2016ರ ಸೆಪ್ಟೆಂಬರ್ 14 ಮತ್ತು 15ರಂದು ಭಾರತಕ್ಕೆ ಅಧಿಕೃತ ಕಾರ್ಯಕ್ರಮದ ಮೇಲೆ ಭೇಟಿ ನೀಡಿರುವ ಇಸ್ಲಾಮಿಕ್ ಗಣರಾಜ್ಯ ಆಪ್ಘಾನಿಸ್ತಾನದ ಅಧ್ಯಕ್ಷ ಘನತೆವೆತ್ತ ಡಾ. ಮೊಹಮದ್ ಅಷರಫ್ ಘನಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಭೇಟಿಯ ವೇಳೆ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದರು ಬಳಿಕ ಅವರನ್ನು ಇಂದು ರಾಷ್ಟ್ರಪತಿ ಭವನಕ್ಕೆ ಬರಮಾಡಿಕೊಳ್ಳಲಾಯಿತು.
ಭಾರತ ಪ್ರವಾಸದಲ್ಲಿರುವ ಅಧ್ಯಕ್ಷ ಘನಿ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 2015 ಡಿಸೆಂಬರ್ ಮತ್ತು ಈ ವರ್ಷ ಜೂನ್ ನಲ್ಲಿ ಅನುಕ್ರಮವಾಗಿ ಕಾಬೂಲ್ ಮತ್ತು ಹೆರಾತ್ ಗೆ ಭೇಟಿಯನ್ನು ಸ್ಮರಿಸಿದರು. ಪ್ರಧಾನಮಂತ್ರಿಯವರು ಎರಡೂ ಬಾರಿ ತಮಗೆ ನೀಡಿದ ಆತ್ಮೀಯ ಸ್ವಾಗತವನ್ನು ಪ್ರಸ್ತಾಪಿಸಿ, ಆ ಸಂದರ್ಭದಲ್ಲಿ ಮತ್ತು ಮೇ 2016ರಲ್ಲಿ ಥೆಹರೇನ್ ನಲ್ಲಿ ಮತ್ತು ಜೂನ್ 2016ರಲ್ಲಿ ತಾಷ್ಕೆಂಟ್ ನಲ್ಲಿ ಅಧ್ಯಕ್ಷರೊಂದಿಗೆ ನಡೆಸಿದ ಇತರ ಸಭೆಗಳಲ್ಲಿ ತಾವು ನಡೆಸಿದ ಫಲಪ್ರದ ಮಾತುಕತೆಯನ್ನು ನೆನಪಿಸಿಕೊಂಡರು.
ಇಬ್ಬರೂ ನಾಯಕರು ತಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಮತ್ತು ಸರ್ವಾಂಗೀಣ ಸಹಕಾರಕ್ಕೆ ಬಲ ನೀಡುತ್ತಿರುವ ಭಾರತ ಮತ್ತು ಆಪ್ಘಾನಿಸ್ತಾನದ ನಡುವೆ ಎಲ್ಲ ಮಟ್ಟದಲ್ಲಿ ನಿಯಮಿತ ಮತ್ತು ಆತ್ಮೀಯವಾಗಿ ನಡೆಯುತ್ತಿರುವ ಸಮಾಲೋಚನೆಯ ಬಗ್ಗೆ ತಮ್ಮ ಹರ್ಷ ವ್ಯಕ್ತಪಡಿಸಿದರು.
