Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಚಾರ್ಯ ವಿನೋಬಾ ಭಾವೆ ಜಯಂತಿ; ಪ್ರಧಾನ ಮಂತ್ರಿ ಅವರಿಂದ ಗೌರವ ನಮನ


ಸ್ವಾತಂತ್ರ್ಯ ಹೋರಾಟಗಾರ, ಚಿಂತಕ ಮತ್ತು ವಿದ್ವಾಂಸ ಆಚಾರ್ಯ ವಿನೋಬಾ ಭಾವೆ ಅವರ ಜಯಂತಿ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.

ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು:

ವಿನೋಬಾ ಭಾವೆ ಅವರು ಸಮಾಜದಲ್ಲಿದ್ದ ಅಸ್ಪೃಶ್ಯತೆಯ ಪ್ರಬಲ ವಿರೋಧಿಯಾಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಅವರು ಅಚಲ ಬದ್ಧತೆ ಹೊಂದಿದ್ದರು. ಅಹಿಂಸಾ ಮಾರ್ಗದ ಹೋರಾಟದಲ್ಲಿ ಅವರಿಗೆ ದೃಢ ನಂಬಿಕೆ ಇತ್ತು. ಅಲ್ಲದೆ, ಅವರು ಸದಾ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಎಲ್ಲಕ್ಕಿಂತ ಅವರು ಅತ್ಯಂತ ಶ್ರೇಷ್ಠ ಚಿಂತಕರಾಗಿದ್ದರು ಎಂದು ಮಹಾತ್ಮ ಗಾಂಧಿ ಬಣ್ಣಿಸಿದ್ದಾರೆ.”

ಆಚಾರ್ಯ ವಿನೋಬಾ ಭಾವೆ ಅವರ ಜಯಂತಿ ಸ್ಮರಣೆಯ ಗೌರವ ನಮನಗಳು. ಎಂದಿದ್ದಾರೆ.

ದೇಶ ಸ್ವಾತಂತ್ರ್ಯ ಗಳಿಸಿದ ನಂತರ ಆಚಾರ್ಯ ವಿನೋಬಾ ಭಾವೆ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಉದಾತ್ತ ತತ್ವ ಮತ್ತು ಸಿದ್ಧಾಂತಗಳನ್ನು  ಮುಂದುವರಿಸಿದರು. ದೇಶದ ಬಡವರು ಮತ್ತು ದೀನ ದಲಿತರಿಗೆ ಗುಣಮಟ್ಟದ ಜೀವನ ಖಾತ್ರಿಪಡಿಸಲು ಅವರು ಬೃಹತ್ ಸಾಮೂಹಿಕ ಚಳವಳಿಗಳನ್ನೇ ನಡೆಸಿದರು. ಸಮಷ್ಟಿ ಸ್ಫೂರ್ತಿಗೆ ಅವರು ಸದಾ ನೀಡುತ್ತಿದ್ದ ಆದ್ಯತೆ ಅಥವಾ ಒತ್ತು ಮುಂಬರುವ ಅನೇಕ ಪೀಳಿಗೆಗಳಿಗೆ ಯಾವಾಗಲೂ ಪ್ರೇರಣೆ ಮತ್ತು ಸ್ಫೂರ್ತಿ ಒದಗಿಸಲಿದೆಎಂದು ಪ್ರಧಾನ ಮಂತ್ರಿ ಟ್ವೀಟ್ ಮಾಡಿದ್ದಾರೆ.

***