Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಗಸ್ಟ್ 28,2016ರಂದು ಆಕಾಶವಾಣಿಯಲ್ಲಿ ಪ್ರಸಾರಗೊಂಡ ಪ್ರಧಾನ ಮಂತ್ರಿಯವರ ಮನದ ಮಾತು (ಮನ್ ಕೀ ಬಾತ್ ) ಭಾಷಣ


ನನ್ನೊಲವಿನ ದೇಶವಾಸಿಗಳೇ, ನಮಸ್ಕಾರ. ನಾಳೆ ಆಗಸ್ಟ್ 29 ಹಾಕಿ ಆಟದ ಮೋಡಿಗಾರ, ಧ್ಯಾನ್ ಚಂದ್ ಜೀ ಅವರ ಹುಟ್ಟುಹಬ್ಬ. ಈ ದಿನವನ್ನು ದೇಶದೆಲ್ಲೆಡೆ ರಾಷ್ಟ್ರೀಯ ಕ್ರೀಡಾ ದಿವಸವಾಗಿ ಆಚರಿಸಲಾಗುತ್ತದೆ. ನಾನು ಧ್ಯಾನ್ ಚಂದ್ ಜೀ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವೆ ಹಾಗೂ ಈ ಸಂದರ್ಭದಲ್ಲಿ ನಿಮಗೆಲ್ಲರಿಗೂ ಅವರ ಕೊಡುಗೆಯನ್ನು ನೆನಪು ಮಾಡಿಕೊಡಲು ಬಯಸುವೆ. ಅವರು 1928ರಲ್ಲಿ, 1932ರಲ್ಲಿ, 1935ರಲ್ಲಿ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಹಾಕಿಯಲ್ಲಿ ಚಿನ್ನದ ಪದಕ ತಂದುಕೊಡುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದ್ದರು. ನಾವು, ಕ್ರಿಕೆಟ್ ಪ್ರೇಮಿಗಳೆಲ್ಲರೂ ಬ್ರಾಡ್ ಮನ್ ಅವರ ಹೆಸರನ್ನು ಕೇಳಿದ್ದೇವೆ. ಅವರು, ಧ್ಯಾನ್ ಚಂದ್ ಜೀ ಕುರಿತು, ಅವರು, ಗೋಲುಗಳನ್ನು , ರನ್ನುಗಳಂತೆ ಹೊಡೆಯುವರು ಎಂದು ಹೇಳಿದ್ದರು. ಧ್ಯಾನ್ ಚಂದ್ ಜೀ, ಕ್ರೀಡಾಪಟುವಿನ ಭಾವನೆ ಮತ್ತು ದೇಶಭಕ್ತಿಗೆ ಒಂದು ಜ್ವಲಂತ ನಿದರ್ಶನವಾಗಿದ್ದರು. ಒಮ್ಮೆ ಕೋಲ್ಕತ್ತಾದಲ್ಲಿ ಒಂದು ಪಂದ್ಯದ ಸಮಯದಲ್ಲಿ ಏದುರಾಳಿ ತಂಡದ ಆಟಗಾರ, ಧ್ಯಾನ್ ಚಂದ್ ಜೀ ಅವರ ತಲೆಗೆ ಹೊಡೆದುಬಿಟ್ಟ. ಆಗ ಆಟ ಮುಗಿಯಲು ಕೇವಲ 10 ನಿಮಿಷ ಬಾಕಿ ಇತ್ತು ಮತ್ತು ಧ್ಯಾನ್ ಚಂದ್ ಜೀ ಆ 10 ನಿಮಿಷದಲ್ಲಿ ಮೂರು ಗೋಲು ಹೊಡೆದುಬಿಟ್ಟರು ಹಾಗೂ ನಾನು ಏಟಿಗೆ ಪ್ರತೀಕಾರವನ್ನು ಗೋಲಿನಲ್ಲಿ ಕೊಟ್ಟುಬಿಟ್ಟೆ ಎಂದು ಅವರು ಹೇಳಿದರು.

ನನ್ನೊಲವಿನ ನಾಗರಿಕರೆ, ಮನದ ಮಾತಿನ ಸಮಯ ಬಂದ ಹಾಗೆ My Gov.in ನಲ್ಲಿ ಅಥವಾ ನರೇಂದ್ರ ಮೋದಿ App ನಲ್ಲಿ ಅನೇಕಾನೇಕ ಸಲಹೆಗಳು ಬರುತ್ತವೆ. ವೈವಿಧ್ಯಪೂರ್ಣವಾಗಿರುತ್ತವೆ. ಆದರೆ, ಈ ಸಲ ಬಹುತೇಕ ಪ್ರತಿಯೊಬ್ಬರೂ, ರಿಯೋ ಒಲಿಂಪಿಕ್ಸ್ ಕುರಿತು ಇಷ್ಟು ಆಸಕ್ತಿ, ಇಷ್ಟು ಜಾಗೃತಿ ಮತ್ತು ದೇಶದ ಪ್ರಧಾನಮಂತ್ರಿ ಮೇಲೆ, ಈ ಬಗ್ಗೆ ಸ್ವಲ್ಪ ಮಾತನಾಡಿ ಎನ್ನುವ ಒತ್ತಾಸೆಯನ್ನು, ನಾನು ಬಹಳ ಸಕಾರಾತ್ಮಕವಾಗಿ ನೋಡುತ್ತಿರುವೆ. ಕ್ರಿಕೆಟ್ ಹೊರತುಪಡಿಸಿ ಕೂಡಾ ಭಾರತದ ನಾಗರಿಕರಲ್ಲಿ ಇತರ ಕ್ರೀಡೆಗಳ ಬಗ್ಗೆ ಎಷ್ಟು ಪ್ರೀತಿ ಇದೆ. ಎಷ್ಟು ಜಾಗೃತಿ ಇದೆ ಮತ್ತು ಅದೆಷ್ಟು ಮಾಹಿತಿ ಇದೆ. ನನ್ನ ಪಾಲಿಗಂತೂ ಈ ಸಂದೇಶ ಓದುವುದೂ ಕೂಡಾ ಒಂದು ರೀತಿಯಲ್ಲಿ ದೊಡ್ಡ ಸ್ಫೂರ್ತಿಯ ಕಾರಣವಾಗಿಬಿಟ್ಟಿದೆ. ಒಬ್ಬ ಸಜ್ಜನ, ಅಜಿತ್ ಸಿಂಗ್, ನರೇಂದ್ರ ಮೋದಿ ಂಠಿಠಿನಲ್ಲಿ ಬರೆದಿದ್ದಾರೆ. ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದುಕೊಂಡು, ಹೆಣ್ಣು ಮಕ್ಕಳು, ದೇಶಕ್ಕೆ ಗೌರವ

ತಂದುಕೊಟ್ಟಿರುವುದರಿಂದ, ದಯಮಾಡಿ ಈ ಸಲ ಮನದ ಮಾತಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕ್ರೀಡೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯ ಕುರಿತು ಖಂಡಿತಾ ಮಾತನಾಡಿ. ಶ್ರೀಮಾನ್ ಸಚಿನ್ ಎನ್ನುವವರು ಬರೆದಿದ್ದಾರೆ. ಈ ಸಲದ ಮನದ ಮಾತಿನಲ್ಲಿ ಪಿ.ವಿ. ಸಿಂಧು, ಸಾಕ್ಷಿ ಹಾಗೂ ದೀಪಾ ಕರ್ಮಾಕರ್ ಕುರಿತು ಖಂಡಿತಾ ಪ್ರಸ್ತಾಪ ಮಾಡಿ ಎಂದು ನಿಮ್ಮಲ್ಲಿ ನನ್ನ ನಿವೇದನೆ ಎಂದಿದ್ದಾರೆ. ನಮಗೆ ಬಂದಿರುವ ಪದಕಗಳನ್ನೆಲ್ಲಾ ತಂದುಕೊಟ್ಟಿರುವವರು ಪುತ್ರಿಯರೇ. ನಮ್ಮ ಹೆಣ್ಣು ಮಕ್ಕಳು, ಅವರು ಯಾವುದೇ ರೀತಿಯಲ್ಲೂ, ಯಾರಿಗಿಂತಲೂ ಕಡಿಮೆ ಇಲ್ಲ ಎಂಬುದನ್ನು ಮತ್ತೊಮ್ಮೆ ಪುನಃ ಸಾಬೀತುಪಡಿಸಿದ್ದಾರೆ. ಈ ಪುತ್ರಿಯರ ಪೈಕಿ ಒಬ್ಬಾಕೆ ಉತ್ತರ ಭಾರತದವರು. ಮತ್ತೊಬ್ಬರು ದಕ್ಷಿಣ ಭಾರತದವರು ಹಾಗೂ ಇನ್ನೊಬ್ಬರು ಪೂರ್ವ ಭಾರತದವರು. ಅಂತೂ ಭಾರತದ ಯಾವುದಾದರೂ ಒಂದು ಭಾಗದವರು. ಇಡೀ ಭಾರತದ ಪುತ್ರಿಯರು, ದೇಶದ ಹೆಸರು ಬೆಳಗಿಸುವ ಹೊಣೆ ಹೊತ್ತುಕೊಂಡುಬಿಟ್ಟಿದ್ದಾರೆ ಎಂದು ಅನಿಸುತ್ತದೆ.

