ಹನುಮಾನ್ ಜಯಂತಿಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 16 ಏಪ್ರಿಲ್, 2022ರಂದು ಗುಜರಾತಿನ ಮೋರ್ಬಿಯಲ್ಲಿ 108 ಅಡಿ ಹನುಮಾನ್ ಪ್ರತಿಮೆಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅನಾವರಣಗೊಳಿಸಲಿದ್ದಾರೆ.
“ಹನುಮಾನ್ ಜೀ 4 ಧಾಮ್” (#Hanumanji4dham) ಯೋಜನೆಯ ಭಾಗವಾಗಿ ದೇಶದಾದ್ಯಂತ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲಾಗುತ್ತಿರುವ 4 ಪ್ರತಿಮೆಗಳಲ್ಲಿ ಇದು ಎರಡನೆಯದು. ಇದನ್ನು ಪಶ್ಚಿಮದಲ್ಲಿ ಮೊರ್ಬಿಯಲ್ಲಿರುವ ಪರಮ ಪೂಜ್ಯ ಬಾಪು ಕೇಶವಾನಂದ ಜೀ ಅವರ ಆಶ್ರಮದಲ್ಲಿ ಸ್ಥಾಪಿಸಲಾಗಿದೆ.
ಈ ಸರಣಿಯ ಮೊದಲ ಪ್ರತಿಮೆಯನ್ನು 2010ರಲ್ಲಿ ಉತ್ತರದಲ್ಲಿ ಶಿಮ್ಲಾದಲ್ಲಿ ಸ್ಥಾಪಿಸಲಾಯಿತು. ದಕ್ಷಿಣದಲ್ಲಿ ರಾಮೇಶ್ವರಂನಲ್ಲಿ ಪ್ರತಿಮೆಯ ಕೆಲಸವನ್ನು ಪ್ರಾರಂಭಿಸಲಾಗಿದೆ.
****