ನನ್ನ ಆತ್ಮೀಯ ದೇಶವಾಸಿಗಳೇ, ನಿಮ್ಮೆಲ್ಲರಿಗೂ ನನ್ನ ನಮಸ್ಕಾರ.
ಕಳೆದ ವರ್ಷ ನಾವು ಹಲವು ಪರೀಕ್ಷೆಗಳನ್ನು ಎದುರಿಸಿದೆವು. ಬೇಸಿಗೆಯ ಬಿರು ಬಿಸಿಲು, ನೀರಿನ ಅಭಾವ, ಕ್ಷಾಮ ಪರಿಸ್ಥಿತಿ ಮತ್ತು ಇನ್ನೂ ಹಲವು. ಆದಾಗ್ಯೂ, ಕಳೆದ ಎರಡು ವಾರಗಳಿಂದ ಬೇರೆ ಬೇರೆ ಸ್ಥಳಗಳಿಂದ ಮಳೆ ಆರಂಭವಾದ ಸ್ವಾಗತಾರ್ಹ ಸುದ್ದಿ ಬರುತ್ತಿದೆ. ಇದರೊಂದಿಗೆ ತಾಜಾತನದ ಅನುಭವವೂ ಆಗುತ್ತಿದೆ. ನಿಮಗೂ ಈ ಅನುಭವಿಸಿರಬಹುದು. ವಿಜ್ಞಾನಿಗಳ ಮುನ್ಸೂಚನೆಯಂತೆ ಹೇಳುವುದಾದರೆ ಈ ಬಾರಿ ವ್ಯಾಪಕ ಮತ್ತು ವರ್ಷ ಋತುವಿನಾದ್ಯಂತ ಉತ್ತಮ ಮಳೆಯಾಗಲಿದೆ. ಈ ಸುದ್ದಿಯೊಂದೇ ಉತ್ಸಾಹದೊಂದಿಗೆ ನಮ್ಮನ್ನು ಬದಲಾಯಿಸುತ್ತದೆ. ನಾನು ನಮ್ಮ ಎಲ್ಲಾ ರೈತ ಸೋದರರಿಗೆ ಉತ್ತಮ ಮಳೆಗಾಲದ ವಿಶ್ವಾಸದೊಂದಿಗೆ ಶುಭಾಶಯಗಳನ್ನು ತಿಳಿಸುತ್ತೇನೆ.
ನನ್ನ ಆತ್ಮೀಯ ದೇಶವಾಸಿಗಳೇ, ನಿಮ್ಮೆಲ್ಲರಿಗೂ ನನ್ನ ನಮಸ್ಕಾರ.
ಕಳೆದ ವರ್ಷ ನಾವು ಹಲವು ಪರೀಕ್ಷೆಗಳನ್ನು ಎದುರಿಸಿದೆವು. ಬೇಸಿಗೆಯ ಬಿರು ಬಿಸಿಲು, ನೀರಿನ ಅಭಾವ, ಕ್ಷಾಮ ಪರಿಸ್ಥಿತಿ ಮತ್ತು ಇನ್ನೂ ಹಲವು. ಆದಾಗ್ಯೂ, ಕಳೆದ ಎರಡು ವಾರಗಳಿಂದ ಬೇರೆ ಬೇರೆ ಸ್ಥಳಗಳಿಂದ ಮಳೆ ಆರಂಭವಾದ ಸ್ವಾಗತಾರ್ಹ ಸುದ್ದಿ ಬರುತ್ತಿದೆ. ಇದರೊಂದಿಗೆ ತಾಜಾತನದ ಅನುಭವವೂ ಆಗುತ್ತಿದೆ. ನಿಮಗೂ ಈ ಅನುಭವಿಸಿರಬಹುದು. ವಿಜ್ಞಾನಿಗಳ ಮುನ್ಸೂಚನೆಯಂತೆ ಹೇಳುವುದಾದರೆ ಈ ಬಾರಿ ವ್ಯಾಪಕ ಮತ್ತು ವರ್ಷ ಋತುವಿನಾದ್ಯಂತ ಉತ್ತಮ ಮಳೆಯಾಗಲಿದೆ. ಈ ಸುದ್ದಿಯೊಂದೇ ಉತ್ಸಾಹದೊಂದಿಗೆ ನಮ್ಮನ್ನು ಬದಲಾಯಿಸುತ್ತದೆ. ನಾನು ನಮ್ಮ ಎಲ್ಲಾ ರೈತ ಸೋದರರಿಗೆ ಉತ್ತಮ ಮಳೆಗಾಲದ ವಿಶ್ವಾಸದೊಂದಿಗೆ ಶುಭಾಶಯಗಳನ್ನು ತಿಳಿಸುತ್ತೇನೆ.
ನಮ್ಮ ರಾಷ್ಟ್ರದಲ್ಲಿ, ರೈತರು ಶ್ರಮಪಡುವಂತೆ, ನಮ್ಮ ವಿಜ್ಞಾನಿಗಳೂ ಕೂಡ ಹಲವು ರಂಗಗಳಲ್ಲಿ ಯಶಸ್ಸು ಸಾಧಿಸುವ ಮೂಲಕ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ನಮ್ಮ ನವ ಪೀಳಿಗೆ ಕೂಡ ವಿಜ್ಞಾನಿಗಳಾಗುವ ಕನಸು ಕಾಣಲಿ, ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿಕೊಳ್ಳಲಿ ಎಂದು ನಾನು ಮೊದಲಿನಿಂದಲೂ ನಂಬಿಕೆ ಇಟ್ಟಿದ್ದೇನೆ ಮತ್ತು ನಮ್ಮ ಯುವಕರು ಮುಂದಿನ ಪೀಳಿಗೆಗಳಿಗಾಗಿ ಏನಾದರೂ ಮಾಡಿ ಹೋಗುವ ಉತ್ಸಾಹದೊಂದಿಗೆ ಮುಂದಡಿ ಇಡಬೇಕು. ನಾನು ಇನ್ನೂ ಒಂದು ಪ್ರಕಾಶಮಾನವಾದ ಸುದ್ದಿಯನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನಾನು ನಿನ್ನೆ ಸ್ಮಾರ್ಟ್ ಸಿಟಿ ಯೋಜನೆಯ ವಾರ್ಷಿಕೋತ್ಸವದ ಅಂಗವಾಗಿ ಪುಣೆಗೆ ಹೋಗಿದ್ದೆ. ಅಲ್ಲಿ ನಾನು, ಕಳೆದ 22ರಂದು ಉಡಾವಣೆಯಾದ ಉಪಗ್ರಹಗಳ ಪೈಕಿ ಒಂದನ್ನು ಸ್ವ ಶ್ರಮದಿಂದ ನಿರ್ಮಿಸಿದ ಪುಣೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದೆ. ನನ್ನನ್ನು ಭೇಟಿ ಮಾಡಲು ಅವರನ್ನು ಕರೆಸಿಕೊಂಡಿದ್ದೆ. ಈ ಯುವ ಗೆಳೆಯರನ್ನು ನೋಡುವ, ಅವರೊಂದಿಗೆ ಮಾತನಾಡುವ ಮನಸ್ಸಾಗಿತ್ತು. ಅವರನ್ನು ಭೇಟಿಯಾಗೋಣ, ಅವರಲ್ಲಿರುವ ಉತ್ಸಾಹ, ಚೈತನ್ಯದ ಅನುಭವ ನನಗೂ ಆಗಲಿ ಎಂದು ಅಪೇಕ್ಷಿಸಿದೆ. ಕಳೆದ ಕೆಲವು ವರ್ಷಗಳಿಂದ ಹಲವು ವಿದ್ಯಾರ್ಥಿಗಳು ಈ ಯೋಜನೆಗೆ ತಮ್ಮ ಕೊಡುಗೆ ನೀಡಿದ್ದಾರೆ. ಈ ಹಾದಿಯಲ್ಲಿ ಈ ಶೈಕ್ಷಣಿಕ ಉಪಗ್ರಹ ಒಂದು ರೀತಿಯಲ್ಲಿ ಯುವ ಭಾರತದ ಉತ್ಸಾಹದ ಉಡ್ಡಯನಕ್ಕೆ ಮತ್ತು ಮಹತ್ವಾಕಾಂಕ್ಷೆಗೆ ಜೀವಂತ ಉದಾಹರಣೆಯಾಗಿದೆ ಮತ್ತು ಇದನ್ನು ನಮ್ಮ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಈ ಪುಟ್ಟ ಉಪಗ್ರಹದ ಹಿಂದಿರುವ ಕನಸು ಬೃಹತ್ ಮತ್ತು ಅತ್ಯುನ್ನತವಾದ್ದು. ಅವು ಆಕಾಶದೆತ್ತರಕ್ಕೆ ಹಾರಬಲ್ಲವು. ಹಾಗೂ ಅದಕ್ಕೆ ಅವರು ಹಾಕಿಸುವ ಪರಿಶ್ರಮ ಬಹಳ ಆಳವಾದುದಾಗಿದೆ. ಪುಣೆಯ ವಿದ್ಯಾರ್ಥಿಗಳು ಸಾಧನೆ ಮಾಡಿದಂತೆಯೇ, ತಮಿಳುನಾಡಿನ ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೂಡ ಒಂದು ಉಪಗ್ರಹ ನಿರ್ಮಿಸಿದ್ದರು ಹಾಗೂ ಆ ಸತ್ಯಭಾಮ ಉಪಗ್ರಹವನ್ನು ಕೂಡ ಉಡಾವಣೆ ಮಾಡಲಾಯಿತು.ಆಕಾಶವನ್ನೇ ಮುಟ್ಟಬೇಕೆಂಬ ಹಾಗೂ ಕೆಲವು ನಕ್ಷತ್ರಗಳನ್ನು ಕೈಯಲ್ಲಿ ಹಿಡಿಯಬೇಕೆಂಬ ಆಸೆ ಪ್ರತಿಯೊಂದು ಮಗುವಿನ ಮನಸ್ಸಿನಲ್ಲೂ ಮೂಡುತ್ತದೆ ಎಂಬ ಬಗ್ಗೆ ನಾವು ಬಾಲ್ಯದಲ್ಲಿ ಕೇಳಿದ್ದೇವೆ. ಇದನ್ನೇ ಗಮನದಲ್ಲಿಟ್ಟುಕೊಂಡು ಇಸ್ರೋ ಉಡಾವಣೆ ಮಾಡಿದ, ವಿದ್ಯಾರ್ಥಿಗಳು ನಿರ್ಮಿಸಿದ ಎರಡೂ ಉಪಗ್ರಹಗಳು ನನ್ನ ದೃಷ್ಟಿಯಲ್ಲಿ ಬಹಳ ಮಹತ್ವವಾದುದಾಗಿವ ಮತ್ತು ಮೌಲ್ಯಯುತವಾದುದಾಗಿವೆ. ಈ ಎಲ್ಲಾ ವಿದ್ಯಾರ್ಥಿಗಳು ಹೃದಯಾಂತರಾಳದ ಅಭಿನಂದನೆಗೆ ಅರ್ಹರಾಗಿದ್ದಾರೆ. ಅದೇ ವೇಳೆ ಜೂನ್ 22ರಂದು ಇಸ್ರೋದ ನಮ್ಮ ವಿಜ್ಞಾನಿಗಳು 20 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಹಿಂದಿನ ತಮ್ಮದೇ ದಾಖಲೆಯನ್ನು ಮುರಿದು ಮತ್ತೊಂದು ಹೊಸ ದಾಖಲೆ ಮಾಡಿದ್ದಾರೆ. ಇದಕ್ಕಾಗಿ ದೇಶದ ಎಲ್ಲ ಜನತೆಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮತ್ತು ಮತ್ತೊಂದು ಸಂತಸದ ಸಂಗತಿ ಎಂದರೆ ಈ ಹಾರಿ ಬಿಡಲಾದ 20 ಉಪಗ್ರಹಗಳ ಪೈಕಿ 17 ಉಪಗ್ರಹಗಳು ಅನ್ಯ ದೇಶಗಳದಾಗಿವೆ. ಅಮರಿಕ ಸೇರಿದಂತೆ ಅನೇಕ ದೇಶಗಳ ಉಪಗ್ರಹ ಉಡಾವಣೆಯನ್ನು ನಮ್ಮ ವಿಜ್ಞಾನಿಗಳು ಭಾರತದ ನೆಲದಿಂದ ಮಾಡಿದ್ದಾರೆ. ಹಾಗೂ ಇದರೊಂದಿಗೆ ನಮ್ಮ ವಿದ್ಯಾರ್ಥಿಗಳು ನಿರ್ಮಿಸಿದ ಎರಡು ಉಪಗ್ರಹಗಳೂ ಅಂತರಿಕ್ಷ ತಲುಪಿವೆ. ಅಲ್ಪ ವೆಚ್ಚ ಮತ್ತು ಯಶಸ್ಸಿನ ಖಾತರಿಯೊಂದಿಗೆ ವಿಶ್ವದಲ್ಲಿ ಇಸ್ರೋ ಮಹತ್ವದ ಸ್ಥಾನ ಪಡೆದುಕೊಂಡಿರುವುದೂ ಉಲ್ಲೇಖಾರ್ಹ. ಈ ಕಾರಣದಿಂದಾಗಿ ವಿಶ್ವದ ಅನೇಕ ದೇಶಗಳು ತಮ್ಮ ಉಪಗ್ರಹಗಳ ಉಡಾವಣೆಗಾಗಿ ಈಗ ಭಾರತದ ಕಡೆ ನೋಡುತ್ತಿವೆ.
