Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂ.ಪಿ.ಲಾಡ್ಸ್ಸ್) ಮರು ಸ್ಥಾಪನೆ ಮತ್ತು ಮುಂದುವರಿಕೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ 2021-22 ಹಣಕಾಸು ವರ್ಷದ ಉಳಿದ ಭಾಗದಲ್ಲಿ ಮತ್ತು 2025-26ನೇ ಹಣಕಾಸು ವರ್ಷದವರೆಗೆ ಅಂದರೆ 15ನೇ ಹಣಕಾಸು ಆಯೋಗದ ಅವಧಿಯವರೆಗೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂಪಿ ಲಾಡ್ಸ್) ಮರು ಸ್ಥಾಪನೆ ಮತ್ತು ಮುಂದುವರಿಕೆಗೆ ತನ್ನ ಅನುಮೋದನೆ ನೀಡಿದೆ.

ಯೋಜನೆಯ ವಿವರಗಳು:

  • ಎಂಪಿ ಲಾಡ್ಸ್ ಕೇಂದ್ರ ವಲಯದ ಯೋಜನೆಯಾಗಿದ್ದು, ಭಾರತ ಸರ್ಕಾರದಿಂದ ಸಂಪೂರ್ಣವಾಗಿ ಧನಸಹಾಯ ನೀಡಲಾಗುತ್ತದೆ. ಕುಡಿಯುವ ನೀರು, ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಮತ್ತು ರಸ್ತೆಗಳು ಮುಂತಾದ ಕ್ಷೇತ್ರಗಳಲ್ಲಿ ದೀರ್ಘಕಾಲ ಬಾಳಿಕೆ ಬರುವ ಸಾಮುದಾಯಿಕ ಸ್ವತ್ತುಗಳ ಸೃಷ್ಟಿಗೆ ಒತ್ತು ನೀಡುವ ಅಭಿವೃದ್ಧಿ ಸ್ವರೂಪದ ಕೆಲಸಗಳನ್ನು ಶಿಫಾರಸು ಮಾಡಲು ಸಂಸದರಿಗೆ ಅನುವು ಮಾಡಿಕೊಡುವುದು ಯೋಜನೆಯ ಉದ್ದೇಶವಾಗಿದೆ.
  • ಪ್ರತಿ ಸಂಸದರ (ಎಂಪಿ) ಕ್ಷೇತ್ರಕ್ಕೆ ವಾರ್ಷಿಕ ಎಂಪಿ ಲಾಡ್ಸ್ ನಿಧಿಯು 5 ಕೋಟಿ ರೂ.ಗಳಾಗಿರುತ್ತದೆ, ಎಂಪಿ ಲಾಡ್ಸ್ ಮಾರ್ಗಸೂಚಿಗಳ ಪ್ರಕಾರ ಷರತ್ತುಗಳ ಈಡೇರಿಕೆಗೆ ಒಳಪಟ್ಟು ತಲಾ 2.5 ಕೋಟಿ ರೂ.ಗಳ ಎರಡು ಕಂತುಗಳನ್ನು ಬಿಡುಗಡೆ ಮಾಡಲಾಗುತ್ತದೆ.
  • ಸಮಾಜದಲ್ಲಿ ಕೋವಿಡ್19 ಆರೋಗ್ಯ ಮತ್ತು ಪ್ರತಿಕೂಲ ಪರಿಣಾಮಗಳನ್ನು ನಿರ್ವಹಿಸಲು, 2020-21 ಮತ್ತು 2021-22 ನೇ ಹಣಕಾಸು ವರ್ಷದಲ್ಲಿ ಎಂಪಿ ಲಾಡ್ಸ್ ಅನ್ನು ನಿರ್ವಹಿಸದಿರಲು ಮತ್ತು ಕೋವಿಡ್19 ಸಾಂಕ್ರಾಮಿಕದ ಪರಿಣಾಮಗಳನ್ನು ನಿರ್ವಹಿಸಲು ಹಣಕಾಸು ಸಚಿವಾಲಯದ ಬಳಿ ನಿಧಿ ಇಟ್ಟುಕೊಳ್ಳಲು ಸಂಪುಟವು 2020 ಏಪ್ರಿಲ್ 6 ರಂದು ನಡೆದ ಸಭೆಯಲ್ಲಿ ನಿರ್ಧರಿಸಿತ್ತು.
  • ದೇಶವು ಈಗ ಆರ್ಥಿಕ ಚೇತರಿಕೆಯ ಹಾದಿಯಲ್ಲಿರುವುದರಿಂದ ಮತ್ತು ಯೋಜನೆಯು ಬಾಳಿಕೆ ಬರುವ ಸಾಮುದಾಯಿಕ ಸ್ವತ್ತುಗಳ ಸೃಷ್ಟಿಗೆ ಪ್ರಯೋಜನಕಾರಿಯಾಗಿ ಮುಂದುವರೆದಿದೆ, ಸಮುದಾಯದ ಸ್ಥಳೀಯವಾಗಿ ಅಗತ್ಯವೆಂದು ಭಾವಿಸಲಾದ ಆಕಾಂಕ್ಷೆಗಳನ್ನು ಪೂರೈಸುವಲ್ಲಿ, ದೇಶಾದ್ಯಂತ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಗಳ ಸೃಷ್ಟಿಗೆ, ಮೂಲಕ ಆತ್ಮ ನಿರ್ಭರ ಭಾರತದ ಉದ್ದೇಶವನ್ನು ಸಾಧಿಸಲು ಸಹಕಾರಿಯಾಗಿದೆ. ಅದರಂತೆ, ಕೇಂದ್ರ ಸಚಿವ ಸಂಪುಟವು ಈಗ 2021-22 ಹಣಕಾಸು ವರ್ಷದ ಉಳಿದ ಭಾಗದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂಪಿ ಲಾಡ್ಸ್) ಮರುಸ್ಥಾಪಿಸಲು ಮತ್ತು 15ನೇ ಹಣಕಾಸು ಆಯೋಗದ ಅವಧಿಯವರೆಗೆ ಅಂದರೆ 2025-26ರವರೆಗೆ ಎಂಪಿ ಲಾಡ್ಸ್ ಅನ್ನು ಮುಂದುವರಿಸಲು ನಿರ್ಧರಿಸಿದೆ.
  • 2021-22ನೇ ಹಣಕಾಸು ವರ್ಷದ ಉಳಿದ ಅವಧಿಗೆ ಪ್ರತಿ ಸಂಸದರಿಗೆ 2 ಕೋಟಿ ರೂ.ಗಳ ದರದಲ್ಲಿ ಮತ್ತು 2022-23ರಿಂದ 2025-26ನೇ ಹಣಕಾಸು ವರ್ಷಗಳಲ್ಲಿ ಸಂಸದರಿಗೆ ವಾರ್ಷಿಕ 5.00 ಕೋಟಿ ರೂ.ಗಳ ದರದಲ್ಲಿ ತಲಾ 2.5 ಕೋಟಿ ರೂ.ಗಳ ಕಂತಿನಲ್ಲಿ ಸಚಿವಾಲಯವು ಎಂಪಿ ಲಾಡ್ಸ್ ನಿಧಿಯನ್ನು ಬಿಡುಗಡೆ ಮಾಡಲಿದೆ. ಯೋಜನೆ ಪ್ರಾರಂಭವಾದಾಗಿನಿಂದ, ಒಟ್ಟು 19,86,206 ಕಾಮಗಾರಿಗಳು/ಯೋಜನೆಗಳು ಪೂರ್ಣಗೊಂಡಿದ್ದು, ಇದರ ಆರ್ಥಿಕ ವೆಚ್ಚ 54171.09 ಕೋಟಿ ರೂ. ಆಗಿದೆ.