ಒಲಿಂಪಿಕ್ಸ್ ನಲ್ಲಿ ನಾವು ಇನ್ನೂ ಉತ್ತಮ ಸಾಧನೆ ತೋರಿಸಬಹುದಿತ್ತು ಎಂದು ಒಥಿ ಉov.iಟಿನಲ್ಲಿ, ಶಿಖರ್ ಠಾಕೂರ್ ಬರೆದಿದ್ದಾರೆ. ಆದರಣೀಯ ಮೋದಿ ಸರ್, ಎಲ್ಲಕ್ಕಿಂತ ಮೊದಲಿಗೆ ರಿಯೋದಲ್ಲಿ ನಾವು ಗೆದ್ದಿರುವ ಎರಡು ಪದಕಗಳಿಗಾಗಿ ಅಭಿನಂದನೆ. ಆದರೆ, ನಮ್ಮ ಸಾಧನೆ ನಿಜವಾಗಿಯೂ ಉತ್ತಮವಾಗಿತ್ತೆ ಎನ್ನುವ ಬಗ್ಗೆ ನಿಮ್ಮ ಗಮನ ಸೆಳೆಯಲು ಬಯಸುವೆ. ಇದಕ್ಕೆ ಉತ್ತರ ಇಲ್ಲ ಎನ್ನುವುದಾಗಿದೆ. ನಾವು ಕ್ರೀಡೆಗಳಲ್ಲಿ ಬಹುದೂರ ಪ್ರಯಾಣ ಮಾಡುವ ಅಗತ್ಯ ಇದೆ. ನಮ್ಮ ತಂದೆ – ತಾಯಿಗಳು ಇಂದಿಗೂ ಓದಿನ ಕಡೆ ಮತ್ತು ಅಕಾಡೆಮಿಕ್ಸ್ ಮೇಲೆ ಗಮನ ಹರಿಸುವುದಕ್ಕೆ ಒತ್ತು ನೀಡುತ್ತಾರೆ. ಸಮಾಜದಲ್ಲಿ ಇಂದಿಗೂ ಆಟವಾಡುವ ಸಮಯವೆಂದರೆ ಹಾಳಾಗಿ ಹೋಗುವುದು ಎಂದೇ ಪರಿಗಣಿತವಾಗಿದೆ. ನಮಗೆ ಈ ಆಲೋಚನೆಯನ್ನು ಬದಲಿಸುವ ಆಗತ್ಯ ಇದೆ. ಸಮಾಜಕ್ಕೆ ಪ್ರೇರಣೆಯ ಜರೂರತ್ ಇದೆ ಮತ್ತು ಈ ಕೆಲಸವನ್ನು ನೀವು ಬಿಟ್ಟು ಬೇರಾರಿಂದಲೂ ಒಳ್ಳೆಯ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಹಾಗೆಯೇ ಶ್ರೀಮಾನ್ ಸತ್ಯಪ್ರಕಾಶ್ ಮೆಹರಾ ಜಿ ಅವರು, ನರೇಂದ್ರ ಮೋದಿ ಂಠಿಠಿನಲ್ಲಿ ಬರೆದಿದ್ದಾರೆ – ” ಮನದ ಮಾತಿನಲ್ಲಿ ಪಠ್ಯೇತರ ಚಟುವಟಿಕೆಗಳ ಕಡೆ ಗಮನ ಕೇಂದ್ರೀಕರಿಸುವ ಅಗತ್ಯ ಇದೆ. ವಿಶೇಷವಾಗಿ ಮಕ್ಕಳು ಹಾಗೂ ಯುವಕರು, ಕ್ರೀಡೆ ಕುರಿತು ಆಸಕ್ತಿ ತೋರುವ ಬಗ್ಗೆ. ಇದೇ ರೀತಿಯ ಭಾವನೆಯನ್ನು ಸಾವಿರಾರು ಜನ ವ್ಯಕ್ತಪಡಿಸಿದ್ದಾರೆ. ನಮ್ಮ ಆಸೆಗೆ ಅನುರೂಪವಾಗಿ, ನಾವು ಪ್ರದರ್ಶನ ನೀಡಲಾಗಲಿಲ್ಲ ಎನ್ನುವ ಮಾತನ್ನಂತೂ, ನಿರಾಕರಿಸಲು ಬರುವುದಿಲ್ಲ. ಯಾರು ಆಟಗಾರರು ಭಾರತದಲ್ಲಿ ಯಾವ ರೀತಿ ಆಟವಾಡುತ್ತಿದ್ದರೋ, ಇಲ್ಲಿಯ ಆಟಗಳಲ್ಲಿ ಯಾವ ರೀತಿಯ ಸಾಧನೆ ತೋರುತ್ತಿದ್ದರೋ, ಅವರೂ ಕೂಡಾ ಅಲ್ಲಿನ ತನಕವೂ ತಲುಪಲು ಆಗಲಿಲ್ಲ ಎನ್ನುವುದೂ ಕೆಲವು ಆಟಗಳಲ್ಲಿ ಉಂಟಾಯಿತು ಮತ್ತು ಪದಕ ಪಟ್ಟಿಯಲ್ಲಿ ಕೇವಲ ಎರಡೇ ಪದಕಗಳು ಲಭಿಸಿವೆ. ಆದರೆ, ಪದಕ ಸಿಗದೇ ಇದ್ದರೂ ಸ್ವಲ್ಪ ಗಮನಿಸಿ ನೋಡಿದಾಗ ಅನೇಕ ಸ್ಪರ್ಧೆಗಳಲ್ಲಿ ಇದೇ ಮೊದಲ ಸಲವಾಗಿ ಭಾರತದ ಆಟಗಾರರು, ಸಾಕಷ್ಟು ಉತ್ತಮ ಕೌಶಲ್ಯವನ್ನೇ ತೋರಿಸಿದ್ದಾರೆ. ಈಗ ನೋಡಿ, ಶೂಟಿಂಗ್ ನಲ್ಲಿ ನಮ್ಮ ಅಭಿನವ್ ಬಿಂದ್ರಾ ಜೀ ನಾಲ್ಕನೇ ಸ್ಥಾನ ತಲುಪಿದರು ಹಾಗೂ ಅತಿ ಕಡಿಮೆ ಅಂತರದಲ್ಲಿ ಪದಕ ವಂಚಿತರಾದರು. ಜಿಮ್ನಾಸ್ಟಿಕ್ ನಲ್ಲಿಯೂ ದೀಪಾ ಕರ್ಮಾಕರ್ ಕೂಡಾ ಅದ್ಭುತ ನೈಪುಣ್ಯ ತೋರಿದರು, ನಾಲ್ಕನೇ ಸ್ಥಾನದಲ್ಲಿ ಉಳಿದರು. ಅತಿ ಚಿಕ್ಕ ಅಂತರದಲ್ಲಿ ಪದಕ ವಂಚಿತೆಯಾದರು. ಆದರೆ, ಅವರು ಒಲಿಂಪಿಕ್ಸ್ ಕ್ರೀಡೆಗಳಿಗಾಗಿ ಹಾಗೂ ಒಲಿಂಪಿಕ್ಸ್ ಅಂತಿಮ ಪಂದ್ಯದಲ್ಲಿ ಆರ್ಹತೆ ಪಡೆದ ಮೊದಲ ಭಾರತೀಯ ಹೆಣ್ಣುಮಗಳು ಎನ್ನುವ ಸಂಗತಿಯನ್ನು ನಾವು ಹೇಗೆ ಮರೆಯಲು ಸಾಧ್ಯ? ಸ್ವಲ್ಪ ಇದೇ ರೀತಿ ಟೆನ್ನಿಸ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಸಂಗಡವೂ ಹೀಗೆಯೇ ಆಯಿತು. ಅಥ್ಲೆಟಿಕ್ಸ್ ನಲ್ಲಿ ನಾವು ಈ ಸಲ ಉತ್ತಮ ಪ್ರದರ್ಶನ ನೀಡಿದ್ದೇವೆ. ಪಿ.ಟಿ. ಉಷಾ ನಂತರ ಮೊದಲ ಸಲ ‘ ಲಲಿತಾ ಬಾಬರ್ ‘ ಟ್ರ್ಯಾಕ್ ಫೀಲ್ಡ್ಸ್ ಫೈನಲ್ ಗೆ ಅರ್ಹತೆ ಪಡೆದರು. 36 ವರ್ಷಗಳ ನಂತರ ಮಹಿಳಾ ಹಾಕಿ ತಂಡ, ಒಲಿಂಪಿಂಕ್ಸ್ ವರೆಗೆ ತಲುಪಿದ ಸಂಗತಿ ತಿಳಿದು ನಿಮಗೆ ಸಂತೋಷವಾದೀತು. ಕಳೆದ 36 ವರ್ಷಗಳಲ್ಲಿ ಮೊದಲ ಸಲ ಪುರುಷರ ಹಾಕಿ ತಂಡ ನಾಕೌಟ್ ಹಂತದವರೆಗೆ, ತಲುಪುವಲ್ಲಿ , ಯಶಸ್ಸು ಗಳಿಸಿತ್ತು. ನಮ್ಮ ತಂಡ ಸಾಕಷ್ಟು ಸಶಕ್ತವಾಗಿದೆ ಹಾಗೂ ಮೋಜಿನ ಸಂಗತಿಯೆಂದರೆ, ಚಿನ್ನದ ಪದಕ ಗೆದ್ದ ಅಂರ್ಜೆಂಟಿನಾ ತಂಡ, ಇಡೀ ಟೂರ್ನಮೆಂಟ್ ನಲ್ಲಿ ಒಂದೇ ಒಂದು ಪಂದ್ಯದಲ್ಲಿ ಸೋಲನ್ನು ಅನುಭವಿಸಿತು, ಮತ್ತು ಆ ಪರಾಭವ ಉಂಟು ಮಾಡಿದವರು ಯಾರು? ಭಾರತೀಯ ಆಟಗಾರರು. ಮುಂದಿನ ಸಮಯ ನಿಶ್ಚಿತವಾಗಿಯೂ ನಮಗೆ ಒಳ್ಳೆಯದನ್ನು ತರಲಿದೆ.

ಬಾಕ್ಸಿಂಗ್ ನಲ್ಲಿ , ವಿಕಾಸ್ ಕೃಷ್ಣ ಯಾದವ್ , ಕ್ವಾರ್ಟರ್ ಫೈನಲ್ಸ್ ವರೆಗೆ ತಲುಪಿದರು. ಆದರೆ, ಕಂಚಿನ ಪದಕ ಗಳಿಸಲು ಆಗಲಿಲ್ಲ. ಇಂತಹ ಇನ್ನೂ ಅನೇಕ ಕ್ರೀಡಾಪಟುಗಳಿದ್ದಾರೆ. ಉದಾಹರಣೆಗೆ ಅಧಿತಿ ಅಶೋಕ್, ದತ್ತು ಬೋಪ್ನಲ್, ಅಥನು ದಾಸ್ ಇವರಂತೆ ಅನೇಕರ ಪ್ರದರ್ಶನ ಉತ್ತಮವಾಗಿತ್ತು. ಆದರೆ, ನನ್ನೊಲವಿನ ನಾಗರಿಕರೆ ನಾವು ಮಾಡುವುದು ಬಹಳ ಇದೆ. ಆದರೆ, ಇಲ್ಲಿಯವರೆಗೆ ಮಾಡಿಕೊಂಡು ಬಂದಿದ್ದನ್ನೇ ಮಾಡುತ್ತಿದ್ದರೆ, ಪ್ರಾಯಶಃ ನಾವು ನಿರಾಶರಾಗುತ್ತೇವೆ. ನಾನು ಒಂದು ಸಮಿತಿ ರಚನೆಯ ಘೋಷಣೆ ಮಾಡಿರುವೆ. ಭಾರತ ಸರ್ಕಾರದ ಒಳಗೆ ಇದರ ಆಳಕ್ಕೆ ಹೋಗಲಾಗುವುದು. ಜಗತ್ತಿನಲ್ಲಿ ಯಾವ ಯಾವ ಕ್ರೀಡಾಭ್ಯಾಸಗಳು ನಡೆಯುತ್ತಿವೆಯೋ, ಅವುಗಳ ಅಧ್ಯಯನ ಮಾಡಲಾಗುತ್ತದೆ. ನಾವು ಉತ್ತಮವಾಗಿ ಏನನ್ನು ಮಾಡಲು ಸಾಧ್ಯವೋ, ಅದರ ಮಾರ್ಗನಕ್ಷೆ ರೂಪಿಸಲಾಗುತ್ತದೆ.

2020, 2024, 2028 ಇಲ್ಲಿಯತನಕ ಯೋಚಿಸುವಷ್ಠು ನಾವು ಯೋಜನೆ ರೂಪಿಸಬೇಕಾಗಿದೆ. ಇಂತಹುದೇ ಸಮಿತಿಗಳನ್ನು ರಚಿಸಿ ಎಂದು ನಾನು ರಾಜ್ಯ ಸರ್ಕಾರಗಳನ್ನು ಆಗ್ರಹಪಡಿಸುವೆ ಮತ್ತು ಕ್ರೀಡಾ ಜಗತ್ತಿನಲ್ಲಿ ನಾವು ಏನು ಮಾಡಬಹುದು, ನಮ್ಮ ಪ್ರತಿಯೊಂದು ರಾಜ್ಯವೂ ಏನು ಬಾಡಬಲ್ಲದು? ರಾಜ್ಯಗಳು ಒಂದೆರಡು ಆಟಗಳನ್ನು ಆರಿಸಿಕೊಳ್ಳಲಿ, ಅವಕ್ಕೆ ಏನು ಬಲ ತುಂಬಬಹುದು ಎಂಬುದನ್ನು ಆಲೋಚಿಸಲಿ.

