ಹವಾಮಾನ ಸ್ಥಿತಿ ಸ್ಥಾಪಕತ್ವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸೆಪ್ಟೆಂಬರ್ 28ರ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶೇಷ ಲಕ್ಷಣಗಳುಳ್ಳ 35 ಬೆಳೆಗಳ ತಳಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಐಸಿಎಆರ್ ಕೇಂದ್ರಗಳು, ರಾಜ್ಯ ಹಾಗೂ ಕೇಂದ್ರ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ಗಳು ಈ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಂಡಿವೆ. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು, ರಾಯ್ಪುರದಲ್ಲಿ ಹೊಸದಾಗಿ ನಿರ್ಮಿಸಿರುವ ರಾಷ್ಟ್ರೀಯ ಬಯೋಟಿಕ್ ಒತ್ತಡ ಸಂಯಮ ಕೇಂದ್ರದ ಕ್ಯಾಂಪಸ್ ಅನ್ನು ಕೂಡ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಇದೇ ವೇಳೆ ಪ್ರಧಾನಮಂತ್ರಿ ಅವರು ಕೃಷಿ ವಿಶ್ವವಿದ್ಯಾಲಯಗಳಿಗೆ ಹಸಿರು ಕ್ಯಾಂಪಸ್ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ ಮತ್ತು ನವೀನ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ರೈತರ ಜತೆ ಸಂವಾದ ನಡೆಸುವರು ಮತ್ತು ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಕೇಂದ್ರ ಕೃಷಿ ಸಚಿವರು ಮತ್ತು ಛತ್ತೀಸ್ ಗಢದ ಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಶೇಷ ಲಕ್ಷಣಗಳುಳ್ಳ ಬೆಳೆಯ ತಳಿಗಳು
ಅಪೌಷ್ಟಿಕತೆ ಮತ್ತು ಹವಾಮಾನ ವೈಪರೀತ್ಯ ಈ ಎರಡೂ ಸವಾಲುಗಳನ್ನು ಎದುರಿಸಲು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ವಿಶೇಷ ಲಕ್ಷಣಗಳನ್ನು ಹೊಂದಿರುವ ಬೆಳೆಗಳ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಹವಾಮಾನ ಸ್ಥಿತಿ ಸ್ಥಾಪಕತ್ವ ಮತ್ತು ಹೆಚ್ಚಿನ ಪೌಷ್ಟಿಕಾಂಶದಂತಹ ವಿಶೇಷ ಅಂಶಗಳನ್ನು ಒಳಗೊಂಡಿರುವ 35 ಬಗೆಯ ವಿಶೇಷ ಲಕ್ಷಣಗಳ್ಳುಳ್ಳ ಬೆಳೆಗಳ ತಳಿಗಳು 2021ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ಬರವನ್ನು ತಡೆಯುವ ತಳಿಯಯ ಕಡಲೆ, ಮೊಸಾಯಿಕ್ ರೆಸಿಸ್ಟೆಂಟ್ ಪಿಜನ್ ಪಿಯಾ, ಆರಂಭಿಕ ಸೋಯಾ ಬಿನ್ ತಿಳಿಗಳು, ರೋಗವನ್ನು ನಿಗ್ರಹಿಸಿಕೊಳ್ಳುವಂತಹ ಭತ್ತದ ತಳಿ, ರಾಗಿ, ಗೋಧಿ, ಕಡಲೆ ಮೆಕ್ಕೆಜೋಳ, ಜೋಳ ಮತ್ತು ಹುರುಳಿಯೂ ಸೇರಿವೆ.