ಯಶಸ್ವೀ ರಾಜಕೀಯ, ಭದ್ರತೆ ಮತ್ತು ಆರ್ಥಿಕ ಪರಿವರ್ತನೆಗೆ ಆಫ್ಘಾನಿಸ್ತಾನ ಕೈಗೊಂಡಿರುವ ತನ್ನ ಪ್ರಯತ್ನಗಳು ಭಾರತ- ಆಪ್ಘಾನಿಸ್ತಾನ ದ್ವಿಪಕ್ಷೀಯ ಅಭಿವೃದ್ಧಿ ಸಹಕಾರಕ್ಕೆ ನೆರವಾಗಿವೆ ಎಂಬುದನ್ನು ನೆನಪಿಸಿಕೊಂಡ ಇಬ್ಬರೂ ನಾಯಕರು, ಪ್ರಮುಖ ಮೈಲಿಗಲ್ಲಾದ ಇತ್ತೀಚೆಗೆ ಪೂರ್ಣಗೊಂಡ ಸಂಸತ್ ಭವನ ಕಟ್ಟಡ ಮತ್ತು ಆಫ್ಘಾನಿಸ್ತಾನ- ಭಾರತ ಬಾಂಧವ್ಯ ಜಲಾಶಯದ ಬಗ್ಗೆಯೂ ಪ್ರಸ್ತಾಪಿಸಿದರು. ವಿಡಿಯೋ ಸಂವಾದದ ಮೂಲಕ 2016ರ ಆಗಸ್ಟ್ 22ರಂದು ಸ್ಟೋರೇ ಅರಮನೆಯನ್ನು ಜಂಟಿಯಾಗಿ ಉದ್ಘಾಟಿಸಲಾದ ವೇಳೆ ಪ್ರಧಾನಮಂತ್ರಿಯವರು ಆಫ್ಘನ್ ನ ತನ್ನ ಸೋದರ ಸೋದರಿಯರೊಂದಿಗೆ ಭಾರತದ 125 ಕೋಟಿ ಜನರೂ ನಿಂತಿರುವ ಸಂದೇಶದ ಮಹತ್ವವನ್ನು ಅಧ್ಯಕ್ಷರು ಪ್ರತಿಪಾದಿಸಿದರು.
ಏಕೀಕೃತ ಸಾರ್ವಭೌಮ ಪ್ರಜಾಪ್ರಭುತ್ವ, ಶಾಂತಿಯುತ, ಸ್ಥಿರ ಮತ್ತು ಶ್ರೀಮಂತ ಅಫ್ಘಾನಿಸ್ಥಾನಕ್ಕಾಗಿ ಭಾರತದ ಶಾಶ್ವತ ಬೆಂಬಲವನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಶಿಕ್ಷಣ, ಆರೋಗ್ಯ, ಕೃಷಿ, ಕೌಶಲ ಅಭಿವೃದ್ಧಿ, ಮಹಿಳಾ ಸಬಲೀಕರಣ, ಇಂಧನ, ಮೂಲಸೌಕರ್ಯ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಬಲಪಡಿಸುವಿಕೆ ಸೇರಿದಂತೆ ಸಾಮರ್ಥ್ಯವರ್ಧನೆ ಮತ್ತು ಸಾಮರ್ಥ್ಯ ನಿರ್ಮಾಣಕ್ಕೆ ಸಂಬಂಧಿಸಿದ ಆಫ್ಘಾನಿಸ್ತಾನದ ಮುಂದಿನ ಅಗತ್ಯಗಳಿಗೂ ನೆರವಾಗಲು ಭಾರತ ಸಿದ್ಧವಿರುವುದಾಗಿ ತಿಳಿಸಿದರು. ಈ ನಿಟ್ಟನಲ್ಲಿ ಪ್ರಧಾನಮಂತ್ರಿಯವರು, ಆಫ್ಘಾನಿಸ್ತಾನದ ಮಿತ್ರ ಮತ್ತು ಹತ್ತಿರದ ನೆರೆಯ ರಾಷ್ಟ್ರವಾಗಿ ಮತ್ತು ಅದರ ಜನತೆಗಾಗಿ ಭಾರತ 1 ಶತಕೋಟಿ ಅಮೆರಿನ್ ಡಾಲರ್ ಹಂಚಿಕೆ ಮಾಡುವುದಾಗಿ ತಿಳಿಸಿದರು. ಭಾರತದಿಂದ ಸುಲಭವಾಗಿ ಕೈಗೆಟಕುವ ಮತ್ತು ವಿಶ್ವದರ್ಜೆಯ ಔಷಧ ಪೂರೈಸಲು ಮತ್ತು ಪರಸ್ಪರ ಒಪ್ಪುವ ಸಾಧನಗಳಲ್ಲಿ ಸೌರ ಇಂಧನ ಸಹಕಾರಕ್ಕೂ ಪ್ರಧಾನಮಂತ್ರಿ ಪ್ರಸ್ತಾಪಿಸಿದರು.
