Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಿಂಗಳಿ ವೆಂಕಯ್ಯ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನ ಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಂಗಳಿ ವೆಂಕಯ್ಯ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು;

“ಮಹಾನ್ ಚೇತನ ಪಿಂಗಳಿ ವೆಂಕಯ್ಯನವರ ಜಯಂತಿಯಂದು ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ. ನಮಗೆ ತ್ರಿವರ್ಣ ಧ್ವಜವನ್ನು ನೀಡುವ ಪ್ರಯತ್ನಗಳಿಗಾಗಿ ನಮ್ಮ ರಾಷ್ಟ್ರವು ಅವರಿಗೆ ಎಂದೆಂದಿಗೂ ಋಣಿಯಾಗಿರುತ್ತದೆ, ಅದರ ಬಗ್ಗೆ ನಾವು ಬಹಳ ಹೆಮ್ಮೆಪಡುತ್ತೇವೆ. ತ್ರಿವರ್ಣ ಧ್ವಜದಿಂದ ಶಕ್ತಿ ಮತ್ತು ಪ್ರೇರಣೆಯನ್ನು ಪಡೆದುಕೊಂಡು, ನಾವು ರಾಷ್ಟ್ರೀಯ ಪ್ರಗತಿಗಾಗಿ ಕೆಲಸ ಮಾಡುತ್ತಿರೋಣ” ಎಂದು ಹೇಳಿದ್ದಾರೆ.

*************