Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ನಿಖತ್ ಝರೀನ್ ರನ್ನು ಅಭಿನಂದಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಕ್ಕಾಗಿ ನಿಖತ್ ಝರೀನ್ ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೆ, ಅವರು ಕಂಚಿನ ಪದಕ ಗೆದ್ದ ಮೊನೀಶಾ ಮೌನ್ ಮತ್ತು ಪರ್ವೀನ್ ಹೂಡಾ ಅವರನ್ನೂ ಸಹ  ಅಭಿನಂದಿಸಿದ್ದಾರೆ. 
ಪ್ರಧಾನಮಂತ್ರಿ ಅವರು ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ,
“ನಮ್ಮ ಬಾಕ್ಸರ್‌ಗಳು ನಮಗೆ ಹೆಮ್ಮೆ ತಂದಿದ್ದಾರೆ! ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ನಿಖತ್ ಝರೀನ್ ಅವರಿಗೆ ಅಭಿನಂದನೆಗಳು. ಅದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಮೊನೀಶಾ ಮೌನ್ ಮತ್ತು ಪರ್ವೀನ್ ಹೂಡಾ ಅವರನ್ನು ನಾನು ಅಭಿನಂದಿಸುತ್ತೇನೆ’’. 

 

***