ನಾನು ಕ್ರೀಡಾಲೋಕಕ್ಕೆ ಸಂಬಂಧಪಟ್ಟ ಸಂಘಗಳೂ ನಿಷ್ಪಕ್ಷಪಾತವಾಗಿ ಮತ್ತು ಭಾರತದ ಪ್ರತಿಯೊಬ್ಬ ಪೌರನೂ ಅವರಿಗೆ ಯಾವ ಕ್ರೀಡೆಯಲ್ಲಿ ಅಭಿರುಚಿ ಇದೆಯೋ, ಅದರ ಬಗ್ಗೆ ನನಗೆ ನರೇಂದ್ರ ಮೋದಿ ಂಠಿಠಿನಲ್ಲಿ ಸಲಹೆ ಕಳುಹಿಸಿ ಎಂದು ಆಗ್ರಹಪಡಿಸುವೆ. ಸರ್ಕಾರಕ್ಕೆ ಬರೆಯಿರಿ, ಕ್ರೀಡಾ ಸಂಘಗಳು ಚರ್ಚಿಸಿ ತಮ್ಮ ಮನವಿ ಪತ್ರವನ್ನು ಸಲ್ಲಿಸಲಿ. ರಾಜ್ಯ ಸರ್ಕಾರಗಳು ಚರ್ಚಿಸಿ ತಮ್ಮ ಸಲಹೆಗಳನ್ನು ಕಳುಹಿಸಲಿ. ನಾವು ಸಂಪೂರ್ಣ ತಯಾರಿ ನಡೆಸೋಣ ಹಾಗೂ ನಾವು 125 ಕೋಟಿ ದೇಶವಾಸಿಗಳು ಅದರಲ್ಲಿ ಶೇಕಡಾ 65ರಷ್ಟು ಯುವ ಜನಸಂಖ್ಯೆಯ ದೇಶ ಕ್ರೀಡಾ ಜಗತ್ತಿನಲ್ಲಿ ಉತ್ಕೃಷ್ಟ ಸ್ಥಿತಿ ಪಡೆಯಲಿ ಎಂಬ ಸಂಕಲ್ಪದೊಡನೆ ಮುನ್ನಡೆಯಬೇಕಾಗಿದೆ.

ನನ್ನೊಲವಿನ ಪೌರರೇ, ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ. ನಾನು ಅನೇಕ ವರ್ಷಗಳಿಂದಲೂ ಶಿಕ್ಷಕರ ದಿನದಂದು ವಿದ್ಯಾರ್ಥಿಗಳೊಡನೆ ಸಾಕಷ್ಟು ಸಮಯ ಕಳೆಯುತ್ತಾ ಬಂದಿರುವೆ. ಒಬ್ಬ ವಿದ್ಯಾರ್ಥಿಯಂತೆ ಸಮಯ ಕಳೆಯುತ್ತಿದ್ದೆ. ಈ ಪುಟ್ಟ ಪುಟ್ಟ ಬಾಲಕರಿಂದಲೂ ನಾನು ಬಹಳಷ್ಟು ಕಲಿಯುತ್ತಿದ್ದೆ. ನನ್ನ ಪಾಲಿಗೆ ಸೆಪ್ಟೆಂಬರ್ 5 ಶಿಕ್ಷಕರ ದಿನವೂ ಹೌದು ಮತ್ತು ನನಗೆ ಶಿಕ್ಷಣ ದಿವಸವೂ ಆಗಿತ್ತು. ಆದರೆ, ಈ ಸಲ ನನಗೆ ಜಿ – 20 ಶೃಂಗಸಭೆಗೆ ಹೋಗಬೇಕಾಗಿದೆ. ಆದುದರಿಂದ ಇಂದು ಮನದ ಮಾತಿನಲ್ಲೇ ನನ್ನ ಈ ಭಾವನೆಯನ್ನು ಪ್ರಕಟಿಸೋಣ ಎಂದು ನಾನು ಮನಸ್ಸು ಮಾಡಿಬಿಟ್ಟೆ.

ಜೀವನದಲ್ಲಿ ತಾಯಿಗಿರುವಷ್ಟೇ ಸ್ಥಾನ ಶಿಕ್ಷಕರಿಗೂ ಇದೆ ಮತ್ತು ತಮಗಿಂತ ತಮ್ಮವರ ಚಿಂತೆ ಮಾಡುವ ಶಿಕ್ಷಕರನ್ನೂ ನಾವು ನೋಡಿದ್ದೇವೆ. ಅವರು ತಮ್ಮ ಶಿಷ್ಯಕೋಟಿಗಾಗಿ, ತಮ್ಮ ವಿದ್ಯಾರ್ಥಿಗಳಿಗಾಗಿ, ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟುಬಿಡುವರು. ಈ ದಿನಗಳಲ್ಲಿ ರಿಯೋ ಒಲಿಂಪಿಕ್ಸ್ ನಂತರ ನಾಲ್ಕೂ ದಿಕ್ಕುಗಳಲ್ಲಿ ಪುಲ್ಲೇಲ ಗೋಪಿಚಂದ್ ಜೀ ಅವರನ್ನು ಕುರಿತೇ ಚರ್ಚೆಯಾಗುತ್ತಿದೆ. ಅವರು ಆಟಗಾರರೇನೋ ಹೌದು. ಆದರೆ, ಅವರನ್ನು ಅದಕ್ಕಿಂತ ಹೆಚ್ಚಾಗಿ ಒಬ್ಬ ಉತ್ತಮ ಶಿಕ್ಷಕರ ರೂಪದಲ್ಲಿ ನೋಡುತ್ತಿರುವೆ ಮತ್ತು ಶಿಕ್ಷಕರ ದಿನದಂದು ಪುಲ್ಲೇಲ ಗೋಪಿಚಿಂದ್ ಜೀ ಅವರ ತಪಸ್ಸಿಗಾಗಿ, ಕ್ರೀಡೆಗೆ ಪ್ರತಿಯಾಗಿ, ಅವರ ಸಮರ್ಪಣೆಗೆ ಹಾಗೂ ತಮ್ಮ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಆನಂದ ಕಾಣುವ ಅವರ ವಿಧಾನಕ್ಕೆ ನಾನು ನಮಿಸುವೆ. ನಮ್ಮೆಲ್ಲರ ಜೀವನದಲ್ಲಿ ಶಿಕ್ಷಕರ ಕೊಡುಗೆ ಸದಾಕಾಲ ಅನುಭವಕ್ಕೆ ಬರುತ್ತದೆ. ಸೆಪ್ಟೆಂಬರ್ 5 ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾಗಿದೆ ಮತ್ತು ದೇಶ ಅದನ್ನು ಶಿಕ್ಷಕರ ದಿನದ ರೂಪದಲ್ಲಿ ಆಚರಿಸುತ್ತಿದೆ. ಅವರು ಜೀವನದಲ್ಲಿ ಮತ್ತಾವುದೇ ಉನ್ನತ ಸ್ಥಾನಕ್ಕೆ ಏರಿದರೂ ಅವರು ತಮ್ಮಷ್ಟಕ್ಕೆ ತಾವು ಯಾವಾಗಲೂ ಶಿಕ್ಷಕರಾಗಿಯೇ ಬದುಕುವ ಪ್ರಯತ್ನ ನಡೆಸಿದರು. ಅಷ್ಟೇ ಎಲ್ಲ, ಅವರು ಸದಾ ಹೇಳುತ್ತಿದ್ದರು – ” ಯಾವ ಶಿಕ್ಷಕನ ಒಳಗೆ ವಿದ್ಯಾರ್ಥಿ ಆದವನು ಎಂದಿಗೂ ಸಾಯುವುದಿಲ್ಲವೋ ಆತನೇ ಉತ್ತಮ ಶಿಕ್ಷಕ ಎನಿಸಿಕೊಳ್ಳುತ್ತಾನೆ ಎಂದು ” ಎಂದರು.

ರಾಷ್ಟ್ರಪತಿ ಹುದ್ದೆಗೆ ಏರಿದ ನಂತರವೂ ಶಿಕ್ಷಕನ ರೂಪದಲ್ಲಿ ಬದುಕುವ ಮತ್ತು ಶಿಕ್ಷಕನ ಮನಸ್ಸಿನಂತೆ ತಮ್ಮೊಳಗೆ ವಿದ್ಯಾರ್ಥಿಯನ್ನು ಜೀವಂತ ಇಟ್ಟುಕೊಂಡ ಈ ಅದ್ಭುತ ಜೀವನವನ್ನು ಡಾ. ರಾಧಾಕೃಷ್ಣನ್ ಜೀ ಬಾಳಿ ತೋರಿಸಿಕೊಟ್ಟರು.
ನಾನು ಆಗಾಗ ಯೋಚಿಸುವೆ, ನನ್ನ ಶಿಕ್ಷಕರ ಬಹಳಷ್ಟು ಕಥೆಗಳು ನನಗೆ ಇನ್ನೂ ನೆನಪಿವೆ. ಯಾಕೆಂದರೆ ನನ್ನ ಸಣ್ಣ ಹಳ್ಳಿಯಲ್ಲಿ ಅವರೇ ನಮಗೆ ಹೀರೋನಂತೆ ಕಾಣಿಸುತ್ತಿದ್ದರು. ಆದರೆ, ಇಂದಿಗೂ ನನಗೆ ಪ್ರತಿ ತಿಂಗಳು ನನ್ನ ಒಬ್ಬ ಶಿಕ್ಷಕರಿಂದ ನನಗೆ ಪತ್ರ ಬರುತ್ತದೆ. ಈಗ ಅವರಿಗೆ 90 ವರ್ಷ ವಯಸ್ಸಾಗಿಬಿಟ್ಟಿದೆ. ಇಂದು ನಾನು ಇದನ್ನು ಬಹಳ ಸಂತೋಷದಿಂದ ಹೇಳಬಯಸುವೆ. ಅವರು ಕೈಯಲ್ಲಿ ಬರೆದ ಪತ್ರ ಬರುತ್ತದೆ. ಇಡೀ ತಿಂಗಳಲ್ಲಿ ಅವರು ಓದಿದ ಪುಸ್ತಕದ ಕುರಿತು ಅದರಲ್ಲಿ ಪ್ರಸ್ತಾಪ ಇರುತ್ತದೆ. ಉಲ್ಲೇಖಗಳು ಇರುತ್ತವೆ. ಅಷ್ಟೇ ಅಲ್ಲ, ಇಡೀ ತಿಂಗಳಲ್ಲಿ ನಾನು ಏನು ಮಾಡಿದೆ, ಅವರ ದೃಷ್ಟಿಯಲ್ಲಿ ಅದು ಸರಿಯಾಗಿ ಇತ್ತೇ, ಇಲ್ಲವೇ ಎನ್ನುವ ಸಂಗತಿಗಳನ್ನು ತರಗತಿಯಲ್ಲಿ ಅವರು ನನಗೆ ಪಾಠ ಮಾಡುತ್ತಿದ್ದ ರೀತಿಯಲ್ಲೇ ತಿಳಿಸಿ ಹೇಳುವರು. ಒಂದು ರೀತಿಯಲ್ಲಿ ನಾನು ಇವತ್ತಿಗೂ ಒಂದು ರೀತಿಯ ಅoಡಿಡಿesಠಿoಟಿಜeಟಿಛಿe ಅouಡಿse ಮಾಡುತ್ತಿರುವೆ. ಅಷ್ಟೇ ಅಲ್ಲ 90 ವರ್ಷಗಳ ಈ ಇಳಿ ವಯಸ್ಸಿನಲ್ಲಿ ಅವರ ಬರವಣಿಗೆ ಶೈಲಿ ಅದೆಷ್ಟು ಸುಂದರ ಅಕ್ಷರಗಳಲ್ಲಿ ಬರೆಯುವರು ಎಂದು ನನಗೆ ಇಂದಿಗೂ ವಿಸ್ಮಯ ಉಂಟಾಗುತ್ತದೆ. ನನ್ನ ಬರವಣಿಗೆ ಶೈಲಿಯಂತೂ ಬಹಳವೇ ಕೆಟ್ಟದಾಗಿ ಇರುತ್ತದೆ. ಈ ಕಾರಣದಿಂದಾಗಿ ನಾನು ಬೇರೆ ಯಾರದ್ದಾದರೂ ಒಳ್ಳೆಯ ಬರವಣಿಗೆ ನೋಡಿದಾಗ ನನಗೆ ಅವರ ಮೇಲೆ ಆದರ ಬಹಳವೇ ಹೆಚ್ಚಾಗಿಬಿಡುತ್ತದೆ. ನನಗೆ ಆಗುವ ಇಂತಹ ಅನುಭವ ನಿಮಗೂ ಆಗಲಿಕ್ಕೆ ಸಾಕು. ನಿಮ್ಮ ಶಿಕ್ಷಕರಿಂದ ನಿಮ್ಮ ಜೀವನದಲ್ಲಿ ಏನಾದರೂ ಒಳಿತಾಗಿದ್ದರೆ, ಅದನ್ನು ನೀವು ಜಗತ್ತಿಗೆ ತಿಳಿಸಿದರೆ ಆಗ ಶಿಕ್ಷಕರನ್ನು ನೋಡುವ ವಿಧಾನದಲ್ಲಿ ಬದಲಾವಣೆ ಬರುತ್ತದೆ. ಒಂದು ರೀತಿಯ ಗೌರವ ಹುಟ್ಟುತ್ತದೆ ಮತ್ತು ಸಮಾಜದಲ್ಲಿ ನಮ್ಮ ಶಿಕ್ಷಕರ ಕುರಿತು ಗೌರವ ಹೆಚ್ಚಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಆಗಿದೆ. ನೀವು ನರೇಂದ್ರ ಮೋದಿ ಂಠಿಠಿನಲ್ಲಿ ನಿಮ್ಮ ಶಿಕ್ಷಕರ ಜತೆಗಿನ ಭಾವಚಿತ್ರ ಇದ್ದರೆ, ನಿಮ್ಮ ಶಿಕ್ಷಕರೊಂದಿಗಿನ ಘಟನೆ ಇದ್ದರೆ, ನಿಮ್ಮ ಶಿಕ್ಷಕರ ಯಾವುದೇ ಸ್ಫೂರ್ತಿದಾಯಕ ಮಾತಿದ್ದರೆ, ನೀವು ಖಂಡಿತಾ ಹಂಚಿಕೊಳ್ಳಿ. ನೋಡಿ, ದೇಶದಲ್ಲಿ ಶಿಕ್ಷಕರ ಕೊಡುಗೆಯನ್ನು ವಿದ್ಯಾರ್ಥಿಗಳ ದೃಷ್ಟಿಯಲ್ಲಿ ನೋಡುವುದು ಕೂಡಾ, ತನ್ನಷ್ಟಕ್ಕೆ ಬಹಳ ಮೌಲ್ಯಯುತವಾಗಿರುತ್ತದೆ.