ನನ್ನ ಆತ್ಮೀಯ ದೇಶವಾಸಿಗಳೇ, ನನ್ನ ಪ್ರೀತಿಯ ದೇಶವಾಸಿಗಳೆ, “ಮಗಳನ್ನು ಉಳಿಸಿ – ಮಗಳನ್ನು ಓದಿಸಿ’ (ಬೇಟಿ ಬಚಾವೋ, ಬೇಟಿ ಪಡಾವೋ) ಎಂಬುದು ಈಗ ಭಾರತದಲ್ಲಿ ಜನರ ಆಶಯ ಹಾಗೂ ಮನದ ಮಾತಾಗಿ ಹೋಗಿದೆ. ಕೆಲವು ಘಟನೆಗಳು ಅದಕ್ಕೆ ಹೊಸ ಜೀವ ತುಂಬುತ್ತವೆ, ಈ ಸಲದ 10ಹಾಗೂ 12ನೇ ತರಗತಿ ಪರೀಕ್ಷೆಗಳ ಫಲಿತಾಂಶದಲ್ಲಿ ನಮ್ಮ ಹೆಣ್ಣು ಮಕ್ಕಳು ಭಾರೀ ಯಶಸ್ಸು ಸಾಧಿಸಿದ್ದಾರೆ ಇದು ಹೆಮ್ಮೆಯ ವಿಷಯವಾಗಿದೆ. ನನ್ನ ಆತ್ಮೀಯ ದೇಶವಾಸಿಗಳೆ ನಾವು ಮತ್ತೂ ಒಂದು ಮಹತ್ವದ ಸಂಗತಿಯ ಬಗ್ಗೆ ಹೆಮ್ಮೆಪಡೋಣ. ಇದೇ ಜೂನ್ 18ರಂದು ಭಾರತೀಯ ವಾಯುಪಡೆಯ ಮೊಟ್ಟ ಮೊದಲ ಮಹಿಳಾ ಯುದ್ಧ ವಿಮಾನ ಪೈಲಟ್ ಗಳ ತಂಡ ಭಾರತೀಯ ವಾಯುಪಡೆಯಲ್ಲಿ ಸೇರ್ಪಡೆಯಾಗಿದೆ. ಇದನ್ನು ಕೇಳಿದಾಗ ರೋಮಾಂಚಿತರಾಗಿಬಿಡುತ್ತೇವೆ ಅಲ್ಲವೇ. ನಮ್ಮ ಮೂವರು ಪುತ್ರಿಯರಾದ ಫ್ಲೈಯಿಂಗ್ ಆಫೀಸರ್ ಅವನೀತ್ ಚತುರ್ವೇದಿ, ಭಾವನಾಕಂಠ್ ಮತ್ತು ಮೋಹನಾ ನಮಗೆ ಗೌರವ ತಂದುಕೊಟ್ಟಿದ್ದಾರೆ. ನಿಜಕ್ಕೂ ಇದು ಅದೆಷ್ಟು ಹೆಮ್ಮೆ ಎನಿಸುತ್ತದೆ. ಫ್ಲೈಯಿಂಗ್ ಆಫೀಸರ್ ಅವನೀತ್, ಮಧ್ಯ ಪ್ರದೇಶದವರು. ಫ್ಲೈಯಿಂಗ್ ಆಫೀಸರ್ ಭಾವನಾ, ಬಿಹಾರದ ಬೆಗೂಸರಾಯಿನವರು ಮತ್ತು ಫ್ಲೈಯಿಂಗ್ ಆಫೀಸರ್ ಮೋಹನಾ, ಗುಜರಾತಿನ ವಡೋದರಾದವರು. ನೀವೆಲ್ಲಾ ಗಮನಿಸಿರಬಹುದು, ಈ ಮೂವರೂ ಪುತ್ರಿಯರು ಭಾರತದ ಮೋಟ್ರೋ ನಗರಗಳಿಂದ ಬಂದವರಲ್ಲ, ಅವರು ತಮ್ಮ ತಮ್ಮ ರಾಜ್ಯಗಳ ರಾಜಧಾನಿಗಳಿಂದಲೂ ಬಂದವರಲ್ಲ. ಇವರು ಚಿಕ್ಕ ಪಟ್ಟಣಗಳಿಂದ ಬಂದವರಾದರೂ ಮುಗಿಲೆತ್ತರದ ಕನಸು ಕಂಡರು ಹಾಗೂ ಅದನ್ನು ಸಾಧಿಸಿ ತೋರಿಸಿದರು. ನಾನು ಅವನೀ, ಮೋಹನಾ, ಭಾವನಾ ಈ ಮೂವರೂ ಪುತ್ರಿಯರಿಗೆ ಹಾಗೂ ಅವರ ಪಾಲಕರಿಗೆ ಹೃತ್ಪೂರ್ವಕ ಶುಭಾಶಯವನ್ನು ತಿಳಿಸುತ್ತೇನೆ.
ನನ್ನ ಆತ್ಮೀಯ ದೇಶವಾಸಿಗಳೇ, ಕೆಲವು ದಿನಗಳ ಹಿಂದೆ ಜೂನ್ 21ರಂದು ಇಡೀ ವಿಶ್ವವೇ ಅಂತಾರಾಷ್ಟ್ರೀಯ ಯೋಗ ದಿನದ 2ನೇ ವಾರ್ಷಿಕೋತ್ಸವದ ಭವ್ಯ ಪ್ರದರ್ಶನ ಆಯೋಜಿಸಿತ್ತು. ಒಬ್ಬ ಭಾರತೀಯನಾಗಿ ಇಡೀ ವಿಶ್ವ ಯೋಗದೊಡನೆ ಕೂಡಿಕೊಂಡಾಗ, ಇಡೀ ವಿಶ್ವ ನಮ್ಮ ನಿನ್ನೆ, ಇಂದು ಮತ್ತು ನಾಳೆಗಳೊಡನೆ ನಂಟು ಹೊಂದುತ್ತಿದೆ ಎಂದೂ ನಮಗನ್ನಿಸುತ್ತದೆ. ವಿಶ್ವದೊಡನೆ ನಮ್ಮ ಒಂದು ಅದ್ಭುತ ಸಂಬಂಧ ಬೆಳೆಯುತ್ತಿದೆ. ಭಾರತದಲ್ಲೂ ಒಂದು ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಬಹಳ ಉತ್ಸಾಹ, ಆಸಕ್ತಿಯೊಂದಿಗೆ ವೈವಿಧ್ಯಮಯ, ವರ್ಣರಂಜಿತ ವಾತಾವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿತು. ನನಗೂ ಕೂಡಾ ಚಂಡೀಗಢದಲ್ಲಿ ಸಹಸ್ರಾರು ಯೋಗ ಪ್ರೇಮಿಗಳೊಡನೆ ಹಾಗೂ ಅವರ ನಡುವೆ ಯೋಗ ಮಾಡುವ ಅವಕಾಶ ದೊರಕಿತು. ಆಬಾಲವೃದ್ಧರೆಲ್ಲರಾದಿಯಾಗಿ ಎಲ್ಲರ ಉತ್ಸಾಹ ನೋಡುವುದು ಯೋಗ್ಯವೆನಿಸಿತು. ಕಳೆದ ವಾರ ಭಾರತ ಸರ್ಕಾರ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗದ ಅಂಗವಾಗಿ ಸೂರ್ಯ ನಮಸ್ಕಾರದ ಅಂಚೆ ಚೀಟಿ ಬಿಡುಗಡೆ ಮಾಡಿದ್ದನ್ನು ನೀವು ಗಮನಿಸಿರಬಹುದು. ಈ ಬಾರಿ ವಿಶ್ವದಲ್ಲಿ ಯೋಗ ದಿನದ ಜತೆ ಜತೆಯಲ್ಲೇ ಇನ್ನೂ ಎರಡು ಸಂಗತಿಗಳ ಬಗ್ಗೆ ವಿಶ್ವದ ವಿಶೇಷ ಗಮನ ಹರಿದಿದ್ದನ್ನು ನೀವು ಗಮನಿಸಿರಬಹುದು. ಒಂದು ಅಮೆರಿಕದ ನ್ಯೂಯಾರ್ಕ್ ನಗರದ ಯು.ಎನ್.ಓ. ಪ್ರಧಾನ ಕಚೇರಿ ಇರುವ ಕಟ್ಟಡದ ಮೇಲೆ ಯೋಗಾಸನದ ವಿವಿಧ ಭಂಗಿಗಳ ವಿಶೇಷ ಪ್ರದರ್ಶನ ವ್ಯವಸ್ಥೆ ಮಾಡಿದ್ದರು, ಅಲ್ಲಿ ಓಡಾಡುತ್ತಿದ್ದ ಜನರು ಅದರ ಛಾಯಾಚಿತ್ರ ತೆಗೆದುಕೊಳ್ಳುತ್ತಿದ್ದರು ಹಾಗೂ ಈ ಚಿತ್ರಗಳು ವಿಶ್ವದಾದ್ಯಂತ ವಿನಿಮಯವಾದವು. ನೀವೇ ಹೇಳಿ, ಯಾವ ಭಾರತೀಯನಿಗೆ ಇದು ಹೆಮ್ಮೆ ತರದೇ ಇರುವುದಿಲ್ಲ. ಇನ್ನೂ ಒಂದು ಆಕರ್ಷಕ ಸಂಗತಿ ನಡೆಯಿತು. ತಂತ್ರಜ್ಞಾನ ತನ್ನ ಕೆಲಸ ಮಾಡುತ್ತಿದೆ. ಸಾಮಾಜಿಕ ತಾಣಗಳು ತನ್ನ ಅಸ್ತಿತ್ವವನ್ನು ಕಂಡುಕೊಂಡುಬಿಟ್ಟಿವೆ ಹಾಗೂ ಈ ಬಾರಿ ಯೋಗದಿನದಂದು ಟ್ವೀಟರ್, ಯೋಗ ದೃಶ್ಯಗಳೊಂದಿಗೆ ಸಂಭ್ರಮದ ಸಣ್ಣಪುಟ್ಟ ಪ್ರಯೋಗಗಳನ್ನೂ ಮಾಡಿತು. ಹ್ಯಾಶ್ ಟ್ಯಾಗ್ ಯೋಗಾ ಡೇ ಟ್ವೀಟ್ ಮಾಡುತ್ತಿದ್ದಂತೆ, ಯೋಗ ಕುರಿತ ಚಿತ್ರಗಳು ನಮ್ಮ ಮೊಬೈಲ್ ನಲ್ಲಿ ಬಂದು ಬಿಡುತ್ತಿದ್ದವು ಹಾಗೂ ಇಡೀ ವಿಶ್ವದಲ್ಲಿ ಒಮ್ಮೆಗೇ ಪ್ರಚುರಗೊಂಡವು. ಯೋಗದ ಅರ್ಥವೇ ನಂಟು ಬಳೆಸುವುದು ಎಂದು. ಇಡೀ ವಿಶ್ವವನ್ನು ಒಗ್ಗೂಡಿಸುವ ಸಾಮರ್ಥ್ಯ ಯೋಗಕ್ಕಿದೆ. ಅದು ಸಾಧ್ಯವಾಗಬೇಕಾದರೆ ನಾವು ಯೋಗದೊಡನೆ ನಂಟು ಬೆಳೆಸಿಕೊಳ್ಳುವುದರ ಅಗತ್ಯವಿದೆ.
