Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವರಿಷ್ಠ ಪಿಂಚಣಿ ವಿಮೆ ಯೋಜನೆ 2003 ಮತ್ತು ವರಿಷ್ಠ ಪಿಂಚಣಿ ವಿಮೆ ಯೋಜನೆ 2014ಕ್ಕೆಸಂಪುಟದ ಪೂರ್ವಾನ್ವಯ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2003ರ ಜುಲೈ 14ರಂದು ಆರಂಭಿಸಲಾದ ವರಿಷ್ಠ ಪಿಂಚಣಿ ವಿಮಾ ಯೋಜನೆ (ವಿಪಿಬಿವೈ) 2003 ಮತ್ತು 2014ರ ಆಗಸ್ಟ್ 14ರಂದು ಆರಂಭಿಸಲಾದ ವರಿಷ್ಠ ಪಿಂಚಣಿ ವಿಮಾ ಯೋಜನೆ (ವಿಪಿಬಿವೈ) 2014ಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. 2003-04 ರಿಂದ 2014-15ರವರೆಗೆ ವಿಪಿಬಿವೈ 2003ಕ್ಕಾಗಿ ಎಲ್.ಐ.ಸಿ.ಗೆ ಬಿಡುಗಡೆ ಮಾಡಲಾಗಿರುವ ಸಬ್ಸಿಡಿ ಮೊತ್ತಕ್ಕೆ ಆದ ವೆಚ್ಚಕ್ಕೂ ಸಂಪುಟ ತನ್ನ ಅನುಮೋದನೆ ನೀಡಿದೆ ಮತ್ತು ವಿಪಿಬಿವೈ 2003 ಮತ್ತು 2014ಕ್ಕೆ 2015-16ರ ಆರ್ಥಿಕ ವರ್ಷದ ನಂತರ ಆದ ವೆಚ್ಚಕ್ಕೂ ಅನುಮೋದನೆ ನೀಡಿದೆ.

ಈ ಯೋಜನೆಗಳನ್ನು ಭಾರತೀಯ ಜೀವ ವಿಮಾ ನಿಗಮ (ಎಲ್.ಐ.ಸಿ.) ಮೂಲಕ ಜಾರಿ ಮಾಡಲಾಗಿತ್ತು, ಮತ್ತು ಯೋಜನೆಯಡಿ ಹೂಡಲಾದ ಹಣದಿಂದ ಎಲ್.ಐ.ಸಿ. ವಾಸ್ತವವಾಗಿ ಗಳಿಸಿದ ಮೊತ್ತ ಮತ್ತು ಸ ರ್ಕಾರ ಆಶ್ವಾಸನೆ ನೀಡಿದ್ದ ಖಾತ್ರಿಯ ಹಣದ ನಡುವಿನ ವ್ಯತ್ಯಾಸದ ಮೊತ್ತವನ್ನು ಸಬ್ಸಿಡಿಯಾಗಿ ಎಲ್.ಐ.ಸಿ.ಗೆ ಸರ್ಕಾರ ಪಾವತಿಸುತ್ತದೆ.

ಈ ಎರಡೂ ಪಿಂಚಣಿ ಯೋಜನೆಗಳು ವಂತಿಗೆಯ ಮೊತ್ತಕ್ಕೆ ಖಚಿತ ಲಾಭದ ಆಧಾರದ ಮೇಲೆ ಹಿರಿಯ ನಾಗರಿಕರಿಗೆ ಕನಿಷ್ಠ ಪಿಂಚಣಿಯ ಖಾತ್ರಿ ಒದಗಿಸುವ ಉದ್ದೇಶ ಹೊಂದಿವೆ. ವಂತಿಗೆಯ ದಿನದಿಂದ ಸಾಯುವತನಕ ಪಿಂಚಣಿಯನ್ನು ನೀಡುವ ಮತ್ತು ವಂತಿಗೆದಾರ ನಾಮಿನಿಗೆ ವಂತಿಗೆಯ ಮೊತ್ತವನ್ನು ಹಿಂತಿರುಗಿಸುವ ಅವಕಾಶವನ್ನು ಒದಗಿಸುತ್ತದೆ.

ವಿಪಿಬಿವೈ 2003 ಮತ್ತು ವಿಪಿಬಿವೈ -2014ನ್ನು ಭವಿಷ್ಯದ ವಂತಿಗೆಗೆ ಮುಚ್ಚಲಾಗಿದೆ. ಆದಾಗ್ಯೂ ಸರ್ಕಾರ ಖಾತ್ರಿ ನೀಡಿದ್ದ ಪಾಲಿಸಿ ಚಾಲ್ತಿಯಲ್ಲಿರುವ ಅವಧಿಯಲ್ಲಿ ಶೇಕಡ 9ರಷ್ಟು ನಿಶ್ಚಿತ ರಿಟರ್ನ್ ಬದ್ಧತೆಯ ಹಿನ್ನೆಲೆಯಲ್ಲಿ ಆ ಸೇವೆ ಒದಗಿಸುತ್ತಿದೆ. ವಿಪಿಬಿವೈ 2014 ಯೋಜನೆ 2014ರ ಆಗಸ್ಟ್ 14ರಿಂದ 2015 ಆಗಸ್ಟ್ 14ರವರೆಗೆ ಮುಕ್ತವಾಗಿತ್ತು. 2016ರ ಮಾರ್ಚ್ 31ರಲ್ಲಿದ್ದಂತೆ ಒಟ್ಟು 3,17,991 ವರ್ಷಾಶನದಾರರು ವಿಪಿಬಿವೈ 2014ರ ಲಾಭವನ್ನು ಪಡೆದಿದ್ದಾರೆ. ಅದೇ ರೀತಿ ವಿಪಿಬಿವೈ 2003ರ ಅಡಿಯಲ್ಲಿ 2016ರ ಮಾರ್ಚ್ 31ರವರೆಗೆ 2,84,699 ವರ್ಷಾಶನದಾರರು ಲಾಭ ಪಡೆದಿರುತ್ತಾರೆ.

*******

AKT/VBA/SH – 151200