ನನ್ನೊಲವಿನ ನಾಗರಿಕರೆ, ಇನ್ನು ಕೆಲವೇ ದಿನಗಳಲ್ಲಿ ಗಣೇಶೋತ್ಸವ ಬರಲಿದೆ. ಗಣಶ್ ಜೀ ವಿಘ್ನ ನಿವಾರಕ ಹಾಗೂ ನಮ್ಮ ದೇಶ, ನಮ್ಮ ಸಮಾಜ, ನಮ್ಮ ಪರಿವಾರ, ನಮ್ಮ ಪ್ರತಿಯೊಬ್ಬ ವ್ಯಕ್ತಿ, ಅವರೆಲ್ಲರ ಜೀವನ ನಿರ್ವಿಘ್ನವಾಗಿ ಇರಲಿ ಎಂದು ನಾವೆಲ್ಲಾ ಅಪೇಕ್ಷಿಸೋಣ. ಆದರೆ, ಗಣೇಶೋತ್ಸವದ ಮಾತು ಬಂದಾಗ ಲೋಕಮಾನ್ಯ ತಿಲಕರ ನೆನಪಾಗುವುದು ಬಹಳವೇ ಸ್ವಾಭಾವಿಕ. ಸಾರ್ವಜನಿಕ ಗಣೇಶೋತ್ಸವದ ಪರಂಪರೆ ಲೋಕಮಾನ್ಯ ತಿಲಕ್ ಜೀ ಅವರ ದೇಣಿಗೆಯಾಗಿದೆ. ಸಾರ್ವಜನಿಕ ಗಣೇಶೋತ್ಸವದ ಮೂಲಕ ಅವರು ಈ ಧಾರ್ಮಿಕ ಸಂದರ್ಭವನ್ನು , ರಾಷ್ಟ್ರ ಜಾಗೃತಿಯ ಹಬ್ಬವನ್ನಾಗಿ ಮಾಡಿಬಿಟ್ಟರು. ಸಮಾಜ ಸಂಸ್ಕಾರದ ಹಬ್ಬ ಮಾಡಿದರು ಮತ್ತು ಸಾರ್ವಜನಿಕ ಗಣೇಶೋತ್ಸವದ ಮೂಲಕ , ಸಮಾಜ ಜೀವನ ತಟ್ಟುವ ಪ್ರಶ್ನೆಗಳ ವಿಸ್ತೃತ ಚರ್ಚೆಯಾಗಲಿ, ಸಮಾಜಕ್ಕೆ ಹೊಸ ಓಜಸ್ಸು, ಹೊಸ ತೇಜಸ್ಸು ನೀಡುವಂತಹ ಕಾರ್ಯಕ್ರಮಗಳು ರೂಪಿತಗೊಳ್ಳಲಿ ಮತ್ತು ಇದರೊಟ್ಟಿಗೆ ಅವರು ನೀಡಿದ ‘ ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ‘ ಎಂಬ ಮಾತು ಕೇಂದ್ರ ಬಿಂದುವಾಗಿರಲಿ. ಸ್ವಾತಂತ್ರ್ಯ ಆಂದೋಲನಕ್ಕೆ ಶಕ್ತಿ ಬರಲಿ ಎನ್ನುವ ಉದ್ದೇಶ ಅವರದ್ದಾಗಿತ್ತು. ಇವತ್ತಿಗೂ ಕೇವಲ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ, ಭಾರತದ ಮೂಲೆ ಮೂಲೆಯಲ್ಲೂ ಸಾರ್ವಜನಿಕ ಗಣೇಶೋತ್ಸವ ನಡೆಯಲು ಆರಂಭಿಸಿದೆ. ಎಲ್ಲಾ ಯುವಕರೂ ಇದರ ವ್ಯವಸ್ಥೆಗೆ ಸಾಕಷ್ಟು ಸಿದ್ಧತೆ ಮಾಡುತ್ತಾರೆ. ಬಹಳ ಉತ್ಸಾಹವೂ ಇರುತ್ತದೆ ಮತ್ತು ಕೆಲವರು ಇಂದಿಗೂ ಲೋಕಮಾನ್ಯ ತಿಲಕ್ ಜೀ ಯಾವ ಒಂದು ಭಾವನೆ ತುಂಬಿದ್ದರೋ, ಅದನ್ನು ಅನುಸರಿಸಲು ಸಂಪೂರ್ಣ ಪ್ರಯತ್ನವನ್ನು ಮಾಡಿರುವರು. ಸಾರ್ವಜನಿಕ ವಿಷಯಗಳ ಕುರಿತು ಚರ್ಚೆ ನಡೆಸುವರು. ಪ್ರಬಂಧ ಸ್ಪರ್ಧೆ ಏರ್ಪಡಿಸುವರು, ರಂಗೋಲಿ ಸ್ಪರ್ಧೆ ನಡೆಸುವರು. ಸ್ತಬ್ಧ ಚಿತ್ರಗಳಲ್ಲಿ ಕೂಡಾ ಸಮಾಜವನ್ನು ತಟ್ಟುವ ವಿಷಯಗಳನ್ನು ಕುರಿತು ಬಹಳ ಕಲಾತ್ಮಕ ರೀತಿಯಲ್ಲಿ ಜಾಗೃತಿ ಮೂಡಿಸುವರು. ಒಂದು ರೀತಿಯಲ್ಲಿ ಜನಶಿಕ್ಷಣದ ದೊಡ್ಡ ಆಂದೋಲನ, ಸಾರ್ವಜನಿಕ ಗಣೇಶೋತ್ಸವದ ಮೂಲಕ ನಡೆಯುತ್ತದೆ. ಲೋಕಮಾನ್ಯ ತಿಲಕ್ ಜೀ ನಮಗೆ ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂಬ ಸ್ಫೂರ್ತಿ ಮಂತ್ರ ನೀಡಿದರು. ಆದರೆ, ಇಂದು ನಾವು ಸ್ವತಂತ್ರ ಭಾರತದಲ್ಲಿ ಇದ್ದೇವೆ. ಸಾರ್ವಜನಿಕ ಗಣೇಶೋತ್ಸವ ‘ ಸುರಾಜ್ಯ ನಮ್ಮ ಹಕ್ಕು ‘ ಎಂದು ಏಕೆ ಆಗಬಾರದು? ಈಗ ನಾವು ಸುರಾಜ್ಯದ ಕಡೆ ಮುನ್ನಡೆಯೋಣ. ಸುರಾಜ್ಯ ನಮ್ಮ ಆದ್ಯತೆಯಾಗಲಿ. ಈ ಮಂತ್ರವನ್ನಿಟ್ಟುಕೊಂಡು ನಾವು ಸಾರ್ವಜನಿಕ ಗಣೇಶೋತ್ಸವದ ಸಂದೇಶ ನೀಡಲಾರೆವೇ? ಬನ್ನಿ ಈ ನಿಟ್ಟಿನಲ್ಲಿ ನಾನು ನಿಮಗೆ ಆಮಂತ್ರಣ ನೀಡುವೆ.