ಮಧ್ಯ ಪ್ರದೇಶದ ಸತ್ನಾದಿಂದ ಸ್ವಾತಿ ಶ್ರೀವಾಸ್ತವ ಈ ಯೋಗ ದಿವಸದ ನಂತರ ನನಗೆ ಟೆಲಿಫೋನ್ ಮಾಡಿದರು ಹಾಗೂ ನಿಮ್ಮಲ್ಲರಿಗೂ ಸಂದೇಶ ಒಂದನ್ನು ಕೊಟ್ಟರು. ಆದರೆ ಅದು ನನಗೇ ಹೆಚ್ಚು ಅನ್ವಯಿಸುತ್ತದೆ ಎಂದು ನನಗನ್ನಿಸುತ್ತದೆ: – .
ಧ್ವನಿ: – “ನನ್ನ ಇಡೀ ದೇಶ ಆರೋಗ್ಯವಾಗಿರಲಿ, ಅದರ ಬಡ ಜನರೂ ನಿರೋಗಿಗಳಾಗಿರಲಿ ಎಂದು ನಾನು ಬಯಸುವೆ. ಇದಕ್ಕಾಗಿ ದೂರದರ್ಶನದಲ್ಲಿ ಬರುವ ಜಾಹೀರಾತುಗಳಲ್ಲಿ ಯಾವುದಾದರೂ ಒಂದು ಜಾಹೀರಾತು ಯೋಗ ಮಾಡುವುದು ಹೇಗೆ, ಅದರ ಉಪಯೋಗವೇನು ಎಂಬುದಾಗಿರಲಿ ಎಂದು ನಾನುಅಪೇಕ್ಷಿಸುವೆ”.
ಸ್ವಾತಿಜೀಯವರೆ ನಿಮ್ಮ ಸಲಹೆ ಉತ್ತಮವಾಗಿದೆ. ಆದರೆ, ತಾವು ಸ್ವಲ್ಪ ಗಮನವಿಟ್ಟು ನೋಡಿದರೆ ಕೇವಲ ದೂರದರ್ಶನದಲ್ಲಷ್ಟೇ ಅಲ್ಲ, ಈ ದಿನಗಳಲ್ಲಿ ಭಾರತ ಹಾಗೂ ಭಾರತದ ಹೊರಗೆ ಟಿವಿ ಮಾಧ್ಯಮದಲ್ಲಿ ಪ್ರತಿನಿತ್ಯ ಯೋಗ ಕುರಿತು ಪ್ರಚಾರವಾಗುತ್ತಿದೆ. ಭಾರತ ಹಾಗೂ ಜಗತ್ತಿನ ಎಲ್ಲಾ ಟಿವಿ ವಾಹಿನಿಗಳು ಒಂದಲ್ಲಾ ಒಂದು ಈ ಕೆಲಸದಲ್ಲಿ ತಮ್ಮ ಕೊಡುಗೆ ನೀಡುತ್ತಾ ಬಂದಿವೆ ಎಂಬುದು ನಿಮಗೆ ಗೊತ್ತಾಗುತ್ತದೆ. ಪ್ರತಿಯೊಬ್ಬರದ್ದೂ ಬೇರೆ ಬೇರೆ ಸಮಯದಲ್ಲಿ ತೋರಿಸುತ್ತಿದ್ದಾರೆ ಅಷ್ಟೇ. ಆದರೆ, ನೀವು ಸ್ವಲ್ಪ ಗಮನಿಸಿದರೆ ಯೋಗ ಕುರಿತ ಮಾಹಿತಿಗಾಗಿಯೇ ಇದೆಲ್ಲಾ ನಡೆಯುತ್ತದೆ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲ ಜಗತ್ತಿನ ಕೆಲವು ದೇಶಗಳಲ್ಲಿ 24 ಗಂಟೆಯೂ ಯೋಗಕ್ಕೆ ಮುಡಿಪಾದ ವಾಹಿನಿಗಳು ಕೆಲಸ ಮಾಡುತ್ತಿವೆ ಎಂಬುದನ್ನು ನಾನು ನೋಡಿರುವೆ. ನಾನು ಜೂನ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಟ್ವಿಟರ್ ಮತ್ತು ಫೇಸ್ ಬುಕ್ ಗಳಲ್ಲಿ ಪ್ರತಿನಿತ್ಯ ಒಂದು ಹೊಸ ಆಸನದ ವೀಡಿಯೋ ಹಂಚಿಕೊಳ್ಳುತ್ತಿದ್ದೆ. ನೀವು ಆಯುಷ್ ಸಚಿವಾಲಯದ ವೆಬ್ ಸೈಟ್ ಗೆ ಹೋದರೆ 40ರಿಂದ 45 ನಿಮಿಷದ ವಿಡಿಯೋದಲ್ಲಿ ಒಂದರ ನಂತರ ಒಂದರಂತೆ ದೇಹದ ಭಿನ್ನ ಭಿನ್ನ ಭಾಗಗಳಿಗಾಗಿ ಯಾವ ರೀತಿಯ ಯೋಗ ಮಾಡಬಹುದು, ಎಲ್ಲಾ ವಯಸ್ಸಿನವರು ಮಾಡಬಹುದಾದ ಸರಳ ಯೋಗ ವಿಧಾನಗಳ ಒಂದು ಉತ್ತಮ ವೀಡಿಯೋ ನೋಡಬಹುದಾಗಿದೆ. ನಾನು ನಿಮಗೂ ಹಾಗೂ ನಿಮ್ಮ ಮೂಲಕ ಎಲ್ಲಾ ಯೋಗ ಆಸಕ್ತರಿಗೂ ಇದರೊಡನೆ ಸಂಪರ್ಕ ಹೊಂದುವಂತೆ ಕೋರುತ್ತೇನೆ.
ನಾನು ಈ ಬಾರಿ ಒಂದು ಕರೆ ನೀಡಿದ್ದೇನೆ. ಅದೇನೆಂದರೆ ಯೋಗ ರೋಗ ದೂರಮಾಡುವ ಸಾಧನ ಎಂದು ನಾವೆಲ್ಲಾ ಹೇಳುತ್ತೇವೆ. ಯೋಗದಲ್ಲಿ ಹಲವು ವಿಭಿನ್ನ ಚಿಂತನಾ ಕ್ರಮಗಳಿವೆ, ಅದನ್ನು ಪಾಲಿಸುವವರೆಲ್ಲರೂ ಏಕೆ ಒಟ್ಟಾಗಬಾರದು? ಪ್ರತಿಯೊಬ್ಬರಿಗೂ ಅವರದೇ ಆದ ವಿಧಾನಗಳಿವೆ. ಅವರವರದೇ ಆದ್ಯತೆಗಳಿವೆ. ಪ್ರತಿಯೊಬ್ಬರದೂ ವಿಭಿನ್ನ ಅನುಭವ. ಆದರೆ, ಎಲ್ಲರ ಅಂತಿಮ ಗುರಿ ಒಂದೇ. ನಾವು ಈ ವರ್ಷವಿಡೀ ಮಧುಮೇಹ ಅಂದರೆ ಸಕ್ಕರೆ ಕಾಯಿಲೆ ವಿರುದ್ಧ ಯೋಗದ ಮೂಲಕ ಒಂದು ಯಶಸ್ವಿ ಅಭಿಯಾನ ನಡೆಸಲು ನಮ್ಮಿಂದ ಸಾಧ್ಯವೇ ಎಂದು ವಿವಿಧ ಪ್ರಕಾರಗಳಲ್ಲಿ ಯೋಗ ನಡೆಸುತ್ತಿರುವವರಿಗೆ, ವಿವಿಧ ಪ್ರಕಾರಗಳ ಯೋಗ ಸಂಸ್ಥೆಗಳಿಗೆ, ವಿಭಿನ್ನ ಯೋಗ ಗುರುಗಳಿಗೆ ಎಲ್ಲರಿಗೂ ನಾನು ಈ ಮನವಿ ಮಾಡಿರುವೆ. ಯೋಗದಿಂದ ಮಧುಮೇಹ ನಿಯಂತ್ರಿಸಲು ಸಾಧ್ಯವಾಗುತ್ತದೆಯೇ? ಕೆಲವರಿಗೆ ಈ ನಿಟ್ಟಿನಲ್ಲಿ ಯಶಸ್ಸು ಸಿಕ್ಕಿದೆ. ಪ್ರತಿಯೊಬ್ಬರೂ ತಮ್ಮ ತಮ್ಮದೇ ಆದ ದಾರಿ ಕಂಡುಕೊಂಡಿದ್ದಾರೆ. ಸಕ್ಕರೆ ಕಾಯಿಲೆಗೆ ಚಿಕಿತ್ಸೆ ಇಲ್ಲ ಎಂಬುದು ನಮಗೆ ಗೊತ್ತು. ಔಷಧಿ ಸೇವಿಸುತ್ತಲೇ ಅದರೊಂದಿಗೇ ಬದುಕಬೇಕಾಗುತ್ತದೆ. ಮಧುಮೇಹ ಒಂದು ರೀತಿಯಲ್ಲಿ ರಾಜಕಾಯಿಲೆ. ಏಕಂದರೆ ಅದು ಉಳಿದೆಲ್ಲಾ ರೋಗಗಳಿಗೆ ಯಜಮಾನನಾಗಿಬಿಡುತ್ತದೆ. ವಿಭಿನ್ನ ಕಾಯಿಲೆಗಳಿಗೆ ಅದು ಪ್ರವೇಶ ದ್ವಾರವಾಗುತ್ತದೆ. ಹಾಗೂ ಈ ಕಾರಣಕ್ಕಾಗಿಯೇ ಎಲ್ಲರೂ ಮಧುಮೇಹದಿದ ಪಾರಾಗಲು ಬಯಸುತ್ತಾರೆ. ಹಲವರು ಈ ನಿಟ್ಟಿನಲ್ಲಿ ಕೆಲಸವನ್ನೂ ಮಾಡಿದ್ದಾರೆ. ಕೆಲವು ಸಕ್ಕರೆ ಕಾಯಿಲೆ ರೋಗಿಗಳಂತೂ ತಮ್ಮ ಯೋಗಾಭ್ಯಾಸದ ಮೂಲಕ ಅದನ್ನು ಹತೋಟಿಯಲ್ಲಿ ಇಟ್ಟಿದ್ದಾರೆ. ನಾವೇಕೆ ನಮ್ಮ ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳಬಾರದು? ಇದಕ್ಕೊಂದು ಚಾಲನೆ ನೀಡೋಣ. ವರ್ಷಪೂರ್ತಿ ಇಂಥದ್ದೊಂದು ವಾತಾವರಣ ನಿರ್ಮಾಣ ಮಾಡೋಣ. ಹ್ಯಾಶ್ ಟ್ಯಾಗ್ ಯೋಗ ಫೈಟ್ಸ್ ಡಯಾಬಿಟಿಸ್ ನಲ್ಲಿ ಇನ್ನೊಮ್ಮೆ ಹೇಳುತ್ತೇನೆ ಹ್ಯಾಶ್ ಟ್ಯಾಗ್ ಯೋಗ ಫೈಟ್ಸ್ ಡಯಾಬಿಟಿಸ್ ನ್ನು ಬಳಸಿಕೊಂಡು ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ ಅಥವಾ ನನ್ನ ನರೇಂದ್ರ ಮೋದಿ ಆಪ್ ಗೆ ಕಳುಹಿಸಿ ಎಂದು ನಿಮ್ಮಲ್ಲಿ ನಾನು ಮನವಿ ಮಾಡುತ್ತೇನೆ. ಯಾರ ಬಳಿ ಏನು ಅನುಭವ ಇದೆ ನೋಡೋಣ. ಪ್ರಯತ್ನವನ್ನಾದರೂ ಮಾಡೋಣ. ಹ್ಯಾಶ್ ಟ್ಯಾಗ್ ಯೋಗ ಫೈಟ್ಸ್ ಡಯಾಬಿಟಿಸ್ ನಲ್ಲಿ ನಿಮ್ಮ ಅನುಭವವನ್ನು ಹಂಚಿಕೊಳ್ಳಿ ಎಂದು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ.
