Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾಹಿಬ್ ಜಾದಾ ಜೋರಾವರ್ ಸಿಂಗ್  ಮತ್ತು ಸಾಹಿಬ್ ಜಾದಾ ಫತೇಹ್ ಸಿಂಗ್ ಅವರು ಹುತಾತ್ಮರಾದ ದಿನದ ಅಂಗವಾಗಿ ಡಿಸೆಂಬರ್ 26 ನ್ನು ‘ವೀರ್ ಬಾಲ್ ದಿವಸ್’ ಎಂದು ಘೋಷಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಶ್ರೀ ಗುರು ಗೋಬಿಂದ್ ಸಿಂಗ್ ಅವರ ಪ್ರಕಾಶ್ ಪೂರಭ್ ಶುಭ ಸಂದರ್ಭದಲ್ಲಿ ಸಾಹಿಬ್ ಜಾದಾ ಜೋರಾವರ್ ಸಿಂಗ್ ಮತ್ತು ಸಾಹಿಬ್ ಜಾದಾ ಫತೇಹ್ ಸಿಂಗ್  ಅವರು ಹುತಾತ್ಮರಾದ ದಿನದ ಸ್ಮರಣಾರ್ಥ ಈ ವರ್ಷದಿಂದ ಡಿಸೆಂಬರ್ 26ನ್ನು ‘ವೀರ್ ಬಾಲ್ ದಿವಸ್’ (ವೀರ ಬಾಲಕರ ದಿನ) ಎಂದು ಆಚರಿಸಲಾಗುತ್ತದೆ ಎಂದು ಘೋಷಿಸಿದರು. ಸರಣಿ ಟ್ವೀಟ್‌ ಗಳಲ್ಲಿ, ಪ್ರಧಾನಮಂತ್ರಿಯವರು;
” ಶ್ರೀ ಗುರು ಗೋಬಿಂದ್ ಸಿಂಗ್ ಅವರ ಪ್ರಕಾಶ ಪೂರಬ್ ನ ಪವಿತ್ರ ದಿನವಾದ ಇಂದು, ಈ ವರ್ಷದಿಂದ ಮೊದಲ್ಗೊಂಡು ಡಿಸೆಂಬರ್ 26ರಂದು   ‘ವೀರ ಬಾಲ್ ದಿವಸ್’ ಎಂದು ಆಚರಿಸಲಾಗುವುದು ಎಂದು ತಿಳಿಸಲು ಹೆಮ್ಮೆಪಡುತ್ತೇನೆ.  ಇದು ಸಾಹೀಬ್ ಜಾದೇಗಳ ಶೌರ್ಯಕ್ಕೆ  ಮತ್ತು ಅವರ ನ್ಯಾಯ ಶೋಧನೆಗೆ ಸೂಕ್ತ ಗೌರವವಾಗಿದೆ ಎಂದರು. 
 ‘ವೀರ ಬಾಲ್ ದಿವಸ್’ ಅನ್ನು ಸಾಹಿಬ್ ಜಾದಾ ಜೋರಾವರ್ ಸಿಂಗ್  ಮತ್ತು ಸಾಹಿಬ್ ಜಾದಾ ಫತೇಹ್ ಸಿಂಗ್ ಅವರನ್ನು ಗೋಡೆಯಲ್ಲಿ ಜೀವಂತವಾಗಿ ಸಮಾಧಿ ಮಾಡಿದ ಕಾರಣದಿಂದ ಹುತಾತ್ಮರಾದ ದಿನವಾಗಿದೆ. ಈ ಇಬ್ಬರು ಶ್ರೇಷ್ಠರು ಧರ್ಮದ ಉದಾತ್ತ ತತ್ವಗಳಿಂದ ವಿಮುಖರಾಗುವ ಬದಲು ಸಾವಿಗೆ ಶರಣಾದರು.
ಮಾತಾ ಗುರುಜಿ, ಶ್ರೀ ಗುರು ಗೋಬಿಂದ್ ಸಿಂಗ್ ಮತ್ತು 4 ಸಾಹಿಬ್ ಜಾದೆಗಳ ಶೌರ್ಯ ಮತ್ತು ಆದರ್ಶಗಳು ಲಕ್ಷಾಂತರ ಜನರಿಗೆ ಚೈತನ್ಯ ನೀಡುತ್ತವೆ. ಅವರು ಎಂದೂ ಅನ್ಯಾಯಕ್ಕೆ ತಲೆಬಾಗಲಿಲ್ಲ. ಅವರು ಸಮಗ್ರ ಮತ್ತು ಸಾಮರಸ್ಯದ ಜಗತ್ತನ್ನು ಕಲ್ಪಿಸಿಕೊಂಡಿದ್ದರು. ಅವರ ಬಗ್ಗೆ ಹೆಚ್ಚಿನ ಜನರು ತಿಳಿದುಕೊಳ್ಳುವುದು ಇಂದಿನ ಅಗತ್ಯವಾಗಿದೆ..” ಎಂದು ತಿಳಿಸಿದ್ದಾರೆ.

***