Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಶೂಟರ್ ಸಿಂಘ್ರಾಜ್ ಅಧಾನಾ ಅವರನ್ನು ಅಭಿನಂದಿಸಿದ ಪ್ರಧಾನಿ


ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಶೂಟರ್ ಸಿಂಘ್ರಾಜ್ ಅಧಾನ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, “ಅಧ್ಬುತ ಪ್ರತಿಭೆ ಸಿಂಘ್ರಾಜ್ ಅಧನಾ ಮತ್ತೊಮ್ಮೆ ಸಾಧನೆ ಮಾಡಿದ್ದಾರೆ! ಅವರು ಈ ಬಾರಿ ಮಿಶ್ರ 50 ಮೀಟರ್ ಪಿಸ್ತೂಲ್ SH1 ಸ್ಪರ್ಧೆಯಲ್ಲಿ ಮತ್ತೊಂದು ಪದಕವನ್ನು ಗೆದ್ದಿದ್ದಾರೆ. ಅವರ ಸಾಧನೆಯಿಂದ ಭಾರತವು ಸಂತೋಷಪಡುತ್ತದೆ. ಅವರಿಗೆ ಅಭಿನಂದನೆಗಳು. ಭವಿಷ್ಯದ ಪ್ರಯತ್ನಗಳಿಗೆ ಶುಭವಾಗಲಿ,” ಎಂದಿದ್ದಾರೆ.

***