Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಿ. ರಾಜಗೋಪಾಲಾಚಾರಿ ಜಯಂತಿ ಅಂಗವಾಗಿ ಅವರಿಗೆ ನಮನ ಸಲ್ಲಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಸಿ.ರಾಜಗೋಪಾಲಾಚಾರಿ ಅವರು ಜಯಂತಿ ಅಂಗವಾಗಿ ರಾಜಗೋಪಾಲಚಾರಿ ಅವರಿಗೆ ನಮನ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸರಣಿ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಶ್ರೀ ಸಿ. ರಾಜಗೋಪಾಲಾಚಾರಿ ಅವರ ಜಯಂತಿಯಂದು ಅವರಿಗೆ ನಮನಗಳು. ಸ್ವಾತಂತ್ರ್ಯ ಹೋರಾಟ, ಆಡಳಿತಾತ್ಮಕ ಮತ್ತು ಭೌದ್ಧಿಕ ಪರಾಕ್ರಮಕ್ಕೆ ಅವರು ಸಲ್ಲಿಸಿದ ಕೊಡುಗೆ ಸದಾ ಸ್ಮರಣೀಯ.

ರಾಜಾಜಿ ಅವರು ಗವರ್ನರ್ ಜನರಲ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮತ್ತು ಅವರಿಗೆ ಭಾರತ ರತ್ನ ನೀಡಿದ ಅಧಿಸೂಚನೆಯ ನೋಟವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. https://t.co/psAnq7i9bo 

ರಾಜಾಜಿ ವ್ಯಾಪಕವಾಗಿ ಮೆಚ್ಚಿದ ರಾಜನೀತಿಜ್ಞರಾಗಿದ್ದರು ಮತ್ತು ಅವರ ಅತ್ಯಂತ ಉತ್ಕಟ ಹಿತೈಷಿಗಳಲ್ಲಿ ಸರ್ದಾರ್ ಪಟೇಲ್ ಒಬ್ಬರು.

ರಾಜಾಜಿ ಅವರು ಭಾರತದ ಗವರ್ನರ್ ಜನರಲ್ ಆಗಿ ಅಧಿಕಾರವಹಿಸಿಕೊಂಡಾಗ ಅವರಿಗೆ ಸರ್ಧಾರ್ ಪಟೇಲ್ ಅವರು ಬರೆದಿದ್ದ ಪತ್ರದ ಭಾಗ ಇಲ್ಲಿದೆ. https://t.co/FN2N2FNAs6″

***