1. . ಪೂರ್ವ ನಿಯಂತ್ರಿತ ಪ್ರಕಟಣೆ : ಪ್ರಧಾನ ಮಂತ್ರಿ ಕಾರ್ಯಾಲಯವು ಮಾಹಿತಿ ಹಕ್ಕು ಅಧಿನಿಯಮ 2005,ರ ವಿಭಾಗ 4(1)(ಬಿ) ಯಲ್ಲಿ ಲಭ್ಯ ವ್ಯವಸ್ಥೆಗಳ ಸ್ವಯಂ ನಿರ್ಧಾರದ ಪ್ರಕಟಣೆಗೆ ಸಂಪೂರ್ಣವಾಗಿ ಒಳಪಟ್ಟಿರುತ್ತದೆ ಮತ್ತು ಈ ನಿಟ್ಟಿನ ಎಲ್ಲಾ ಮಾಹಿತಿಗಳೂ ಈ ಅಂತರ್ಜಾಲ ತಾಣದಲ್ಲಿ ಲಭ್ಯವಿದೆ. ಇವುಗಳನ್ನು ವೀಕ್ಷಿಸಲು ಇಲ್ಲಿಚಿಟುಕಿಸಿರಿ (CLICK ಮಾಡಿ).. ಮಾಹಿತಿಗಳನ್ನು ಕನಿಷ್ಠ ವರ್ಷಕ್ಕೊಮ್ಮೆ ಪರಿಷ್ಕರಿಸಿ ನವೀಕರಿಸಲಾಗುತ್ತದೆ. ಕೆಲವೊಂದು ವಿಭಾಗದ ಮಾಹಿತಿಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಅಗತ್ಯಕ್ಕೆ ತಕ್ಕಂತೆ ಆಗಾಗ ಪರಿಷ್ಕರಿಸಲಾಗುತ್ತದೆ.
2. ನಿರ್ಣಯಗಳು ನಿರ್ಧಿಷ್ಟ ವ್ಯಕ್ತಿ (ಗಳಿ) ಗೆ ಪರಿಣಾಮ ಬೀರುವ ಬಗ್ಗೆ ಕಾರಣ ನೀಡುವ ಸೂಚನೆಗಳು: ಸಂಬಂಧ ಪಟ್ಟ ಆಡಳಿತ ಸಚಿವಾಲಯ/ಇಲಾಖೆಗಳ ಜವಾಬ್ದಾರಿಯ ಪರಿಮಿತಿಯಲ್ಲಿ ಒಳಪಡುವ ಪ್ರಧಾನ ನಿರ್ಣಯಗಳು ಅಪಾರಗಾತ್ರದ ಸಾರ್ವಜನಿಕರಿಗೆ ಪರಿಣಾಮ ಉಂಟುಮಾಡುತ್ತದೆ. ಸಾರ್ವಜನಿಕ ವ್ಯಕ್ತಿಗೆ ಅಥವಾ ನಿರ್ಧಿಷ್ಟ ವರ್ಗದ ವ್ಯಕ್ತಿಗಳಿಗೆ ಪರಿಣಾಮ ಉಂಟುಮಾಡುವ ಸಚಿವಾಲಯ/ಇಲಾಖೆಗಳ ನಿರ್ಣಯಗಳ ಹೊರತಾಗಿ ಇನ್ನಾವುದೇ ಆಡಳಿತ ಅಥವಾ ಅರೆ ಸರಕಾರಿ – ನ್ಯಾಯಾಲಯದ ತೀರ್ಪುಗಳ ನಿರ್ಧಾರವನ್ನು ಪ್ರಧಾನ ಮಂತ್ರಿ ಕಾರ್ಯಾಲಯವು ಪರಿಗಣಿಸುವುದಿಲ್ಲ
3. ಮಾಹಿತಿಯ ವಿಸ್ತೃತ ಪ್ರಸರಣ: ಸಾರ್ವಜನಿಕರಿಗಾಗಿ ಮಾಹಿತಿಯ ವಿಸ್ತೃತ ಪ್ರಸರಣಕ್ಕಾಗಿ ಪ್ರಧಾನ ಮಂತ್ರಿ ಕಾರ್ಯಾಲಯವು ಹಲವಾರು ಉಪಕ್ರಮ ಹೆಜ್ಜೆಗಳನ್ನು ತೆಗೆದುಕೊಂಡಿದೆ. ಸಾರ್ವಜನಿಕರೆದುರು ತೆರೆದಿಟ್ಟ ಮಾಹಿತಿಗಳೆಂದರೆ-
(a) ಗೌರವಾನ್ವಿತ ಪ್ರಧಾನ ಮಂತ್ರಿಯವರ ಹೇಳಿಕೆಗಳನ್ನು ಪತ್ರಿಕಾ ಪ್ರಕಟಣೆ ಗಳ ಮೂಲಕ ಪ್ರಕಟಿಸಲಾಗುತ್ತದೆ
(b) ಪ್ರಧಾನ ಮಂತ್ರಿಯವರ ಭಾಷಣ
(c) ಸಾಮಾಜಿಕ ಜಾಲತಾಣಗಳ ಮೂಲಕ ಸಂವಹನ : ಟ್ವೀಟ್ಸ್ ಫೇಸ್ಬುಕ್
(d) ಮನದ ಮಾತು
(e) ಸುದ್ದಿ ಪರಿಷ್ಕರಣೆ
(f) ಸರಕಾರ ಸಾಧನೆ ಮತ್ತು ಸಂಪುಟ ಸಭೆಯ ನಿರರ್ಣಯಗಳು
(g) ಬದಲಾಗುತ್ತಿರುವ ಭಾರತ
4. ವಿವಿಧ ಭಾಷೆಗಳಲ್ಲಿ ಮಾಹಿತಿ ಲಭ್ಯತೆ – ಪ್ರಧಾನ ಮಂತ್ರಿ ಕಾರ್ಯಾಲಯದ ಜಾಲತಾಣ 11 ಭಾಷೆಗಳಲ್ಲಿ ಪ್ರಕಟವಾಗುತ್ತಿದೆ.
5. 5. ಸಾರ್ವಜನಿಕರಿಗೆ ಪರಿಣಾಮ ಬೀರುವ ಪ್ರಧಾನ ನೀತಿಗಳನ್ನು ರೂಪಿಸುವ ಸಮಕಾಲೀನ ಮಾಹಿತಿಗಳು ಅಥವಾ ನಿರ್ಧಾರಗಳ ಪ್ರಕಟಣೆ.
ಸಂಬಂಧ ಪಟ್ಟ ಆಡಳಿತ ಸಚಿವಾಲಯ/ಇಲಾಖೆಗಳ ಜವಾಬ್ದಾರಿಯ ಪರಿಮಿತಿಯಲ್ಲಿ ಒಳಪಡುವ, ಅಪಾರ ಸಾರ್ವಜನಿಕರಿಗೆ ಪರಿಣಾಮ ಬೀರುವ ಪ್ರಮುಖ/ಪ್ರಧಾನ ನಿರ್ಧಾರ/ನೀತಿ/ನಿರ್ಣಯಗಳನ್ನು ರೂಪಿಸುವುದು.