ನನ್ನ ಆತ್ಮೀಯ ದೇಶವಾಸಿಗಳೇ, ಆಗಾಗ ನನ್ನ ಮನದ ಮಾತಿನ ಬಗ್ಗೆ ಬಹಳ ತಮಾಷೆ ಮಾಡುವುದೂ ಉಂಟು, ಬಹಳ ಟೀಕೆ ಮಾಡುವುದೂ ಉಂಟು. ಆದರೆ, ನಾವು ಪ್ರಜಾಪ್ರಭುತ್ವಕ್ಕೆ ಬದ್ಧರಾಗಿ ಇರುವುದರಿಂದ ಇದೆಲ್ಲಾ ಸಾಧ್ಯ. ಆದರೆ, ಇಂದು ಜೂನ್ 26 ನಾನು ನಿಮ್ಮೊಡನೆ ಮಾತನಾಡುತ್ತಿರುವಾಗ, ಅದರಲ್ಲೂ ವಿಶೇಷವಾಗಿ ನವ ಪೀಳಿಗೆಗೆ ಹೇಳ ಬಯಸುತ್ತೇನೆ. ಈ ಪ್ರಜಾಪ್ರಭುತ್ವದ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಈ ಪ್ರಜಾಪ್ರಭುತ್ವ ನಮಗೆ ದೊಡ್ಡ ಶಕ್ತಿ ತುಂಬಿದೆ. ಪ್ರತಿಯೊಬ್ಬ ನಾಗರಿಕನಿಗೂ ಶಕ್ತಿ ತಂದುಕೊಟ್ಟಿದೆ. ಆದರೆ, 1975ರ ಜೂನ್ 26 ಸಹ ಒಂದು ದಿನವಾಗಿತ್ತು. 25ರ ರಾತ್ರಿ ಹಾಗೂ ಮಾರನೇ ಬೆಳಗ್ಗಿನ ಅವಧಿ ಭಾರತದ ಪ್ರಜಾಪ್ರಭುತ್ವಕ್ಕೆ ಒಂದು ಕರಾಳ ಕಾಲವಾಗಿತ್ತು. ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ನಾಗರಿಕರ ಎಲ್ಲಾ ಅಧಿಕಾರಗಳನ್ನೂ ಅಂತ್ಯಗೊಳಿಸಲಾಗಿತ್ತು. ಇಡೀ ದೇಶವನ್ನು ಸೆರೆಮನೆಯನ್ನಾಗಿ ಮಾಡಲಾಗಿತ್ತು. ಜಯಪ್ರಕಾಶ್ ನಾರಾಯಣ್ ಸೇರಿದಂತೆ ದೇಶದ ಲಕ್ಷಾಂತರ ಜನರನ್ನು, ಸಾವಿರಾರು ನಾಯಕರನ್ನು, ಅನೇಕ ಸಂಘಟನೆಗಳನ್ನು ಸೆರೆಮನೆಯ ಸರಳುಗಳ ಹಿಂದೆ ದಬ್ಬಲಾಗಿತ್ತು. 19 ತಿಂಗಳ ಕಾಲ ದೇಶ ಪ್ರಜಾಪ್ರಭುತ್ವದಿಂದ ದೇಶ ವಂಚಿತವಾಗಿತ್ತು. ಆ ಭಯಾನಕ ಕರಾಳ ಘಟನೆಯ ಕುರಿತು ಅನೇಕ ಕೃತಿಗಳನ್ನು ಬರೆಯಲಾಗಿದೆ. ಅನೇಕ ಚರ್ಚೆಗಳಾಗಿವೆ. ಆದರೆ, ಇಂದು ಜೂನ್ 26ರಂದು ನಾನು ನಿಮ್ಮೊಡನೆ ಮಾತನಾಡುತ್ತಿರುವಾಗ ನಮ್ಮ ಸಾರ್ಮರ್ಥ್ಯವೇ ಪ್ರಜಾಪ್ರಭುತ್ವ ಎಂಬ ಸಂಗತಿಯನ್ನು ನಾವು ಮರೆಯುವುದು ಬೇಡ. ಪ್ರಜಾಶಕ್ತಿಯೇ ನಮ್ಮ ಸಾಮರ್ಥ್ಯ, ಪ್ರತಿಯೊಬ್ಬ ನಾಗರಿಕನೂ ನಮ್ಮ ಶಕ್ತಿ. ಈ ಪ್ರತಿ ಬದ್ಧತೆಯೊಡನೆ ನಾವು ಮುನ್ನಡೆಯಬೇಕಾಗಿದೆ ಹಾಗೂ ಶಕ್ತಿಶಾಲಿಯಾಗಬೇಕಾಗಿದೆ ಮತ್ತು ಭಾರತೀಯರು ಪ್ರಜಾಪ್ರಭುತ್ವವನ್ನು ಅನುಭವಿಸಿ ತೋರಿಸಿಕೊಟ್ಟಿದ್ದಾರೆ ಎಂಬುದೇ ಭಾರತದ ಜನರ ಸಾಮರ್ಥ್ಯವಾಗಿದೆ. ಪತ್ರಿಕೆಗಳ ಕಚೇರಿಗಳಿಗೆ ಬೀಗ ಜಡಿದಿರಬಹುದು, ರೇಡಿಯೋ ಒಂದೇ ರೀತಿಯ ಭಾಷೆ ಆಡಿರಬಹುದು, ಆದರೆ ಮತ್ತೊಂದು ಕಡೆ ದೇಶದ ಜನತೆ ಅಗತ್ಯ ಬಿದ್ದರೆ ಪ್ರಜಾಸತ್ತಾತ್ಮಕ ಶಕ್ತಿಯನ್ನು ತೋರಿಸಿದ್ದಾರೆ. ಈ ಸಂಗತಿಗಳೆಲ್ಲಾ ಯಾವುದೇ ದೇಶಕ್ಕೆ ಬಹುದೊಡ್ಡ ಶಕ್ತಿಯ ಸ್ವರೂಪವಾಗಿದೆ.ಭಾರತದ ಶ್ರೀಸಾಮಾನ್ಯನ ಪ್ರಜಾಪ್ರಭುತ್ವದ ಶಕ್ತಿಯ ಉತ್ತಮ ಉದಾಹರಣೆ ತುರ್ತು ಪರಿಸ್ಥಿತಿ ಕಾಲದಲ್ಲಿ ಸಾದರಪಡಿಸಲಾಗಿದೆ ಮತ್ತು ಈ ಪ್ರಜಾಪ್ರಭುತ್ವದ ಶಕ್ತಿಯ ಆ ಪರಿಚಯವನ್ನು ಪದೇಪದೆ ದೇಶಕ್ಕೆ ನೆನಪು ಮಾಡಿಕೊಡುತ್ತಿರಲೇಬೇಕು. ಜನರ ಸಾಮರ್ಥ್ಯದ ಅರಿವಿನ ಪರಿಚಯ ಮಾಡುತ್ತಿರಲೇಬೇಕು ಮತ್ತು ಜನರ ಶಕ್ತಿಗೆ ಬಲ ತುಂಬುವ ರೀತಿಯಲ್ಲಿ ನಮ್ಮ ಪ್ರತಿಯೊಂದು ರೀತಿ ಪ್ರವೃತ್ತಿ ಹೊಂದಿರಬೇಕು ಹಾಗೂ ಜನರನ್ನು ಒಗ್ಗೂಡಿಸಬೇಕು. ಜನರು ಮತದಾನ ಮಾಡಿ 5 ವರ್ಷಗಳ ವರೆಗೆ ದೇಶ ನಡೆಸಲು ನಿಮಗೆ ಗುತ್ತಿಗೆ ನೀಡಿಬಿಡುವುದು ಪ್ರಜಾಪ್ರಭುತ್ವದ ಅರ್ಥವಲ್ಲ ಎಂದು ನಾನು ಸದಾ ಹೇಳುವೆ. ನಿಜ, ಮತದಾನ ಮಾಡುವುದು ಪ್ರಜಾಪ್ರಭುತ್ವದ ಒಂದು ಮಹತ್ವಪೂರ್ಣ ಕರ್ತವ್ಯ. ಆದರೆ ಅದಕ್ಕೆ ಇನ್ನೂ ಅನೇಕ ಆಯಾಮಗಳಿವೆ. ಅದರಲ್ಲಿ ಅತಿ ಮಹತ್ವವಾದ್ದು, ಜನರ ಪಾಲ್ಗೊಳ್ಳುವಿಕೆ. ಜನರ ಸ್ವಭಾವ, ಜನರ ಆಲೋಚನೆ ಮತ್ತು ಸರ್ಕಾರಗಳು ಅದೆಷ್ಟು ಜನರೊಡನೆ ಸಂಪರ್ಕ ಹೊಂದಿರುತ್ತದೆಯೋ, ಅಷ್ಟು ದೇಶದ ಸಾಮರ್ಥ್ಯ ಹೆಚ್ಚುತ್ತದೆ. ಜನತೆ ಹಾಗೂ ಸರ್ಕಾರಗಳ ನಡುವೆ ಕಂದಕ ಉಂಟಾಗುವುದರಿಂದಲೇ ನಮ್ಮ ನಾಶಕ್ಕೆ ಮೂಲವಾಗಿದೆ. ಜನರ ಪಾಲ್ಗೊಳ್ಳುವಿಕೆಯಿಂದಲೇ ದೇಶ ಮುಂದುವರಿಯಬೇಕು ಎಂಬುದೇ ನನ್ನ ಸದಾಕಾಲದ ಪ್ರಯತ್ನವಾಗಿದೆ.