ಉತ್ಸವ ಸಮಾಜದ ಶಕ್ತಿಯಾಗುತ್ತದೆ ಎನ್ನುವ ಮಾತು ಸರಿ. ಹಬ್ಬ, ವ್ಯಕ್ತಿ ಮತ್ತು ಸಮಾಜದ ಜೀವನದಲ್ಲಿ ಹೊಸ ಪ್ರಾಣ ತುಂಬುತ್ತದೆ. ಉತ್ಸವವಿಲ್ಲದೆ ಜೀವನವಿಲ್ಲ. ಆದರೆ, ಕಾಲದ ಕರೆಗೆ ಅನುಸಾರ ಅದಕ್ಕೆ ಹೊಸತನ ಕೊಡಬೇಕಾಗುತ್ತದೆ. ನನಗೆ ಅನೇಕರು ವಿಶೇಷವಾಗಿ ಗಣೇಶೋತ್ಸವ ಮತ್ತು ದುರ್ಗಾಪುಜೆ ಈ ವಿಷಯಗಳ ಕುರಿತು ಬಹಳಷ್ಟು ಬರೆದಿದ್ದಾರೆ.
ಶ್ರೀಮಾನ್ ಶಂಕರ್ ನಾರಾಯಣ್ ಪ್ರಶಾಂತ್ ಎನ್ನುವವರು ಬಹಳವೇ ಆಗ್ರಹದಿಂದ ಹೇಳಿದ್ದಾರೆ – ” ಮೋದಿಜೀಯವರೆ ನೀವು ಮನದ ಮಾತಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಂದ ಮಾಡಿದ ಗಣೇಶ್ ಜೀ ಮೂರ್ತಿಯನ್ನು ಉಪಯೋಗಿಸಬೇಡಿ ಎಂದು ಜನರಿಗೆ ಮನವರಿಕೆ ಮಾಡಿಕೊಡಿ. ಹಳ್ಳಿಯ ಕೆರೆಯ ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿ ಉಪಯೋಗಿಸಲಿ. ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಂದ ಮಾಡಿದ ಮೂರ್ತಿಗಳು ಪರಿಸರಕ್ಕೆ ಅನುಕೂಲಕಾರಿಯಲ್ಲ ಎಂದಿದ್ದಾರೆ. ಅವರಂತೂ ಬಹಳ ನೋವು ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕರು ಇದೇ ರೀತಿ ತಿಳಿಸಿದ್ದಾರೆ. ನಾನೂ ಕೂಡಾ, ನಾವೇಕೆ ಮಣ್ಣನ್ನು ಉಪಯೋಗಿಸಿಕೊಂಡು ಗಣೇಶನ ಮೂರ್ತಿಗಳು, ದುರ್ಗೆಯ ಮೂರ್ತಿಗಳನ್ನು ಮಾಡಬಾರದು ಹಾಗೂ ಆ ನಮ್ಮ ಪುರಾತನ ಪರಂಪರೆಯನ್ನು ಮರಳಿ ಏಕೆ ತರಬಾರದೆಂದು ನಿಮ್ಮೆಲ್ಲರಲ್ಲೂ ಮನವಿ ಮಾಡುವೆ. ಪರಿಸರ ರಕ್ಷಣೆ, ನಮ್ಮ ನದಿ, ಕೆರೆಗಳ ರಕ್ಷಣೆ, ಅವುಗಳಲ್ಲಾಗುವ ಮಾಲಿನ್ಯದಿಂದ ಆ ನೀರಿನಲ್ಲಿ ವಾಸಿಸುವ ಸಣ್ಣ, ಸೂಕ್ಷ್ಮ ಸಣ್ಣ ಜೀವಿಗಳ ರಕ್ಷಣೆ; ಇದೂ ಕೂಡಾ ಈಶ್ವರನ ಸೇವೆಯೇ ಆಗುತ್ತದೆ. ಗಣೇಶ ವಿಘ್ನನಿವಾರಕ. ಹೀಗಿರುವಾಗ ವಿಘ್ನ ಉಂಟು ಮಾಡುವ ಗಣೇಶನನ್ನು ನಾವು ಮಾಡಬಾರದು. ನನ್ನ ಮಾತುಗಳನ್ನು ನೀವು ಯಾವ ರೂಪದಲ್ಲಿ ಸ್ವೀಕರಿಸುವಿರಿ ಎಂದು ನನಗೆ ಗೊತ್ತಿಲ್ಲ. ಇದನ್ನು ನಾನು ಮಾತ್ರ ಹೇಳುತ್ತಿಲ್ಲ. ಅನೇಕರು ಈ ರೀತಿ ಹೇಳುವವರಿದ್ದಾರೆ ಮತ್ತು ನಾನು ಅನೇಕರಿಂದ ಅನೇಕ ಸಲ ಕೇಳಿರುವೆ. ಪುಣೆಯ ಒಬ್ಬ ಮೂರ್ತಿಕಾರ ಶ್ರೀಮಾನ್ ಅಭಿಜಿತ್ ಧೋಂಡ್ ಫಲೆ ,ಕೊಲ್ಲಾಪುರದ ನಿಸರ್ಗಮಿತ್ರ, ವಿಜ್ಞಾನ ಪ್ರಭೋಧಿನಿಯಂತಹ ಸಂಸ್ಥೆಗಳು ವಿದರ್ಭ ಕ್ಷೇತ್ರದ ನಿಸರ್ಗ ಕಟ್ಟ, ಪುಣೆಯ ಜ್ಞಾನ ಪ್ರಭೋಧಿನಿ, ಮುಂಬೈನ ಗಿರ್ಗಾಂವ್ ಚ ರಾಜ, ಹೀಗೆ ಅನೇಕ ವಿಧದ ಸಂಸ್ಥೆಗಳು, ವ್ಯಕ್ತಿಗಳು ಮಣ್ಣಿನ ಗಣೇಶ ನಿರ್ಮಿಸುವುದರಲ್ಲಿ ಬಹಳ ಶ್ರಮ ಪಡುತ್ತಾರೆ. ಪ್ರಚಾರವನ್ನು ಮಾಡುತ್ತಾರೆ. ಪರಿಸರ ಸ್ನೇಹಿ ಗಣೇಶೋತ್ಸವ ಕೂಡಾ ಸಮಾಜ ಸೇವೆಯ ಒಂದು ಕೆಲಸವಾಗಿದೆ. ದುರ್ಗಾಪೂಜೆಗೆ ಇನ್ನೂ ಸಮಯವಿದೆ. ನಾವು ಈಗಲೇ ತೀರ್ಮಾನಿಸೋಣ, ಯಾರು ಹಿಂದೆ ಮೂರ್ತಿಗಳನ್ನು ಮಾಡುತ್ತಿದ್ದ ಕುಟುಂಬಗಳು ಇದ್ದವೋ, ಅವರಿಗೂ ಉದ್ಯೋಗ ಸಿಗುತ್ತದೆ ಮತ್ತು ನದಿ ಅಥವಾ ಕೆರೆಯ ಮಣ್ಣಿನಿಂದ ಮಾಡಿದ ಮೂರ್ತಿ ಪುನಃ ಅದರಲ್ಲಿಯೇ ಸೇರಿ ಹೋಗಿಬಿಡುತ್ತದೆ. ಅಗ ಪರಿಸರ ಸಂರಕ್ಷಣೆಯೂ ಆಗುತ್ತದೆ. ನಿಮಗೆಲ್ಲರಿಗೂ ಗಣೇಶ ಚತುರ್ಥಿಯ ಅನಂತ ಶುಭಕಾಮನೆಗಳನ್ನು ನೀಡುವೆ.

ನನ್ನೊಲವಿನ ಪೌರರೇ, ಭಾರತರತ್ನ ಮದರ್ ಥೆರೇಸಾ ಅವರಿಗೆ ಸೆಪ್ಟೆಂಬರ್ 4ರಂದು ಸಂತರ ಪದವಿ ಪ್ರದಾನ ಮಾಡಿ ಗೌರವ ತೋರಿಸಲಾಗುತ್ತಿದೆ. ಮದರ್ ಥೆರೇಸಾ ತಮ್ಮ ಇಡೀ ಜೀವನವನ್ನು ಭಾರತದ ಬಡವರ ಸೇವೆಗಾಗಿ ನೀಡಿದ್ದರು. ಅವರು ಹುಟ್ಟಿದ್ದೇನೋ ಅಲ್ಬೇನಿಯಾದಲ್ಲಿ. ಅವರ ಭಾಷೆಯೂ ಇಂಗ್ಲೀಷ್ ಆಗಿರಲಿಲ್ಲ. ಆದರೆ, ಅವರು ತಮ್ಮ ಜೀವನ ಮುಡುಪಾಗಿ ಇಟ್ಟರು. ಬಡವರ ಸೇವೆಗೆ ಅರ್ಹರಾಗಲು ಸಂಪೂರ್ಣ ಪ್ರಯತ್ನ ನಡೆಸಿದರು. ಭಾರತದ ಬಡವರ ಸೇವೆ ಮಾಡಿದ ಮದರ್ ಥೆರೇಸಾ ಅವರಿಗೆ ಸಂತರ ಉಪಾದಿ ಪ್ರಾಪ್ತಿಯಾಗುತ್ತದೆ ಎಂದಾಗ ಸಮಸ್ತ ಭಾರತೀಯರೂ ಹೆಮ್ಮೆಪಡುವುದು ಸ್ವಾಭಾವಿಕವಾಗಿದೆ. ಸೆಪ್ಟೆಂಬರ್ 4ರಂದು ನಡೆಯುವ ಸಮಾರಂಭದಲ್ಲಿ 125 ಕೋಟಿ ಜನತೆಯ ಪರವಾಗಿ ಭಾರತ ಸರ್ಕಾರ ನಮ್ಮ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೇತೃತ್ವದಲ್ಲಿ ಒಂದು ಅಧಿಕೃತ ನಿಯೋಗ ಅಲ್ಲಿಗೆ ತೆರಳಲಿದೆ. ಸಂತರಿಂದ, ಋಷಿ ಮುನಿಗಳಿಂದ, ಮಹಾ ಪುರುಷರಿಂದ ಪ್ರತಿಕ್ಷಣವೂ ನಮಗೆ ಒಂದಲ್ಲಾ ಒಂದು ಕಲಿಯುವುದು ಲಭಿಸುತ್ತದೆ. ನಾವು ಏನನ್ನಾದರೂ ಪಡೆದುಕೊಳ್ಳುತ್ತಿರುತ್ತೇವೆ, ಕಲಿಯುತ್ತಿರುತ್ತೇವೆ ಹಾಗೂ ಒಂದಲ್ಲಾ ಒಂದು ಒಳಿತನ್ನು ಮಾಡುತ್ತಿರುತ್ತೇವೆ.

ನನ್ನೊಲವಿನ ದೇಶವಾಸಿಗಳೇ, ಅಭಿವೃದ್ಧಿಯು ಜನಾಂದೋಲನವಾಗಿ ಮಾರ್ಪಟ್ಟಾಗ ಅದೆಂತಹ ದೊಡ್ಡ ಪರಿವರ್ತನೆ ಉಂಟಾಗುತ್ತದೆ. ಜನಶಕ್ತಿ ಈಶ್ವರ ಸ್ವರೂಪಿ ಎಂದೇ ಪರಿಗಣಿತವಾಗಿದೆ. ಭಾರತ ಸರ್ಕಾರ ಕೆಲವು ದಿನಗಳ ಹಿಂದೆ 5 ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಗಂಗಾ ನಿರ್ಮಲೀಕರಣಕ್ಕೆ, ಗಂಗಾ ನದಿ ಸ್ವಚ್ಛತೆ ಆಂದೋಲನದಲ್ಲಿ ಜನರನ್ನು ಕೂಡಿಸುವ ಒಂದು ಯಶಸ್ವೀ ಪ್ರಯತ್ನ ಮಾಡಿತು. ಈ ತಿಂಗಳ 20ರಂದು ಅಲಹಾಬಾದಿನಲ್ಲಿ ಗಂಗಾ ನದಿ ತಟೀಯ ಪ್ರದೇಶದಲ್ಲಿನ ಹಳ್ಳಿಗಳ ಪ್ರಧಾನರನ್ನು ಆಮಂತ್ರಿಸಲಾಗಿತ್ತು. ಅವರು ಬಂದು ಗಂಗೆಯನ್ನು ಸಾಕ್ಷಿಯಾಗಿ ಇಟ್ಟುಕೊಂಡು ತಮ್ಮ ಹಳ್ಳಿಗಳಲ್ಲಿ ಬಯಲು ಬಹಿರ್ದೆಸೆ ಪರಂಪರೆಯನ್ನು ತಕ್ಷಣವೇ ನಿಲ್ಲಿಸಲು ಆಗತ್ಯ ಕ್ರಮ ಕೈಗೊಳ್ಳುವ, ಶೌಚಾಲಯ ನಿರ್ಮಿಸುವ ಆಂದೋಲನಕ್ಕೆ ಚಾಲನೆ ಕೊಡುವ, ತಮ್ಮ ಹಳ್ಳಿ ಯಾವುದೇ ಕಾರಣಕ್ಕೂ ಗಂಗಾ ನದಿಯನ್ನು ಗಲೀಜು ಮಾಡದಂತೆ ನೋಡಿಕೊಳ್ಳುವ ಪ್ರತಿಜ್ಞೆ ಕೈಗೊಂಡರು. ಉತ್ತರಾಖಂಡದಿಂದ, ಉತ್ತರ ಪ್ರದೇಶದಿಂದ, ಬಿಹಾರದಿಂದ, ಝಾರ್ಖಂಡ್ ನಿಂದ, ಪಶ್ಚಿಮ ಬಂಗಾಳದಿಂದ ಬಂದ ಈ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೈಗೊಂಡ ಸಂಕಲ್ಪಕ್ಕಾಗಿ ಇವರೆಲ್ಲರಿಗೂ ನಾನು ಅಭಿನಂದನೆ ತಿಳಿಸುವೆ. ಈ ಒಂದು ಕಲ್ಪನೆಯನ್ನು ಸಾಕಾರಗೊಳಿಸಿದ, ಭಾರತ ಸರ್ಕಾರದ ಎಲ್ಲ ಸಚಿವ ಖಾತೆಗಳು, ಸಚಿವರೆಲ್ಲರನ್ನೂ ಅಭಿನಂದಿಸುವೆ. ಜನಶಕ್ತಿಯನ್ನು ರೂಢಿಸಿ ಗಂಗಾ ನದಿಯ ನಿರ್ಮಲೀಕರಣದಲ್ಲಿ ಒಂದು ಮಹತ್ವದ ಹೆಜ್ಜೆ ಇಟ್ಟ ಆ ಎಲ್ಲಾ 5 ರಾಜ್ಯಗಳ ಮುಖ್ಯಮಂತ್ರಿಗಳಿಗೂ ನಾನು ಧನ್ಯವಾದ ಹೇಳುವೆ.

