ಎಂ.ಸಿ.ಜಿ. ಡಿ.ಜಿ. ಅಧ್ಯಕ್ಷತೆಯ ಒಂದು ಕಾರ್ಯಕಾರಿ ಸಮಿತಿ (ಇ.ಸಿ.).
ಎನ್.ಎಂ.ಸಿ.ಜಿ. ರಾಷ್ಟ್ರೀಯ ಗಂಗಾ ಮಂಡಲಿಯ ಆದೇಶಗಳನ್ನು ಮತ್ತು ನಿರ್ಧಾರಗಳ ಅನುಸರಣೆ ಮಾಡುತ್ತದೆ ಮತ್ತು ಅದು ಅನುಮೋದಿಸಿದ ಗಂಗಾ ಕೊಳ್ಳದ ನಿರ್ವಹಣಾ ಯೋಜನೆ ಜಾರಿ ಮಾಡುತ್ತದೆ; ಗಂಗಾ ನದಿ ಮತ್ತು ಅದರ ಉಪ ನದಿಗಳ ಪುನಶ್ಚೇತನ ಮತ್ತು ಸಂರಕ್ಷಣೆಗೆ ಅಗತ್ಯವಾದ ಎಲ್ಲ ಚಟುವಟಿಕೆ ಕೈಗೊಳ್ಳುತ್ತದೆ ಮತ್ತು ಸಹಯೋಗ ನೀಡುತ್ತದೆ.
4. ತಮ್ಮ ವ್ಯಾಪ್ತಿಯಡಿ ಬರುವ ಜಿಲ್ಲಾ ಗಂಗಾ ಸಂರಕ್ಷಣೆ ಸಮಿತಿಗಳ ಮೇಲೆ ನಿಯಂತ್ರಣ ಮತ್ತು ಅವುಗಳ ಮೇಲುಸ್ತುವಾರಿ, ನಿರ್ದೇಶನ ನೀಡುವ ಪ್ರಾಧಿಕಾರಗಳಾಗಿ ಕೆಲಸ ಮಾಡುವ ಕಾರಣ, ರಾಜ್ಯಮಟ್ಟದಲ್ಲಿ ಒಂದು ಪ್ರಾಧಿಕಾರವಾಗಿ ಸೂಚಿತ ಪ್ರತಿ ರಾಜ್ಯದಲ್ಲಿ ರಾಜ್ಯ ಗಂಗಾ ಸಮಿತಿ ರಚಿಸಲು ಉದ್ದೇಶಿಸಲಾಗಿದೆ.
5. ಅದೇ ರೀತಿ ಗಂಗಾ ನದಿ ತಟದ ಜಿಲ್ಲೆಗಳಲ್ಲಿರುವ ಜಿಲ್ಲಾ ಗಂಗಾ ಸಮಿತಿಗಳು ಸಹ ಜಿಲ್ಲಾಮಟ್ಟದಲ್ಲಿ ಪ್ರಾಧಿಕಾರದಂತೆ ತಮಗೆ ವಹಿಸಿದ ಕಾರ್ಯವನ್ನು ನಿರ್ವಹಿಸುತ್ತವೆ, ಸ್ಥಳೀಯ ಭೀತಿಗಳ ಬಗ್ಗೆ ಅರಿತು, ಗಂಗಾ ನದಿ ಅಗತ್ಯಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ ಮತ್ತು ಗಂಗಾ ನದಿ ನೀರಿನ ಒಟ್ಟಾರೆ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಮತ್ತು ವಿವಿಧ ಯೋಜನೆಗಳಲ್ಲಿ ಮೇಲ್ವಿಚಾರಣೆ ಅಗತ್ಯ ಮುಂತಾದ ಕ್ರಮಗಳನ್ನು ಜಾರಿಗೆ ತರುತ್ತವೆ.
ಪ್ರಸ್ತಾವಿತ ವಿನ್ಯಾಸವನ್ನು ಉಪ ಶಾಸನದ ಮಾರ್ಗದಲ್ಲಿ ಅಂದರೆ ಅದರ ಉದ್ದೇಶ ಈಡೇರಿಕೆಗಾಗಿ ಪ್ರಾಧಿಕಾರ ರಚಿಸುವ ಸಲುವಾಗಿ ಪರಿಸರ (ಸಂರಕ್ಷಣೆ)ಕಾಯಿದೆ 1986ರ (1986ರ 29)ರ ಉಪಬಂಧಗಳ ಅಡಿಯಲ್ಲಿ ಜಾರಿ ಮಾಡಲಾಗುತ್ತದೆ.