ಇದೀಗ ನನ್ನ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದೆ. ಕೆಲವು ಆಧುನಿಕ ವಿಚಾರದ ಯುವಕರು ನೀವು ಇಷ್ಟು ದೊಡ್ಡ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಿರಿ. ಹಾಗಾದರೆ ನಿಮ್ಮ ಸರ್ಕಾರದ ಮೌಲ್ಯಾಂಕನವನ್ನು ಜನರಿಂದಲೇ ಏಕೆ ಮಾಡಿಸಬಾರದು ಎಂದು ನನಗೆ ಸಲಹೆ ಕೊಟ್ಟರು. ಅದರಲ್ಲಿ ಒಂದು ರೀತಿಯಲ್ಲಿ ಅವರ ಸವಾಲಿನ ಧ್ವನಿಯೂ ಇತ್ತು, ಸಲಹೆಯೂ ಆಗಿತ್ತು. ಆದರೆ, ಅವರು ನನ್ನ ಮನಸ್ಸನ್ನು ಅಲ್ಲಾಡಿಸಿಬಿಟ್ಟರು. ನಾನು ನನ್ನ ಕೆಲವು ಹಿರಿಯ ಸಹೋದ್ಯೋಗಿಗಳ ಮುಂದೆ ಈ ವಿಷಯ ಪ್ರಸ್ತಾಪಿಸಿದಾಗ, ಇಲ್ಲಾ, ಇಲ್ಲಾ ಸಾರ್, ನೀವು ಹೀಗೇಕೆ ಮಾಡಲು ಹೊರಟಿದ್ದೀರಿ ಎಂಬುದೇ ಅವರ ಮೊದಲ ಪ್ರತಿಕ್ರಿಯೆಯಾಗಿತ್ತು. ಈಗಂತೂ ತಂತ್ರಜ್ಞಾನ ಎಷ್ಟು ಬದಲಾಗಿಬಿಟ್ಟಿದೆ ಎಂದರೆ ಯಾರಾದರೂ ಒಗ್ಗೂಡಿ, ಒಂದು ಕೂಟ ಕಟ್ಟಿಕೊಂಡು ಹಾಗೂ ತಂತ್ರಜ್ಞಾನದ ದುರುಪಯೋಗ ಮಾಡಿಕೊಂಡರೆ ಸಮೀಕ್ಷೆ ಎಲ್ಲಿ ಹೋಗಿ ಮುಟ್ಟುತ್ತದೆ ಎಂದು ಪ್ರಶ್ನಿಸಿದರು. ಈ ರೀತಿ ಅವರು ತಮ್ಮ ಆತಂಕ ವ್ಯಕ್ತಪಡಿಸಿದರು. ಇಲ್ಲ ಇಲ್ಲ; ಆದರೆ ರಿಸ್ಕ್ ತೆಗೆದುಕೊಳ್ಳಬೇಕು. ಪ್ರಯತ್ನ ಮಾಡಬೇಕು ಎಂದು. ನನಗನ್ನಿಸಿತು. ನೋಡೋಣ ಏನಾಗುತ್ತದೆ ಆಗಲಿ ಎಂದೆ. ನನ್ನ ಆತ್ಮೀಯ ದೇಶವಾಸಿಗಳೆ ಸಂತೋಷದ ಸಂಗತಿ ಎಂದರೆ ನಾನು ತಂತ್ರಜ್ಞಾನದ ಮೂಲಕ ಬೇರೆ ಬೇರೆ ಭಾಷೆಗಳನ್ನು ಬಳಸಿಕೊಂಡು ಜನರಿಗೆ, ನನ್ನ ಸರ್ಕಾರದ ಮೌಲ್ಯಾಂಕನಕ್ಕೆ ಆಹ್ವಾನ ನೀಡಿದೆ. ಚುನಾವಣೆಯ ನಂತರವೂ ಬಹಳ ಸಮೀಕ್ಷೆಗಳಾಗುತ್ತವೆ; ಚುನಾವಣೆಯ ನಡುವೆಯೂ ಸಮೀಕ್ಷೆಗಳಾಗುತ್ತವೆ, ನಡುವೆ ಕೆಲವೊಂದು ವಿಷಯಗಳ ಸಮೀಕ್ಷೆ ನಡೆಯುತ್ತದೆ, ಜನಪ್ರಿಯತೆಯ ಸಮೀಕ್ಷೆ ನಡೆಯುತ್ತದೆ. ಆದರೆ, ಅದರ ಮಾದರಿಯ ಗಾತ್ರ ದೊಡ್ಡದಿರುವುದಿಲ್ಲ. ನಿಮ್ಮಲ್ಲಿ ಬಹಳಷ್ಟು ಜನ ‘rate-my-government-MyGov. In.’ ನಲ್ಲಿ ನಿಮ್ಮ ಅಭಿಪ್ರಾಯ ನೀಡಿದ್ದೀರಿ. ಹಾಗೆ ನೋಡಿದರೆ ಲಕ್ಷಾಂತರ ಜನರು ಇದರಲ್ಲಿ ಆಸಕ್ತಿ ತೋರಿದರು. ಆದರೆ, 3 ಲಕ್ಷ ಜನರು ಒಂದೊಂದು ಪ್ರಶ್ನೆಗೂ ಉತ್ತರ ನೀಡಲು ಪ್ರಯತ್ನಿಸಿದ್ದಾರೆ. ಸಾಕಷ್ಟು ಸಮಯವನ್ನು ಇದಕ್ಕಾಗಿ ವ್ಯಯಿಸಿದ್ದಾರೆ. ಸ್ವಯಂ ಕ್ರಿಯಾಶೀಲತೆ ತೋರಿದ್ದಾರೆ, ಸರ್ಕಾರದ ಮೌಲ್ಯಾಂಕನ ಮಾಡಿದ ಆ ಎಲ್ಲಾ 3 ಲಕ್ಷ ಜನರಿಗೆ ನಾನು ಋಣಿಯಾಗಿರುವೆ.
ನಾನು ಫಲಿತಾಂಶ ಕುರಿತು ಚರ್ಚಿಸುವುದಿಲ್ಲ. ಅದನ್ನು ನಮ್ಮ ಮಾಧ್ಯಮದವರು ಖಂಡಿತಾ ಮಾಡುತ್ತಾರೆ. ಆದರೆ, ಇದೊಂದು ಉತ್ತಮ ಪ್ರಯೋಗವಾಗಿತ್ತು ಎಂದಷ್ಟೆ ನಾನು ಖಂಡಿತ ಹೇಳಬಯಸುತ್ತೇನೆ ಹಾಗೂ ಭಾರತದ ಎಲ್ಲಾ ಭಾಷೆಗಳನ್ನು ಮಾತನಾಡುವ, ಮೂಲೆ ಮೂಲೆಯಲ್ಲಿ ವಾಸಿಸುವ ಪ್ರತಿಯೊಂದು ರೀತಿಯ ಹಿನ್ನೆಲೆ ಹೊಂದಿರುವವರು ಇದರಲ್ಲಿ ಪಾಲ್ಗೊಂಡರು ಎಂಬುದು ನನ್ನ ಪಾಲಿಗೆ ಹರ್ಷದ ಸಂಗತಿ. ನನ್ನ ಪಾಲಿಗೆ ಅತಿ ದೊಡ್ಡ ಆಶ್ಚರ್ಯದ ಸಂಗತಿ ಎಂದರೆ ಭಾರತ ಸರ್ಕಾರ ಜಾರಿಗೆ ತಂದಿರುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದ ವೆಬ್ ತಾಣ ಏನಿದೆ ಅದರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ತಾಮುಂದು ನಾಮುಂದು ಎಂದು ಪಾಲ್ಗೊಂಡಿರುವುದು. ಅಂದರೆ ಇದರ ಅರ್ಥ ಗ್ರಾಮೀಣ ಜೀವನದೊಂದಿಗೆ ನಂಟು ಹೊಂದಿರುವ, ಬಡತನದೊಡನೆ ನಂಟು ಹೊಂದಿರುವ ಜನರ ಅತಿ ದೊಡ್ಡ ಕ್ರಿಯಾಶೀಲ ಪಾಲ್ಗೊಳ್ಳುವಿಕೆ ಇದರಲ್ಲಿತ್ತು. ಹೀಗೆಂದು ನಾನು ಪ್ರಾರಂಭಿಕ ಅನಿಸಿಕೆ ವ್ಯಕ್ತಪಡಿಸುವೆ. ಇದು ನನಗೆ ಇನ್ನೂ ಹೆಚ್ಚು ಒಳ್ಳೆಯದೆನಿಸಿತು. ಅಂದರೆ, ಹಲವು ವರ್ಷಗಳ ಮೊದಲು ಜೂನ್ 26ರಂದು ಜನರ ಧ್ವನಿಯನ್ನು ಅಡಗಿಸಲಾಗಿತ್ತು ಮತ್ತು ಜನತೆ ಸ್ವತಃ ತೀರ್ಮಾನಿಸುತ್ತಿರುವ ಈ ಸಮಯವೂ ಬಂದಿದೆ. ಸರ್ಕಾರ ಸರಿಯಾಗಿ ಮಾಡುತ್ತಿದೆಯೊ, ತಪ್ಪು ಮಾಡುತ್ತಿದೆಯೊ, ಒಳ್ಳೆಯನ್ನು ಮಾಡುತ್ತಿದೆಯೊ, ಕೆಟ್ಟದ್ದನ್ನು ಮಾಡುತ್ತಿದೆಯೊ ಎಂಬುದನ್ನು ಅದು ತೀರ್ಮಾನಿಸುತ್ತಿದೆ. ಇದೇ ಪ್ರಜಾಪ್ರಭುತ್ವದ ಶಕ್ತಿ.