ನನ್ನೊಲವಿನ ನಾಗರಿಕರೆ, ಕೆಲವೊಮ್ಮೆ ಕೆಲವೊಂದು ಸಂಗತಿಗಳು ನನ್ನ ಮನಸ್ಸಿಗೆ ನಾಟಿಬಿಡುತ್ತವೆ ಮತ್ತು ಯಾರಿಗೆ ಇದರ ಕಲ್ಪನೆ ಬರುವುದೋ ಅವರನ್ನು ಕುರಿತು ನನ್ನ ಮನಸ್ಸಿನಲ್ಲಿ ಒಂದು ವಿಶೇಷ ಆದರಭಾವ ಉಂಟಾಗಿಬಿಡುತ್ತದೆ. ಜುಲೈ 15ರಂದು ಛತ್ತೀಸ್ ಗಢದ ಕಬೀರ್ ಧಾಮ್ ಜಿಲ್ಲೆಯ ಸುಮಾರು 1 ಸಾವಿರದ 700ಕ್ಕೂ ಹೆಚ್ಚು ಶಾಲೆಗಳ ಒಂದೂಕಾಲು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಮೂಹಿಕವಾಗಿ ತಂತಮ್ಮ ತಂದೆ – ತಾಯಿಗಳಿಗೆ ಪತ್ರ ಬರೆದರು. ಕೆಲವರು ಇಂಗ್ಲೀಷ್ ನಲ್ಲಿ ಬರೆದರು, ಕೆಲವರು ಹಿಂದಿಯಲ್ಲಿ ಬರೆದರು, ಇನ್ನೂ ಕೆಲವರು ಛತ್ತೀಸ್ ಗಢಿಯಲ್ಲಿ ಬರೆದರು. ನಮ್ಮ ಮನೆಗಳಲ್ಲಿ ಶೌಚಾಲಯ ಇರಬೇಕು ಎಂದು ಅವರು ತಮ್ಮ ತಂದೆ – ತಾಯಿಗಳಿಗೆ ಪತ್ರ ಬರೆದು ತಿಳಿಸಿದರು. ಶೌಚಾಲಯ ನಿರ್ಮಾಣಕ್ಕೆ ಕೋರಿದರು. ಕೆಲವು ಬಾಲಕರಂತೂ ಈ ಸಲ ನನ್ನ ಹುಟ್ಟುಹಬ್ಬವನ್ನು ನೀವು ಆಚರಿಸದಿದ್ದರೂ ಪರವಾಗಿಲ್ಲ ನಡೆಯುತ್ತದೆ, ಆದರೆ ಶೌಚಾಲಯ ಖಂಡಿತಾ ನಿರ್ಮಿಸಿ ಎಂದು ಪತ್ರ ಬರೆದರು. ಏಳರಿಂದ ಹದಿನೇಳು ವರ್ಷದೊಳಗಿನ ಮಕ್ಕಳು ಈ ಕೆಲಸ ಮಾಡಿದರು. ಈ ಪತ್ರ ಪಡೆದ ಮಾರನೆಯ ದಿನ ಮಕ್ಕಳು ಶಾಲೆಗೆ ಹೊರಟಾಗ ಅವರ ತಂದೆ – ತಾಯಿಗಳು ಅವರ ಟೀಚರ್ ಗೆ ಕೊಡಲು ಒಂದು ಕಾಗದ ಕೊಟ್ಟರು. ಒಂದು ನಿಗದಿತ ದಿನಾಂಕದ ವೇಳೆಗೆ ಶೌಚೌಲಯವನ್ನು ಕಟ್ಟುತ್ತೇವೆ ಎಂದು ಆ ಪತ್ರದಲ್ಲಿ ತಂದೆ – ತಾಯಿಗಳು ಭರವಸೆ ನೀಡಿದ್ದರು. ಮಕ್ಕಳ ಪತ್ರದಿಂದ ಎಂತಹ ಪ್ರಭಾವವಾಯಿತು, ಎಂತಹ ಭಾವನಾತ್ಮಕ ಪ್ರಭಾವ ಬೀರಿತು. ಯಾರಿಗೆ ಕಲ್ಪನೆ ಬಂತೋ ಅವರನ್ನು ಅಭಿನಂದಿಸುವೆ. ಈ ಪ್ರಯತ್ನ ನಡೆಸಿದ ವಿದ್ಯಾರ್ಥಿಗಳನ್ನೂ ಅಭಿನಂದಿಸುವೆ ಹಾಗೂ ತಮ್ಮ ಮಕ್ಕಳು ಬರೆದ ಪತ್ರವನ್ನು ಗಂಭೀರವಾಗಿ ತೆಗೆದುಕೊಂಡು ಶೌಚಾಲಯ ನಿರ್ಮಿಸಲು ನಿರ್ಣಯ ಮಾಡಿದ ಆ ತಂದೆ – ತಾಯಿಗಳನ್ನು ನಾನು ಅಭಿನಂದಿಸುವೆ. ಇದೇ ತಾನೆ ನಮಗೆ ಸ್ಫೂರ್ತಿ ನೀಡುವಂತಹದು.

ಕರ್ನಾಟಕದ ಕೊಪ್ಪಳ ಜಿಲ್ಲೆ. ಈ ಜಿಲ್ಲೆಯ ಹದಿನಾರು ವರ್ಷ ವಯಸ್ಸಿನ ಹೆಣ್ಣು ಮಗು ಮಲ್ಲಮ್ಮ. ಈ ಹೆಣ್ಣು ಮಗಳು ತನ್ನ ಕುಟುಂಬದವರ ವಿರುದ್ಧವೇ ಸತ್ಯಾಗ್ರಹ ಹೂಡಿಬಿಟ್ಟಳು. ಸತ್ಯಾಗ್ರಹ ಕುಳಿತ ಆಕೆ ಊಟ ಮಾಡುವುದನ್ನೂ ನಿಲ್ಲಿಸಿದ್ದಳು ಎನ್ನಲಾಗಿದೆ. ಅದೂ ತನ್ನ ಸ್ವಂತಕ್ಕಾಗಿ ಏನನ್ನೂ ಬೇಡುವುದಕ್ಕಾಗಿ ಅಲ್ಲ. ಒಳ್ಳೆಯ ಬಟ್ಟೆಗಾಗಿ ಅಲ್ಲ, ತಿನ್ನಲು ಸಿಹಿ ತಿಂಡಿಗಾಗಿ ಅಲ್ಲ. ತಮ್ಮ ಮನೆಯಲ್ಲಿ ಶೌಚಾಲಯ ಇರಬೇಕು ಎನ್ನುವುದೇ ಮಲ್ಲಮ್ಮಳ ಹಠ. ಆದರೆ ಮನೆಯವರ ಹಣಕಾಸು ಸ್ಥಿತಿ ಅಷ್ಟಾಗಿ ಅನುಕೂಲಕರವಾಗಿ ಇರಲಿಲ್ಲ. ಆದರೆ, ಮಗಳು ಹಠಕ್ಕೆ ಬಿದ್ದಿದ್ದಳು. ಆಕೆ ತನ್ನ ಸತ್ಯಾಗ್ರಹ ಕೈ ಬಿಡಲು ತಯಾರಿರಲಿಲ್ಲ. ಮಲ್ಲಮ್ಮ ಶೌಚಾಲಯಕ್ಕಾಗಿ ಸತ್ಯಾಗ್ರಹ ಮಾಡಿರುವ ಸಂಗತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಶಫಿಗೆ ತಿಳಿಯಿತು. ಮೊಹಮ್ಮದ್ ಶಫಿಯವರ ವಿಶೇಷತೆ ನೋಡಿ. ಅವರು 18 ಸಾವಿರ ರೂಪಾಯಿಗಳಿಗೆ ವ್ಯವಸ್ಥೆ ಮಾಡಿದರು ಮತ್ತು ಒಂದು ವಾರದೊಳಗೆ ಶೌಚಾಲಯ ನಿರ್ಮಿಸಿಬಿಟ್ಟರು. ಮಲ್ಲಮ್ಮಳಂತಹ ಹೆಣ್ಣು ಮಗಳ, ಹಠದ ಬಲ ನೋಡಿ. ಇನ್ನು ಮೊಹಮ್ಮದ್ ಶಫಿಯಂತಹ ಗ್ರಾಮ ಪಂಚಾಯಿತಿಯ ಅಧ್ಯಕ್ಷರನ್ನೂ ನೋಡಿ. ಸಮಸ್ಯೆಗಳ ಪರಿಹಾರಕ್ಕೆ ಹೇಗೆ ಹಾದಿಗಳು ತೆರೆದುಕೊಳ್ಳುತ್ತವೆ, ಇದೇನೆ ಜನಶಕ್ತಿ ಎನ್ನುವುದು.

ನನ್ನೊಲವಿನ ದೇಶವಾಸಿಗಳೇ, ಸ್ವಚ್ಛ ಭಾರತ, ಪ್ರತಿಯೊಬ್ಬ ಭಾರತೀಯನ ಕನಸಾಗಿಬಿಟ್ಟಿದೆ. ಕೆಲವು ಭಾರತೀಯರ ಸಂಕಲ್ಪವಾಗಿದೆ. ಇನ್ನೂ ಕೆಲವು ಭಾರತೀಯರು ಇದನ್ನು ತಮ್ಮ ಘನ ಉದ್ದೇಶವಾಗಿ ಮಾಡಿಕೊಂಡಿದ್ದಾರೆ. ಆದರೆ, ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಇದರೊಟ್ಟಿಗೆ ಕೂಡಿಕೊಂಡಿದ್ದಾರೆ. ಪ್ರತಿಯೊಬ್ಬರೂ ಇದಕ್ಕೆ ಕೊಡುಗೆ ನೀಡುತ್ತಿದ್ದಾರೆ. ಹೇಗೆ ಹೊಸ ಪ್ರಯತ್ನಗಳು ಆಗುತ್ತಿವೆ ಎಂದು ದಿನನಿತ್ಯವೂ ಸುದ್ದಿಗಳು ಬರುತ್ತವೆ. ಭಾರತ ಸರ್ಕಾರದಲ್ಲಿ ಒಂದು ವಿಚಾರ ಹುಟ್ಟಿಕೊಂಡಿದೆ. ಅದು ನೀವು ಎರಡು ನಿಮಿಷ , ಮೂರು ನಿಮಿಷಗಳ ಸ್ವಚ್ಛತೆ ಕುರಿತ ಚಿತ್ರ ನಿರ್ಮಿಸಿ. ಈ ಕಿರುಚಿತ್ರವನ್ನು ಭಾರತ ಸರ್ಕಾರಕ್ಕೆ ಕಳುಹಿಸಿಕೊಡಿ. ವೆಬ್ ಸೈಟ್ ನಲ್ಲಿ ನಿಮಗೆ ಇದರ ವಿವರ, ಮಾಹಿತಿ ಸಿಗುತ್ತದೆ. ಈ ಕಿರುಚಿತ್ರಗಳ ಸ್ಪರ್ಧೆ ನಡೆಯುತ್ತದೆ ಹಾಗೂ ಅಕ್ಟೋಬರ್ 2 ಗಾಂಧಿ ಜಯಂತಿಯ ದಿನ, ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ಕೊಡಲಾಗುವುದು. ಇದೇ ತೆರನಾದ ಚಿತ್ರಗಳಿಗೆ ಆಹ್ವಾನ ನೀಡಿ, ಸ್ಪರ್ಧೆ ಏರ್ಪಡಿಸಿ, ಎಂದು ನಾನು ಟಿವಿ ವಾಹಿನಿಯವರನ್ನೂ ಕೇಳುವೆ. ಸೃಜನಶೀಲತೆಯು ಸ್ವಚ್ಛತಾ ಆಂದೋಲನಕ್ಕೆ ಶಕ್ತಿ ತುಂಬಬಲ್ಲದು. ಹೊಸ ಘೋಷಣೆ ಸಿಗುತ್ತದೆ. ಹೊಸ ವಿಧಾನ ತಿಳಿಯಬರುತ್ತದೆ. ನೂತನ ಪ್ರೇರಣೆ ಲಭಿಸುತ್ತದೆ ಮತ್ತು ಇವೆಲ್ಲಾ ಜನತಾ ಜನಾರ್ಧನರ ಪಾಲುದಾರಿಕೆಯೊಡನೆ ಹಾಗೂ ಸಾಮಾನ್ಯ ಕಲಾವಿದರಿಂದ ಆಗುತ್ತದೆ. ಅಂತೆಯೇ ಈ ಚಿತ್ರ ನಿರ್ಮಿಸಲು ದೊಡ್ಡ ಸ್ಟುಡಿಯೋ ಬೇಕಿಲ್ಲ, ದೊಡ್ಡ ಕ್ಯಾಮೆರಾ ಬೇಕಿಲ್ಲ, ಅಯ್ಯೋ…… ಈಗಂತೂ ನಿಮ್ಮ ಮೊಬೈಲ್ ನ ಕ್ಯಾಮರಾದಿಂದಲೂ ಚಿತ್ರ ತಯಾರಿಸಬಹುದು. ಬನ್ನಿ, ಮುನ್ನಡೆಯಿಸಿ. ನಿಮಗೆ ನನ್ನ ಆಮಂತ್ರಣವಿದೆ.