ಆರ್ಥಿಕ ಪರಿಣಾಮ:

2021-22 ಹಣಕಾಸು ವರ್ಷದ ಉಳಿದ ಭಾಗ ಮತ್ತು 2025-26 ವರೆಗಿನ ಎಂಪಿ ಲಾಡ್ಸ್ ಮರು ಸ್ಥಾಪನೆ ಮತ್ತು ಮುಂದುವರಿಕೆಗೆ ಒಟ್ಟು ಆರ್ಥಿಕ ಪರಿಣಾಮ 17417.00 ಕೋಟಿ ರೂ. ಆಗಿದ್ದು ಕೆಳಗಿನಂತೆ ಇರುತ್ತದೆ:

ಹಣಕಾಸು ಪರಿಣಾಮ

(ಕೋಟಿ ರೂ.ಗಳಲ್ಲಿ)

1583.5

3965.00

3958.50

3955.00

3955.0

17417.00

ಹಣಕಾಸು ವರ್ಷ 2021-22 2022-23 2023-24 2024-25 2025-26 ಒಟ್ಟು ಹಂಚಿಕೆ

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:

  • ಎಂಪಿ ಲಾಡ್ ಯೋಜನೆಯು ಮಾರ್ಗಸೂಚಿಗಳ ಒಂದು ಸಮೂಹದಿಂದ ನಿಯಂತ್ರಿಸಲ್ಪಡುತ್ತದೆ, ಅವುಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ.
  • ಎಂಪಿ ಲಾಡ್ಸ್ ಅಡಿಯಲ್ಲಿ ಪ್ರಕ್ರಿಯೆಯು ಸಂಸದರು ನೋಡಲ್ ಜಿಲ್ಲಾ ಪ್ರಾಧಿಕಾರಕ್ಕೆ ಕಾಮಗಾರಿಗಳನ್ನು ಶಿಫಾರಸು ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಸಂಬಂಧಪಟ್ಟ ನೋಡಲ್ ಜಿಲ್ಲೆಯು ಸಂಸದರು ಶಿಫಾರಸು ಮಾಡಿದ ಅರ್ಹ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮತ್ತು ಕಾರ್ಯಗತಗೊಳಿಸಿದ ವೈಯಕ್ತಿಕ ಕಾಮಗಾರಿಗಳ ವಿವರಗಳನ್ನು ಮತ್ತು ಯೋಜನೆಯಡಿ ಖರ್ಚು ಮಾಡಿದ ಮೊತ್ತವನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸುತ್ತದೆ.

