ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರ ಸಮುದಾಯಕ್ಕೆ ಶುಭ ಕೋರಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಪ್ರಧಾನಮಂತ್ರಿಯವರು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ಹೀಗೆ ಸರಣಿ ಟ್ವೀಟ್ ಮಾಡಿದ್ದಾರೆ: “ಶಿಕ್ಷಕರ ದಿನದಂದು, ಯುವ ಮನಸ್ಸುಗಳನ್ನು ಪೋಷಿಸುವಲ್ಲಿ ಸದಾ ಪ್ರಮುಖ ಪಾತ್ರ ವಹಿಸಿರುವ ಇಡೀ ಬೋಧಕ ಸಮುದಾಯಕ್ಕೆ ಶುಭಾಶಯಗಳು. ಕೋವಿಡ್-19 ಸಮಯದಲ್ಲೂ ವಿದ್ಯಾರ್ಥಿಗಳ ಶೈಕ್ಷಣಿಕ ಪಯಣವನ್ನು ಶಿಕ್ಷಕರು ಆವಿಷ್ಕರಿಸಿದ ಮತ್ತು ಮುಂದುವರಿಸಿದ ಬಗೆ ಪ್ರಶಂಸನೀಯ.
ಡಾ. ಎಸ್. ರಾಧಾಕೃಷ್ಣನ್ ಅವರ ಜಯಂತಿಯಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಅವರ ವಿಶಿಷ್ಟ ಪಾಂಡಿತ್ಯ ಮತ್ತು ನಮ್ಮ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುತ್ತೇನೆ.”
***
On Teachers' Day, greetings to the entire teaching fraternity, which has always played a pivotal role in nurturing young minds. It is commendable how teachers have innovated and ensured the education journey of students continues in the COVID-19 times.
— Narendra Modi (@narendramodi) September 5, 2021
I pay my respects to Dr. S. Radhakrishnan on his Jayanti and recall his distinguished scholarship as well as contributions to our nation.
— Narendra Modi (@narendramodi) September 5, 2021