ನನ್ನೊಲವಿನ ದೇಶವಾಸಿಗಳೇ, ನಮ್ಮ ನೆರೆ – ಹೊರೆಯವರೊಡನೆ ನಮ್ಮ ಸಂಬಂಧ ಆಳವಾಗಿರಲಿ, ನಮ್ಮ ಸಂಬಂಧ ಸಹಜವಾಗಿರಲಿ, ನಮ್ಮ ಸಂಬಂಧ ಜೀವಂತವಾಗಿರಲಿ ಎಂಬುದೇ ಭಾರತದ ಸದಾಕಾಲದ ಪ್ರಯತ್ನವಾಗಿದೆ. ಒಂದು ಅತಿ ದೊಡ್ಡ ಮಹತ್ವಪೂರ್ಣ ಸಂಗತಿ ಕೆಲವು ದಿನಗಳ ಹಿಂದ ನಡೆಯಿತು. ನಮ್ಮ ರಾಷ್ಟ್ರಪತಿ ಅದರಣೀಯ ಪ್ರಣಬ್ ಮುಖರ್ಜಿಯವರು ಕೋಲ್ಕತ್ತಾದಲ್ಲಿ ” ಆಕಾಶವಾಣಿ ಮೈತ್ರಿ ಚಾನಲ್ ” ಎಂಬ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇನು ರಾಷ್ಟ್ರಪತಿಯವರಿಗೆ ಒಂದು ರೇಡಿಯೋ ವಾಹಿನಿ ಉದ್ಘಾಟನೆ ಮಾಡಬೇಕಿದೆಯಾ ಎಂದು ಅನೇಕರಿಗೆ ಅನಿಸಿರಬೇಕು. ಆದರೆ, ಇದು ಸಾಧಾರಣ ರೇಡಿಯೋ ವಾಹಿನಿಯಲ್ಲ. ಇದೊಂದು ಅತಿದೊಡ್ಡ ಮಹತ್ವಪೂರ್ಣ ಹೆಜ್ಜೆಯಾಗಿದೆ. ನಮ್ಮ ನೆರೆಯಲ್ಲಿ ಬಾಂಗ್ಲಾ ದೇಶವಿದೆ. ಬಾಂಗ್ಲಾ ದೇಶ ಹಾಗೂ ಪಶ್ಚಿಮ ಬಂಗಾಳ ಎರಡೂ ಒಂದೇ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿ, ಇಂದಿಗೂ ಬದುಕಿವೆ ಎಂಬುದು ನಮಗೆ ಗೊತ್ತು. ಹೀಗಾಗಿ ಈ ಕಡೆ ‘ ಆಕಾಶವಾಣಿ ಮೈತ್ರಿ ‘ ಮತ್ತು ಆ ಕಡೆ ‘ ಬಾಂಗ್ಲಾ ದೇಶ್ ಬೇತಾರ್ ‘. ಅವು ಪರಸ್ಪರ ಕಾರ್ಯಕ್ರಮ ಹಂಚಿಕೊಳ್ಳುತ್ತವೆ ಮತ್ತು ಎರಡೂ ಕಡೆಯ ಬಾಂಗ್ಲಾ ಭಾಷೆ ಮಾತನಾಡುವವರು ಆಕಾಶವಾಣಿಯ ಆನಂದ ಸವಿಯುವರು. ಜನರ ನಡುವಿನ ಸಂಪರ್ಕದಲ್ಲಿ ಆಕಾಶವಾಣಿಯದು ಬಹುದೊಡ್ಡ ಪಾತ್ರವಿದೆ. ರಾಷ್ಟ್ರಪತಿ ಜೀ ಯವರು ಇದಕ್ಕೆ ಚಾಲನೆ ನೀಡಿದರು. ನಮ್ಮೊಂದಿಗೆ ಕೂಡಿಕೊಂಡಿದ್ದಕ್ಕಾಗಿ ನಾನು ಬಾಂಗ್ಲಾ ದೇಶಕ್ಕೂ ವಂದನೆಗಳನ್ನು ತಿಳಿಸುವೆ. ವಿದೇಶಾಂಗ ನೀತಿಯಲ್ಲೂ ತಮ್ಮ ದೇಣಿಗೆ ನೀಡುತ್ತಿರುವುದಕ್ಕಾಗಿ ನಾನು ಆಕಾಶವಾಣಿಯ ಮಿತ್ರರನ್ನು ಅಭಿನಂದಿಸುವೆ.

ನನ್ನ ಪ್ರೀತಿಯ ದೇಶವಾಸಿಗಳೇ, ನೀವೇನೋ ನನಗೆ ಪ್ರಧಾನಮಂತ್ರಿಯ ಕೆಲಸ ಕೊಟ್ಟಿದ್ದೀರಿ. ಆದರೆ, ಎಷ್ಟಾದರೂ ನಾನೂ ಕೂಡ ನಿಮ್ಮ ಹಾಗೆಯೇ ಒಬ್ಬ ಮನುಷ್ಯ ಮತ್ತು ಕೆಲವೊಮ್ಮೆ ಭಾವುಕ ಘಟನೆಗಳು ನನ್ನನು ತುಸು ಹೆಚ್ಚೇ ತಟ್ಟಿಬಿಡುತ್ತವೆ. ಇಂತಹ ಭಾವುಕ ಘಟನೆಗಳು ಹೊಸ ಹೊಸ ಚೈತನ್ಯವನ್ನೂ ನೀಡುತ್ತವೆ. ಹೊಸ ಸ್ಫೂರ್ತಿಯನ್ನೂ ಕೊಡುತ್ತವೆ ಮತ್ತು ಇದೇ ಭಾರತ ವಾಸಿಗಳಿಗೆ ಏನಾದರೂ ಮಾಡಿ ಹೋಗಲು ಸ್ಫೂರ್ತಿಯನ್ನೂ ಕೊಡುತ್ತದೆ. ಕೆಲವು ದಿನಗಳ ಹಿಂದೆ ನನಗೊಂದು ಪತ್ರ ದೊರಕಿತು. ನನ್ನ ಮನಸ್ಸನ್ನು ಮುಟ್ಟಿತು. ಸುಮಾರು 84 ವರ್ಷದ ಒಬ್ಬ ತಾಯಿ. ಆಕೆ ನಿವೃತ್ತ ಶಿಕ್ಷಕಿ, ಅವರು ನನಗೆ ಈ ಪತ್ರ ಬರೆದಿದ್ದಾರೆ – ಅವರು ತಮ್ಮ ಪತ್ರದಲ್ಲಿನ ತಮ್ಮ ಹೆಸರನ್ನು ಬಹಿರಂಗಪಡಿಸಬಾರದೆಂದು ನನಗೆ ಹೇಳದೇ ಇದ್ದಿದ್ದರೆ, ಅವರ ಹೆಸರನ್ನು ತಿಳಿಸಿಯೇ ಈ ಕುರಿತು ನಿಮ್ಮೊಡನೆ ಮಾತನಾಡುವ ಮನಸ್ಸು ನನ್ನದಾಗಿತ್ತು. ಅವರು ಪತ್ರದಲ್ಲಿ ಬರೆದಿದ್ದಾರೆ – ” ನೀವು ಅನಿಲ ಸಬ್ಸಿಡಿ ಬಿಟ್ಟುಕೊಡಿ ಎಂದು ಮನವಿ ಮಾಡಿದ್ದಿರಿ, ಅದರಂತೆ ನಾನು ಅನಿಲ ಸಬ್ಸಿಡಿ ಬಿಟ್ಟುಕೊಟ್ಟಿದ್ದೆ ಮತ್ತು ಆಮೇಲೆ ಇದನ್ನು ಮರೆತೂಬಿಟ್ಟಿದ್ದೆ. ಆದರೆ, ಕೆಲವು ದಿನಗಳ ಹಿಂದೆ ನಿಮ್ಮ ಕಡೆಯವರೊಬ್ಬ ವ್ಯಕ್ತಿ ಬಂದರು ಹಾಗೂ ನನಗೆ ನೀವು ಬರೆದ ಒಂದು ಪತ್ರ ಕೊಟ್ಟು ಹೋದರು. ಸಬ್ಸಿಡಿ ಬಿಟ್ಟುಕೊಟ್ಟಿದ್ದಕ್ಕಾಗಿ ನನಗೆ ಈ ವಂದನಾಪೂರ್ವಕ ಪತ್ರ ದೊರೆಯಿತು. ನನ್ನ ಪಾಲಿಗಂತೂ ಭಾರತದ ಪ್ರಧಾನಮಂತ್ರಿಯವರ ಈ ಪತ್ರ ಪದ್ಮಶ್ರೀ ಪ್ರಶಸ್ತಿಗಿಂತ ಕಡಿಮೆಯೇನೂ ಅಲ್ಲ ಎಂದು ಅವರು ಬರೆದಿದ್ದಾರೆ.