ಪರಿಣಾಮ:

  • ಎಂಪಿ ಲಾಡ್ಸ್ ಮರುಸ್ಥಾಪನೆ ಮತ್ತು ಮುಂದುವರಿಕೆಯು ಎಂಪಿ ಲಾಡ್ಸ್ ಅಡಿಯಲ್ಲಿ ಹಣದ ಕೊರತೆಯಿಂದಾಗಿ ನಿಲ್ಲಿಸಲಾದ / ಸ್ಥಗಿತವಾದ ಕ್ಷೇತ್ರದಲ್ಲಿನ ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು / ಕಾರ್ಯಗಳನ್ನು ಪುನರಾರಂಭಿಸುತ್ತವೆ.
  • ಇದು ಸ್ಥಳೀಯ ಸಮುದಾಯದ ಆಕಾಂಕ್ಷೆಗಳು ಮತ್ತು ಅಭಿವೃದ್ಧಿಯ ಅವಶ್ಯಕತೆಗಳನ್ನು ಪೂರೈಸಲು ಮತ್ತು ಬಾಳಿಕೆ ಬರುವ ಸ್ವತ್ತುಗಳ ಸೃಷ್ಟಿಯನ್ನು ಪುನರಾರಂಭಿಸುತ್ತದೆ, ಇದು ಎಂಪಿ ಲಾಡ್ಸ್ ಪ್ರಾಥಮಿಕ ಉದ್ದೇಶವಾಗಿದೆ.
  • ಇದು ಸ್ಥಳೀಯ ಆರ್ಥಿಕತೆಯನ್ನು ಪುನರುಜ್ಜೀವಗೊಳಿಸುವಲ್ಲಿಯೂ ಸಹಾಯ ಮಾಡುತ್ತದೆ.

ಹಿನ್ನೆಲೆ:

  • ಎಂಪಿ ಲಾಡ್ಸ್ ಕೇಂದ್ರ ವಲಯದ ಯೋಜನೆಯಾಗಿದ್ದು, ಭಾರತ ಸರ್ಕಾರದಿಂದ ಸಂಪೂರ್ಣವಾಗಿ ಧನಸಹಾಯ ಪಡೆಯುತ್ತದೆ. ಕುಡಿಯುವ ನೀರು, ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಮತ್ತು ರಸ್ತೆಗಳು ಮುಂತಾದ ಕ್ಷೇತ್ರಗಳಲ್ಲಿ ಬಾಳಿಕೆ ಬರುವ ಸಾಮುದಾಯಿಕ ಸ್ವತ್ತುಗಳ ಸೃಷ್ಟಿಗೆ ಒತ್ತು ನೀಡುವ ಅಭಿವೃದ್ಧಿ ಸ್ವರೂಪದ ಕಾಮಗಾರಿಗಳನ್ನು ಶಿಫಾರಸು ಮಾಡಲು ಸಂಸದರಿಗೆ ಅನುವು ಮಾಡಿಕೊಡುವುದು ಯೋಜನೆಯ ಉದ್ದೇಶವಾಗಿದೆ.
  • ಸಂಸತ್ ಸದಸ್ಯರ (ಎಂಪಿ) ಕ್ಷೇತ್ರದ ವಾರ್ಷಿಕ ಎಂಪಿ ಲಾಡ್ಸ್ ನಿಧಿಯ ಅರ್ಹತೆಯು 5 ಕೋಟಿ ರೂ.ಗಳಷ್ಟಿರುತ್ತದೆ, ಎಂಪಿ ಲಾಡ್ಸ್ ಮಾರ್ಗಸೂಚಿಗಳ ಪ್ರಕಾರ ಷರತ್ತುಗಳ ಈಡೇರಿಕೆಗೆ ಒಳಪಟ್ಟು ತಲಾ 2.5 ಕೋಟಿ ರೂ.ಗಳ ಎರಡು ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ.
  • ಸಚಿವಾಲಯವು ದೇಶಾದ್ಯಂತ 216 ಜಿಲ್ಲೆಗಳಲ್ಲಿ 2021 ರಲ್ಲಿ ಎಂಪಿ ಲಾಡ್ಸ್ ಕಾಮಗಾರಿಗಳ ಕುರಿತು ಮೂರನೇ ಪಕ್ಷಕಾರರಿಂದ ಮೌಲ್ಯಮಾಪನವನ್ನು ನಡೆಸಿತು. ಎಂಪಿ ಲಾಡ್ಸ್ ಮುಂದುವರಿಕೆಗೆ ಮೌಲ್ಯಮಾಪನ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

***