ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ನವೆಂಬರ್ 17ರಂದು ಬೆಳಗ್ಗೆ 10 ಗಂಟೆಗೆ 82ನೇ ಅಖಿಲ ಭಾರತ ಸಭಾಧ್ಯಕ್ಷರ ಸಮ್ಮೇಳನದ ಉದ್ಘಾಟನಾ ಸಮಾರಂಭನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ಭಾರತದ ಶಾಸಕಾಂಗಗಳ ಅತ್ಯುನ್ನತ ಸಂಸ್ಥೆ ಎನಿಸಿದ `ಅಖಿಲ ಭಾರತ ಸಭಾಧ್ಯಕ್ಷರ ಸಮ್ಮೇಳನʼವು (ಎಐಪಿಒಸಿ) 2021ರಲ್ಲಿ ಶತಮಾನೋತ್ಸವ ಆಚರಿಸುತ್ತಿದೆ. ಇದರ ನೆನಪಿಗಾಗಿ, 2021ರ ನವೆಂಬರ್ 17-18ರಂದು ಶಿಮ್ಲಾದಲ್ಲಿ 82ನೇ ʻಅಖಿಲ ಭಾರತ ಸಭಾಧ್ಯಕ್ಷರ ಸಮ್ಮೇಳನʼ ಹಮ್ಮಿಕೊಳ್ಳಲಾಗಿದೆ. ʻಎಐಪಿಒಸಿʼಯ ಮೊದಲ ಸಮ್ಮೇಳನವೂ 1921ರಲ್ಲಿ ಶಿಮ್ಲಾದಲ್ಲಿ ನಡೆದಿತ್ತು.
ಈ ಸಂದರ್ಭದಲ್ಲಿ ಲೋಕಸಭೆ ಸ್ಪೀಕರ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಮತ್ತು ರಾಜ್ಯಸಭೆ ಉಪ ಸಭಾಪತಿ ಉಪಸ್ಥಿತರಿರುವರು.
***