ಪ್ರಸ್ತಾಪಿಸಲಾಗಿರುವ ಇತರ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ:
ಇದು ಗಾಂಗಾ ಶುದ್ಧೀಕರಣಕ್ಕೆ, ಪರಿಸರ ಸಂರಕ್ಷಣೆ/ಗಂಗಾನಂದಿ ಪುನಶ್ಚೇತನಕ್ಕಾಗಿ ಎನ್.ಎಂ.ಸಿ.ಜಿ.ಗೆ ಹೆಚ್ಚಿನ ಬಲ ನೀಡುತ್ತದೆ. ಇದು ಗಂಗಾ ನದಿಯನ್ನು ಮಲಿನಗೊಳಿಸುವುದನ್ನು ತಗ್ಗಿಸುವ ಸಲುವಾಗಿ ಎನ್.ಎಂ.ಸಿ.ಜಿ.ಯ ನಿರ್ದೇಶನಗಳ ಪಾಲನೆಗೆ ಮತ್ತು ಸ್ಥಳೀಯ ಸಂಸ್ಥೆಗಳೊಂದಿಗಿನ ಸೂಕ್ತ ಸಹಯೋಗಕ್ಕೆ ಖಾತ್ರಿ ಒದಗಿಸುತ್ತದೆ
ಸಿಪಿಸಿಬಿ ಸೂಕ್ತ ಕ್ರಮ ಕೈಗೊಳ್ಳದಿದ್ದಾಗ ಮಾತ್ರ ಎನ್.ಎಂ.ಸಿ.ಜಿ. ಕ್ರಮ ಕೈಗೊಳ್ಳುತ್ತದೆ. ಸದರಿ ಕಾಯಿದೆಯ ಉಪಬಂಧಗಳ ಅಡಿಯಲ್ಲಿ ಸಿಪಿಸಿಬಿ, ಎನ್.ಎಂ.ಸಿ.ಜಿ.ಯೊಂದಿಗೆ ಜಂಟಿಯಾಗಿ ಕ್ರಮ ಕೈಗೊಳ್ಳಬಹುದಾಗಿದೆ
ಪರಿಷ್ಕೃತ ವಿನ್ಯಾಸದ ವಿಶೇಷ ಗಮನವು, ನೀರಿನ ಗುಣಮಟ್ಟ ಮತ್ತು ಪರಿಸರಾತ್ಮಕವಾದ ಸುಸ್ಥಿರ ಅಭಿವೃದ್ಧಿಯೊಂದಿಗೆ ಗಂಗಾ ನದಿಯಲ್ಲಿ ಸೂಕ್ತ ಪರಿಸರಾತ್ಮಕ ಹರಿವು ಕಾಪಾಡುವುದಾಗಿದೆ.
ಗಂಗಾ ನದಿ ಕೊಳ್ಳದಲ್ಲಿ ತ್ವರಿತವಾಗಿ ತ್ಯಾಜ್ಯ ಜಲ ಶುದ್ಧೀಕರಣ ಮೂಲಸೌಕರ್ಯ ನಿರ್ಮಾಣ ಕೈಗೊಳ್ಳಲು, ನಾವಿನ್ಯ ಮಾದರಿ ಆಧಾರಿತ ಹೈಬ್ರೀಡ್ ವರ್ಷಾಶನಕ್ಕೂ ಅನುಮೋದನೆ ನೀಡಲಾಗಿದೆ. ಈ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಮೂಲಸೌಕರ್ಯ ಸುಸ್ಥಿರತೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವುದನ್ನು ಇದು ಖಾತ್ರಿ ಪಡಿಸುತ್ತದೆ.
ಪಾರದರ್ಶಕತೆಯ ಖಾತ್ರಿಗಾಗಿ ಮತ್ತು ವೆಚ್ಚ ಉಳಿತಾಯಕ್ಕಾಗಿ, ಸಹವರ್ತಿ ಲೆಕ್ಕಪರಿಶೋಧನೆ, ಸುರಕ್ಷಿತ ಲೆಕ್ಕಪರಿಶೋಧನೆ, ಸಂಶೋಧನಾ ಸಂಸ್ಥೆ ಮತ್ತು ಹಣಕಾಸು ಚೌಕಟ್ಟನ್ನು ಮಾಡಲು ಅವಕಾಶ ಮಾಡಿಕೊಳ್ಳಲಾಗಿದೆ.