ಇಬ್ಬರೂ ನಾಯಕರು ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು ಮತ್ತು ರಾಜಕೀಯ ಉದ್ದೇಶ ಸಾಧನೆಗಾಗಿ ವಲಯದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ನಿರಂತರವಾಗಿ ಬಳಸುತ್ತಿರುವುದರ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿದರು. ಈ ವಿದ್ಯಮಾನವು ವಲಯದ ಹಾಗೂ ವಲಯದಾಚಿನ ಶಾಂತಿ, ಸ್ಥಿರತೆ ಮತ್ತು ಪ್ರಗತಿಗೆ ದೊಡ್ಡ ಸವಾಲಾಗಿದೆ ಎಂಬುದನ್ನು ಒಪ್ಪಿಕೊಂಡರು. ಯಾವುದೇ ತಾರತಮ್ಯ ಇಲ್ಲದೆ ಎಲ್ಲ ಸ್ವರೂಪದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದು ಅಗತ್ಯ ಎಂದು ಪ್ರತಿಪಾದಿಸಿದ ಅವರು, ಭಾರತ ಮತ್ತು ಆಫ್ಘಾನಿಸ್ತಾನವನ್ನು ಗುರಿಯಾಗಿಟ್ಟುಕೊಂಡಿರುವ ಭಯೋತ್ಪಾದಕರಿಗೆ, ತಮ್ಮ ಅಭಯಾರಣ್ಯ ಸುರಕ್ಷಿತ ತಾಣವಾಗದಂತೆ ಮತ್ತು ಅವರಿಗೆ ಪ್ರಾಯೋಜಕತ್ವ, ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಸಂಬಂಧಿತರಿಗೆ ಆಗ್ರಹಿಸಿದರು. ಭಯೋತ್ಪಾದನೆ ತಡೆಯಲು ಹಾಗೂ ಭಾರತ- ಆಪ್ಘಾನಿಸ್ತಾನ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಒಪ್ಪಂದದಲ್ಲಿ ಉಲ್ಲೇಖಿಸಿರುವಂತೆ ಭದ್ರತೆ ಮತ್ತು ರಕ್ಷಣಾ ಸಹಕಾರದ ಸಂಕಲ್ಪವನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.
ವೈವಿಧ್ಯಮಯ ಕ್ಷೇತ್ರಗಳ ಸಹಕಾರ ಮತ್ತು ಹೆಚ್ಚಿನ ಮಾರ್ಗದರ್ಶನ ನೀಡುವ ತಮ್ಮ ಜಂಟಿ ಕಾರ್ಯ ಗುಂಪಿನ ಶಿಫಾರಸುಗಳ ಪರಾಮರ್ಶೆಗಾಗಿ ಭಾರತದ ವಿದೇಶಾಂಗ ಸಚಿವರು ಮತ್ತು ಆಫ್ಘಾನಿಸ್ತಾನದ ವಿದೇಶಾಂಗ ಸಚಿವರ ನೇತೃತ್ವದ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಮಂಡಳಿ ಶೀಘ್ರವೇ ಸಭೆ ಸೇರಲೂ ನಿರ್ಧರಿಸಲಾಯಿತು.