ಈ ವಿಶೇಷ ಲಕ್ಷಣಗಳ ಬೆಳೆ ಪ್ರಭೇದಗಳು ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೆಲವು ಬೆಳೆಗಳಲ್ಲಿ ಕಂಡು ಬರುವ ಪೌಷ್ಟಿಕಾಂಶ ನಿಗ್ರಹ ಅಂಶಗಳನ್ನು ಒಳಗೊಂಡಿವೆ. ಅಂತಹ ತಳಿಗಳ ಉದಾಹರಣೆ ಎಂದರೆ ಪೂಸಾ ಡಬಲ್ ಜೀರೋ ಸಾಸಿವೆ 33, ಫಸ್ಟ್ ಕೆನೋಲಾ ಕ್ವಾಲಿಟಿ ಹೈಬ್ರಿಡ್ ಆರ್ ಸಿಎಚ್1 ವಿತ್ <2% ಯೂರಿಸ್ ಆಸಿಡ್ ಮತ್ತು <30 ಗ್ಲೂಕೋಸೈನೋಲೇಟ್ಸ್ ಮತ್ತು ಸೋಯಾಬಿನ್ ತಳಿ ಎರಡು ಪೌಷ್ಟಿಕಾಂಶ ನಿಗ್ರಹ ಅಂಶಗಳನ್ನು ಒಳಗೊಂಡಿದ್ದು, ಅವುಗಳೆಂದರೆ ಕುನಿಟ್ಸ್ ಟ್ರೈಸ್ಪಿನ್ಸ್ ಇನ್ಹಿಬಿಟರ್ ಮತ್ತು ಲಿಪೊಸೈಜಿನೇಸ್ ಸೇರಿವೆ. ವಿಶೇಷ ಲಕ್ಷಣಗಳನ್ನು ಹೊಂದಿರುವ ಇತರ ತಳಿಗಳನ್ನು ಸೋಯಾಬಿನ್, ಬೇಳೆ, ಬೇಬಿಕಾರ್ನ್ ನಲ್ಲಿ ವಿಶೇಷ ತಳಿಗಳನ್ನೂ ಸಹ ಅಭಿವೃದ್ಧಿಪಡಿಸಲಾಗಿದೆ.
ರಾಷ್ಟ್ರೀಯ ಬಯೋಟಿಕ್ ಒತ್ತಡ ನಿರ್ವಹಣಾ ಸಂಸ್ಥೆ ಕುರಿತು
ಜೈವಿಕ ಒತ್ತಡಗಳಲ್ಲಿ ಮೂಲಭೂತ ಹಾಗೂ ಕಾರ್ಯತಾಂತ್ರಿಕ ಸಂಶೋಧನೆಗಳನ್ನು ಕೈಗೊಳ್ಳಲು, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ನೀತಿಗೆ ಬೆಂಬಲ ನೀಡುವುದಕ್ಕೆ ಸಂಬಂಧಿಸಿದಂತೆ ರಾಯ್ಪುರದಲ್ಲಿ ರಾಷ್ಟ್ರೀಯ ಬಯೋಟಿಕ್ ಒತ್ತಡ ನಿರ್ವಹಣಾ ಸಂಸ್ಥೆ ಸ್ಥಾಪಿಸಲಾಗಿದೆ. ಈ ಕೇಂದ್ರ 2020-21ನೇ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಕೋರ್ಸ್ ಗಳನ್ನು ಆರಂಭಿಸಿದೆ.
ಹಸಿರು ಕ್ಯಾಂಪಸ್ ಪ್ರಶಸ್ತಿ ಕುರಿತು
ರಾಜ್ಯ ಮತ್ತು ಕೇಂದ್ರ ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಕ್ಯಾಂಪಸ್ ಗಳನ್ನು ಇನ್ನಷ್ಟು ಹಸಿರು ಮತ್ತು ಸ್ವಚ್ಛವಾಗಿಟ್ಟುಕೊಳ್ಳುವ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅಥವಾ ಅಭಿವೃದ್ಧಿಗೊಳಿಸಲು ಉತ್ತೇಜಿಸಲು ಮತ್ತು ‘ಸ್ವಚ್ಛ ಭಾರತ್ ಮಿಷನ್’, ‘ತ್ಯಾಜ್ಯದಿಂದ ಸಂಪತ್ತು ಮಿಷನ್ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ 2020 ಪ್ರಕಾರ ಸಮುದಾಯದ ಜತೆ ಸಂಪರ್ಕ ಹೊಂದಲು ವಿದ್ಯಾರ್ಥಿಗಳನ್ನೂ ಸಹ ಉತ್ತೇಜಿಸಲು . ಗ್ರೀನ್ ಕ್ಯಾಂಪಸ್ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ.
***