ಹಿನ್ನೆಲೆ:
ಗಂಗಾನದಿಯ ನೀರಿನ ಗುಣಮಟ್ಟ ಸುಧಾರಣೆ ಉದ್ದೇಶದೊಂದಿಗೆ ಗಂಗಾ ಕ್ರಿಯಾ ಯೋಜನೆ (ಜಿ.ಎ.ಪಿ.) ಮೊದಲ ಹಂತವನ್ನು 1985ರಲ್ಲಿ ಆರಂಭಿಸಲಾಯಿತು ಮತ್ತು ನಂತರ ಜಿ.ಎ.ಪಿ. ಎರಡನೇ ಹಂತಕ್ಕೆ 1993ರಲ್ಲಿ ಚಾಲನೆ ನೀಡಲಾಯಿತು. ನಂತರ ಅದನ್ನು ಗಂಗಾ ನದಿಯ ಕೆಲವು ಉಪ ನದಿಗಳನ್ನೂ ಸೇರ್ಪಡೆ ಮಾಡಲು ವಿಸ್ತರಿಸಲಾಯಿತು. ಮೇ 2015ರಲ್ಲಿ ಕೇಂದ್ರ ಸರ್ಕಾರ ಗಂಗಾ ನದಿಯ ಮತ್ತು ಅದರ ಉಪ ನದಿಗಳ ಪುನಶ್ಚೇತನಕ್ಕಾಗಿ ಸಮಗ್ರ ಕಾರ್ಯಕ್ರಮ ರೂಪಿಸಲು ಕೇಂದ್ರ ಸರ್ಕಾರದಿಂದ ನೂರರಷ್ಟು ಹಣಕಾಸು ನೀಡುವ ಕೇಂದ್ರೀಯ ಯೋಜನೆಯಾಗಿ ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿತು. ಈ ಕಾರ್ಯಕ್ರಮ, ನೀರಿನ ಗುಣಮಟ್ಟ ಕುಸಿಯದಂತೆ ತಡೆಯುವಲ್ಲಿ ಸಾಧಾರಣ ಸಾಧನೆ ಮಾಡಿತಾದರೂ, ಅದಕ್ಕೆ ಅದರ ಜಾರಿಗೆ ಕೆಲವು ಮಿತಿಗಳು ಇದ್ದವು.
ಎನ್.ಎಂ.ಸಿ.ಜಿ. 2012ರಿಂದ ಒಂದು ನೋಂದಾಯಿತ ಸೊಸೈಟಿಯಾಗಿ ಕಾರ್ಯ ನಿರ್ವಹಿಸುತ್ತಿತ್ತಾದರೂ, ಸಂಸ್ಥೆಗಳು ಯೋಜನೆಯ ಜಾರಿಗೆ ಹಣ ನೀಡುವ ಅವಕಾಶ ಬಹುತೇಕ ಸೀಮಿತವಾಗಿತ್ತು. ಗಂಗಾ ನದಿಗೆ ಎದುರಾಗಿದ್ದ ಕೆಲವು ಭೀತಿಗಳ ವಿಚಾರದಲ್ಲಿ ಕಾಗ್ನಿಜೆನ್ಸ್ ತೆಗೆದುಕೊಳ್ಳಲು ಅದಕ್ಕೆ ಆದೇಶ ಇರಲಿಲ್ಲ ಅಥವಾ ಸಂಬಂಧಿತ ಪ್ರಾಧಿಕಾರಗಳಿಗೆ/ಮಾಲಿನ್ಯ ಉಂಟುಮಾಡುವವರಿಗೆ ನಿರ್ದೇಶನ ನೀಡಲೂ ಅಧಿಕಾರ ಇರಲಿಲ್ಲ. ಆದಾಗ್ಯೂ ಈ ಸಂಸ್ಥೆಯನ್ನು ಜನರ ದೃಷ್ಟಿಯಲ್ಲಿ ಹಾಗೂ ವಿವಿಧ ನ್ಯಾಯಾಲಯಗಳ ದೃಷ್ಟಿಯಲ್ಲಿ ಗಂಗಾ ನದಿಯ ಮೇಲ್ವಿಚಾರಕನನ್ನಾಗಿ ಮತ್ತು ಜವಾಬ್ದಾರನನ್ನಾಗಿ ಮಾಡಲಾಗಿತ್ತು. ಇಂಥ ಪರಿಸ್ಥಿತಿಗಳನ್ನು ಎದುರಿಸಲು ಒಟ್ಟಾರೆಯಾಗಿ ಅಭಿಯಾನ ಸಜ್ಜಾಗಿರಲಿಲ್ಲ.
ಆದರೆ, ಇದು ಗಂಗಾ ನದಿಯ ಪುನಶ್ಚೇತನ ಮಾಡುತ್ತದೆ ಮತ್ತು ಅದಕ್ಕೆ ಬರುತ್ತಿರುವ ಮಾಲಿನ್ಯವನ್ನು ಸಮರ್ಥವಾಗಿ ತಡೆಯುವ ಖಾತ್ರಿ ಒದಗಿಸುತ್ತದೆ, ನದಿಯಲ್ಲಿ ಪರಿಸರಾತ್ಮಕ ಹರಿವು ಕಾಪಾಡುತ್ತದೆ, ಮಲಿನಗೊಳಿಸುವ ಕೈಗಾರಿಕೆಗಳಿಗೆ ನಿರ್ಬಂಧ ಹೇರುತ್ತದೆ ಮತ್ತು ಅದರ ಅನುಸರಣೆಗೆ ಪರಿಶೀಲನೆ ಕೈಗೊಳ್ಳುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಇದರ ಜೊತೆಗೆ ಅದು ದತ್ತಾಂಶ ಪ್ರಸಾರ ನಿರ್ವಹಿಸುತ್ತದೆ ಮತ್ತು ನದಿಯ ಪರಿಸ್ಥಿತಿ ಬಗ್ಗೆ ಸಂಶೋಧನೆ ಕೈಗೊಳ್ಳತ್ತದೆ ಎಂದೂ ಪ್ರಸ್ತಾಪಿಸಲಾಗಿತ್ತು. .
AKT/VBA/SH