ನನ್ನ ಆತ್ಮೀಯ ದೇಶವಾಸಿಗಳೇ, ನಾನು ಇಂದು ಒಂದು ಸಂಗತಿಯನ್ನು ವಿಶೇಷವಾಗಿ ಹೇಳಲಿಚ್ಛಿಸುತ್ತೇನೆ. ಹಿಂದೆ ಕಾಲವೊಂದಿತ್ತು, ಆಗ ತೆರಿಗೆಗಳು ಎಷ್ಟು ಹೆಚ್ಚಾಗಿದ್ದವು ಎಂದರೆ, ತೆರಿಗೆಗಳ್ಳತನ ಸ್ವಭಾವವಾಗಿಬಿಟ್ಟಿತ್ತು. ವಿದೇಶಿ ವಸ್ತುಗಳನ್ನು ತರುವ ಸಂಬಂಧದಲ್ಲಿ ಅನೇಕ ನಿರ್ಬಂಧಗಳಿದ್ದ ಕಾಲವೊಂದಿತ್ತು. ಆಗ ಕಳ್ಳಸಾಗಾಣಿಕೆಯು ಅಷ್ಟೆ ಹೆಚ್ಚಾಗಿಬಿಡುತ್ತಿತ್ತು. ಆದರೆ ಕ್ರಮೇಣ ಸಮಯ ಬದಲಾಗುತ್ತಾ ಹೋಯಿತು. ಈಗ ತೆರಿಗೆದಾರರಿಗೆ ಸರ್ಕಾರದ ತೆರಿಗೆ ವ್ಯವಸ್ಥೆಯೊಡನೆ ಸಂಪರ್ಕ ಹೊಂದುವುದು ಹೆಚ್ಚು ಕಷ್ಟದ ಕೆಲಸವಲ್ಲ. ಆದರೂ ಹಳೆಯ ಅಭ್ಯಾಸ ಹೋಗುವುದಿಲ್ಲ. ಸರ್ಕಾರದಿಂದ ದೂರವಿರುವುದು ಹೆಚ್ಚು ಒಳ್ಳೆಯದು ಎಂದು ಭಾವಿಸುವ ಪೀಳಿಗೆಯೊಂದಿದೆ. ನಿಯಮಗಳಿಂದ ತಪ್ಪಿಸಿಕೊಂಡು ಹೋಗಿ ನಾವು ನಮ್ಮ ನೆಮ್ಮದಿ ಸುಖ ಕಳೆದುಕೊಳ್ಳುತ್ತೇವೆ ಎಂದು ನಾನು ಇಂದು ನಿಮ್ಮಲ್ಲಿ ನಿವೇದನೆ ಮಾಡಿಕೊಳ್ಳಬಯಸುವೆ. ಯಾರೋ ಅಲ್ಲೊಬ್ಬ ಇಲ್ಲೊಬ್ಬ ಚಿಕ್ಕಪುಟ್ಟ ವ್ಯಕ್ತಿಗಳು ನಮಗೆ ತೊಂದರೆ ಮಾಡಬಹುದು. ನಾವು ಏಕೆ ಅದಕ್ಕೆ ಅವಕಾಶ ಕೊಡಬೇಕು? ನಾವೇಕೆ ಸ್ವತಃ ನಮ್ಮ ಆದಾಯ ಕುರಿತಂತೆ, ನಮ್ಮ ಆಸ್ತಿ ಕುರಿತಂತೆ ಸರ್ಕಾರಕ್ಕೆ ಸತ್ಯ ಸಂಗತಿ ವಿವರ ಕೊಟ್ಟುಬಿಡಬಾರದು? ಯಾವುದು ಹಳೇ ಬಾಕಿ ಇದೆಯೋ ಅದರಿಂದಲೂ ಮುಕ್ತರಾಗಿಬಿಡೋಣ. ಈ ಹೊರೆಯಿಂದ ಮುಕ್ತರಾಗಿ ಎಂದು ನಾನು ಜನತೆಗೆ ಮನವಿ ಮಾಡುವೆ. ಯಾರ ಬಳಿ ಅಘೋಷಿತ ಆದಾಯ ಇದೆಯೋ ಅವರು ಈ ಆದಾಯವನ್ನು ಘೋಷಿಸಿಕೊಂಡು ಬಿಡಲಿ ಎಂದು ಭಾರತ ಸರ್ಕಾರ ಅವರಿಗೆ ಒಂದು ಅವಕಾಶ ಒದಗಿಸಿದೆ. ಸೆಪ್ಟೆಂಬರ್ 30ರೊಳಗೆ ಅಘೋಷಿತ ಆದಾಯ ಘೋಷಣೆಗೆ ಸರ್ಕಾರ ದೇಶದ ಮುಂದೆ ವಿಶೇಷ ಅವಕಾಶ ಕಲ್ಪಿಸಿದೆ.
ದಂಡ ಪಾವತಿಸಿ ನಾವು ಅನೇಕ ಬಗೆಯ ಹೊರೆಯಿಂದ ಮುಕ್ತರಾಗಬಹುದಾಗಿದೆ. ಸ್ವ ಇಚ್ಛೆಯಿಂದ ತಮ್ಮ ಗೌಪ್ಯ ಆಸ್ತಿ, ಅಘೋಷಿತ ಆದಾಯ ಕುರಿತು ಸರ್ಕಾರಕ್ಕೆ ತಮ್ಮ ಮಾಹಿತಿ ನೀಡುವವರಿಗೆ ಸರ್ಕಾರ ಯಾವುದೇ ರೀತಿಯಲ್ಲೂ ತನಿಖೆ ಮಾಡಿಸುವುದಿಲ್ಲ ಎಂದೂ ನಾನು ಭರವಸೆ ನೀಡಿರುವೆ. ಈ ಸಂಪತ್ತು ಎಲ್ಲಿಂದ ಬಂತು, ಹೇಗೆ ಬಂತು ಎಂದು ಒಮ್ಮೆಯೂ ಪ್ರಶ್ನಿಸುವುದಿಲ್ಲ. ಆದುದರಿಂದ ನೀವು ಒಂದು ಪಾರದರ್ಶಕ ವ್ಯವಸ್ಥೆಯ ಭಾಗವಾಗಿಬಿಡಲು ನಿಮಗೊಂದು ಒಳ್ಳೆಯ ಅವಕಾಶ ಎಂದು ನಾನು ಹೇಳುತ್ತೇನೆ. ಇದರ ಜೊತೆಯಲ್ಲೇ ಈ ಯೋಜನೆ ಸೆಪ್ಟೆಂಬರ್ 30ರ ವರೆಗೆ ಮಾತ್ರ ಇದು ಜಾರಿಯಲ್ಲಿರುತ್ತದೆ. ಇದು ಒಂದು ಕಡೆಯ ಅವಕಾಶ ಎಂದು ತಿಳಿಯಿರಿ ಎಂದೂ ಜನತೆಗೆ ನಾನು ಹೇಳುತ್ತೇನೆ. ಈ ನಡುವೆ ಸರ್ಕಾರದ ನಿಯಮಗಳನ್ನು ಪಾಲಿಸದೇ ಇರುವ ನಾಗರಿಕನಿಗೆ ಸೆಪ್ಟೆಂಬರ್ 30ರ ನಂತರ ಒಂದು ವೇಳೆ ತೊಂದರೆಯಾದರೆ ಅಂತಹವರಿಗೆ ಯಾವುದೇ ಸಹಾಯ ದೊರಕುವುದಿಲ್ಲ ಎಂದು ನಮ್ಮ ಸಂಸತ್ ಸದಸ್ಯರಿಗೂ ಹೇಳಿಬಿಟ್ಟಿರುವೆ. ಸೆಪ್ಟೆಂಬರ್ 30ರ ನಂತರ ಈ ರೀತಿ ನಿಮಗೆ ತೊಂದರೆಯಾಗದಿರಲಿ ಎಂದು ಸೆಪ್ಟೆಂಬರ್ 30ರೊಳಗೆ ಈ ಅವಕಾಶದ ಲಾಭ ಪಡೆದುಕೊಂಡರೆ ಒಳ್ಳೆಯದು ಎಂದು ಹಾಗೂ ಅದಾದ ನಂತರ ಉಂಟಾಗಬಹುದಾದ ಸಂಭವನೀಯ ಕಷ್ಟಗಳಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ ಎಂದು ನಾನು ಜನರಿಗೆ ತಿಳಿಸಬಯಸುತ್ತೇನೆ.
ನನ್ನ ದೇಶವಾಸಿಗಳೆ ಇಂದು ನಾನು ಮನದ ಮಾತಿನಲ್ಲಿ ಈ ಸಂಗತಿಯನ್ನು ಹೇಳಬೇಕಾಗಿ ಬರಲು ಕಾರಣವೆಂದರೆ ಇತ್ತೀಚೆಗೆ ತಾನೆ ನಾನು ನಮ್ಮ ರೆವಿನ್ಯೂ ವಿಭಾಗದ ಅಧಿಕಾರಿಗಳು, ಅಂದರೆ ವರಮಾನ ತೆರಿಗೆ, ಅಬಕಾರಿ ಹಾಗೂ ಕಸ್ಟಮ್ಸ್ ವಿಭಾಗಗಳ ಎಲ್ಲಾ ಅಧಿಕಾರಿಗೊಂದಿಗೆ ಒಂದೆರಡು ದಿನಗಳ ಜ್ಞಾನ ಸಂಗಮ ನಡೆಸಿದೆ. ಬಹಳ ವಿಚಾರ ವಿಮರ್ಶೆ ನಡೆಯಿತು. ನಾವು ನಾಗರಿಕರನ್ನು ಕಳ್ಳರಂತೆ ಕಾಣುವುದು ಬೇಡ ಎಂಬುದಾಗಿ ನಾನು ಸ್ಪಷ್ಟ ಮಾತುಗಳಲ್ಲಿ ತಿಳಿ ಹೇಳಿದೆ. ನಾವು ನಾಗರಿಕರಲ್ಲಿ ಭರವಸೆ ಇಡೋಣ. ವಿಶ್ವಾಸ ಇಡೋಣ. ಅವರು ನಿಯಮಗಳನ್ನು ಪಾಲಿಸಬಯಸುವುದಾದರೆ ಅವರ ಕೈಹಿಡಿದು ಅವರನ್ನು ಪ್ರೋತ್ಸಾಹಿಸಿ ಪ್ರೀತಿಯಿಂದ ಕರೆತರೋಣ. ಒಂದು ವಿಶ್ವಾಸದ ವಾತಾವರಣ ನಿರ್ಮಾಣ ಮಾಡುವುದು ಅಗತ್ಯ. ನಮ್ಮ ನಡತೆಯಿಂದ ನಾವು ಬದಲಾವಣೆ ತರಬೇಕಾಗಿದೆ. ತೆರಿಗೆದಾರರಲ್ಲಿ ವಿಶ್ವಾಸ ಉಂಟು ಮಾಡಬೇಕು. ನಾನು ಅವರಲ್ಲಿ ಈ ಮಾತುಗಳನ್ನು ಬಹಳ ಆಗ್ರಹಪೂರ್ವಕವಾಗಿ ಹೇಳಿದೆ. ದೇಶ ಮುನ್ನಡೆಯುತ್ತಿರುವಾಗ ನಾವೆಲ್ಲರೂ ಕೊಡುಗೆ ನೀಡಬೇಕು ಎಂದು ಅವರಿಗೂ ಅನಿಸುತ್ತಿದ್ದುದನ್ನು ನಾನು ಗಮನಿಸಿದೆ ಹಾಗೂ ಈ ಜ್ಞಾನ ಸಂಗಮದಲ್ಲಿ ನಾನು ಪಡೆದುಕೊಳ್ಳುತ್ತಿದ್ದ ಮಾಹಿತಿಯಲ್ಲಿ ಒಂದು ಮಾಹಿತಿಯನ್ನು ನಿಮಗೂ ತಿಳಿಸಬಯಸುವೆ.ನಿಮ್ಮಲ್ಲಿ ಯಾರೂ ಈ ಸಂಗತಿಯ ಬಗ್ಗೆ ನಂಬಿಕೆ ತೋರುವುದಿಲ್ಲ. ಅದೆಂದರೆ 125 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಕೇವಲ ಒಂದೂವರೆ ಲಕ್ಷ ಜನರಷ್ಟೆ 50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ತೆರಿಗೆ ವ್ಯಾಪ್ತಿಗೆ ಬರುವವರಾಗಿದ್ದಾರೆ. ಈ ಮಾತನ್ನು ಯಾರೂ ನಂಬಲಿಕ್ಕಾಗುವುದಿಲ್ಲ. 50 ಲಕ್ಷಕ್ಕಿಂತ ಹೆಚ್ಚು ತೆರಿಗೆ ವ್ಯಾಪ್ತಿಯ ಆದಾಯದ ಜನರು ದೊಡ್ಡ ದೊಡ್ಡ ನಗರಗಳಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಮೇಲ್ನೋಟಕ್ಕೆ ಒಂದೊಂದು ಕೋಟಿ ಎರಡೆರಡು ಕೋಟಿಯ ಬಂಗಲೆಗಳು ಕಾಣುತ್ತವೆ. ಇವುಗಳ ಮಾಲೀಕರು 50 ಲಕ್ಷಕ್ಕೂ ಕಡಿಮೆ ವರಮಾನದ ವರ್ಗದಲ್ಲಿ ಹೇಗೆ ಬರಲು ಸಾಧ್ಯ ಎಂದು ಅನ್ನಿಸುತ್ತದೆ. ಇದರ ಅರ್ಥ ಏನೋ ಮುಚ್ಚುಮರೆ ಉಂಟಾಗಿದೆ ಎಂದು ತಿಳಿಯುತ್ತದೆ. ಈ ಪರಿಸ್ಥಿತಿಯನ್ನು ಬದಲಾಯಿಸಬೇಕಾಗಿದೆ. ಸೆಪ್ಟೆಂಬರ್ 30ಕ್ಕಿಂತ ಮುಂಚೆ ಬದಲಾಯಿಸಬೇಕಾಗಿದೆ. ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಮುಂಚೆ ಜನರಿಗೆ ಒಂದು ಅವಕಾಶ ಕೊಡಬೇಕಾಗಿದೆ. ಆದುದರಿಂದ ನನ್ನ ಪ್ರೀತಿಯ ಸೋದರ, ಸೋದರಿಯರೇ, ಅಘೋಷಿತ ಆದಾಯ ಘೋಷಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ. ಮತ್ತೊಂದು ರೀತಿಯಲ್ಲಿ ಸೆಪ್ಟೆಂಬರ್ 30ರ ನಂತರ ಉಂಟಾಗುವ ತೊಂದರೆಗಳಿಂದ ಮುಕ್ತಿಯ ಮತ್ತೊಂದು ಮಾರ್ಗ. ನಾನು ದೇಶದ ಒಳಿತಿಗಾಗಿ ದೇಶದ ಬಡವರ ಕಲ್ಯಾಣಕ್ಕಾಗಿ ನೀವು ಈ ಕೆಲಸ ಮಾಡಲು ಮುಂದೆ ಬನ್ನಿ ಎಂದು ಆಗ್ರಹಪಡಿಸುವೆ ಮತ್ತು ಸೆಪ್ಟೆಂಬರ್ 30ರ ನಂತರ ನಿಮಗೆ ಯಾವುದೇ ತೊಂದರೆಯಾಗುವುದು ನನಗೆ ಇಷ್ಟವಿಲ್ಲ.