ದೇಶವಾಸಿಗಳೇ, ಯಾರು ಯಾರು ಅನಿಲ ಸಬ್ಸಿಡಿ ಬಿಟ್ಟುಕೊಟ್ಟರೋ ಅವರಿಗೆ ಒಂದು ಪತ್ರ ಕಳುಹಿಸುವ ಹಾಗೂ ನನ್ನ ಯಾರಾದರೂ ಪ್ರತಿನಿಧಿಯೊಬ್ಬರು ಆ ಪತ್ರವನ್ನು ಖುದ್ದಾಗಿ ಅವರಿಗೆ ತಲುಪಿಸಬೇಕು ಎಂಬ ಪ್ರಯತ್ನ ನಾನು ಮಾಡಿದೆ. ಒಂದು ಕೋಟಿಗೂ ಹೆಚ್ಚು ಜನರಿಗೆ ಪತ್ರ ಬರೆಯುವ ಪ್ರಯತ್ನ ನನ್ನದು. ಆ ಕಾರ್ಯಕ್ರಮದ ಅಡಿಯಲ್ಲೇ ಈ ಪತ್ರ ಆ ತಾಯಿಯ ಕೈ ಸೇರಿತು. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ ಎಂದು ಅವರು ಬರೆದಿದ್ದಾರೆ. ಬಡ ತಾಯಂದಿರು ಒಲೆಯ ಹೊಗೆಯಿಂದ ಮುಕ್ತಿ ಪಡೆಯುವ ನಿಮ್ಮ ಆಂದೋಲನಕ್ಕೆ, ನಾನು ಒಬ್ಬ ನಿವೃತ್ತ ಶಿಕ್ಷಕಿ ಇನ್ನೂ ಕೆಲವೇ ವರ್ಷಗಳಲ್ಲಿ ನನಗೆ 90 ವರ್ಷ ಆಗಿ ಬಿಡುತ್ತದೆ, ಇದಕ್ಕಾಗಿ ನಾನು ನಿಮಗೆ 50 ಸಾವಿರ ರೂಪಾಯಿ ದೇಣಿಗೆ ಕಳುಹಿಸುತ್ತಿರುವೆ, ಈ ಹಣವನ್ನು ನೀವು ಬಡ ಮಹಿಳೆಯರು ಒಲೆಯ ಹೊಗೆಯಿಂದ ಮುಕ್ತರಾಗುವಂತೆ ಮಾಡುವ ಕೆಲಸದಲ್ಲಿ ತೊಡಗಿಸಿ ಎಂದು ಅವರು ತಿಳಿಸಿದ್ದಾರೆ. ಒಬ್ಬ ಸಾಮಾನ್ಯ ಶಿಕ್ಷಕಿ ,ನಿವೃತ್ತಿ ಪಿಂಚಣಿಯ ಮೇಲೆ ಬದುಕನ್ನು ಅವಲಂಬಿಸಿರುವಾಕೆ, ಆ ತಾಯಿ, 50 ಸಾವಿರ ರೂಪಾಯಿಗಳನ್ನು, ಬಡ ತಾಯಂದಿರು, ಸೋದರಿಯರು, ಒಲೆಯ ಹೊಗೆಯಿಂದ ಮುಕ್ತರನ್ನಾಗಿಸಲು ಹಾಗೂ ಅವರಿಗೆ ಅನಿಲ ಸಂಪರ್ಕ ಒದಗಿಸಲು ದೇಣಿಗೆ ಕೊಡುವುದನ್ನು ನೀವು ಕಲ್ಪಿಸಿಕೊಳ್ಳಬಹುದಾಗಿದೆ. ಪ್ರಶ್ನೆ, ಐವತ್ತು ಸಾವಿರ ರೂಪಾಯಿಗಳದ್ದಲ್ಲ. ಸವಾಲು, ಆ ತಾಯಿಯ ಭಾವನೆಗಳು ಮತ್ತು ಇಂತಹ ಕೋಟಿ ಕೋಟಿ ತಾಯಂದಿರು, ಸೋದರಿಯರ ಆಶೀರ್ವಾದವೇ ನನ್ನ ದೇಶದ ಭವಿಷ್ಯಕ್ಕಾಗಿ, ಭರವಸೆ ಮತ್ತು ಶಕ್ತಿಯಾಗಿ ಮಾರ್ಪಡುತ್ತದೆ. ಅಷ್ಟೇ ಅಲ್ಲ, ಅವರು ಪತ್ರವನ್ನೂ ನನಗೆ ಪ್ರಧಾನಮಂತ್ರಿ ಎಂದು ಸಂಬೋಧಿಸಿ ಅವರು ಬರೆದಿಲ್ಲ. ನೇರವಾಗಿ ಅವರು ಮೋದಿಭಯ್ಯ ಎಂದು ಸಂಬೋಧಿಸಿ ಬರೆದಿದ್ದಾರೆ – ಆ ತಾಯಿಗೆ ನಾನು ನಮಿಸುವೆ ಮತ್ತು ಸ್ವತಃ ಕಷ್ಟ ಅನುಭವಿಸಿ ಬೇರೆಯವರಿಗಾಗಿ ಏನನ್ನಾದರೂ ಮಾಡುತ್ತಿರುವ ಭಾರತದ ಇಂತಹ ಕೋಟಿ ಕೋಟಿ ಮಾತೆಯರಿಗೂ ನನ್ನ ಪ್ರಣಾಮಗಳು.

ನನ್ನೊಲವಿನ ದೇಶವಾಸಿಗಳೇ, ಕಳೆದ ವರ್ಷ ಬರಗಾಲದಿಂದ ನಾವು ಕಳವಳಕ್ಕೀಡಾಗಿದ್ದೆವು. ಆದರೆ, ಈ ಆಗಸ್ಟ್ ತಿಂಗಳು ಸತತ ಪ್ರವಾಹದ ಸಂಕಷ್ಟಗಳಿಂದ ತುಂಬಿತ್ತು. ದೇಶದ ಒಂದಲ್ಲಾ ಒಂದು ಭಾಗದಲ್ಲಿ ಪದೇ ಪದೇ ಪ್ರವಾಹ ಉಂಟಾಯಿತು. ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ, ಸ್ಥಳೀಯ ಸಂಸ್ಥೆಗಳು, ಸಾಮಾಜಿಕ ಸಂಸ್ಥೆಗಳು, ನಾಗರಿಕರು ಏನೆಲ್ಲಾ ಮಾಡಬಹುದೋ ಅದನ್ನು ಪೂರ್ಣವಾಗಿ ಮಾಡಲು ಪ್ರಯತ್ನಿಸಿದವು. ಆದರೆ, ಈ ಪ್ರವಾಹದ ಸುದ್ದಿಗಳ ನಡುವೆಯೂ ಹೆಚ್ಚು ಸ್ಮರಿಸುವ ಅಗತ್ಯವಿದ್ದಂತಹ ಸುದ್ದಿಗಳೂ ಇವೆ.

ಏಕತೆಯ ತಾಕತ್ತು ಏನು, ಕೂಡಿಕೊಂಡು ನಡೆದರೆ, ಅದೆಷ್ಟು ದೊಡ್ಡ ಪರಿಣಾಮ ಉಂಟಾಗುತ್ತದೆ. ಇದಕ್ಕೆ ಈ ವರ್ಷದ ಆಗಸ್ಟ್ ತಿಂಗಳು ನೆನಪಿನಲ್ಲಿ ಉಳಿಯುತ್ತದೆ. ಆಗಸ್ಟ್ 2016ರಲ್ಲಿ ಗಂಭೀರ ರಾಜಕೀಯ ವಿರೋಧಿ ಪಕ್ಷಗಳು, ಪರಸ್ಪರರ ವಿರುದ್ಧ ಯಾವುದೇ ಅವಕಾಶವನ್ನು ಬಿಟ್ಟುಕೊಡದವರು ಹಾಗೂ ಇಡೀ ದೇಶದಲ್ಲಿ ಸರಿಸುಮಾರು 90 ಪಕ್ಷಗಳು, ಸಂಸತ್ತಿನಲ್ಲೂ ಅನೇಕಾನೇಕ ಪಕ್ಷಗಳು, ಎಲ್ಲರೂ ಕೂಡಿಕೊಂಡು ಜಿಎಸ್ ಟಿ ಮಸೂದೆಯನ್ನು ಅಂಗೀಕರಿಸಿದವು. ಇದರ ಶ್ರೇಯಸ್ಸು ಎಲ್ಲಾ ಪಕ್ಷಗಳಿಗೆ ಸಲ್ಲುತ್ತದೆ. ಎಲ್ಲಾ ಪಕ್ಷಗಳೂ ಕೂಡಿಕೊಂಡು ಒಂದೇ ದಿಕ್ಕಿನಲ್ಲಿ ಹೊರಟರೆ ಎಂತಹ ಹೊಡ್ಡ ಕೆಲಸವೂ ಸಾಧ್ಯವಾಗುತ್ತದೆ. ಇದೇ ಅದಕ್ಕೆ ಉದಾಹರಣೆಯಾಗಿದೆ. ಇದೇ ರೀತಿ ಕಾಶ್ಮೀರದಲ್ಲಿ ಏನೆಲ್ಲಾ ಆಯಿತು, ಕಾಶ್ಮೀರದ ಸ್ಥಿತಿ ಕುರಿತು ದೇಶದ ಎಲ್ಲಾ ರಾಜಕೀಯ ಪಕ್ಷಗಳು ಕೂಡಿಕೊಂಡು ಏಕ ಕಂಠದಲ್ಲಿ ಕಾಶ್ಮೀರದ ಸಂಗತಿ ಮುಂದಿಟ್ಟವು. ಜಗತ್ತಿಗೂ ಸಂದೇಶ ಕೊಟ್ಟವು. ಪ್ರತ್ಯೇಕತಾವಾದಿ ತತ್ವಗಳಿಗೂ, ಸಂದೇಶ ರವಾನೆಯಾಯಿತು ಹಾಗೂ ಕಾಶ್ಮೀರದ ಜನರ ಬಗ್ಗೆ ನಮ್ಮ ಸಂವೇದನೆಗಳನ್ನು ವ್ಯಕ್ತಪಡಿಸಲಾಯಿತು. ಕಾಶ್ಮೀರದ ಬಗ್ಗೆ ಎಲ್ಲಾ ಪಕ್ಷಗಳೊಡನೆ ನನ್ನ ಮಾತುಕತೆಯ ಪ್ರತಿ ಹಂತದಲ್ಲೂ ಒಂದು ಮಾತು ಅಗತ್ಯವಾಗಿ ಎಚ್ಚೆತ್ತುಕೊಳ್ಳುತ್ತಿತ್ತು. ಅದನ್ನು ಸಂಕ್ಷಿಪ್ತವಾಗಿ ಕೆಲವೇ ಶಬ್ದಗಳಲ್ಲಿ ಹೇಳಬೇಕಾದರೆ, ಅದು ಏಕತೆ ಮತ್ತು ಅನುಕಂಪ ಎಂದು ನಾನು ಹೇಳುವೆ. ಕಾಶ್ಮೀರದಲ್ಲಿ ಯುವಕರ ಅಥವಾ ಯಾವುದೇ ಭದ್ರತಾಪಡೆಯ ಯೋಧನ ಸಾವುಂಟಾದರೂ, ಆ ನಷ್ಟ ನಮ್ಮದೇ ಎನ್ನುವುದು ಗ್ರಾಮ ಪಂಚಾಯಿತಿಯ ಅಧ್ಯಕ್ಷನಿಂದ ಹಿಡಿದು ಪ್ರಧಾನಮಂತ್ರಿಯ ವರೆಗಿನ ಅನಿಸಿಕೆಯಾಗಿದೆ. ನಷ್ಟ ನಮ್ಮದೇ ಆಗಿದೆ. ನಮ್ಮ ದೇಶದ್ದೇ ಆಗಿದೆ. ಪುಟ್ಟ ಪುಟ್ಟ ಬಾಲಕರನ್ನು ಮುಂದಿಟ್ಟುಕೊಂಡು ಕಾಶ್ಮೀರದಲ್ಲಿ ಅಶಾಂತಿ ಉಂಟುಮಾಡಲು ಪ್ರಯತ್ನಿಸುವವರು ಒಂದಲ್ಲಾ ಒಂದು ದಿನ ಈ ನಿರ್ದೋಷಿ ಬಾಲಕರಿಗೂ ಉತ್ತರ ಕೊಡಬೇಕಾಗಿ ಬರುತ್ತದೆ.

ನನ್ನೊಲವಿನ ದೇಶವಾಸಿಗಳೇ, ದೇಶ ಬಲು ದೊಡ್ಡದು. ವೈವಿಧ್ಯತೆಗಳಿಂದ ತುಂಬಿದೆ. ವೈವಿಧ್ಯತೆಗಳಿಂದ ತುಂಬಿರುವ ದೇಶವನ್ನು ಏಕತೆಯ ಬಂಧನದಲ್ಲಿ ಇಟ್ಟುಕೊಳ್ಳುವುದಕ್ಕೆ ಪ್ರಜೆಗಳಾಗಿ, ಸಮಾಜವಾಗಿ, ಸರ್ಕಾರವಾಗಿ ನಮ್ಮ ಎಲ್ಲರ ಉತ್ತರದಾಯಿತ್ವ ಇದೆ. ನಾವು ಏಕತೆಗೆ ಬಲ ಕೊಡುವ ಮಾತುಗಳಿಗೆ ಹೆಚ್ಚಿನ ಶಕ್ತಿ ತುಂಬೋಣ. ಹೆಚ್ಚು ಜಾಗೃತಗೊಳಿಸೋಣ ಮತ್ತು ಅಗಲೇ ದೇಶ ಮುನ್ನಡೆದು ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಮತ್ತು ನಿರ್ಮಿಸಿಕೊಳ್ಳುತ್ತದೆ. ನನ್ನ 125 ಕೋಟಿ ಭಾರತೀಯರ ಶಕ್ತಿಯಲ್ಲಿ ಭರವಸೆ ಇದೆ. ಇಂದು ಇಷ್ಟೇ ಸಾಕು. ಅನಂತಾನಂತ ಧನ್ಯವಾದಗಳು.