ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿಂದು ವಾರಾಣಸಿಯ ಕಾರ್ಪೊರೇಟರ್ ಗಳನ್ನು ಬರಮಾಡಿಕೊಂಡರು.
ಪ್ರವಾಸಿಗರಿಗೆ ನಗರ ಇನ್ನೂ ಹೆಚ್ಚು ಆಕರ್ಷಕವಾಗುವಂತೆ ಮಾಡಲು ಕೈಜೋಡಿಸುವಂತೆ ಪ್ರಧಾನಮಂತ್ರಿಯವರು ಕಾರ್ಪೊರೇಟರ್ ಗಳಿಗೆ ತಿಳಿಸಿದರು. ತಮ್ಮ ತಮ್ಮ ವಾರ್ಡ್ ಗಳಲ್ಲಿ ನೈರ್ಮಲ್ಯ ಕಾಪಾಡುವಂತೆಯೂ ಅವರು ಪ್ರೇರೇಪಿಸಿದರು.
ವಾರಾಣಸಿ ಲೋಕಸಭಾ ಕ್ಷೇತ್ರದ ಗ್ರಾಮಗಳ ಪ್ರಧಾನರು ಮತ್ತು ಕಾರ್ಪೊರೇಟರ್ ಗಳೊಂದಿಗೆ ಕಳೆದ ಐದು ದಿನಗಳಿಂದ ಪ್ರಧಾನಮಂತ್ರಿಯವರು ನಡೆಸಿದ ಸಂವಾದದ ಕೊನೆಯ ಕಾರ್ಯಕ್ರಮ ಇದಾಗಿದೆ.