ನನ್ನ ನಲ್ಮೆಯ ದೇಶವಾಸಿಗಳೇ, ಈ ದೇಶದ ಶ್ರೀಸಾಮಾನ್ಯ ದೇಶಕ್ಕಾಗಿ ಬಹಳಷ್ಟು ಮಾಡಲು ಅವಕಾಶವನ್ನು ಹುಡುಕುತ್ತಿರುತ್ತಾನೆ. ಅಡುಗೆ ಅನಿಲದ ಸಬ್ಸಿಡಿ ಬಿಟ್ಟುಕೊಡಿ ಎಂದು ನಾನು ಜನರಲ್ಲಿ ಕೇಳಿದಾಗ ಈ ದೇಶದ ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟರು. ನಾನು ವಿಶೇಷವಾಗಿ ಅಘೋಷಿತ ವರಮಾನ ಇರುವವರಿಗೆ ಒಂದು ವಿಶೇಷ ಉದಾಹರಣೆ ಸಾದರಪಡಿಸಲು ಬಯಸುವೆ. ನಾನು ನಿನ್ನೆ ಸ್ಮಾರ್ಟ್ ಸಿಟಿ ಕಾರ್ಯಕ್ರಮದ ಸಲುವಾಗಿ ಪುಣೆಗೆ ಹೋಗಿದ್ದಾಗ ಅಲ್ಲಿ ನನಗೆ ಶ್ರೀ ಚಂದ್ರಕಾಂತ್ ದಾಮೋದರ್ ಕುಲಕರ್ಣಿ ಹಾಗೂ ಅವರ ಕುಟುಂಬದ ಸದಸ್ಯರನ್ನು ಭೇಟಿಯಾದೆ. ನಾನು ಅವರನ್ನು ವಿಶೇಷವಾಗಿ ಭೇಟಿಯಾಗಲು ಕರೆಸಿಕೊಂಡಿದ್ದೆ ಮತ್ತು ಇದು ಈ ಹಿಂದೆ ತೆರಿಗೆ ವಂಚನೆ ಮಾಡಿರುವವರಿಗೆ ನನ್ನ ಮಾತು ಪ್ರಾಯಶಃ ಸ್ಫೂರ್ತಿ ನೀಡಲಿ ಅಥವಾ ನೀಡದಿರಲಿ ಆದರೆ, ಶ್ರೀಮಾನ್ ಚಂದ್ರಕಾಂತ್ ಕುಲಕರ್ಣಿಯವರ ಮಾತಂತೂ ಖಂಡಿತಾ ಸ್ಫೂರ್ತಿ ನೀಡುತ್ತದೆ. ಕಾರಣ ಏನೆಂದು ನಿಮಗೆ ತಿಳಿದಿದೆಯೇ? ಈ ಚಂದ್ರಕಾಂತ್ ಕುಲಕರ್ಣಿ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ವ್ಯಕ್ತಿ. ಸರ್ಕಾರಿ ನೌಕರಿಯಲ್ಲಿದ್ದರು. ನಿವೃತ್ತರಾದರು. ಅವರಿಗೆ 16 ಸಾವಿರ ರೂಪಾಯಿ ಪಿಂಚಣಿ ಬರುತ್ತದೆ. ಮತ್ತೆ ನನ್ನ ಆತ್ಮೀಯ ದೇಶವಾಸಿಗಳೇ, ನಿಮಗೆ ಅಚ್ಚರಿ ಆಗಬಹುದು ಹಾಗೂ ತೆರಿಗೆಗಳ್ಳತನದ ಹವ್ಯಾಸವಿದ್ದವರಿಗಂತೂ ದೊಡ್ಡ ಆಘಾತವೇ ಆಗಬಹುದು. ಈ ಚಂದ್ರಕಾಂತ್ ಕುಲಕರ್ಣಿಯವರಿಗೆ ಕೇವಲ 16 ಸಾವಿರ ರೂಪಾಯಿ ಪಿಂಚಣಿ ಬರುತ್ತದೆ. ಆದರೆ, ಕೆಲವು ದಿನಗಳ ಹಿಂದೆ ಅವರು ನನಗೆ ಪತ್ರ ಬರೆದು, ತಮ್ಮ 16 ಸಾವಿರ ರೂಪಾಯಿ ಪಿಂಚಣಿ ಹಣದಲ್ಲಿ ಪ್ರತಿ ತಿಂಗಳು 5 ಸಾವಿರ ರೂಪಾಯಿ ಸ್ವಚ್ಛತಾ ಕೋಶಕ್ಕೆ ತಾವು ದೇಣಿಗೆ ಕೊಡಲು ಬಯಸುವೆ ಎಂದು ತಿಳಿಸಿದರು ಮತ್ತು ಅಷ್ಟೇ ಅಲ್ಲ. ಅವರು ನನಗೆ 52 ಪೋಸ್ಟ್ ಡೇಟೆಡ್ ಚೆಕ್ ಕಳುಹಿಸಿದರು. ಆ ಚೆಕ್ ನ್ನು ನಗದಿಗಾಗಿ ಕಳುಹಿಸಿಕೊಡಿ ಎಂದು ಬರೆದರು. ಯಾವ ದೇಶದಲ್ಲಿ ಒಬ್ಬ ನಿವೃತ್ತ ಸರ್ಕಾರಿ ನೌಕರ ಆತನಿಗೆ ಕೇವಲ 16 ಸಾವಿರ ರೂಪಾಯಿ ಪಿಂಚಣಿ ಬರುತ್ತದೆ, ಅದರಲ್ಲಿ 5 ಸಾವಿರ ರೂಪಾಯಿ ಸ್ವಚ್ಛತಾ ಅಭಿಯಾನಕ್ಕೆ ಕೊಡಬಲ್ಲನೋ, ಆ ದೇಶದಲ್ಲಿ ತೆರಿಗೆ ಕಳ್ಳತನ ಮಾಡುವ ಹಕ್ಕು ನಮಗಿಲ್ಲ. ಚಂದ್ರಕಾಂತ್ ಕುಲಕರ್ಣಿಯವರಿಗಿಂತ ಮತ್ತೊಂದು ದೊಡ್ಡ ಸ್ಫೂರ್ತಿ ನಮಗೆ ಬೇಕಿಲ್ಲ ಹಾಗೂ ಸ್ವಚ್ಛತಾ ಅಭಿಯಾನದ ಜೊತೆ ಗುರುತಿಸಿಕೊಂಡಿರುವವರಿಗೂ ಚಂದ್ರಕಾಂತ್ ಕುಲಕರ್ಣಿಯವರಿಗಿಂತ ಉತ್ತಮ ಉದಾಹರಣೆ ಇಲ್ಲ. ನಾನು ಚಂದ್ರಕಾಂತ್ ಜೀ ಅವರನ್ನು ಖುದ್ದಾಗಿ ಕರೆಸಿಕೊಂಡೆ, ಅವರನ್ನು ಭೇಟಿಯಾದೆ. ಅವರ ಜೀವನ ನನ್ನ ಮನಸ್ಸನ್ನು ತಟ್ಟಿಬಿಟ್ಟಿತು. ಆ ಕುಟುಂಬಕ್ಕೆ ನಾನು ಅಭಿನಂದನೆ ಹೇಳುವೆ ಮತ್ತು ಇಂತಹ ಅಗಣಿತ ಸಂಖ್ಯೆಯ ಜನರು ಇದ್ದಾರೆ. ಪ್ರಾಯಶಃ ಅವರ ಕುರಿತು ಮಾಹಿತಿ ನನ್ನ ಬಳಿ ಇರಲಿಕ್ಕಿಲ್ಲ. ಆದರೆ ಇವರೇ ಜನ, ಇವರೇ ಜಗತ್ತಿನಶಕ್ತಿ, ಇವರೇ ಸಾಮರ್ಥ್ಯ. 16 ಸಾವಿರ ರೂಪಾಯಿ ಪಿಂಚಣಿ ಪಡೆಯುವ ವ್ಯಕ್ತಿ 2 ಲಕ್ಷ 60 ಸಾವಿರದ ಮುಂಗಡ ಚೆಕ್ ನನಗೆ ಕಳುಹಿಸುವುದಾದರೆ ಇದೇನು ಸಣ್ಣ ಸಂಗತಿಯಲ್ಲ. ಬನ್ನಿ ನಾವು ಕೂಡಾ ನಮ್ಮ ಮನಸ್ಸನ್ನು ಪ್ರಶ್ನಿಸಿಕೊಳ್ಳೋಣ. ಸರ್ಕಾರ ನಮ್ಮ ವರಮಾನ ಘೋಷಿಸಿಕೊಳ್ಳಲು ಅವಕಾಶ ಒದಗಿಸಿದೆ. ನಾವೂ ಕೂಡಾ ಚಂದ್ರಕಾಂತ್ ಜೀ ಅವರನ್ನು ನೆನಪು ಮಾಡಿಕೊಂಡು ನಾವು ತಲೆಬಾಗೋಣ, ಅವರ ಅನುಕರಣೆ ಮಾಡೋಣ.