ಅಧ್ಯಕ್ಷರ ಭೇಟಿಯ ವೇಳೆ ಕೈದಿಗಳ ಹಸ್ತಾಂತರ ಒಪ್ಪಂದ, ನಾಗರಿಕ ಮತ್ತು ವಾಣಿಜ್ಯ ವಿಚಾರಗಳ ಸಹಕಾರ ಮತ್ತು ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಕ್ಕೆ ಬಳಸುವ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿದ ಬಗ್ಗೆ ನಾಯಕರು ತಮ್ಮ ಸಂತೃಪ್ತಿ ವ್ಯಕ್ತಪಡಿಸಿದರು. ವಲಯದ ಒಳಗೆ ಮತ್ತು ಹೊರಗೆ ಸಂಪರ್ಕವನ್ನು ತ್ವರಿತಗೊಳಿಸಲು ಚಹಾಬರ್ ಬಳಕೆ ಕುರಿತು ಆಫ್ಘಾನಿಸ್ತಾನ, ಭಾರತ ಮತ್ತು ಇರಾನ್ ನಡುವೆ 2016ರ ಮೇನಲ್ಲಿ ಅಂಕಿತ ಹಾಕಲಾದ ತ್ರಿಪಕ್ಷೀಯ ಒಪ್ಪಂದದ ಶೀಘ್ರ ಜಾರಿಯ ಬಗ್ಗೆಯೂ ಒತ್ತಿ ಹೇಳಲಾಯಿತು. ಈ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸೇರಿದಂತೆ ಪ್ರಮುಖ ಬಾಧ್ಯಸ್ಥರನ್ನು ಒಳಗೊಂಡ ಜಂಟಿ ವೇದಿಕೆ ಸಭೆ ಕರೆಯಲು ಇತ್ತೀಚೆಗೆ ಮೂರು ರಾಷ್ಟ್ರಗಳು ಕೈಗೊಂಡ ನಿರ್ಧಾರವನ್ನು ನಾಯಕರು ಪ್ರಶಂಸಿಸಿದರು.
ಆಫ್ಘಾನಸ್ತಾನದಲ್ಲಿ ತ್ವರಿತ ಪ್ರಗತಿ, ಶಾಂತಿ, ಮತ್ತು ಸ್ಥಿರತೆಗೆ ಪ್ರಾದೇಶಿಕ ಮತ್ತು ಇತರ ರಾಷ್ಟ್ರಗಳು ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳೊಂದಿಗೆ ಭಾರತ ಮತ್ತು ಆಪ್ಘಾನಿಸ್ತಾನ ಒಳಗೊಂಡ ಮಾತುಕತೆಯನ್ನು ಹೆಚ್ಚಿಸುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಭಾರತ-ಇರಾನ್-ಆಪ್ಘಾನಿಸ್ತಾನ ನಡುವಿನ ತ್ರಿಪಕ್ಷೀಯ ಮಾತುಕತೆಯ ಫಲಶ್ರುತಿಯನ್ನು ಪ್ರಶಂಸಿಸಿದ ಅವರು, ಈ ತಿಂಗಳಾಂತ್ಯದಲ್ಲಿ ನ್ಯೂಯಾರ್ಕ್ ನಲ್ಲಿ ಪುನಾರಂಭವಾಗುತ್ತಿರುವ ಭಾರತ-ಯುಎಸ್- ಆಫ್ಘಾನಿಸ್ತಾನ ನಡುವಿನ ಮಾತುಕತೆ ಎದಿರು ನೋಡುತ್ತಿರುವುದಾಗಿ ತಿಳಿಸಿದರು. ಆಫ್ಘಾನಿಸ್ತಾನ ಸರ್ಕಾರಕ್ಕೆ ಎಲ್ಲ ಅಗತ್ಯ ಮಾರ್ಗಗಳಲ್ಲಿ ನೆರವಾಗಲು ಭಾರತವು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಕಾರ್ಯಕ್ರಮ ಮುಂದುವರಿಸಲಿದೆ ಎಂದು ಪ್ರಧಾನಮಂತ್ರಿಯವರು ಅಧ್ಯಕ್ಷರಿಗೆ ತಿಳಿಸಿದರು.
