Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫ್ರೆಂಚ್ ರಕ್ಷಣಾ ಸಚಿವರನ್ನು ಬರಮಾಡಿಕೊಂಡ ಪ್ರಧಾನಿ

ಫ್ರೆಂಚ್ ರಕ್ಷಣಾ ಸಚಿವರನ್ನು ಬರಮಾಡಿಕೊಂಡ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫ್ರೆಂಚ್ ರಕ್ಷಣಾ ಸಚಿವೆ ಶ್ರೀಮತಿ ಫ್ಲಾರೆನ್ಸ್ ಪಾರ್ಲಿ ಅವರನ್ನು ಭೇಟಿ ಮಾಡಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, “ಇಂದು ಫ್ರೆಂಚ್ ರಕ್ಷಣಾ ಸಚಿವೆ ಶ್ರೀಮತಿ ಫ್ಲಾರೆನ್ಸ್ ಪಾರ್ಲಿ @florence_parly ಅವರನ್ನು ಬರಮಾಡಿಕೊಳ್ಳಲಾಯಿತು. ದ್ವಿಪಕ್ಷೀಯ ರಕ್ಷಣಾ ಸಹಕಾರ, ಪ್ರಾದೇಶಿಕ ಭದ್ರತೆ, ಇಂಡೋ-ಪೆಸಿಫಿಕ್ ವಿಚಾರಗಳು ಮತ್ತು ಮುಂಬರುವ ಇಯು ಕೌನ್ಸಿಲ್ಗೆ ಫ್ರಾನ್ಸ್ನ ಅಧ್ಯಕ್ಷಸ್ಥಾನದ ಬಗ್ಗೆ ಅವರೊಂದಿಗೆ ಚರ್ಚಿಸಲಾಯಿತು.

ಫ್ರಾನ್ಸ್‌ನೊಂದಿಗೆ ಭಾರತದ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸುವ ಬದ್ಧತೆಯನ್ನು ನಾನು ಈ ವೇಳೆ ಪುನರುಚ್ಚರಿಸಿದೆ,” ಎಂದಿದ್ದಾರೆ.

***