Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾಫ್ಟ್‌ಬ್ಯಾಂಕ್ ಕಾರ್ಪೊರೇಶನ್‌ನ ಮಂಡಳಿಯ ನಿರ್ದೇಶಕರು ಮತ್ತು ಸಂಸ್ಥಾಪಕರಾದ ಶ್ರೀ ಮಸಯೋಶಿ ಸನ್ ಅವರೊಂದಿಗೆ ಪ್ರಧಾನ ಮಂತ್ರಿಯವರ ಮಾತುಕತೆ

ಸಾಫ್ಟ್‌ಬ್ಯಾಂಕ್ ಕಾರ್ಪೊರೇಶನ್‌ನ ಮಂಡಳಿಯ ನಿರ್ದೇಶಕರು ಮತ್ತು ಸಂಸ್ಥಾಪಕರಾದ ಶ್ರೀ ಮಸಯೋಶಿ ಸನ್ ಅವರೊಂದಿಗೆ ಪ್ರಧಾನ ಮಂತ್ರಿಯವರ ಮಾತುಕತೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 23 ಮೇ 2022 ರಂದು ಟೋಕಿಯೊದಲ್ಲಿ ಸಾಫ್ಟ್‌ಬ್ಯಾಂಕ್ ಕಾರ್ಪೊರೇಶನ್‌ನ ಮಂಡಳಿಯ ನಿರ್ದೇಶಕ ಮತ್ತು ಸಂಸ್ಥಾಪಕ ಶ್ರೀ ಮಸಯೋಶಿ ಸನ್ ಅವರನ್ನು ಭೇಟಿಯಾದರು. ಭಾರತದ ನವೋದ್ಯಮದ ವಲಯದಲ್ಲಿ ಸಾಫ್ಟ್‌ಬ್ಯಾಂಕ್‌ನ ಪಾತ್ರವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ತಂತ್ರಜ್ಞಾನ, ಇಂಧನ ಮತ್ತು ಹಣಕಾಸು ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಭಾರತದಲ್ಲಿ ಸಾಫ್ಟ್‌ಬ್ಯಾಂಕ್‌ನ ಭವಿಷ್ಯದ ಭಾಗವಹಿಸುವಿಕೆಯ ಕುರಿತು ಅವರು ಚರ್ಚಿಸಿದರು.

ಭಾರತದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಕೈಗೊಳ್ಳಲಾಗುತ್ತಿರುವ ವಿವಿಧ ಸುಧಾರಣೆಗಳ ಕುರಿತು ಅವರು ಚರ್ಚಿಸಿದರು.  ಭಾರತದಲ್ಲಿ ಹೂಡಿಕೆಯನ್ನು ಹೆಚ್ಚಿಸಬಹುದಾದ ನಿರ್ದಿಷ್ಟ ಪ್ರಸ್ತಾವನೆಗಳನ್ನು ಸಾಫ್ಟ್‌ಬ್ಯಾಂಕ್‌ನೊಂದಿಗೆ ಹಂಚಿಕೊಳ್ಳಲಾಗಿದೆ.

***