ಈ ನಿಟ್ಟಿನಲ್ಲಿ ಏಷ್ಯಾ –ಇಸ್ತಾನ್ಬುಲ್ ಪ್ರಕ್ರಿಯೆ (ಎಚ್.ಓ.)ಯ ಪ್ರಮುಖ ಸಚಿವಮಟ್ಟದ ಸಮಾವೇಶ ಬರುವ ಡಿಸೆಂಬರ್ 4ರಂದು ಅಮೃತಸರದಲ್ಲಿ, ಅಕ್ಟೋಬರ್ 5ರಂದು ನಡೆಯುತ್ತಿರುವ ಬೃಸೆಲ್ಸ್ ಸಮಾವೇಶದ ಮಹತ್ವವನ್ನು ಒತ್ತಿ ಹೇಳಿದರು.
ಎಚ್.ಓ.ಎಗೆ ‘ಸವಾಲುಗಳನ್ನು ಎದುರಿಸಿ ಸಮೃದ್ಧಿ ಸಾಧಿಸಿ’ ಎಂಬ ಧ್ಯೆಯಕ್ಕೆ ಒಪ್ಪತವಿದೆ ಮತ್ತು : ಅಮೃತಸರದಲ್ಲಿನ ಆಯ್ಕೆಯಾಗಿರುವ ಸಂಪರ್ಕ ಮರುಸ್ಥಾಪಿಸುವ ಮಹತ್ವವನ್ನು ನಾಯಕರು ಪ್ರತಿಪಾದಿಸಿದರು. ಭಾರತ ಮತ್ತು ಆಫ್ಘಾನಿಸ್ತಾನ ದಕ್ಷಿಣ ಏಷ್ಯಾ ಮತ್ತು ಮಧ್ಯ ಏಷ್ಯಾ ನಡುವೆ ತಡೆರಹಿತ ಎರಡೂ ಕಡೆಯ ಸಂಪರ್ಕದ ತ್ವರಿತ ಸಾಕಾರಕ್ಕೆ ಬದ್ಧವಾಗಿರುವುದಾಗಿ ಭಾರತ ಮತ್ತು ಆಫ್ಘಾನಿಸ್ತಾನ ಒತ್ತಿ ಹೇಳಿದವು.
ಅಮೃತಸರದ ಸಚಿವ ಮಟ್ಟದ ಸಭೆಯ ಉದ್ಘಾಟನೆಗೆ ಆಗಮಿಸುವಂತೆ ಪ್ರಧಾನಮಂತ್ರಿಯವರು ಅಧ್ಯಕ್ಷರನ್ನು ಆಹ್ವಾನಿಸಿದರು. ಅಧ್ಯಕ್ಷರು ಈ ಆಹ್ವಾನ ಒಪ್ಪಿಕೊಂಡರು. ಅಧ್ಯಕ್ಷರು ಆಫ್ಘಾನಿಸ್ತಾನದಲ್ಲಿನ ಆರ್ಥಿಕ ಅವಕಾಶ ಮತ್ತು ಸಾಮರ್ಥ್ಯದ ಬಗ್ಗೆ ಭಾರತದ ಹಿರಿಯ ಕೈಗಾರಿಕೆ ಮತ್ತು ವಾಣಿಜ್ಯ ನಾಯಕರಿಗೆ ತಿಳಿಯ ಹೇಳಿದರು. ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣೆ ಸಂಸ್ಥೆಯಲ್ಲಿ ‘ಐದನೇ ತರಂಗ ರಾಜಕೀಯ ಹಿಂಸೆ ಮತ್ತು ಜಾಗತಿಕ ಭಯೋತ್ಪಾದನೆ.’ ಕುರಿತಂತೆ ಅಧ್ಯಕ್ಷರು ಆಯ್ದ ಕಾರ್ಯತಂತ್ರಾತ್ಮಕ ತಜ್ಞರ ಸಭೆಯನ್ನುದ್ದೇಶಿಸಿ ಭಾಷಣ ಮಾಡುವರು.
Glad to have met President @ashrafghani in Delhi. We had extensive talks on India-Afghanistan ties. @ARG_AFG pic.twitter.com/5EgOtwEXuN
— Narendra Modi (@narendramodi) September 14, 2016