ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ದೂರವಾಣಿಯಲ್ಲಿ ನೆದರ್‍ಲ್ಯಾಂಡ್ಸ್ ದೇಶದ ಪ್ರಧಾನ ಮಂತ್ರಿ
ಶ್ರೀ ಮಾರ್ಕ್ ರುಟ ಅವರೊಂದಿಗೆ ಮಾತನಾಡಿದರು
ಉಭಯ ನಾಯಕರು ಭಾರತ-ನೆದರ್‍ಲ್ಯಾಂಡ್ಸ್ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು, ಇದರಲ್ಲಿ ನೀರಿನ ಮೇಲಿನ ಕಾರ್ಯತಂತ್ರದ ಸಹಭಾಗಿತ್ವ, ಕೃಷಿಯ ಪ್ರಮುಖ ಕ್ಷೇತ್ರದಲ್ಲಿ ಸಹಕಾರ, ಹೈಟೆಕ್ ಮತ್ತು ಉದಯೋನ್ಮುಖ ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರದ ಸಾಮರ್ಥ್ಯದ ಬಗ್ಗೆ ಚರ್ಚಿಸಿದರು. ಉಭಯ ನಾಯಕರು ಭಾರತ-ಇಯು ಸಂಬಂಧಗಳು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಒಂದೇ ರೀತಿಯ ದೃಷ್ಟಿಕೋನಗಳು ಮತ್ತು ಸಹಕಾರ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ನಿಯಮಿತ ಉನ್ನತ ಮಟ್ಟದ ಭೇಟಿಗಳು ಮತ್ತು ಸಂವಾದಗಳೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಭಾರತ-ನೆದರ್‌ಲ್ಯಾಂಡ್‌ಗಳ ಸಂಬಂಧಗಳು ಮತ್ತಷ್ಟು ಗಾಢವಾಗಿವೆ. ಇಬ್ಬರು ಪ್ರಧಾನ ಮಂತ್ರಿಗಳ ನಡುವಿನ ಶೃಂಗಸಭೆಯ ಸಭೆಯು 09 ಏಪ್ರಿಲ್ 2021 ರಂದು ವರ್ಚುವಲ್ ರೂಪದಲ್ಲಿ ನಡೆಯಿತು ಮತ್ತು ಅಂದಿನಿಂದ ಇಬ್ಬರು ನಡುವೆ ನಿಯಮಿತ ಮಾತುಕತೆಗಳು ನಡೆಯುತ್ತಿವೆ. ವರ್ಚುವಲ್ ಶೃಂಗಸಭೆಯ ಸಮಯದಲ್ಲಿ ನೆದರ್‌ಲ್ಯಾಂಡ್‌ನೊಂದಿಗೆ ‘ನೀರಿನ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯತಂತ್ರದ ಪಾಲುದಾರಿಕೆ’ ಪ್ರಾರಂಭಿಸಲಾಯಿತು.
ಪ್ರಸಕ್ತ ವರ್ಷದಲ್ಲಿ, ಭಾರತ ಮತ್ತು ನೆದರ್‌ಲ್ಯಾಂಡ್ ಜಂಟಿಯಾಗಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ವರ್ಷಗಳ ಸ್ಮರಣಾರ್ಥವನ್ನು ಆಚರಿಸುತ್ತಿವೆ. ಈ ವಿಶೇಷ ಮೈಲಿಗಲ್ಲನ್ನು 2022 ಏಪ್ರಿಲ್ 4 ರಿಂದ 7ರವರೆಗೆ ನೆದರ್‌ಲ್ಯಾಂಡಿಗೆ ಭಾರತದ ರಾಷ್ಟ್ರಪತಿಗಳ ಔಪಚಾರಿಕ ಭೇಟಿಯೊಂದಿಗೆ ಆಚರಿಸಲಾಯಿತು.
*********
Always a pleasure speaking to you my dear friend @MinPres.
— Narendra Modi (@narendramodi) July 13, 2022
Our Strategic Partnership on Water, cooperation in agriculture and high-tech areas add new dimensions to our outstanding relationship.
Was also pleased to exchange views on other important regional and global issues. https://t.co/T7H4GD9gUW