ನನ್ನ ಒಲ್ಮೆಯ ದೇಶವಾಸಿಗಳೇ, ಉತ್ತರಾಖಂಡ್ ನ ಪೌಡಿಗಡವಾಲ್ ನ ಸಂತೋಷ್ ನೇಗೀ ಜೀ ತಮ್ಮ ಅನುಭವ ಹಂಚಿಕೊಳ್ಳಲು ಫೋನ್ ಕರೆ ಮಾಡಿದ್ದರು. ಜಲ ಸಂರಕ್ಷಣೆ ಕುರಿತು ಅವರು ನನಗೆ ಸಂದೇಶ ನೀಡಿದ್ದಾರೆ. ಅವರ ಅನುಭವ ನಿಮಗೂ ಪ್ರಯೋಜನಕ್ಕೆ ಬರಬಹುದು: –
ಧ್ವನಿ: “ನಿಮ್ಮಿಂದ ಪ್ರೇರಣೆ ಪಡೆದು ನಮ್ಮ ಶಾಲೆಯಲ್ಲಿ ಮುಂಗಾರು ಆರಂಭಕ್ಕೂ ಮುನ್ನ ನಾವು ಆಟದ ಮೈದಾನದ ಇಕ್ಕೆಲದಲ್ಲೂ 250 ಚಿಕ್ಕ ಚಿಕ್ಕ ಹೊಂಡ ತೆಗೆದೆವು, ಅವು 4 ಅಡಿ ಮಾತ್ರ ಆಳ ಇತ್ತು. ಹೀಗಾಗಿ ಇದರಲ್ಲಿ ಮಳೆಯ ನೀರು ಸಂಗ್ರಹವಾಗುತ್ತಿದೆ. ಹೀಗಾಗಿ ಮೈದಾನ ಕೊಚ್ಚೆಯಾಗುತ್ತಿಲ್ಲ ಮತ್ತು ಇದರಲ್ಲಿ ಮಕ್ಕಳು ಮುಳುಗುವ ಅಪಾಯವೂ ಇಲ್ಲ. ಜೊತೆಗೆ ನಾವು ಮೈದಾನದಲ್ಲಿ ಬೀಳುವ ಕೋಟಿಗಟ್ಟಲೆ ಲೀಟರ್ ನೀರನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ’’
ಸಂತೋಷ್ ಜೀ ಯವರೇ ನಿಮಗೆ ಅಭಿನಂದನೆಗಳು. ನೀವು ನನಗೆ ಸಂದೇಶ ನೀಡಿದ್ದೀರಿ ಮತ್ತು ಪೌಡಿಗಡವಾಲಾ ಗುಡ್ಡಗಾಡು ಪ್ರದೇಶ. ಅಲ್ಲಿ ನೀವು ಕೆಲಸ ಮಾಡಿದ್ದೀರಿ. ನೀವು ಅಭಿನಂದನೆಗೆ ಪಾತ್ರರು. ಜನತೆ ನಿಶ್ಚಿತವಾಗಿ ಮಳೆಯ ಆನಂದ ಪಡೆಯಲಿ. ಆದರೆ, ಇದು ಭಗವಂತ ನೀಡಿದ ಪ್ರಸಾದ. ಇದು ಅಪಾರ ಸಂಪತ್ತು. ಒಂದೊಂದು ಹನಿ ನೀರನ್ನು ಉಳಿಸಲು ನಾವು ಏನಾದರೂ ಪ್ರಯತ್ನಪಡೋಣ. ಗ್ರಾಮದ ನೀರು ಗ್ರಾಮಕ್ಕೆ, ನಗರದ ನೀರು ನಗರಕ್ಕೆ, ನಾವು ಹೇಗೆ ತಡೆ ಹಿಡಿದಿಟ್ಟುಕೊಳ್ಳಬಹುದು? ಎಷ್ಟಾದರೂ ನೀರು ಜೀವನಾಧಾರ. ಇಡೀ ದೇಶದಲ್ಲಿ ಒಂದು ವಾತಾವರಣ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಲ್ಲಿ ಪ್ರತಿ ರಾಜ್ಯದಲ್ಲೂ ಜಲ ಸಂರಕ್ಷಣೆಯ ಅನೇಕ ಪ್ರಯತ್ನಗಳಾಗಿವೆ. ಆದರೆ, ಈಗ ನೀರು ಬಂದಿರುವಾಗ ಅದು ಎಲ್ಲೋ ಹರಿದು ಹೋಗದಂತೆ ನೋಡಿಕೊಳ್ಳಿ. ಜೀವನ ಉಳಿಸುವುದಕ್ಕೆ ಮಾಡುವಷ್ಟೇ ಕಾಳಜಿಯನ್ನು ನೀರು ಉಳಿಸಲೂ ಕೂಡಾ ಮಾಡಿ
ನನ್ನ ಆತ್ಮೀಯ ದೇಶವಾಸಿಗಳೇ, ನಿಮಗೆಲ್ಲಾ 1922 ಸಂಖ್ಯೆ ತಿಳಿದಿದೆ. ಈಗ ಇದು ನಿಮ್ಮ ನೆನಪಿನ ಭಾಗವಾಗಿದೆ. 1-9-2-2. ಈ 1922ಕ್ಕೆ ನೀವು ಮಿಸ್ಡ್ ಕಾಲ್ ನೀಡಿದರೆ, ನೀವು ನಿಮ್ಮ ಆಯ್ಕೆಯ ಭಾಷೆಯಲ್ಲೇ ಮನ್ ಕಿ ಬಾತ್ ಅಂದರೆ ಮನದ ಮಾತು ಕೇಳಬಹುದು. ನೀವು ನಿಮಗೆ ಅನುಕೂಲವಾದ ಸಮಯದಲ್ಲಿ ನಿಮ್ಮದೇ ಆಯ್ಕೆಯ ಭಾಷೆಯಲ್ಲಿ ಮನದ ಮಾತು ಆಲಿಸಬಹುದು. ಜೊತೆಗೆ ನಿಮ್ಮ ಮನಸ್ಸನ್ನು ಸಿದ್ಧಮಾಡಿಕೊಂಡು ಮತ್ತು ರಾಷ್ಟ್ರದ ಪ್ರಗತಿಗೆ ನಿಮ್ಮದೇ ಕಾಣಿಕೆಯನ್ನೂ ನೀಡಬಹುದು.
ನನ್ನ ದೇಶವಾಸಿಗಳೇ ಮತ್ತೊಮ್ಮೆ ನನ್ನ ನಮಸ್ಕಾರಗಳು, ಧನ್ಯವಾದಗಳು.
For the last few weeks we have got positive news about rainfall in various parts of the nation: PM @narendramodi #MannKiBaat
— PMO India (@PMOIndia) June 26, 2016
Like our farmers our scientists are working very hard and making our nation very proud: PM @narendramodi #MannKiBaat https://t.co/ORSt201yKG
— PMO India (@PMOIndia) June 26, 2016
Yesterday I was in Pune where I met college students who made one of the satellites that was launched along with others a few days ago: PM
— PMO India (@PMOIndia) June 26, 2016
This satellite signifies the skills and aspirations of the youth of India: PM @narendramodi #MannKiBaat https://t.co/ORSt201yKG
— PMO India (@PMOIndia) June 26, 2016
Similar work was done by students from Chennai: PM @narendramodi #MannKiBaat @isro #TransformingIndia https://t.co/ORSt201yKG
— PMO India (@PMOIndia) June 26, 2016
PM @narendramodi congratulates @isro during #MannKiBaat and lauds the efforts of the organisation.
— PMO India (@PMOIndia) June 26, 2016
'Beti Bachao, Beti Padhao' has touched so many lives. The results of the various examinations show how women are excelling: PM #MannKiBaat
— PMO India (@PMOIndia) June 26, 2016
The world marked #IDY2016 in a big way. So many people practiced Yoga, all over India and all over the world: PM @narendramodi #MannKiBaat
— PMO India (@PMOIndia) June 26, 2016
You would have seen postage stamps related to Yoga being released: PM @narendramodi #MannKiBaat https://t.co/ORSt201yKG
— PMO India (@PMOIndia) June 26, 2016
You would have seen postage stamps related to Yoga being released: PM @narendramodi #MannKiBaat https://t.co/ORSt201yKG
— PMO India (@PMOIndia) June 26, 2016
You would have seen Twitter joining Yoga Day celebrations through a special emoji: PM @narendramodi #MannKiBaat @TwitterIndia
— PMO India (@PMOIndia) June 26, 2016
Projections of Yoga on @UN building became popular: PM @narendramodi #MannKiBaat https://t.co/ORSt201yKG @AkbaruddinIndia @IndiaUNNewYork
— PMO India (@PMOIndia) June 26, 2016
We need to think about how Yoga can mitigate diabetes: PM @narendramodi during #MannKiBaat https://t.co/ORSt201yKG
— PMO India (@PMOIndia) June 26, 2016
Use #YogaFightsDiabetes and please share your experiences on how Yoga can help mitigate diabetes: PM @narendramodi #MannKiBaat
— PMO India (@PMOIndia) June 26, 2016
Very often #MannKiBaat is criticised but this is possible because we are in a democracy. Do you remember 25-26 June 1975: PM @narendramodi
— PMO India (@PMOIndia) June 26, 2016
Democracy is our strength and we will have to always make our democratic fabric stronger: PM @narendramodi #MannKiBaat
— PMO India (@PMOIndia) June 26, 2016
Jan Bhagidari is essential in a democracy: PM @narendramodi #MannKiBaat
— PMO India (@PMOIndia) June 26, 2016
PM @narendramodi is talking about 'Rate my Government' on MyGov. Hear. https://t.co/ORSt201yKG #MannKiBaat
— PMO India (@PMOIndia) June 26, 2016
There was a day when voice of people was trampled over but now, the people of India express their views how the Government is doing: PM
— PMO India (@PMOIndia) June 26, 2016
सरकार ने 30 सितम्बर तक अघोषित आय को घोषित करने के लिए विशेष सुविधा देश के सामने प्रस्तुत की है : PM @narendramodi #MannKiBaat
— PMO India (@PMOIndia) June 26, 2016
Yesterday I met Chandrakant Kulkarni and I specially wanted to meet him: PM @narendramodi #MannKiBaat https://t.co/ORSt201yKG
— PMO India (@PMOIndia) June 26, 2016
A retired government employee giving almost a third of his pension for a Swachh Bharat. What can be a greater inspiration: PM @narendramodi
— PMO India (@PMOIndia) June 26, 2016
#MyCleanIndia https://t.co/VmoKt6xfIc
— PMO India (@PMOIndia) June 26, 2016
एक-एक बूँद जल का बचाने के लिये हम कुछ-न-कुछ प्रयास करें : PM @narendramodi #MannKiBaat
— PMO India (@PMOIndia) June 26, 2016
जल है, तभी तो कल है, जल ही तो जीवन का आधार है : PM @narendramodi
— PMO India (@PMOIndia) June 26, 2016
1922...give a missed call and hear #MannKiBaat in your own language: PM @narendramodi
— PMO India (@PMOIndia) June 26, 2016